
ಮಾರ್ಕೆಟ್‌ನಲ್ಲಿ ತರಕಾರಿ ಅಂಗಡಿ ಹಾಕೊಂಡು ವ್ಯಾಪಾರ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದ ಪಕ್ಕಾ ಮಿಡಲ್ ಕ್ಲಾಸ್ ಹುಡುಗ ಸುನಾಮಿ ಕಿಟ್ಟಿ. ಖಡಕ್ ನಿಲನ್‌ಗೆ ಇರ್ಬೇಕಾಗಿರುವ ಹೈಟ್ ಆಂಡ್ ವೇಟ್ ಇರುವ ಈತ ಒಂದು ಸಿನಿಮಾ ಮಾಡಿ ಎಲ್ಲಿ ಕಳೆದು ಹೋದರು? ರಿಯಾಲಿಟಿ ಶೋ ಹೆಸರು ಮತ್ತು ಹಣ ತಂದು ಕೊಡಲಿಲ್ವಾ? ಯಾರೋ ಮಾಡಿದ ತಪ್ಪಿಗೆ ಜೈಲಿಗೆ ಹೋಗಿ ಬಂದಿದ್ದು ಎಷ್ಟು ಸರಿ? ಎಲ್ಲಾ ಪ್ರಶ್ನೆಗಳಿಗೆ ಕಿಟ್ಟ ಕೊಟ್ಟ ಉತ್ತರವಿದು.
'ರಿಯಾಲಿಟಿ ಶೋಗೆ ಬಂದಿರಲಿಲ್ಲ ಅಂದ್ರೆ ನಾನು ಪ್ರೋ ಕಬಡಿಗೆ ಹೋಗುತ್ತಿದ್ದೆ. ನನ್ನ ಜರ್ನಿಯನ್ನು ರಿಯಾಲಿಟಿ ಶೋ ಬದಲಾಯಿಸಿದೆ. ತರಕಾರಿ ಮಾಡಿಕೊಂಡು ರಿಯಾಲಿಟಿ ಶೋ ಮಾಡಿದೆ ..ಲೈಫ್ ಸೂಪರ್ ಗುರು ಕಾರ್ಯಕ್ರಮವನ್ನು ನನ್ನ ತಾಯಿ ಗೆದ್ದರು. ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ನನ್ನ ಲೈಫ್ ಯಾವುದೇ ರೀತಿಯಲ್ಲಿ ಬದಲಾಗಿಲ್ಲ ನಾನು ಇದ್ದಂತೆ ಇದ್ದೀನಿ ಆದರೆ ಕೆಲವೊಂದು ಸಲ ಸಣ್ಣಪುಟ್ಟ ಕಾಂಟ್ರವರ್ಸಿಗಳು ಆಯ್ತು. ವೈಯಕ್ತಿಕವಾಗಿ ನಾನು ಕಾಂಟ್ರವರ್ಸಿ ಮಾಡಿಕೊಂಡಿದ್ದು ಅಲ್ಲ ಅದು ಆಗಿದ್ದು. ಬಿಗ್ ಬಾಸ್ ಮುಗಿದ ಮೇಲೆ ದೊಡ್ಡ ಸ್ಟಾರ್ ಆಗ್ತಾರೆ ಏನೋ ಆಗುತ್ತದೆ ಅನ್ನೋದು ಸುಳ್ಳು. ನಮ್ಮ ಟ್ಯಾಲೆಂಟ್‌ನ ತೋರಿಸಿಕೊಳ್ಳಲು ಬಿಗ್ ಬಾಸ್ ಒಂದು ವೇದಿಕೆ ಆಗಿರುತ್ತದೆ. ಸಿನಿಮಾಗಳ ಆಯ್ಕೆ ವಿಚಾರದಲ್ಲಿ ನಾನು ಚೂಸಿಯಾಗಿದ್ದೆ, ಇದುವರೆಗೂ ನಾನು ಸೈಡ್ ಆಕ್ಟಿಂಗ್ ಮಾಡಿಲ್ಲ ರಿಯಲ್ ಲೈಫ್‌ನಲ್ಲೂ ನಾನು ಹಾಗೆ ಇಲ್ಲ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಸುನಾಮಿ ಕಿಟ್ಟಿ ಮಾತನಾಡಿದ್ದಾರೆ.
ತಿಂಡಿಯಿಂದ ತೂಕ ಕಡಿಮೆ ಆಗ್ಬೋದಾ?; ಬಿಗ್ ಬಾಸ್ ಶ್ರುತಿ ಪ್ರಕಾಶ್ ಕೊಟ್ಟ ರೆಸಿಪಿ ಹೇಗಿದೆ ನೋಡಿ...
'ನನಗೆ ಇರುವ ಟ್ಯಾಲೆಂಟ್‌ಗೆ ಒಳ್ಳೆ ಬ್ಯಾನರ್‌ನಲ್ಲಿ ಒಳ್ಳೆ ಕಲಾವಿದನಾಗಿ ತೋರಿಸಿಕೊಳ್ಳಬೇಕು ಅನ್ನೋ ಆಸೆ ಇತ್ತು. ಆ ಸಮಯದಲ್ಲಿ ಇಂಡಸ್ಟ್ರಿಗಳ ಬಗ್ಗೆ ತಿಳುವಳಿಕೆ ಇರಲಿಲ್ಲ...ಶಿವಣ್ಣ, ರಕ್ಷಿತಾ ಅವರನ್ನು ನೋಡಿಕೊಂಡು ಬಂದಿದ್ದು. ಸಿನಿಮಾ ಮಾಡ್ಬೇಕು ಗಾಂಧಿನಗರದಲ್ಲಿ ಒಂದು ಕಟೌಟ್ ಹಾಕಿಸಿಕೊಳ್ಳಬೇಕು ಅಂತ ಆಸೆ ಇತ್ತು. ಬಡವರ ಮಕ್ಕಳು ಬೆಳೆಯಬೇಕು ಅಂತ ಹೇಳುತ್ತಾರೆ ಆದರೆ ನನ್ನಂತವರು ತುಂಬಾ ಕಷ್ಟ ಪಡುತ್ತಾರೆ. ರಿಯಾಲಿಟಿ ಶೋಗಳಿಂದ ಈ ಹಿಂದೆ ಸ್ಪರ್ಧಿಯೊಬ್ಬರು ಸತ್ತಿಲ್ಲ ಅದು ಅವರ ಪರ್ಸನಲ್ ಜೀವನದಲ್ಲಿ ನಡೆದ ಸಮಸ್ಯೆಯಿಂದ. ಆದರೆ ರಿಯಾಲಿಟಿ ಶೋಯಿಂದ ಹಲವರು ಜೀವನ ನಡೆಸುತ್ತಿದ್ದಾರೆ ಸಾವಿರಾರು ಜನರು ಊಟ ಮಾಡುತ್ತಿದ್ದಾರೆ. ಕೆಲವರು ಸೀರಿಯಲ್ ಮಾಡುತ್ತಿದ್ದಾರೆ ಕೆಲವರು ಸೈಡ್ ರೋಲ್ ಮಾಡ್ತಿದ್ದಾರೆ. ನಾನು ಎಲ್ಲಿ ಹೋಗಿದ್ದೆ ಇಷ್ಟು ಅಂತ ಕೇಳ್ತಾರೆ ಆದರೆ ಯಾರಿಗೆ ಗೊತ್ತಿತ್ತು ನಾನು ಎಲ್ಲೋ ಒಳ್ಳೆ ಸಕ್ಸಸ್‌ಗೆ ಕಾಯುತ್ತಿದ್ದೀನಿ ಅಂತ?' ಎಂದು ಸುನಾಮಿ ಕಿಟ್ಟಿ ಹೇಳಿದ್ದಾರೆ.
ಡ್ರೀಮ್ ಹುಡುಗ ಅಂತೇನು ಇಲ್ಲ ಈ ಗುಣಗಳಿದ್ದರೆ ಸಾಕು.....;ಮದುವೆ ಸುಳಿವು ಕೊಟ್ರ ಶಿವಣ್ಣ ಪುತ್ರಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.