
ಪ್ಯಾನ್ ಇಂಡಿಯಾ ಸ್ಟಾರ್ ರಾಮ್‌ಚರಣ್ ಮತ್ತು ಪತ್ನಿ ಉದ್ಯಮಿ ಉಪಾಸನಾ ಕೊನಿಡೆಲಾ ನಿಜಕ್ಕೂ ಪವರ್ ಕಪಲ್ಸ್. ಎಷ್ಟೇ ಬ್ಯುಸಿಯಾಗಿದ್ದರೂ ಫ್ಯಾಮಿಲಿಗೆ ಸಮಯ ಕೊಡುತ್ತಾರೆ. ಅದರಲ್ಲೂ ಮಗಳು ಕ್ಲಿನ್ ಕಾರಾ ಬಂದ ಮೇಲೆ ಮೆಗಾ ಸ್ಟಾರ್ ಚಿರಂಜೀವಿ ಜೀವನ ಕಲರ್‌ಫುಲ್ ಆಗಿಬಿಟ್ಟಿದೆ.ಈ ಬದಲಾವಣೆಗಳ ಬಗ್ಗೆ ಉಪಾಸನಾ ಹಂಚಿಕೊಂಡಿದ್ದಾರೆ.
'ರಾಮ್‌ಚರಣ್ ನಿಜಕ್ಕೂ ಬೆಸ್ಟ್ ಅಪ್ಪ. ಇಬ್ಬರು ಸಮವಾಗಿ ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತೀವಿ. ನಾನು ಹಾರ್ವರ್ಡ್ ಕಡೆ ಪ್ರಯಾಣ ಮಾಡಿದಾಗ ಕ್ಲಿನ್ ಕಾರ್ ರಾಮ್ ಚರಣ್ ಜೊತೆಗೇ ಇದ್ದಳು ಅವಳು ಸರಿಯಾದ ಸಮಯಕ್ಕೆ ತಿನ್ನುವುದು ಹಾಗೂ ಎಲ್ಲಾ ಕಡೆ ಆಟವಾಡಿಕೊಂಡು ಸುತ್ತಾಡುವಂತೆ ನೋಡಿಕೊಂಡಿದ್ದಾರೆ.ತುಂಬಾ ಸುಲಭವಾಗಿ ಮಗಳಿಗೆ ಊಟ ಮಾಡಿಸುತ್ತಾರೆ. ಕ್ಲಿನ್ ಕಾರಾ ರೀತಿ ಮಗಳು ಇದ್ದಳೆ ಊಟ ಮಾಡಿಸುವುದು ತುಂಬಾನೇ ಕಷ್ಟ. ಆಫೀಸ್ ಕೆಲಸಗಳು ತುಂಬಾನೇ ಕಷ್ಟ ಇರುತ್ತದೆ ಅಂದುಕೊಂಡ್ರೆ ಇಲ್ಲಿ ಮಗಳನ್ನು ನೋಡಿಕೊಳ್ಳುವುದು ಡಬಲ್ ಕಷ್ಟವಾಗಿದೆ. ಆಫೀಸ್ ಕೆಲಸ ತುಂಬಾ ಸುಲಭ ಅನಿಸಲು ಶುರುವಾಗಿದೆ' ಎಂದು ಉಪಾಸನಾ ಖಾಸಗಿ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಬಿಕಿನಿ ಹಾಕೊಂಡ್ರೆ ಸಿನಿಮಾದಲ್ಲಿ ಚಾನ್ಸ್ ಸಿಗುತ್ತೆ...; ನೆಟ್ಟಿಗನ ಕಾಮೆಂಟ್‌ಗೆ ಖಡಕ್ ಉತ್ತರ ಕೊಟ್ಟ ಸೋನು ಗೌಡ
'ಮದುವೆ ಅನ್ನೋದು ಸುಲಭವಲ್ಲ. ಪ್ರತಿ ಮದುವೆಯಲ್ಲೂ ಏರು ಇಳಿತಗಳು ಇರುತ್ತದೆ. ನಮ್ಮ ಗುರು ಏನು ಎಂದು ತಿಳಿದುಕೊಳ್ಳಬೇಕು...ಮುಖ್ಯವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು, ಗೌರವಿಸಬೇಕು..ನಮ್ಮಲ್ಲಿ ಆ ಗೌರವ ಜಾಸ್ತಿನೇ ಇದೆ ಹೀಗಾಗಿ ಸಂಬಂಧ ಗಟ್ಟಿಯಾಗಿದೆ. ನಾವು ಕೆಲಸಗಳ ಬಗ್ಗೆ ಹೆಚ್ಚಾಗಿ ಚರ್ಚೆ ಮಾಡುತ್ತೀವಿ. ಸಿನಿಮಾ ಕ್ಷೇತ್ರದಲ್ಲಿ ಮಾರ್ಕೆಟಿಂಗ್ ಮಾಡುವ ರೀತಿ ಇಷ್ಟವಾಗುತ್ತದೆ ಅದನ್ನು ನನ್ನ ಆರೋಗ್ಯ ಕೇಂದ್ರಗಳಲ್ಲಿ ಇರಲು ಇಷ್ಟ ಪಡುತ್ತೀನಿ. ಒಂದು ಮುಖ್ಯವಾದ ವಿಚಾರ ನನ್ನ ಗಂಡನಿಂತ ಕಲಿಯಬೇಕು ಅಂದ್ರೆ ತಾಳ್ಮೆ. ಕಲಾವಿದರಿಂದ ಮೊದಲು ಕಲಿಯಬೇಕಾಗ ವಿಚಾರ ಏನೆಂದರೆ ತಾಳ್ಮೆ' ಎಂದು ಉಪಾಸನಾ ಹೇಳಿದ್ದಾರೆ.
ಮಿಡಲ್ ಕ್ಲಾಸ್ ಫ್ಯಾಮಿಲಿ ಆಗಿದ್ದ ಕಾರಣ ಥಿಯೇಟರ್‌ಗೆ ಮನೆಯಿಂದ ತಿಂಡಿ ತೆಗೆದುಕೊಂಡು ಹೋಗ್ತಿದ್ವಿ: ಯಶ್
'ಮಗಳು ಬಂದ್ಮೇಲೆ ಜೀವನ ಚೆನ್ನಾಗಿದೆ ಆಕೆ ಬಂದ ಮೇಲೆ ಜೀವನ ಬದಲಾಗಿದೆ. ಕ್ಲಿನ್ ಕಾರಾ ನಮ್ಮ ಕುಟುಂಬಕ್ಕೆ ಖುಷಿ ತಂದಿದ್ದಾಳೆ ಸರಿಯಾದ ಸಮಯಕ್ಕೆ ಬಂದಿದ್ದಾಳೆ ಜೀವನದಲ್ಲಿ. ಆಕೆ ಲಕ್ಕಿ ಬೇಬಿ. ನನ್ನ ಎಲ್ಲಾ ಪ್ರಶಸ್ತಿಗಳನ್ನು ಸ್ವೀಕರಿಸುವ ಸಮಯದಲ್ಲಿ ನನ್ನೊಟ್ಟಿಗೆ ಬಂದಿದ್ದಾರೆ. ಆಫೀಸ್‌ನಲ್ಲಿ ಟೆನ್ಶನ್ ಇದ್ರೆ ತಲೆ ಕೆಟ್ಟಿದ್ದರೆ ಅಮ್ಮ ನಾನು ಮನೆಯಲ್ಲಿದ್ದೀನಿ ನೀನು ಆರಾಮ್ ಆಗಿ ಬಾ ಎನ್ನುತ್ತಾಳೆ. ಆಕೆಗೆ ಜಾಸ್ತಿ ಮಾತನಾಡಲು ಬರುವುದಿಲ್ಲ ಬರೀ ಅಮ್ಮ ಅಮ್ಮ ಎಂದು ಕರೆಯುತ್ತಾಳೆ' ಎಂದಿದ್ದಾರೆ ಉಪಾಸನಾ.
ಅಯ್ಯಯ್ಯೋ ನಾವು ಹಸುವಿನ ಹಾಲು ಮುಟ್ಟ ಏನೇ ಇದ್ರೂ ಬಾದಾಮಿ ಹಾಲು ಮಾತ್ರ: ನಟಿ ಅನುಷ್ಕಾ ಶರ್ಮಾ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.