ಲಕ್ಷಗಟ್ಟಲೇ ಸಾಲ ಮಾಡಿ 'ಅಮ್ಮನ ಮಡಿಲು ಆಶ್ರಮ' ಶುರು ಮಾಡಿದ ನಟಿ ಶಶಿಕಲಾ; ಸಹಾಯ ಮಾಡಲು ಮನವಿ

By Vaishnavi ChandrashekarFirst Published Mar 15, 2023, 9:33 AM IST
Highlights

ಪುನೀತ್ ರಾಜ್‌ಕುಮಾರ್ ಪ್ರೇರಣೆಯಾಗಿ ಅರಂಭಿಸಿದ ಅಮ್ಮನ ಮಡಿಲು ಆಶ್ರಮದಲ್ಲಿ 15 ಮಂದಿ. ಸಾವಿರ ಮಂದಿ ಸಾಕಲು ಸಹಾಯ ಕೇಳಿದ ನಟಿ... 

ಸುಮಾರು 600ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಶಶಿಕಲಾ 2023ರ ಫೆಬ್ರವರಿಯಲ್ಲಿ ಅಮ್ಮನ ಮಡಿಲು ಆಶ್ರಮ ಆರಂಭಿಸುತ್ತಾರೆ. ಪುನೀತ್ ರಾಜ್‌ಕುಮಾರ್‌ನ ಪ್ರೇರಣೆಯಾಗಿಟ್ಟುಕೊಂಡು ಆರಂಭಿಸಿರುವ ಈ ಟ್ರಸ್ಟ್‌ಗೆ ಅಶ್ವಿನಿ ಲೋಗೋ ಲಾಂಚ್ ಮಾಡುವ ಮೂಲಕ ಸಾಥ್ ಕೊಟ್ಟಿದ್ದಾರೆ. ಆಶ್ರಮದ ಬಗ್ಗೆ ಶಶಿಕಲಾ ಮಾಹಿತಿ ಹಂಚಿಕೊಂಡಿದ್ದಾರೆ.

'ಸಿನಿಮಾ ಆದ್ಮೇಲೆ ಏನು ಮಾಡಬೇಕು ಎಂದು ಯೋಚನೆ ಮಾಡಿದಾಗ ಈ ಕನಸು ಬಂತ್ತು. ಒಂದೆರಡು ಸಲ ಆಶ್ರಮದ ಕಡೆ ಹೋಗುತ್ತಿದ್ದೆ ಅಲ್ಲಿ ಊಟ ಕೊಡುತ್ತಿದ್ದೆ. ನಾನು ಯಾಕೆ ಮಾಡಬಾರದು ನನ್ನಂತೆ ಎಷ್ಟೋ ಜನರು ಬರುತ್ತಾರೆ ಎಷ್ಟೊಂದು ಜನರಿಗೆ ನೆರಳು ಕೊಟ್ಟಂತೆ ಆಗುತ್ತೆ ಎಂದು ಯೋಚನೆ ಬಂತ್ತು ಅದೂ ಪುನೀತ್ ರಾಜ್‌ಕುಮಾರ್ ಅವರು ಅಗಲಿದ ಮೇಲೆ. ಅಪ್ಪು ಸರ್ ನಮ್ಮನ್ನು ಬಿಟ್ಟು ಹೋದ ಮೇಲೆ ನಾನು ಯಾಕೆ ಒಂದು ರೀತಿಯಲ್ಲಿ ಸೇವೆ ಮಾಡಬಾರದು ಎಂದು ಆಶ್ರಮ ಶುರು ಮಾಡಿದೆ.  ನಮ್ಮ ಮನೆ ಇರುವುದು ಮಲ್ಲೇಶ್ವರಂನಲ್ಲಿ ಜಾಗ ಹುಡುಕಿ ಹುಡುಕಿ ಗಂಗೊಂಡನಹಳ್ಳಿಯಲ್ಲಿ ಜಾಗ ಸಿಕ್ಕಿತ್ತು. ಕಷ್ಟ ಪಟ್ಟು ನಾನು ದುಡಿದ ಹಣ 8 ಲಕ್ಷವನ್ನು ಉಳಿಸಿಕೊಂಡಿದ್ದೆ ಅದನ್ನು ಬಳಸಿಕೊಂಡೆ ಅದಾದ ಮೇಲೆ 5 ಲಕ್ಷ ಗೋಲ್ಡ್‌ ಲೋನ್‌ ತೆಗೆದುಕೊಂಡು ಕಟ್ಟಿಸಿರುವುದು. ಅಮ್ಮನ ಮಡಿಲು ಆಶ್ರಮಕ್ಕೆ ಅಪ್ಪು ಫೋಟೋ ಇರುವ ಲೋಗೋ ಇದೆ ಅದನ್ನು ಲಾಂಚ್ ಮಾಡಿಕೊಡಿ ಎಂದು ಅಶ್ವಿನಿ ಮೇಡಂನ ಕೇಳಿಕೊಂಡಾಗ ಒಳ್ಳೆಯದಾಗಲಿ ಎಂದು ಸಪೋರ್ಟ್ ಮಾಡಿದ್ದರು' ಎಂದು ಖಾಸಗಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

ಬಸ್ ಬೇಡ ಫ್ಲೈಟ್ ಬೇಕು, ಐರಾಷಾಮಿ ರೆಸಾರ್ಟ್‌ನಲ್ಲೇ ರೂಮ್ ಬೇಕು: 'ಗಾಳಿಪಟ' ಭಾವನಾ ಹೈ ಫೈ ಕಥೆ ಬಿಚ್ಚಿಟ್ಟ ಫ್ರೆಂಡ್ಸ್

ಫೆಬ್ರವರಿ 16ರಂದು ಆಶ್ರಮದ ಗೃಹ ಪ್ರವೇಶ ನಡೆಯಿತ್ತು 14 ಮಂದಿ ಬಂದಿದ್ದರು ಈಗಾಗಲೆ ಮೂವರು ಅವರ ಮನೆಗೆ ಸೇರಿದ್ದಾರೆ. ವ್ಯಕ್ತಿಗಳ ಸಂಪೂರ್ಣ ಮಾಹಿತಿಯನ್ನು ನಾವು ಸಂಗ್ರಹಿಸಿ ವಿಡಿಯೋ ಅಪ್ಲೋಡ್ ಮಾಡುತ್ತೀವಿ ಅವರ ಕುಟುಂಬಸ್ಥರನ್ನು ಸಂಪರ್ಕ ಮಾಡಿ ಮನೆಗೆ ಸೇರಿಸುವ ಕೆಲಸ ಮಾಡುತ್ತೀವಿ. ಸಾಮಾನ್ಯವಾಗಿ ಅವರಿಗೆ ನೆನಪಿನ ಶಕ್ತಿ ಇರುವುದಿಲ್ಲ ಏಕೆಂದರೆ ಒಂದೊಂದು ವರ್ಷ ರಸ್ತೆಯಲ್ಲಿ ತಿರುಗಾಡಿಕೊಂಡು ಮಲಗಿರುತ್ತಾರೆ ಹೀಗಾಗಿ ಅವರು ಹೇಳಿದಷ್ಟು ರೆಕಾರ್ಡ್ ಮಾಡಿಕೊಳ್ಳುತ್ತೀವಿ. ಯಾರೂ ಬಾರದಿದ್ದರೆ ನಮ್ಮ ಆಶ್ರಮದಲ್ಲಿ ಉಳಿದುಕೊಳ್ಳುತ್ತಾರೆ.' ಎಂದು ಹೇಳಿದ್ದಾರೆ.

ಯಾರ್ಯಾರನ್ನೋ ಮದ್ವೆ ಮಾಡಿಕೊಳ್ಳಲು ಆಗಲ್ಲ, ಕೊರಗಜ್ಜನ ಮೇಲೆ ಬಿಡ್ತೀನಿ: ಲೈವ್‌ನಲ್ಲಿ ಅನುಶ್ರೀ ಸ್ಪಷ್ಟನೆ

'ನಾನು ಗೊತ್ತಿಲ್ಲದೆ ಕಲಾವಿದೆಯಾದೆ. ಮುಂದೇನು ಮಾಡಬೇಕು ಎಂದು ಯೋಚನೆ ಮಾಡುವಾಗ ಅಪ್ಪು ಸರ್ ಪ್ರೇರಣೆ ಆದ್ರೂ. ಆಶ್ರಮ ಆರಂಭಿಸಿದಾಗ ಪುಟ್ಟ ಜಾಗ. ಯಾರಾದರೂ ಬರ್ತಡೇ ಮಾಡಿಕೊಳ್ಳು ಪ್ಲ್ಯಾನ್ ಮಾಡಿದ್ದರೆ ದಯವಿಟ್ಟು ಇಲ್ಲಿಗೆ ಬಂದು ಇಲ್ಲಿರುವ ಹಿರಿಯರಿಗೆ ಊಟ ಹಾಕಬಹುದು. ನಮ್ಮ ಬಳಿ 15 ಹಾಸಿಗೆಗಳಿದೆ 15 ಜನರು ಬಳಸುತ್ತಿದ್ದಾರೆ ಮುಂದೆ ಬರುವವರಿಗೆ ಹಾಸಿಗೆ ಬೇಕು, ಇಲ್ಲಿರುವವರಿಗೆ ಆಹಾರಕ್ಕೆ ದಿನಸಿ ಸಾಮಾಗ್ರಿ ಬೇಕು, ಇಲ್ಲಿರುವ ಹೆಣ್ಣು ಮಕ್ಕಳಿಗೆ ಕೆಲವೊಂದು ವಸ್ತುಗಳು ಬೇಕಾಗುತ್ತದೆ...ಇಲ್ಲಿವರೆಗೂ ನಾನು ತಂದು ನಿಲ್ಲಿಸಿರುವೆ. ನನ್ನ ಬಳಿ ಈಗ ಏನೂ ಇಲ್ಲ ಮುಂದೆ ನಿಮ್ಮ ಸಹಾಯದಿಂದ ಮುಂದೆ ನಡೆಸಿಕೊಂಡು ಹೋಗಬೇಕು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್‌ ಅವರಿಗೆ ಒಂದು ಪತ್ರ ಕೊಟ್ಟಿರುವೆ ಅದಲ್ಲಿ ನಾನು ಆಶ್ರಮ ಆರಂಭಿಸಿರುವುದರ ಬಗ್ಗೆ ಮಾಹಿತಿ ನೀಡಿರುವೆ ನಿಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿರುವೆ. ಪ್ರತಿಯೊಬ್ಬರು ನಿಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿ ರಾತ್ರಿ ಹಗಲು ಕಷ್ಟ ಪಟ್ಟು ಈ ಆಶ್ರಮವನ್ನು ನಡೆಸಿಕೊಂಡು ಹೋಗುವೆ. ಸರ್ಕಾರದ ರೂಲ್ಸ್‌ ಪ್ರಕಾರ ನಡೆಸಿಕೊಂಡು ಹೋಗುತ್ತಿರುವೆ ನನ್ನ ಕೈಯಲ್ಲಿ 45 ಲಕ್ಷ ಖರ್ಚು ಆಗಿದೆ' ಎಂದಿದ್ದಾರೆ ಶಶಿಕಲಾ.  

 

click me!