ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಅನೌನ್ಸ್ ಆದ ಚಿತ್ರಗಳಿವು; ಕುತೂಹಲ ಮೂಡಿಸಿದ ಪೋಸ್ಟರ್‌ಗಳು!

By Kannadaprabha NewsFirst Published Sep 14, 2021, 11:19 AM IST
Highlights

ಈ ಬಾರಿಯ ಗೌರಿ ಗಣೇಶನ ಹಬ್ಬವನ್ನು ಸ್ಯಾಂಡಲ್‌ವುಡ್ ಮಂದಿ ಅದ್ದೂರಿಯಾಗಿಯೇ ಆಚರಿಸಿದ್ದಾರೆ. ಹಲವು ಹೊಸ ಚಿತ್ರಗಳ ಘೋಷಣೆ, ಈಗಾಗಲೇ ಸೆಟ್ಟೇರಿದ ಚಿತ್ರಗಳ ಕಲರ್‌ಫುಲ್ ಫೋಸ್ಟರ್‌ಗಳ ಬಿಡುಗಡೆ, ಚಿತ್ರಮಂದಿರಗಳಿಗೆ ಬಂದ ಸಿನಿಮಾಗಳು... ಹೀಗೆ ಹಲವು ಚಟುವಟಿಕೆಗಳ ಮೂಲಕ ಕೊರೋನಾ ಸಂಕಷ್ಟದಲ್ಲೂ ಚಿತ್ರರಂಗ ರಂಗೇರಿದ್ದು ಈ ಬಾರಿಯ ಹಬ್ಬದ ಹೈಲೈಟ್.
 

ಕೊರೋನಾ ಸಂಕಷ್ಟದ ನಡುವೆಯೂ ಈ ಬಾರಿ ಆಗಮಿಸಿದ ಗೌರಿ ಗಣೇಶನ ಹಬ್ಬದ ಪ್ರಯುಕ್ತ ಸ್ಯಾಂಡಲ್‌ವುಡ್ ಕೂಡ ರಂಗೇರಿತ್ತು. ಕೊರೋನಾ ಕಾರಣಕ್ಕೆ ಸಿನಿಮಾಗಳ ಬಿಡುಗಡೆಯ ಸಂಭ್ರಮ ಕಾಣದೆ ಮಂಕಾಗಿದ್ದ ಚಿತ್ರರಂಗ ಈ ಸಂಕಷ್ಟದಲ್ಲೂ ಹಬ್ಬದ ಸಡಗರವನ್ನು ಜೋರಗಿಯೇ ಆಚರಿಸಿದೆ ಎಂಬುದಕ್ಕೆ ಗಣೇಶನ ಹಬ್ಬಕ್ಕೆ ಘೋಷಣೆ ಆದ ಹೊಸ ಚಿತ್ರಗಳು, ಈಗಾಗಲೇ ಸೆಟ್ಟೇರಿದ್ದ ಚಿತ್ರಗಳ ಹೊಸ ಪೋಸ್ಟರ್‌ಗಳೇ ಸಾಕ್ಷಿ. ಒಂದು ಹಂತದಲ್ಲಿ ಮೈ ಕೊಡವಿಕೊಂಡು ಎದ್ದು ನಿಂತಿರುವ ಸೂಚನೆ ಕೊಟ್ಟಿರುವ ಚಿತ್ರರಂಗ, ಇಲ್ಲಿಂದ ಎಂದಿನಂತೆ ಸಿನಿಮಾ ಸಡಗರ ಮನೆ ಮಾಡಲಿದೆ ಎಂಬುದು ಸದ್ಯದ ಲೆಕ್ಕಾಚಾರ.

20 ಕೆಜಿ ಭಾರದ ಲಂಬಾಣಿ ವೇಷ ತೊಟ್ಟ ಶುಭಾ ಪೂಂಜಾ

ಹಬ್ಬದ ಪ್ರಯುಕ್ತ ಹದಿನೈದಕ್ಕೂ ಹೆಚ್ಚು ಹೊಸ ಚಿತ್ರಗಳು ಘೋಷಣೆ ಆಗುವ ಮೂಲಕ ದಾಖಲೆ ಮಾಡಿದೆ. ಅಲ್ಲದೆ ಈಗಾಗಲೇ ಸೆಟ್ಟೇರಿದ ಚಿತ್ರಗಳ ಪೋಸ್ಟರ್‌ಗಳು ಇದರ ಎರಡು ಪಟ್ಟು ಬಿಡುಗಡೆಯಾಗಿವೆ. ಹೊಸಬರು, ಹಳಬರು ಎನ್ನುವ ಬೇಧವಿಲ್ಲದೆ ಈ ಬಾರಿ ಹಬ್ಬದ ಸಡಗರವನ್ನು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಕೊರೋನಾ ಸಂಕಷ್ಟವನ್ನು ಮೆಟ್ಟಿ ನಿಲ್ಲುವ ಭರವಸೆ ಕೊಡುವಲ್ಲಿ ಸ್ಯಾಂಡಲ್‌ವುಡ್ ಯಶಸ್ವಿ ಆಗಿದೆ ಎನ್ನಬಹುದು.

ಗಮನ ಸೆಳೆದ ಟೈಟಲ್‌ಗಳು

ಇನ್ನೂ ಹಬ್ಬದ ದಿನ ಘೋಷಣೆ ಆದ ಚಿತ್ರಗಳ ಪೈಕಿ ‘ಇದು ಆಕಾಶವಾಣಿ ಬೆಂಗಳೂರು ನಿಲಯ’, ‘ಓಮಿನಿ’, ‘ಕಥಾಲೇಖನ’, ‘ಲಂಕಾಸುರ’, ‘ಆರ್‌ಸಿ ಬ್ರದರ್‌ಸ್’, ‘ಇಂದೊಂಥರಾ ಕತೆ’, ‘ಕಾಕ್‌ಟೇಲ್’ ಹೆಸರಿನ ಟೈಟಲ್‌ಗಳು ಗಮನ ಸೆಳೆದವು. ಈ ಪೈಕಿ ಒಂದರೆಡು ಚಿತ್ರಗಳನ್ನು ಹೊರತುಪಡಿಸಿದರೆ ಬಹುತೇಕ ಟೈಟಲ್‌ಗಳು ಹೊಸಬರ ನಟನೆಯ ಚಿತ್ರಗಳೇ ಆಗಿರುವುದು ವಿಶೇಷ. ಹೀಗೆ ಹೊಸಬರ ಚಿತ್ರಗಳು ಹೆಸರುಗಳ ಮೂಲಕವೇ ಭರವಸೆ ಮೂಡಿಸಿದ್ದು, ಈ ಬಾರಿ ಗಣೇಶನ ಹಬ್ಬದ ವಿಶೇಷ.

ಎಸ್‌ಎಲ್‌ವಿ ಅಂದ್ರೆ ಹೊಟೇಲ್ ಕಥೆ ಅಲ್ಲ: ನಿರ್ದೇಶಕ ಸೌರಭ ಕುಲಕರ್ಣಿ

ಕುತೂಹಲ ಮೂಡಿಸಿದ ಪೋಸ್ಟರ್‌ಗಳು

ಚಿತ್ರದ ಟೈಟಲ್‌ಗಳ ಜತೆಗೆ ಪೋಸ್ಟರ್‌ಗಳೂ ಕೂಡ ಸಿನಿಮಾ ಸಡಗರ ಹೆಚ್ಚಿಸುವಲ್ಲಿ ಮಹತ್ತರವಾದ ಪಾತ್ರ ವಹಿಸಿವೆ. ಇವು ಈಗಾಗಲೇ ಘೋಷಣೆ ಆಗಿರುವ ಚಿತ್ರಗಳ ಪೋಸ್ಟರ್‌ಗಳು. ಶಿವರಾಜ್‌ಕುಮಾರ್ ನಟನೆಯ ‘ನೀ ಸಿಗೋವರೆಗೂ’, ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸೂರತ್ಕಲ್ 2’, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ‘ರವಿಬೋಪಣ್ಣ’, ಸಂಚಾರಿ ವಿಜಯ್ ಅವರ ‘ತಲೆದಂಡ’, ಗಣೇಶ್ ಅವರ ‘ತ್ರಿಬಲ್ ರೈಡಿಂಗ್’ ಚಿತ್ರಗಳ ಪೋಸ್ಟರ್‌ಗಳು ಕುತೂಹಲ ಮೂಡಿಸಿದವು.

ಬೆಳ್ಳಿತೆರೆ ಕಮ್‌ಬ್ಯಾಕ್‌ ಬಗ್ಗೆ ಮೌನ ಮುರಿದ ನಟಿ ಶ್ರುತಿ ಹರಿಹರನ್!

ಬಿಡುಗಡೆ ಸಂಭ್ರಮ ಹೆಚ್ಚಾಗಲಿದೆ

ಅಂದಹಾಗೆ ಈ ವಾರದಿಂದ ಚಿತ್ರಗಳ ಬಿಡುಗಡೆ ಸಂಭ್ರಮ ಕೂಡ ಹೆಚ್ಚಾಗಲಿದೆ. ಈ ಶುಕ್ರವಾರ (ಸೆ.10) ಎರಡು ಚಿತ್ರಗಳು ತೆರೆಗೆ ಬಂದಿದ್ದು, ಮುಂದಿನ ಶುಕ್ರವಾರ (ಸೆ.17) ಮೂರು ಚಿತ್ರಗಳು ತೆರೆ ಮೇಲೆ ಮೂಡಲಿವೆ. ಸೆಪ್ಟೆಂಬರ್ ತಿಂಗಳ ಕೊನೆಯ ಹೊತ್ತಿಗೆ ನಿರೀಕ್ಷೆ ಮೂಡಿಸಿದ್ದ ಬಹಳಷ್ಟು ಚಿತ್ರಗಳು ಚಿತ್ರಮಂದಿರಗಳಿಗೆ ಪ್ರವೇಶಿಸಲಿವೆ. ಸದ್ಯ ಚಿತ್ರರಂಗದ ಲೆಕ್ಕಾಚಾರದ ಪ್ರಕಾರ ಅಕ್ಟೋಬರ್ ತಿಂಗಳಿನಿಂದ ಎಂದಿನಂತೆ ಸಿನಿಮಾ ಹಬ್ಬವನ್ನು ನೋಡಬಹುದಾಗಿದೆ. ಅದಕ್ಕೆ ಗೌರಿ ಗಣೇಶನ ಹಬ್ಬದ ಪ್ರಯುಕ್ತ ಚಿತ್ರರಂಗ ತೋರಿದ ಉತ್ಸಾಹವೇ ಆರಂಭ ಎನ್ನಬಹುದು.

click me!