'ಯುಐ' ಸಿನಿಮಾದ ಕಲೆಕ್ಷನ್ ಎಷ್ಟು? ಎರಡೇ ದಿನದಲ್ಲಿ ಬಾಕ್ಸ್‌ ಆಫೀಸ್‌ಗೆ ಅಷ್ಟೊಂದು ಹಣ ಬಂತಾ?

Published : Dec 22, 2024, 12:33 PM IST
'ಯುಐ' ಸಿನಿಮಾದ ಕಲೆಕ್ಷನ್ ಎಷ್ಟು? ಎರಡೇ ದಿನದಲ್ಲಿ ಬಾಕ್ಸ್‌ ಆಫೀಸ್‌ಗೆ ಅಷ್ಟೊಂದು ಹಣ ಬಂತಾ?

ಸಾರಾಂಶ

ಉಪೇಂದ್ರ ನಿರ್ದೇಶನದ 'ಯುಐ' ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಕೆಲವರಿಗೆ ಚಿತ್ರ ಅರ್ಥವಾಗದಿದ್ದರೂ, ಮೊದಲ ದಿನ 6.75 ಕೋಟಿ ಗಳಿಸಿದೆ ಎನ್ನಲಾಗಿದೆ. ವಾಸ್ತವಿಕ ಅಂಕಿಅಂಶಗಳು ಇನ್ನೂ ಹೊರಬರಬೇಕಿದೆ. ಚಿತ್ರದ ಸಂಕೀರ್ಣ ಕಥೆಯಿಂದಾಗಿ ವಿಮರ್ಶಕರಿಗೂ ವಿಶ್ಲೇಷಣೆ ಕಷ್ಟಕರವಾಗಿದೆ. ಉಪೇಂದ್ರ ವಿಭಿನ್ನ ನಿರೂಪಣೆಯಿಂದಾಗಿ ಪ್ರೇಕ್ಷಕರಲ್ಲಿ ಗೊಂದಲ ಮೂಡಿದೆ.

ಉಪೇಂದ್ರ (Real Star Upendra) ನಿರ್ದೇಶನದ 'ಯುಐ' ಚಿತ್ರವು ಮೊನ್ನೆ ಅಂದರೆ ಡಿಸೆಂಬರ್ 20ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕನ್ನಡ ಸೇರಿದಂತೆ ಒಟ್ಟೂ 5 ಭಾಷೆಗಳಲ್ಲಿ ಮೂಡಿಬಂದಿರುವ ಈ (UI) ಚಿತ್ರವು ಇಲ್ಲಿಯವರೆಗೆ ಎಷ್ಟು ಕಲೆಕ್ಷನ್ ಮಾಡಿದೆ? ಈ ಬಗ್ಗೆ ಸಹಜವಾಗಿ ಎಲ್ಲರಿಗೂ ಕುತೂಹಲ ಇದ್ದೇ ಇದೆ. ಹಲವರು ಚೆನ್ನಾಗಿದೆ ಯುಐ ಎಂದರೆ ಕೆಲವರು ಅರ್ಥವೇ ಅಗಿಲ್ಲ ಎನ್ನುತ್ತಿದ್ದಾರೆ. ಆದರೆ, ಅರ್ಥವಾಗಿಲ್ಲ ಎನ್ನುವವರೂ ಕೂಡ ಸಿನಿಮಾವನ್ನಂತೂ ನೋಡಿದ್ದಾರೆ. ಹೀಗಾಗಿ ಉಪ್ಪಿಯ 'ಯುಐ' ಗಳಿಕೆ ಎಷ್ಟಿರಬಹುದು? ಈ ಬಗ್ಗೆ ಅಂಕಿಅಂಶಗಳು ಏನು ಹೇಳುತ್ತವೆ? ಸಿಕ್ಕ ಮಾಹಿತಿ ಇಲ್ಲಿದೆ, ನೋಡಿ.. 

ಒಂದು ವೆಬ್‌ಸೈಟ್ ಕೊಟ್ಟಿರುವ ಮಾಹಿತಿ ಪ್ರಕಾರ, ಯುಐ ಚಿತ್ರವು ಮೊದಲ ದಿನ 6.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದರೆ ವತರಕರ ವಲಯದಲ್ಲಿ ಎಲ್ಲ 5 ಭಾಷೆಗಳ ಕಲೆಕ್ಷನ್ ನೋಡಿದರೆ ಅದು 15 ಕೋಟಿಯನ್ನು ಮೀರಿದೆ. ಇನ್ನು ಎರಡನೇ ದಿನ ಎಷ್ಟು ಕಲೆಕ್ಷನ್ ಆಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಮೊದಲ ದಿನದ ಕಲೆಕ್ಷನ್ ಬಗ್ಗೆ ಕೂಡ ನಿರ್ಮಾಪಕರು ಸೇರಿದಂತೆ ಇಡೀ ಚಿತ್ರತಂಡವು ಯಾವುದೇ ಮಾಹಿತಿಯನ್ನು ಹೊರಜಗತ್ತಿಗೆ ನೀಡಿಲ್ಲ.

ವಾಟ್ ಈಸ್ ಯುವರ್ ಪ್ರಾಬ್ಲಂ? ಬಿಟ್ಹಾಕಿ, ಕಿಚ್ಚ ಸುದೀಪ್ ಹೇಳಿದ್ದು ಯಾರಿಗೆ & ಯಾಕೆ?

ಕನ್ನಡದಲ್ಲಿ ಮುಂಗಡ ಬುಕ್ಕಿಂಗ್ ಸೇರಿದಂತೆ, ಸಾಕಷ್ಟು ವಿದೇಶಗಳಲ್ಲಿ ಕೂಡ ಉಪ್ಪಿಯ ಯುಐ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಬಾಕ್ಸ್‌ ಆಫೀಸ್ ಗಳಿಕೆ ವಿಚಾರದಲ್ಲಿ ಕೂಡ ಈ ಸಿನಿಮಾ ಹಿಂದೆ ಬಿದ್ದಿಲ್ಲ ಎಂಬುದು ಗ್ಯಾರಂಟಿ. ಆದರೆ, ಕನ್ನಡದಲ್ಲಿ ಗಳಿಕೆ ಕಂಡಷ್ಟು ಈ ಚಿತ್ರವು ಬೇರೆ ಭಾಷೆಗಳಲ್ಲಿ8 ಕಲೆಕ್ಷನ್ ದಾಖಲಿಸಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಪರಭಾಷೆಗಳಲ್ಲಿ ಕೂಡ ಚಿತ್ರದ ಗಳಿಕೆ ಮೇಲೇರಲಿದೆ ಎಂಬುದು ಸಿನಿಪಂಡಿತರ ಲೆಕ್ಕಾಚಾರ. ಆ ಬಗ್ಗೆ ಕಾಯಬೇಕಿದೆ!

ಇನ್ನು, ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರು ಯುಐ (UI) ಸಿನಿಮಾ ಮೂಲಕ ಸದ್ಯ ತುಂಬಾ ಟ್ರೆಂಡಿಂಗ್‌ನಲ್ಲಿ ಇರೋದು ಗೊತ್ತೇ ಇದೆ. ಈ ಯುಐ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ ಅಂತ ಹೇಳೋ ಹಾಗಿಲ್ಲ. ಏಕೆಂದರೆ, ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂಬ ಎರಡು ಅಭಿಪ್ರಾಯ ಬಂದರೆ ಅದಕ್ಕೆ ನಾವು ಮಿಶ್ರ ಪ್ರತಿಕ್ರಿಯೆ ಎನ್ನಬಹುದು. ಆದರೆ, ಇಲ್ಲಿ, ಕೆಲವೊಬ್ಬರು ಸೂಪರ್ ಆಗಿದೆ, ಹಿಂದೆ ಇಂಥ ಸಿನಿಮಾ ಬಂದಿರಲಿಲ್ಲ, ತುಂಬಾ ಚೆನ್ನಾಗಿದೆ ಎನ್ನುತ್ತಿದ್ದರೆ ಕೆಲವರು 'ಅರ್ಥ ಆಗುತ್ತಿಲ್ಲ' ಎನ್ನುತ್ತಿದ್ದಾರೆ. ಹೀಗಿದ್ದಾಗ ಏನು ಹೇಳೋದು?

ಉಪೇಂದ್ರ 'UI' ಸಿನಿಮಾ ಬ್ಯಾನ್ ಆಗ್ಬೇಕು, ಈ ಕೂಗಾಟ ಶುರುವಾಗಿದ್ದು ಯಾಕೆ, ಯಾರ ಕುಮ್ಮಕ್ಕು?

ಈ ಯುಐ ಸಿನಿಮಾ ನೋಡಿ ತಲೆ ಕೆಡಿಸಿಕೊಂಡು ಬಹಳಷ್ಟು ಜನರು ರಿವ್ಯೂ ಮಾಡುತ್ತಿದ್ದಾರೆ. ಕಥೆಯ ಗುಟ್ಟು ಬಿಟ್ಟುಕೊಡದೇ ಸಿನಿಮಾ ರಿವ್ಯೂ ಮಾಡಬೇಕಾಗಿರುವ ಕಾರಣಕ್ಕೆ ಅವರೆಲ್ಲರೂ ಕೂಡ ಸಾಕಷ್ಟು ಬುದ್ಧಿವಂತಿಕೆ ತೋರಿಸಬೇಕಿದೆ. ಕಾರಣ, ಸಿನಿಮಾವನ್ನು ಸರಿಯಾಗಿ ವಿಮರ್ಶೆ ಮಾಡಿಬಿಟ್ಟರೆ ಇದೂ ಒಂಥರಾ ಫೈರಸಿಯೇ ಆಗುತ್ತದೆ. ಹೀಗಾಗಿ ಸಿನಿಮಾ ಕಥೆಯ ಸೀಕ್ರೆಟ್ ಸಂಪೂರ್ಣ ಬಿಟ್ಟುಕೊಡದೇ ಅದೆಷ್ಟು ಹೇಳಲು ಸಾಧ್ಯವೋ ಅಷ್ಟನ್ನು ಹೇಳುತ್ತಿದ್ದಾರೆ ಮಾಧ್ಯಮಗಳು ಹಾಗೂ ಸೋಷಿಯಲ್ ಮಾಧ್ಯಮಗಳು. 

ಆದರೂ ಕೂಡ ಯುಐ ಸಿನಿಮಾ ರೀವ್ಯೂ ಮಾಡಲು ಎಲ್ಲರೂ ತುಂಬ ಕಷ್ಟ ಪಡುತ್ತಿದ್ದಾರೆ ಎನ್ನಬಹುದು. ಕಾರಣ, ಈ ಸಿನಿಮಾದಲ್ಲಿ ಮತ್ತೊಂದು ಸಿನಿಮಾವಿದೆ. ಅವಳಿ ಹುಡುಗರ ಕಥೆಯಿದೆ, ಒಂದರೊಳಗೊಂದು ಮಿಕ್ಸ್ ಮಾಡದೇ ಸಿನಿಮಾ ಚಿತ್ರಕಥೆ ಸಾಗದು. ಹೀಗಿರುವಾಗ ನಿರ್ದೇಶಕ ಹಾಗು ನಟ ಉಪೇಂದ್ರ ಬಹಳಷ್ಟು ಬುದ್ಧಿವಂತಿಕೆಯಿಂದ ತಲೆ ಓಡಿಸಿ ಬುದ್ಧಿವಂತರು ಮಾತ್ರ ಅರ್ಥ ಮಾಡಿಕೊಳ್ಳುವ ಹಾಗೆ ಸಿನಿಮಾ ಮಾಡಿದ್ದಾರೆ ಎನ್ನಬಹುದು. ಇದು ಅವರಿಗೆ ಅನಿವಾರ್ಯ ಕೂಡ!

'ಸಿನಿಮಾ ಒಂದಕ್ಕೆ ವಿಮರ್ಶೆ ಬರೆಯಲು ಸಾಧ್ಯವಾಗದೇ ಚಿತ್ರ ವಿಮರ್ಶಕನೊಬ್ಬ ತಲೆ ಕೆಡಿಸಿಕೊಂಡಿದ್ದಾನೆ. ಅದೆಷ್ಟೇ ಬಾರಿ ನೋಡಿದರೂ ಅವನಿಗೆ ಸಿನಿಮಾ ಅರ್ಥವೇ ಆಗುವುದಿಲ್ಲ. ಆಗ ಈ ಬಗ್ಗೆ ತಿಳಿದುಕೊಳ್ಳಲು ಆ ಚಿತ್ರದ ನಿರ್ದೇಶಕ ಉಪೇಂದ್ರ ಅವರನ್ನು ಹುಡುಕಿಕೊಂಡು ಹೋಗ್ತಾನೆ. ಅಲ್ಲಿ ಅವರು ಸಿಗಲ್ಲ. ಆದರೆ, ಅವರು ಬರೆದು ಸುಟ್ಟು ಹಾಕಲು ಹೋಗಿದ್ದ ಕಥೆಯ ಪ್ರತಿ ಸಿಗುತ್ತದೆ. ಅದನ್ನು ಆ ವಿಮರ್ಶಕ ಓದುತ್ತಾನೆ. 

'ಕ್ಯಾಂಡಿ' ಕೊಡಲು ತುದಿಗಾಲಲ್ಲಿ ನಿಂತಿರೋ ಚಂದನ್ ಶೆಟ್ಟಿ ನಾಲ್ಕನೇ ಪೆಗ್‌ ಹಾಕಿರ್ಬಹುದಾ?

ಆ ನಾಮದ ಕಥೆ ಏನು? ಉಪೇಂದ್ರ ಅದನ್ನು ಸುಟ್ಟು ಹಾಕಲು ಯಾಕೆ ಬಯಸಿದ್ದು? ಅದೆಲ್ಲವನ್ನೂ ನೋಡುವ ಕಲ್ಕಿ, ಅದ್ಯಾಕೆ ಹಾಗೆ ನಡೆದುಕೊಳ್ಳುತ್ತಾನೆ? ಕಲ್ಕಿ-ಸತ್ಯ ಅವರಿಬ್ಬರ ಕಥೆಯೇನು? ಈ ಎಲ್ಲವೂ ಸರಿ, ಇನ್ನುಳಿದಿದ್ದೇ ಯುಐ ಸಿನಿಮಾ'. ಹಾಗಿದ್ದರೆ ಇಷ್ಟು ಸಿಂಪಲ್ ಕಥೆ ಸಿನಿಪ್ರೇಕ್ಷಕರಿಗೆ ಯಾಕೆ ಅರ್ಥವಾಗುವುದಿಲ್ಲ. ಅದು ಗೊತ್ತಾಗುತ್ತಿಲ್ಲ, ಅವರನ್ನೇ, ಅಂದರೆ ಅರ್ಥ ಆಗಿಲ್ಲ ಎನ್ನವವರನ್ನೇ ಕೇಳಬೇಕು! ಅದು ಸ್ವತಃ ಉಪೇಂದ್ರ ಅವರಿಗೂ ಅರ್ಥವಾಗಲಾರದು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ