Namaste Ghost ಸಿನಿಮಾ ನನ್ನದು: ನಿರ್ದೇಶಕ ಭರತ್‌ ನಂದ

Kannadaprabha News   | Asianet News
Published : Jan 07, 2022, 08:28 AM ISTUpdated : Jan 07, 2022, 01:52 PM IST
Namaste Ghost ಸಿನಿಮಾ ನನ್ನದು: ನಿರ್ದೇಶಕ ಭರತ್‌ ನಂದ

ಸಾರಾಂಶ

ತೆಲುಗಿನ ಸಾಹೋ ನಿರ್ದೇಶಕ ಸುಜಿತ್‌ ನಿರ್ದೇಶನದ, ಕಿಚ್ಚ ಸುದೀಪ್‌ ನಟನೆಯ ಹೊಸ ಸಿನಿಮಾ ‘ನಮಸ್ತೆ ಗೋಷ್ಟ್’ ಎಂಬ ಫೇಕ್‌ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಆ ಸುದ್ದಿಯಿಂದ ನಿಜಕ್ಕೂ ಆತಂಕಿತರಾಗಿದ್ದು ನಿರ್ದೇಶಕ ಭರತ್‌ ನಂದ.

ತೆಲುಗಿನ ಸಾಹೋ ನಿರ್ದೇಶಕ ಸುಜಿತ್‌ (Saaho Sujith) ನಿರ್ದೇಶನದ, ಕಿಚ್ಚ ಸುದೀಪ್‌ (Kichcha Sudeep) ನಟನೆಯ ಹೊಸ ಸಿನಿಮಾ ‘ನಮಸ್ತೆ ಗೋಷ್ಟ್’ (Namaste Ghost) ಎಂಬ ಫೇಕ್‌ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಆ ಸುದ್ದಿಯಿಂದ ನಿಜಕ್ಕೂ ಆತಂಕಿತರಾಗಿದ್ದು ನಿರ್ದೇಶಕ ಭರತ್‌ ನಂದ (Bharath Nanda). ‘ಡಯಾನ ಹೌಸ್‌’ (Diana House) ಸಿನಿಮಾ ನಿರ್ದೇಶಿಸಿದ್ದ ಭರತ್‌ ಈಗ ಮುಂದೆ ಬಂದು ‘ನಮಸ್ತೆ ಗೋಷ್ಟ್’ ಸಿನಿಮಾ ನನ್ನದು ಎಂದು ಹೇಳಿದ್ದಾರೆ.

‘ನಾನು ಈ ಚಿತ್ರದ ನಿರ್ದೇಶಕ. ಜತೆಗೆ ನಾನೇ ನಾಯಕನಾಗಿ ನಟಿಸಿದ್ದೇನೆ. ಆ ಪೋಸ್ಟರ್‌ನಲ್ಲಿರುವುದು ಸುದೀಪ್‌ ಅವರಲ್ಲ, ನಾನೇ. ರಮೇಶ್‌ ಕುಮಾರ್‌ (Ramesh Kumar) ಈ ಚಿತ್ರದ ನಿರ್ಮಾಪಕರು. ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಮಾಡಿದ್ದಾರೆ. ಇದರಿಂದ ನಟ ಸುದೀಪ್‌ ಹಾಗೂ ಅವರ ಅಭಿಮಾನಿಗಳಿಗೆ ಬೇಸರ ಆಗಬಾರದು ಎಂದು ನಾನೇ ಮುಂದೆ ಬಂದು ಸ್ಪಷ್ಟೀಕರಣ ಕೊಡುತ್ತಿದ್ದೇನೆ’ ಎನ್ನುತ್ತಾರೆ ಭರತ್‌ ನಂದ. ಯದುನಂದನ್‌ ಸಂಗೀತ ನಿರ್ದೇಶನ, ಎಮ್‌.ಜಿ.ಮಧುಸೂದನ್‌ ಛಾಯಾಗ್ರಹಣ ನೀಡುತ್ತಿರುವ ಸಿನಿಮಾ ಇದು. ಭರತ್‌ ನಂದ ಅವರಿಗೆ ನಾಯಕಿಯಾಗಿ ವಿದ್ಯಾರಾಜ್‌ (VidyaRaj) ನಟಿಸಿದ್ದಾರೆ.

Ramesh Aravind: ಶಿವಾಜಿ ಸುರತ್ಕಲ್‌ 2 ಚಿತ್ರಕ್ಕೆ ಖ್ಯಾತ ನಟ ನಾಸರ್‌ ಎಂಟ್ರಿ

ಸಾಹೋ ನಿರ್ದೇಶಕನ ಜೊತೆ ಕೈ ಜೋಡಿಸಿದ ಸುದೀಪ್: ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ನಂತರ ಯಾವ ಸಿನಿಮಾ ಒಪ್ಪಿಕೊಂಡಿದ್ದಾರೆ, ಯಾರು ನಿರ್ದೇಶಕರು ಎಂದು ಪದೇ ಪದೇ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದರು. ಅದಕ್ಕೀಗ ನಿರ್ದೇಶ ಸುಜಿತ್ ಉತ್ತರ ಕೊಟ್ಟಿದ್ದಾರೆ. ಪೋಸ್ಟರ್‌ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಕಿಚ್ಚ ಅಭಿಮಾನಿಗಳು ಹಂಚಿಕೊಂಡು ವೈರಲ್ ಮಾಡುತ್ತಿದ್ದಾರೆ.

ಹೊಸ ವರ್ಷದ ತಿಂಗಳಲ್ಲಿ ಅಭಿಮಾನಿಗಳಿಗೆ ಏನಾದರೂ ಗುಡ್ ನ್ಯೂಸ್‌ ಕೊಡಬೇಕೆಂದು ಸಾಹೋ ನಿರ್ದೇಶಕ ಸುಜಿತ್‌ ಸುದೀಪ್ ಸಿನಿಮಾ ಟೈಟಲ್ ಅನೌನ್ಸ್ ಮಾಡಿದ್ದಾರೆ. ನಮಸ್ತೆ ಗೋಷ್ಟ್ ಎಂದು ಶೀರ್ಷಿಕೆ ಮತ್ತು ಪೋಸ್ಟರ್‌ ಲುಕ್ ರಿವೀಲ್ ಮಾಡಿದ್ದಾರೆ. ಸುದೀಪ್ ಕೈಯಲ್ಲಿ ಕ್ಯಾಂಡಲ್ (Candel) ಸ್ಟ್ಯಾಂಡ್ ಹಿಡಿದುಕೊಂಡು ನಿಂತಿದ್ದಾರೆ.

"

ಸಾಹೋ ನಿರ್ದೇಶಕರೊಂದಿಗೆ ಸಿನಿಮಾವಿಲ್ಲ, ಫೇಕ್ ಎಂದ ಕಿಚ್ಚ ಸುದೀಪ್: ಸಾಹೋ ನಿರ್ದೇಶಕರು ಸುದೀಪ್ ಹೊಸ ಸಿನಿಮಾ ಪ್ರಾಜೆಕ್ಟ್‌ ಬಗ್ಗೆ ಟ್ಟೀಟ್ ಮಾಡಿದ್ದಾರೆ ಎಂದು ಸುವರ್ಣನ್ಯೂಸ್.ಕಾಮ್ ಸುದ್ದಿ ಮಾಡಿತ್ತು. ಆದರೆ, ಇಂಥದ್ದೊಂದು ಟ್ವೀಟಿಗೆ ಯಾವುದೇ ಆಧಾರವಿಲ್ಲವೆಂದು ಕಿಚ್ಚ ಸುದೀಪ್ ಸ್ಪಷ್ಟಪಡಿಸಿದ್ದು, ಈ ಟ್ವೀಟ್ ಬಗ್ಗೆ ಕೆಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 

Kichcha Sudeep: ಕಬ್ಜ ಚಿತ್ರದ ರೆಟ್ರೋ​ ಲುಕ್‌ ರಿವೀಲ್​ ಮಾಡಿದ ಅಭಿನಯ ಚಕ್ರವರ್ತಿ

ಕೆಳಕಂಡಂತೆ ಟ್ಟೀಟ್ ಮಾಡಲಾಗಿದೆ: ಈ ಪೋಸ್ಟರ್ ಜೊತೆಗೆ ಬಾಲಿವುಡ್ (Bollywood) ನಟಿ ದೀಪಿಕಾ ಪಡುಕೋಣೆ (Deepika Padukone), ರಾಣಾ ದಗ್ಗುಬಾಟಿ (Rana Dagubatti), ಕನ್ನಡತಿ ಶಾನ್ವಿ ಶ್ರೀವಾತ್ಸವ್ (Shanvi Srivastav), ಜೆನಿಲಿಯಾ (Genelia)  ಮತ್ತು ರಮೇಶ್‌ ಕುಮಾರ್‌ ಅವರನ್ನು (Ramesh Kumar) ಟ್ಯಾಗ್ ಮಾಡಿದ್ದಾರೆ. ಈ ಮೂಲಕ ಇದು ಪ್ಯಾನ್ ಇಂಡಿಯಾ ಸಿನಿಮಾ ಎಂದು ಸಣ್ಣ ಸುಳಿವು ಸಿಕ್ಕಿದೆ. ಡಿಸೆಂಬರ್ 26, 2021ರಂದು ಸುದೀಪ್ ಸಿನಿಮಾ ಒಪ್ಪಿಕೊಂಡಿದ್ದಾರೆ, ಎಂದು ಟ್ವೀಟ್ ಮಾಡಿದ್ದರು. ಆದರೆ ಆಗ ಬೇರೆ ವ್ಯಕ್ತಿಗಳನ್ನು ಟ್ಯಾಗ್ ಮಾಡಿದ್ದರು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್