'ಮಕ್ಕಳಿರಲಿ ಮನೆತುಂಬ.. ಅದರಲ್ಲು ಓ ಹೆಣ್ಣು ಮಗು, ಹೆಣ್ಣುಮಗು ಎಂದು ಈ ತಾತ ಕಾಯುತ್ತಿದ್ದಾನೆ..,ಬರಲಿ ನಮ್ಮ ಮನೆಗೆ ಬೇಗ ರಾಯರ ಕೃಪೆಯಿಂದ..' ಎಂದು ಬರೆದುಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ನವರಸನಾಯಕ ಜಗ್ಗೇಶ್ ಅವರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ವಿಶೇಷ ಎನ್ನುವಂತಹ ಪೋಸ್ಟ್ ಮಾಡಿದ್ದಾರೆ. ನಟ ಜಗ್ಗೇಶ್ ಅವರು ಆಗಾಗ ಏನಾದ್ರೂ ಪೋಸ್ಟ್ ಮಾಡ್ತಾನೇ ಇರ್ತಾರೆ, ಅದರಲ್ಲೇನು ವಿಶೇಷ ಎನ್ನಬೇಡಿ! ಈಗ ಅವರು ತಮ್ಮ ಮೊಮ್ಮಗ ಅರ್ಜುನ್ ಫೋಟೋ ಶೇರ್ ಮಾಡಿ ಅದಕ್ಕೊಂದು ಚೆಂದದ ಕ್ಯಾಪ್ಶನ್ ಕೊಟ್ಟು ಹಲವಾರು ಸಂಗತಿಗಳನ್ನು ಬರೆದುಕೊಂಡಿದ್ದಾರೆ.
ಹಾಗಿದ್ದರೆ ಅದೇನು ಅನ್ನೋ ನಿಮ್ಮ ಕುತೂಹಲಕ್ಕೆ ಮುಂದಿದೆ ನೋಡಿ ಉತ್ತರ!.. 'ಅಜ್ಜಿಯ ಕ್ಯಾಮರ ಕಣ್ಣಲ್ಲಿ ತಾತ ಮೊಮ್ಮಗ♥️' ಎಂದು ಕ್ಯಾಪ್ಶನ್ ಕೊಟ್ಟಿರುವ ನಟ ಜಗ್ಗೇಶ್ ಅವರು 'ಉತ್ತಮ ಸಂಬಂಧಗಳು ಪುನರಾವರ್ಥನೆ ಆಗುತ್ತದೆ ಎನ್ನುತ್ತಾರೆ ಜ್ನಾನಿಗಳು, ನಾವು ನಮ್ಮ ಹಿರಿಯರ ಜೊತೆ ಉತ್ತಮ ಸಂಬಂಧ ಹೊಂದಿದ್ದರೆ ಪಡೆದ ಪ್ರೀತಿಯ ಋಣ ತೀರಿಸಲು ಮತ್ತೆ ಹಿರಿಯರು ನಮ್ಮ ಮೊಮ್ಮಕ್ಕಳಾಗಿ ಹುಟ್ಟಿಬರುತ್ತಾರೆ..
undefined
ದರ್ಶನ್ ಬಗ್ಗೆ 'ಕಾಟೇರ' ಆರಾಧನಾ ರಾಮ್ ಹೇಳಿದ್ದೇನು; ಮಾಲಾಶ್ರೀ ಮಗಳ ಅಭಿಪ್ರಾಯವೇನು?
ನಾನು ನಮ್ಮ ತಾತ ಬಿಡಿಸಲಾಗದ ಪ್ರೀತಿ ಬಂದನದ ಜೀವಗಳಾಗಿದ್ದೇವು. ತಾತ ಸಾಯುವ ಹಿಂದಿನ ದಿನ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ 1981ರಲ್ಲಿ ಈಶಣ್ಣ ನನಗೆ 86ವರ್ಷಕ್ಕೆ ಕಂಟಕವಿದೆ ಒಂದುವೇಳೆ ಹೋದರೆ ದುಃಖಿಸಬೇಡ ನಾನು ಮತ್ತೆ ಬರುವೆ ಎಂದಿದ್ದರು...
ಈ ಫ್ಯಾಮಿಲಿಗೆ ಸೇರಿರ್ಲಿಲ್ಲಾ ಅಂದ್ರೆ ಇಂಥ ಪ್ರಿವಿಲೇಜ್ ಸಿಗ್ತಿತ್ತಾ? ಡಿಕೆಶಿ ಮಗಳು ಹೀಗ್ ಹೇಳಿದ್ರಾ, ರಿಯಲೀ?
ಅರ್ಜುನನ ನೋಡಿದಾಗ ತಾತನ ಮಾತುಗಳು ನೆನಪಾಗುತ್ತದೆ ಕಾರಣ ಅರ್ಜುನನಿಗೆ ಅವನ ತಾತ ಎಂದರೆ ಪ್ರಾಣ ತಾತನಿಗೆ ಅರ್ಜುನ ಎಂದರೆ ಪಂಚಪ್ರಾಣ.. ನಾನು ನನ್ನ ತಾತ ಹೇಗಿದ್ದೇವು ಅರ್ಜುನ ನಾನು ಹಾಗೆ ಸಮಯ ಕಳೆಯುತ್ತೇವೆ. ನಮ್ಮ ಸಮಯ ಸಂಪೂರ್ಣ ಹಾಡುಮಯ ಹಾಸ್ಯಮಯ ರಸಸಮಯ...
ಯಾರೂ ಕೂಡ ಹುಟ್ಟುವಾಗ್ಲೇ ಹೀರೋನೂ ಅಲ್ಲ ವಿಲನ್ನೂ ಅಲ್ಲ; ಹೀಗಂದ್ರಲ್ಲ ವಸಿಷ್ಠ ಸಿಂಹ!
ಮಕ್ಕಳಿರಲಿ ಮನೆತುಂಬ ಅದರಲ್ಲು ಓ ಹೆಣ್ಣುಮಗು ಹೆಣ್ಣುಮಗು ಎಂದು ಈ ತಾತ ಕಾಯುತ್ತಿದ್ದಾನೆ..ಬರಲಿ ನಮ್ಮ ಮನೆಗೆ ಬೇಗ ರಾಯರ ಕೃಪೆಯಿಂದ🙏' ಎಂದು ಬರೆದುಕೊಂಡಿದ್ದಾರೆ. ನಟ ಜಗ್ಗೇಶ್ ಅವರ ಪೋಸ್ಟ್‌ಗೆ ಹಲವಾರು ಪೋಸ್ಟ್‌ಗಳು ಬಂದಿವೆ. ಅದರಲ್ಲಿ ಒಂದು 'ಭವಿಷ್ಯದ ಜೂನಿಯರ್ ನವರಸ ನಾಯಕ ಆಗಲಿ ಜಗ್ಗಣ್ಣ ಮೊಮ್ಮಗ' ಎಂದಿದೆ. ಬಹಳಷ್ಟು ವಿಭಿನ್ನ ಕಾಮೆಂಟ್‌ಗಳು ಈಗ ಜಗ್ಗೇಶ್ ಅವರ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ರಾರಾಜಿಸುತ್ತಿವೆ.
ಕೊನೆಯ ಸಂದರ್ಶನದಲ್ಲಿ ಪುನೀತ್ ನಟರಾದ ದರ್ಶನ್-ಸುದೀಪ್ ಬಗ್ಗೆ ಏನ್ ಹೇಳಿದ್ರು? ನಂಬೋದಕ್ಕೇ ಆಗಲ್ಲ!