
ಪ್ರಿಯಾ ಕೆರ್ವಾಶೆ
‘ಲವ್ ಮಾಕ್‌ಟೇಲ್ 2’ ಮೂಲಕ ಮೋಡಿ ಮಾಡಿದ ಚೆಲುವೆ ರಾಚೆಲ್ ಡೇವಿಡ್ ತಮ್ಮ ಮೂರನೇ ಸಿನಿಮಾಕ್ಕೆ ಸೈನ್ ಮಾಡಿದ್ದಾರೆ. ಇನ್ನೂ ಹೆಸರಿಡದ ಗಿರೀಶ್ ಮುಲಿಮನೆ ನಿರ್ದೇಶನದ ಹೊಸ ಚಿತ್ರದಲ್ಲಿ ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್, ಪೃಥ್ವಿ ಅಂಬರ್ ಜೊತೆಗೆ ರಾಚೆಲ್ ನಟಿಸುತ್ತಿದ್ದಾರೆ. ಚಿತ್ರದ ಬಗ್ಗೆ ಅವರ ಜೊತೆ ಮಾತುಕತೆ.
ಕನ್ನಡದಲ್ಲಿ ನಿಮ್ಮ ಮೂರನೇ ಸಿನಿಮಾ ಹೇಗಿದೆ?
ಇದೊಂದು ಟ್ರಾವೆಲ್ ಸ್ಟೋರಿ. ಕಾಲೇಜ್ ಹುಡುಗರ ಟ್ರಾವೆಲ್ ಮೇಲೆ ಇಡೀ ಸಿನಿಮಾ ನಡೆಯುತ್ತೆ. ಇದರಲ್ಲಿ ರೋಡ್ ಜರ್ನಿ ಜೊತೆಗೆ ಲೈಫ್ ಜರ್ನಿ ಕಥೆಯೂ ಸೇರಿಕೊಂಡಿದೆ. ನನಗೆ ಇದರಲ್ಲಿ ಮೆಚ್ಯೂರ್ಡ್ ಹುಡುಗಿ ಪಾತ್ರ. ನಾನು ಕಾಲೇಜ್ ಹುಡುಗಿ ಆಗಿರ್ತೀನಿ. ಪ್ರಮೋದ್ ಅವರ ಜೊತೆಗಾರ್ತಿ. ಕಾಲೇಜ್ ಸ್ಟೋರಿ ಅಂದರೆ ಸಖತ್ ಇಷ್ಟನಂಗೆ. ನಾವು ನಮ್ಮ ಕಾಲೇಜು ದಿನಗಳನ್ನು ಈ ನೆವದಲ್ಲಿ ಮತ್ತೆ ನೆನಪಿಸಿಕೊಳ್ಳಬಹುದಲ್ವಾ..
ನಿಮಗೆ ಟ್ರಾವೆಲ್ ಇಷ್ಟನಾ?
ಬಹಳ ಇಷ್ಟ. ನಂಗೆ ಸೋಲೋ ಟ್ರಾವೆಲ್ ಅಂದರೆ ಸಖತ್ ಇಷ್ಟ. ಒಬ್ಬಳೇ ಟ್ರಾವೆಲ್ ಎನ್‌ಜಾಯ್ ಮಾಡೋ ಖುಷಿ ಮುಂದೆ ಮತ್ತೇನೂ ಇಲ್ಲ.
ಶೂಟಿಂಗ್‌ಗೆ ಎಲ್ಲೆಲ್ಲ ಟ್ರಾವೆಲ್ ಮಾಡೋ ಪ್ಲಾನು?
ಶೂಟಿಂಗ್ ಬೆಂಗಳೂರು, ಮಂಗಳೂರು ಹಾಗೂ ಕನ್ಯಾಕುಮಾರಿಯಲ್ಲಿ ಆಗುತ್ತೆ. ಜುಲೈ ಮೊದಲ ವಾರದಿಂದ ಈ ಜರ್ನಿ ಶುರು. ಜೂ. 23ಕ್ಕೆ ಮುಹೂರ್ತ ಮತ್ತು ಟೈಟಲ್ ಲಾಂಚ್ ಆಗಲಿದೆ.
ಮಲಯಾಳಂನಲ್ಲಿ ಮಿಂಚಿದ ಕನ್ನಡದ ಹುಡುಗಿ ರಾಚೆಲ್ ಡೇವಿಡ್!
ಮಲಯಾಳಂ, ಕನ್ನಡ, ತಮಿಳು ಸಿನಿಮಾಗಳಲ್ಲೆಲ್ಲ ಮಿಂಚುತ್ತಾ ಇದ್ದೀರಿ, ತೃಪ್ತಿ ಇದೆಯಾ?
ಖಂಡಿತಾ ಇಲ್ಲ. ನನ್ನ ಗುರಿ ತುಂಬ ದೊಡ್ಡದಿದೆ. ಸದ್ಯ ಮಲಯಾಳಂನಲ್ಲಿ 5 ಚಿತ್ರ, ಕನ್ನಡದಲ್ಲಿ ಮೂರು ಹಾಗೂ ತಮಿಳಲ್ಲಿ ಒಂದು ಸಿನಿಮಾ ಮಾಡುತ್ತಿದ್ದೇನೆ. ಆದರೆ ನಾನಿನ್ನೂ ನನ್ನ ಗುರಿಯ ಹತ್ತಿರಕ್ಕೂ ಬಂದಿಲ್ಲ. ಈವರೆಗೆ ಮಾಡಿದ ಸಿನಿಮಾಗಳು ಉತ್ತಮ ಅನುಭವಗಳನ್ನೇ ನೀಡಿವೆ. ಆ ಬಗ್ಗೆ ತಕರಾರಿಲ್ಲ.
ಕೇರಳ ಮೂಲದ ರಾಚೆಲ್ ಡೇವಿಡ್ ಬೆಂಗಳೂರಿನಲ್ಲೇ ನೆಲೆಸಿದ್ದಾರೆ.ಕನ್ನಡದ ಹುಡುಗಿ, ಆದರೆ ಮಲಯಾಳಂನಿಂದ ಚಿತ್ರರಂಗಕ್ಕೆ ಅಡಿಯಿಟ್ಟಬೆಡಗಿ ಈಕೆ. ಈ ಹಿಂದೆ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಪುತ್ರ ಪ್ರಣವ್ ಮೋಹನ್‌ಲಾಲ್ ಜೊತೆಗೆ ತೆರೆ ಹಂಚಿಕೊಂಡಿದ್ದರು.‘ರಾಚೆಲ್ ‘ಲವ್ ಮಾಕ್‌ಟೇಲ್ 2’ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದರು. ಪಾತ್ರಕ್ಕೆ ಈಕೆಯ ಲುಕ್, ನಟನೆ ಸರಿ ಹೊಂದುವಂತಿದ್ದ ಕಾರಣ ಆಯ್ಕೆ ಮಾಡಿದೆವು.ಸಿನಿಮಾದಲ್ಲಿ ಈಕೆಯದು ತುಂಟ, ತರಲೆ ಜೊತೆಗೆ ಹೋಮ್ಲಿ ಹುಡುಗಿಯ ಪಾತ್ರ. ಈಗಾಗಲೇ ಚಿತ್ರದ ಶೇ.55 ಭಾಗದಷ್ಟುಚಿತ್ರೀಕರಣ ಸಂಪೂರ್ಣವಾಗಿದೆ. ರಾಚೆಲ್ ಪಾತ್ರದ ಚಿತ್ರೀಕರಣವಷ್ಟೇ ಬಾಕಿ ಇದೆ. ಆ ಭಾಗದ ಶೂಟಿಂಗ್ ಇದೀಗ ಪ್ಲಾನ್ ಮಾಡುತ್ತಿದ್ದೇವೆ’ ಎಂದು ಡಾರ್ಲಿಂಗ್ ಕೃಷ್ಣ ತಿಳಿಸಿದ್ದಾರೆ. ಬೆಂಗಳೂರಿನ ಬಿಷಪ್ ಕಾಟನ್ ಶಾಲೆ ಹಾಗೂ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.ಮುಂಬಯಿಯ ಅನುಪಮ್ ಖೇರ್ ಇನ್ಸ್ ಟಿಟ್ಯೂನಲ್ಲಿ ನಟನಾ ತರಬೇತಿ ಪಡೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.