ಸುಂದರ್‌ ರಾಜ್‌ಗೆ ಕೋಪ ಜಾಸ್ತಿ, ಮಧ್ಯರಾತ್ರಿ 12 ಗಂಟೆಗೆ ಒಬ್ಬಳೇ ಇರೋಕೆ ಇಷ್ಟ: ಪ್ರಮೀಳಾ ಜೋಶಾಯಿ

Published : Mar 15, 2023, 12:14 PM ISTUpdated : Mar 15, 2023, 03:44 PM IST
 ಸುಂದರ್‌ ರಾಜ್‌ಗೆ ಕೋಪ ಜಾಸ್ತಿ, ಮಧ್ಯರಾತ್ರಿ 12 ಗಂಟೆಗೆ ಒಬ್ಬಳೇ ಇರೋಕೆ ಇಷ್ಟ: ಪ್ರಮೀಳಾ ಜೋಶಾಯಿ

ಸಾರಾಂಶ

ಸುಂದರ್‌ ರಾಜ್‌ಗೆ ಮೂಗಿನ ತುದಿಯಲ್ಲಿ ಕೋಪ ಹೆಚ್ಚಿರುತ್ತೆ ಅಷ್ಟೇ ಬೇಗ ಕೋಪ ಕಡಿಮೆ ಆಗುತ್ತದೆ ಎಂದಿದ್ದಾರೆ ಪ್ರೆಮೀಳಾ ಜೋಶಾಯಿ...  

ಕನ್ನಡ ಚಿತ್ರರಂಗದ ಹಿರಿಯ ನಟಿ ಗಿರಿಜಾ ಲೋಕೇಶ್‌ ಪುತ್ರ ಸೃಜನ್ ಲೋಕೇಶ್ ಯೂಟ್ಯೂಬ್ ಚಾನೆಲ್‌ನಲ್ಲಿ 'ಗಿರಿ ಮಾತು' ಎಂದು ಚಾಟ್‌ ಶೋ ಆರಂಭಿಸಿದ್ದಾರೆ. ವಿಶೇಷ ಅತಿಥಿಯಾಗಿ  ಪ್ರಮೀಳಾ ಜೋಶಾಯಿ ಆಗಮಿಸಿದ್ದರು. ಈ ವೇಳೆ ತಮ್ಮ ಸಿನಿ ಜರ್ನಿ ಮತ್ತು ಜೀವನವದ ಬಗ್ಗೆ ಮಾತನಾಡಿದ್ದಾರೆ. ಗಿರಿಜಾ ಲೋಕೇಶ್ ಕೇಳಿರುವ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿದ್ದಾರೆ....

- ರಂಗಭೂಮಿಯಲ್ಲಿ ಮೊದಲ ಸಲ ಮೇಕಪ್ ಹಾಕಿದ ಕ್ಷಣ?
ಸುಭದ್ರೆ ಕಲ್ಯಾಣ ನಾಟಕಕ್ಕೆ ನಾನು ಮೊದಲ ಸಲ ಮೇಕಪ್ ಹಾಕಿದ್ದು. ಎಲ್ಲಿದ್ದೀನಿ ಏನು ಮಾಡುತ್ತಿರುವೆ ಎಂದು ನನಗೆ ಗೊತ್ತಾಗುತ್ತಿರಲಿಲ್ಲ. ಮೇಕಪ್‌ಗೂ ಮೊದಲು ಉಬ್ಬು ಬೋಡಿಸುವವರು. ಆರಂಭದಲ್ಲಿ ಆ ಬ್ಲೇಡ್‌ನ ನೋಡಿ ನಾನು ಹೆದರಿಕೊಳ್ಳುತ್ತಿದ್ದೆ ತಕ್ಷಣ ಆಳುತ್ತಾ ಕುಳಿತುಕೊಂಡಿರುತ್ತಿದ್ದೆ. ಮೇಕಪ್ ಮಾಡಿಕೊಂಡ ನಂತರ ಕನ್ನಡಿಯಲ್ಲಿ ನನ್ನನ್ನು ನಾನು ನೋಡಿಕೊಂಡು ಕುಳಿತುಕೊಂಡಿರುತ್ತಿದ್ದೆ.

ಏರ್‌ಪೋರ್ಟ್‌ಗಳಲ್ಲಿ ಅತಿ ಹೆಚ್ಚು ಜಗಳ ಮಾಡಿರುವೆ, ರಾಜಕೀಯದಲ್ಲಿ ಶತ್ರುಗಳು, ದುಡ್ಡಿನ ಕೊರತೆ ಇಲ್ಲ: ನಟಿ ಭಾವನಾ ಮಾತು

- ಮನೆ ನೀಟ್‌ ಅಗಿಟ್ಟಿಕೊಳ್ಳುವುದು ಯಾರು?
ನಮ್ಮ ಮನೆಯನ್ನು ನಾನು ತುಂಬಾ ನೀಟ್ ಆಗಿ ಇಟ್ಟಿಕೊಳ್ಳುವೆ. ಯಾರಾದರೂ ಒಂದು ಚೂರು ಗಲೀಜು ಮಾಡಿದರೆ ಬೈತಾನೆ ಇರ್ತೀನಿ. ನೀವು ಬಿಸಾಡಿರುವುದು ನೀವೇ ನೀಟ್ ಮಾಡಿ ಎನ್ನುವೆ. 

- ಮನೆಯಲ್ಲಿ ತರ್ಲೆ ಯಾರು?
ಮೊದಲು ನಮ್ಮ ಮನೆಯಲ್ಲಿ ನನ್ನ ಗಂಡ ತರ್ಲೆ ಮಾಡುತ್ತಿದ್ದರು ಈಗ ನನ್ ಮೊಮ್ಮಗ ತರ್ಲೆ ಮಾಡುತ್ತಾನೆ. ನನ್ನ ಗಂಡ ಮೊದಲಿನಿಂದಲೂ ನನ್ನನ್ನು ಅಮ್ಮಚಿ ಎಂದು ಕರೆಯುತ್ತಾರೆ ಅದನ್ನು ರಾಯನ್ ಕೇಳಿಸಿಕೊಂಡಿದ್ದಾನೆ ಯಾರೂ ಕೇಳಿಕೊಟ್ಟಿಲ್ಲ. ನಾನು ಕುಳಿತುಕೊಂಡಿದ್ದರೆ ನಿಂತುಕೊಂಡಿದ್ದರೆ ಅಮ್ಮಚಿ ಎಂದು ಕರೆಯುತ್ತಾನೆ ನಿಂತುಕೋ ಎಂದು ಕರೆಯುತ್ತಾನೆ. ಅವನಿಗೆ ಅದೇ ಹೇಳುವುದಕ್ಕೆ ಬರುವುದು ..ಹಾಗೆ ಹೇಳಿದರೆ ನಾನು ಅವನನ್ನು ಎತ್ತಿಕೊಳ್ಳಬೇಕು ಎಂದು.

- ದುಡ್ಡು ಹೆಚ್ಚಿಗೆ ಖರ್ಚು ಮಾಡುವುದು?
ಹಣವನ್ನು ತುಂಬಾ ಖರ್ಚು ಮಾಡುವುದು ಒಡವೆ ಮತ್ತು ಸೀರೆಗಳಿಗೆ. ಕಂಚಿ ಸೀರೆಗಳು ಅಂದ್ರೆ ತುಂಬಾನೇ ಇಷ್ಟವಾಗುತ್ತದೆ.

ಲಕ್ಷಗಟ್ಟಲೇ ಸಾಲ ಮಾಡಿ 'ಅಮ್ಮನ ಮಡಿಲು ಆಶ್ರಮ' ಶುರು ಮಾಡಿದ ನಟಿ ಶಶಿಕಲಾ; ಸಹಾಯ ಮಾಡಲು ಮನವಿ

- ಯಾವ ಪ್ರಾಣಿ-ಪಕ್ಷಿಯಾಗಿ ಮತ್ತೆ ಹುಟ್ಟುವುದಕ್ಕೆ ಇಷ್ಟ?
ನನಗೆ ಪಾರಿವಾಳ ಆಗಿ ಹುಟ್ಟುವುದುಕ್ಕೆ ತುಂಬಾ ಇಷ್ಟವಾಗುತ್ತದೆ ಏಕೆಂದರೆ ಅದು ಮನೆ ಮನೆಗೂ ಹೋಗಿ ಏನೋ ಇರುತ್ತೆ ಅದನ್ನು ತಿನ್ನುತ್ತೆ ಹಾರಿಕೊಂಡು ಹೋಗುತ್ತೆ. ಪಾರಿವಾಳವನ್ನು ನನ್ನ ಮೊಮ್ಮಗನಿಗೆ ತೋರಿಸಿ ನೋಡು ಮಗ pigeon ಎಂದು ಹೇಳುವೆ. 

- ಈ ಕಾಲದವರ ರೀತಿ ಬೋಲ್ಡ್‌ ಪಾತ್ರ ಮಾಡುವೆಯಾ?
ಆ ಕಥೆಗೆ ಬಹಳ ಮುಖ್ಯವಾದ ಪಾತ್ರ ಅದು ಮಾಡಲೇ ಬೇಕು ಎಂತ ಅನಿಸಿದರೆ ಖಂಡಿತಾ ಬೋಲ್ಡ್‌ ಪಾತ್ರಗಳನ್ನು ಮಾಡುವೆ. ತಪ್ಪೇನು ಇಲ್ಲ. ಕಥೆಗೆ ಮುಖ್ಯ ಪಾತ್ರ ಆ ಪಾತ್ರನೇ ತುಂಬಾ ಮುಖ್ಯ ಆಗಿದ್ದರೆ ಮಾಡಬಹುದು. 

- ಹೀರೋ ಕೆಟ್ಟದಾಗಿ ಇದ್ರೆ?
ಏನು ಮಾಡಲು ಅಗಲ್ಲ ನನ್ನ ಪಾತ್ರ ಚೆನ್ನಾಗಿ ಮಾಡಿ ತೋರಿಸುವೆ. ಅಲ್ಲಿ ಪಾತ್ರವಾಗಿರುತ್ತಿದ್ದೆ. ಇನ್ನೊಬ್ಬರ ಪಾತ್ರದ ಬಗ್ಗೆ ಯೋಚನೆ ಮಾಡಲ್ಲ.

- ನಂದು ಅಂತ ಸಮಯ ಇರುತ್ತೆ, ನಿನಗೆ ಇಷ್ಟ ಆಗುವ ಸಮಯ ಯಾವುದು?
ನಂದು ಅಂತ ನಾನು ಸಮಯ ಇಟ್ಟುಕೊಂಡಿಲ್ಲ ಏಕೆಂದರೆ ಅಷ್ಟು ಕೆಲಸ ಇರುತ್ತದೆ. ಬೆಳಗ್ಗೆಯಿಂದ ಸಂಜೆವರೆಗೂ ವರ್ಕ್‌ ಲೋಡ್‌ ಇರುತ್ತದೆ. ನೆಮ್ಮದಿಯಾಗಿ ಕೂರಬೇಕು ಅನಿಸಿದ್ದರೆ ರಾತ್ರಿ 11 ಅಥವಾ 12 ಗಂಟೆಗೆ ಕುಳಿತುಕೊಂಡಿರುವೆ. ಆ ಸಮಯದಲ್ಲಿ ಎಲ್ಲರೂ ಮಲಗಿರುತ್ತಾರೆ ಆಗ ನಾನು ಒಬ್ಬಳೇ ಟಿವಿ ನೋಡಿಕೊಂಡು ಮೊಬೈಲ್ ನೋಡಿಕೊಂಡು ನೆಮ್ಮದಿಯಾಗಿರುವೆ.

- ಗಂಡನ ಗುಣ ಬದಲಾಯಿಸುವುದಾದರೆ? 
ಮೂಗಿನ ಮೇಲೆ ಸದಾ ಆ ಸಿಟ್ಟು ಇರುತ್ತದೆ ಅದನ್ನು ಬದಲಾಯಿಸಬೇಕು. ಯಾಕೆ ಸಿಟ್ಟು ಮಾಡಿಕೊಳ್ಳುತ್ತಾರೆ ಗೊತ್ತಿಲ್ಲ. ನೀವು ಏನೋ ಹೇಳಿ ಅವರಿಗೆ ಇಷ್ಟ ಆಗಿಲ್ಲ ಅಂದ್ರೆ ಅಲ್ಲೇ ಸಿಟ್ಟು ಮಾಡಿಕೊಂಡು ಹೇಳುತ್ತಾರೆ ಅದನ್ನು ಬದಲಾಯಿಸಬೇಕು. ಒಳ್ಳೆ ಗುಣ ಏನೆಂದರೆ ಅ ಕೋಪದಿಂದ ಬೇಗ ಹೊರ ಬರುತ್ತಾರೆ. ನಾನು ಕೋಪ ಮಾಡಿಕೊಂಡರೆ ಅದೇ ಕೋಪದಲ್ಲಿ ಇಡೀ ದಿನ ಇರುವೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

45 Movie Trailer Release: ಚೆಲುವೆಯ ನೋಟ ಚೆನ್ನ..ಸಿನಿಮಾ ನೋಡಲೇಬೇಕು ಎಂದು ಸೈಕ್‌ ಮಾಡಿದ ಕಾರಣಗಳಿವು!
The Devil Movie ಶೋಗೆ ಚಪ್ಪಲಿ ಹಾಕ್ಬೇಡ ಅಂತ ಮಗ ವಿನೀಶ್‌ಗೆ ಹೇಳೋಕೆ ಕಾರಣವಿದೆ: Vijayalakshmi Darshan