ಚಿಕಿತ್ಸೆಗೆ ಅಮೆರಿಕ ತಲುಪಿದ ಶಿವಣ್ಣ ಹೇಗಿದ್ದಾರೆ? ಆರೋಗ್ಯದ ಅಪ್​ಡೇಟ್​ ನೀಡಿದ ಸಚಿವ ಮಧು ಬಂಗಾರಪ್ಪ

Published : Dec 22, 2024, 01:51 PM ISTUpdated : Dec 23, 2024, 10:04 AM IST
 ಚಿಕಿತ್ಸೆಗೆ ಅಮೆರಿಕ ತಲುಪಿದ ಶಿವಣ್ಣ ಹೇಗಿದ್ದಾರೆ? ಆರೋಗ್ಯದ ಅಪ್​ಡೇಟ್​ ನೀಡಿದ ಸಚಿವ ಮಧು ಬಂಗಾರಪ್ಪ

ಸಾರಾಂಶ

ಶಿವರಾಜ್ ಕುಮಾರ್ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. ತಿರುಪತಿಯಲ್ಲಿ ಕೇಶಮುಂಡನೆ ಮಾಡಿಸಿಕೊಂಡು, ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಮಿಯಾಮಿಯಲ್ಲಿ 24ರಂದು ಶಸ್ತ್ರಚಿಕಿತ್ಸೆ ನಡೆಯಲಿದ್ದು, ಸಚಿವ ಮಧು ಬಂಗಾರಪ್ಪ ಜೊತೆಗಿದ್ದಾರೆ. ಒಂದೂವರೆ ತಿಂಗಳು ಚಿಕಿತ್ಸೆ ಪಡೆದು ಬೆಂಗಳೂರಿಗೆ ವಾಪಸಾಗಲಿದ್ದಾರೆ. 

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ತುಂಬಾ ಓಡಾಡುತ್ತಿರುವ ಹಾಗೆಯೇ ಅಭಿಮಾನಿಗಳು ಆತಂಕ ಪಡುತ್ತಿರುವ ವಿಷಯ ಏನೆಂದರೆ, ನಟ ಶಿವರಾಜ್‌ ಕುಮಾರ್ ಅವರ ಅನಾರೋಗ್ಯ. ಶಿವರಾಜ್‌ ಕುಮಾರ್ ಅವರು ಚಿಕಿತ್ಸೆಗೆಂದು ಇದೇ 18ರಂದು ಅಮೆರಿಕಕ್ಕೆ ತೆರಳಿದ್ದಾರೆ. ಚಿಕಿತ್ಸೆಗೆ ಹೋಗುವ ಮುನ್ನ  ತಿರುಪತಿಗೆ ಭೇಟಿ ಕೊಟ್ಟು ಕೇಶ ಮುಂಡನೆ ಮಾಡಿಸಿಕೊಂಡಿದ್ದರು ಶಿವರಾಜ್​ ಕುಮಾರ್​ ಹಾಗೂ ಪತ್ನಿ ಗೀತಾ. ಜೊತೆಗೆ ಹಲವಾರು ದೇವಸ್ಥಾನಗಳಿಗೆ ಕುಟುಂಬಸ್ಥರು ಭೇಟಿ ಕೊಟ್ಟಿದ್ದರು. ಶಿವನ ಸಮುದ್ರದ ಮದ್ಯರಂಗ ಸ್ವಾಮಿ ದೇವಸ್ಥಾನ, ಸೋಮೇಶ್ವರ ದೇವಸ್ಥಾನ ಸೇರಿದಂತೆ ಮಾರಮ್ಮನ ದೇಗುಲಗಳಿಗೂ ಹೋಗಿ ಪೂಜೆ ಸಲ್ಲಿಸಿದ್ದಾರೆ. ಕಾವೇರಿ ನದಿಗೆ ಬಾಗಿನ ಅರ್ಪಿಸಿದ್ದರು. ಇದಾಗಲೇ ಅಮೆರಿಕದ ನೆಲದಲ್ಲಿರೋ ಶಿವಣ್ಣ ಅವರ ಆರೋಗ್ಯದ ಬಗ್ಗೆ ಅವರ ಅಭಿಮಾನಿಗಳಿಗೆ ಆತಂಕ ಕಾಡುತ್ತಲೇ ಇದೆ.

ಅವರ ಆರೋಗ್ಯದ ಅಪ್​ಡೇಟ್​ ಅನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವರಾಜ್​ ಕುಮಾರ್​ ಆರೋಗ್ಯವಾಗಿದ್ದಾರೆ. 24 ರಂದು ಅವರಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ.  ವಿಶ್ವದ ಬೆಸ್ಟ್ ವೈದ್ಯರ ಬಳಿ ಅವರಿಗೆ ಟ್ರೀಟ್​ಮೆಂಟ್​ ಸಿಗುತ್ತಿದೆ. ಮಿಯಾಮಿಯಲ್ಲಿ ಅವರು ದಾಖಲಾಗಿದ್ದಾರೆ. ಯಾರೂ ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಇಂದು (ಭಾನುವಾರ) ಸಂಜೆ ತಾವು ಮಿಯಾಮಿಯನ್ನು ತಲುಪುವುದಾಗಿ ಹೇಳಿದ ಅವರು, ಆಪರೇಷನ್​ ಸಂದರ್ಭದಲ್ಲಿ ಅವರ ಜೊತೆಯಲ್ಲಿಯೇ ಇರುವುದಾಗಿ ತಿಳಿಸಿದ್ದಾರೆ. 10 ದಿನ ಅವರ ಜೊತೆ ತಾವಿದ್ದು, ವಾಪಸಾಗುವುದಾಗಿ ತಿಳಿಸಿದ ಮಧು ಬಂಗಾರಪ್ಪನವರು, ಶಿವಣ್ಣ ಅವರು ಡಿಸ್​ಚಾರ್ಜ್​ ಆದ ಮೇಲೆ ಭೀಮಣ್ಣ ಅವರು ಮಿಯಾಮಿಗೆ ತೆರಳಲಿದ್ದಾರೆ ಎಂದು ಹೇಳಿದರು. 

ಅಮೆರಿಕಕ್ಕೆ ತೆರಳುವ ಮುನ್ನ ಶಿವಣ್ಣ ಫ್ಯಾಮಿಲಿ ಹೋಟೆಲ್​ನಲ್ಲಿ ಕಾಣಿಸಿಕೊಂಡದ್ದು ಹೀಗೆ... ವಿಡಿಯೋ ವೈರಲ್​

ಒಂದು- ಒಂದೂವರೆ ತಿಂಗಳು ಶಿವಣ್ಣ ಮಿಯಾಮಿಯಲ್ಲಿಯೇ  ಇರಲಿದ್ದಾರೆ. ಆಮೇಲೆ ವಾಪಸ್​ ಬೆಂಗಳೂರಿಗೆ ಬರಲಿದ್ದಾರೆ.  ಅಭಿಮಾನಿಗಳ ಆಶೀರ್ವಾದವೇ ಅವರಿಗೆ ಶ್ರೀ ರಕ್ಷೆ ಎಂದು ನುಡಿದರು.   ಶಿವರಾಜ್​ ಕುಮಾರ್​ ಅವರು ಅಮೆರಿಕಕ್ಕೆ ತೆರಳುವ ಮುನ್ನ ನಟ ಸುದೀಪ್​, ವಿನೋದ್ ರಾಜ್, ಮಾಜಿ ಸಚಿವ ಹಾಗೂ ಹಿರಿಯ ನಟ ಬಿಸಿ ಪಾಟೀಲ್ ಸೇರಿದಂತೆ ಹಲವು ನಟರು, ರಾಜಕೀಯ ಮುಖಂಡರು  ಶಿವರಾಜ್ ಕುಮಾರ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು.  

ಇನ್ನು ಶಿವರಾಜ್​ ಕುಮಾರ್​ ಸಿನಿಮಾ ಕುರಿತು ಹೇಳುವುದಾದರೆ,   ಮಫ್ತಿ ಚಿತ್ರದ ನಂತರದ ಭೈರತಿ ರಣಗಲ್ ಚಿತ್ರದ ಮೇಲೆ ಬಹು ನಿರೀಕ್ಷೆ ಹೊಂದಿರುವ ಅವರು, ಈ ಚಿತ್ರದ  ಮೂಲಕ ತಮ್ಮ 127 ಚಿತ್ರಗಳ ಮೈಲಿಗಲ್ಲನ್ನು ತಲುಪಿದ್ದಾರೆ. ಭೈರತಿ ರಣಗಲ್ ಚಿತ್ರವನ್ನು ನರ್ತನ್ ನಿರ್ದೇಶಿಸಿದ್ದಾರೆ.   ಇದು ಶಿವರಾಜ್‌ ಅವರ ಮಫ್ತಿ ಚಿತ್ರದ ಪ್ರೀಕ್ವೆಲ್ ಚಿತ್ರವಾಗಿದೆ.  ಭೈರತಿ ರಣಗಲ್ ಚಿತ್ರದಲ್ಲಿ ರುಕ್ಮಿಣಿ ವಸಂತ್ ಇದ್ದಾರೆ. ಅಮೃತಧಾರೆ ಖ್ಯಾತಿಯ ಭೂಮಿಕಾ ಅಂದರೆ ಛಾಯಾ ಸಿಂಗ್ ಕೂಡ ನಟಿಸಿದ್ದಾರೆ. ಇದರ ನಡುವೆಯೇ, ಶಿವರಾಜ್‌ ಕುಮಾರ್‌ ಅವರು ಚಿಕಿತ್ಸೆಗೆ ತೆರಳುವ ಮುನ್ನ ಜಾಹೀರಾತು, ರಿಯಾಲಿಟಿ ಷೋಗಳಲ್ಲಿಯೂ ಬ್ಯುಜಿ ಆಗಿದ್ದರು. ಇದಾಗಲೇ ಕೆಲವು ಜಾಹೀರಾತುಗಳಿಗೆ ಶಿವಣ್ಣ ರಾಯಭಾರಿಯಾಗಿದ್ದರೆ, ಡಾನ್ಸ್‌ ರಿಯಾಲಿಟಿ ಷೋನಲ್ಲಿ ತೀರ್ಪುಗಾರರಾಗಿದ್ದರು. ವಾಪಸ್​ ಬಂದ ಬಳಿಕ ಮತ್ತೆ ಇವೆಲ್ಲದರ ಅವರು ಕಾಣಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. 
ಅಪ್ಪಾಜಿಯನ್ನು ನಾನು ಎಂದಿಗೂ ಅನುಕರಿಸಲ್ಲ... ಆದರೆ... ಶಿವರಾಜ್​ಕುಮಾರ್​ ಓಪನ್​ ಮಾತು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ