ಆನೆ ಪಟಾಕಿ ನಿರ್ದೇಶಕರ 'ಚೌಕಿದಾರ್'ಗೆ ಬಂದ್ರು ಡೈಲಾಗ್ ಕಿಂಗ್ ಸಾಯಿಕುಮಾರ್!

By Shriram Bhat  |  First Published Jun 23, 2024, 8:48 PM IST

ಕನ್ನಡದಲ್ಲಿ ‘ಆನೆ ಪಟಾಕಿ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗಿ, ‘ರಥಾವರ’, ‘ತಾರಕಾಸುರ’ ಸಿನಿಮಾಗಳನ್ನು ನಿರ್ದೇಶಿಸಿ ಯಶಸ್ವಿಯಾಗಿರುವ ನಿರ್ದೇಶಕ ಚಂದ್ರಶೇಖರ್‌ ಬಂಡಿಯಪ್ಪ ಚೌಕಿದಾರ ಸಿನಿಮಾದ ಸೂತ್ರಧಾರರು.


ಟೈಟಲ್ ಮೂಲಕ ಪ್ರೇಕ್ಷಕರನ್ನು ಒಂಟಿಗಾಲಲ್ಲಿ ನಿಲ್ಲಿಸಿರುವ ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ನಟಿಸುತ್ತಿರುವ ಚೌಕಿದಾರ್ ಸಿನಿಮಾ ತಂಡದಿಂದ ಮತ್ತೊಂದು ಹೊಸ ಅಪ್ ಡೇಟ್ ಸಿಕ್ಕಿದೆ. ಇತ್ತೀಚೆಗಷ್ಟೇ ಟೈಟಲ್ ಬಿಡುಗಡೆ ಮಾಡಿದ್ದ ಚಿತ್ರತಂಡವೀಗ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರನ್ನು ತಮ್ಮ ಬಳಗಕ್ಕೆ ಸ್ವಾಗತಿಸಿದೆ. ಚೌಕಿದಾರ್ ಸಿನಿಮಾಕ್ಕೀಗ ಬಹುಭಾಷಾ ನಟ ಸಾಯಿಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಆದ್ರೆ ಡೈಲಾಗ್ ಕಿಂಗ್ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟುಬಿಟ್ಟುಕೊಟ್ಟಿಲ್ಲ.

ಕನ್ನಡದಲ್ಲಿ ‘ಆನೆ ಪಟಾಕಿ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗಿ, ‘ರಥಾವರ’, ‘ತಾರಕಾಸುರ’ ಸಿನಿಮಾಗಳನ್ನು ನಿರ್ದೇಶಿಸಿ ಯಶಸ್ವಿಯಾಗಿರುವ ನಿರ್ದೇಶಕ ಚಂದ್ರಶೇಖರ್‌ ಬಂಡಿಯಪ್ಪ ಚೌಕಿದಾರ ಸಿನಿಮಾದ ಸೂತ್ರಧಾರರು. ಈವರೆಗೆ ಸಿನಿಮಾದಲ್ಲಿ ಲವರ್‌ ಬಾಯ್‌ನಂತೆ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್‌ ಈ ಚಿತ್ರದಲ್ಲಿ ಆಕ್ಷನ್ ಸೀಕ್ವೆನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ, ಹಾಗಂತ ಚೌಕಿದಾರ್ ಕಂಪ್ಲೀಟ್ ಆಕ್ಷನ್ ಸಿನಿಮಾವಲ್ಲ. ಪಕ್ಕ ಫ್ಯಾಮಿಲಿ ಎಂಟರ್ ಟೈನರ್.

Tap to resize

Latest Videos

ಅದೇ ಫೇಕ್ ಐಡಿಯಿಂದ ನನಗೂ ಅಶ್ಲೀಲ ಮೆಸೇಜ್ ಬಂದಿತ್ತು; ಕಿರುತೆರೆ ನಟಿಯೊಬ್ಬರ ಆರೋಪ!

ವಿದ್ಯಾ ಶೇಖರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ಚೌಕಿದಾರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್‌ ಬಸ್ರೂರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಜುಲೈ ಮೊದಲ ವಾರ ಚೌಕಿದಾರ್ ಸಿನಿಮಾ ಮುಹೂರ್ತ ನೆರವೇರಿಸಲು ಚಿತ್ರತಂಡ ಯೋಜನೆ ಹಾಕಿದೆ.

ಅಪ್ಪು ಸಾವಿನ ಹಿಂದಿನ ರಾತ್ರಿ, ರಮೇಶ್ ಅರವಿಂದ್ ಜೊತೆಗಿನ ಚರ್ಚೆಯಲ್ಲಿ ಬುದ್ಧ ಬಂದಿದ್ದು ಯಾಕೆ?

 

ರಥಾವರ (Rathavara)ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದ ಸಿನಿಮಾ. 2015ರಲ್ಲಿ ತೆರೆಗೆ ಬಂದಿದ್ದ ಈ ಚಿತ್ರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಹೊಸ ಅವತಾರದಲ್ಲಿ ಘರ್ಜಿಸಿದ್ದರು. ಬಾಕ್ಸಾಫೀಸ್ ನಲ್ಲಿಯೂ ಒಳ್ಳೆ ಬೆಳೆ ತೆಗೆದಿದ್ದ ರಥಾವರ ಸಿನಿಮಾ ಮೂಲಕ ವಿಶಿಷ್ಟ ಕಥೆ ಹೇಳಿ ನಿರ್ದೇಶನದಲ್ಲಿಯೂ ಗೆದ್ದವರು ಚಂದ್ರಶೇಖರ್ ಬಂಡಿಯಪ್ಪ (Chandrashekar Bandiyappa).ಆನೆ ಪಟಾಕಿ ಮೂಲಕ ಸ್ಯಾಂಡಲ್ ವುಡ್ ಗೆ ಹೆಜ್ಜೆ ಇಟ್ಟಿದ್ದ ಅವರು ಆ ಬಳಿಕ ರಥಾವರ, ತಾರಕಾಸುರ ಸಿನಿಮಾ ಮಾಡಿ ಗೆದ್ದರು. 

ಕೊಲೆ ಆರೋಪಿ ದರ್ಶನ್ ಬಗ್ಗೆ 'ಕಾಟೇರ' ನಾಯಕಿ ಮಾಲಾಶ್ರೀ ಮಗಳು ಆರಾಧನಾ ಹೇಳಿದ್ದೇನು?

ಈ ಚಿತ್ರಗಳ ಸಕ್ಸಸ್ ಬಳಿಕ ಬಾಲಿವುಡ್ ಗೆ ಹಾರಿರುವ ಚಂದ್ರಶೇಖರ್ ಬಂಡಿಯಪ್ಪ ರೆಡ್ ಕಾಲರ್ ಎಂಬ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಕೆಲಸ ಮುಗಿಸಿರುವ ಅವರು ಗುರುದತ್ ಗಾಣಿಗ ನಿರ್ದೇಶನದ ಕರಾವಳಿ ಚಿತ್ರಕ್ಕೂ ಕಥೆ ಬರೆದಿದ್ದಾರೆ. ಇದೀಗ ಚಂದ್ರಶೇಖರ್ ಬಂಡಿಯಪ್ಪ ಹೊಸ ಕಥೆ ಹೇಳೋದಿಕ್ಕೆ ನಿಮ್ಮ ಮುಂದೆ ಬರ್ತಿದ್ದಾರೆ.

ಈ ಫ್ಯಾಮಿಲಿಗೆ ಸೇರಿರ್ಲಿಲ್ಲಾ ಅಂದ್ರೆ ಇಂಥ ಪ್ರಿವಿಲೇಜ್ ಸಿಗ್ತಿತ್ತಾ? ಡಿಕೆಶಿ ಮಗಳು ಹೀಗ್ ಹೇಳಿದ್ರಾ, ರಿಯಲೀ?

click me!