ಇಲ್ಲಿ ಪ್ರಶ್ನೆ ಕೇಳಿದವರು ಯಾರು, ಉತ್ತರ ಹೇಳಿದವರು ಯಾರು, ಎಂಬ ಸಂಗತಿಗಿಂತ ಹೆಚ್ಚಾಗಿ ಈ ಪ್ರಶ್ನೆ-ಉತ್ತರ ಕೇಳಿಸಿಕೊಂಡವರಿಗೆ ಅನೇಕ ಸಂಗತಿಗಳು ಅರ್ಥವಾಗುತ್ತವೆ. ಜಗತ್ತು ಎತ್ತ ಸಾಗುತ್ತಿದೆ? ಪ್ರಶ್ನೆ ಕೇಳುವವರಿಗೆ ಎಷ್ಟು ಜ್ಞಾನವಿದೆ? ಉತ್ತರ ಹೇಳಿದವರಿಗೆ ಎಷ್ಟು ಜ್ಞಾನವಿದೆ? ಈ ಪ್ರಶ್ನೆ ಬೇಕಿತ್ತಾ?
'ಸರ್ ಇತ್ತೀಚೆಗೆ ಬಿಡುಗಡೆ ಆಗ್ತಿರುವಂಥಾ ಬಿಗ್ ಬಜೆಟ್ ಸಿನಿಮಾಗಳು ಇಂಗ್ಲಿಷ್ ಹೆಸರುಗಳಿಂದನೇ ಬರ್ತಾ ಇದಾವೆ. ಎಲ್ಲಕ್ಕಿಂತ ಹೆಚ್ಚಾಗಿ ನೀವು ನಮ್ಮ ಕನ್ನಡದವರು, ಕನ್ನಡ ಚಿತ್ರ .. ಇಂಗ್ಲಿಷ್ ಹೆಸರು ಅಗತ್ಯ ಇದ್ಯಾ ಅಂತ? ನೀವು ಹುಚ್ಚ, ಕಿಚ್ಚ, ಪೈಲ್ವಾನ್ ಅಂತ ದೊಡ್ಡ ದೊಡ್ಡ ಸಿನಿಮಾ ಮಾಡಿರೋರು.. ಕನ್ನಡಕ್ಕೆ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದೀರ ಕನ್ನಡ ಚಿತ್ರರಂಗಕ್ಕೆ.. ಈ ಇಂಗ್ಲಿಷ್ ಟೈಟಲ್‌ಗಳು ಅವಶ್ಯಕತೆ ಇದ್ಯಾ? ಅನಿವಾರ್ಯಾನಾ?' ಅಂತ ಪ್ರೆಸ್‌ಮೀಟ್‌ನಲ್ಲಿ ಪತ್ರಕರ್ತರೊಬ್ಬರು ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಸುದೀಪ್ ತಮ್ಮದೇ ಶೈಲಿಯಲ್ಲಿ, ತಮ್ಮದೇ ಭಾಷೆಯಲ್ಲಿ ಉತ್ತರ ಕೊಟ್ಟಿದ್ದಾರೆ. ಅದೇನೆಂದು ನೋಡಿ..
ತಮ್ಮ ಮುಂದೆ ಟೇಬಲ್‌ಗಳ ಮೇಲೆ ಇಟ್ಟಿದ್ದ ಬಹಳಷ್ಟು ಮಾಧ್ಯಮಗಳ ಮೈಕ್ ತೋರಿಸುತ್ತ ನಟ ಸುದೀಪ್ 'ನೋಡಿ ಇಲ್ಲಿ ಬಂದ್ರೆ ಟಿವಿ ಇಂಗ್ಲಿಷ್, ಸುದ್ದಿ ಇಂಗ್ಲಿಷ್, ಇನ್ ಬೆಂಗಳೂರು ಇಂಗ್ಲಿಷ್, ಎಲ್ಲದರಲ್ಲೂ ಇಂಗ್ಲಿಷ್ ಇದೆ. ಆದ್ರೆ ಬರೆದಿರೋನು ಕನ್ನಡಿಗ, ನೋಡ್ತಾ ಇರೋರು ಕನ್ನಡದವ್ರು.. ನಾನು ಮಾತಾಡ್ತಾ ಇರೋದು ಕನ್ನಡದಲ್ಲಿ, ಇದು ಕರ್ನಾಟಕ, ಇಲ್ಲಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇವೆ, ಅಲ್ಲಿ ಹೋಗಿ ಓದ್ತಾ ಇರೋರು ಕನ್ನಡದವ್ರು.. ವಾಟ್ ಈಸ್ ಯುವರ್ ಪ್ರಾಬ್ಲಂ?, ಬಿಟ್ಹಾಕಿ...' ಎಂದಿದ್ದಾರೆ ಸುದೀಪ್.
undefined
'ಕ್ಯಾಂಡಿ' ಕೊಡಲು ತುದಿಗಾಲಲ್ಲಿ ನಿಂತಿರೋ ಚಂದನ್ ಶೆಟ್ಟಿ ನಾಲ್ಕನೇ ಪೆಗ್ ಹಾಕಿರ್ಬಹುದಾ?
ಇಲ್ಲಿ ಪ್ರಶ್ನೆ ಕೇಳಿದವರು ಯಾರು, ಉತ್ತರ ಹೇಳಿದವರು ಯಾರು, ಎಂಬ ಸಂಗತಿಗಿಂತ ಹೆಚ್ಚಾಗಿ ಈ ಪ್ರಶ್ನೆ-ಉತ್ತರ ಕೇಳಿಸಿಕೊಂಡವರಿಗೆ ಅನೇಕ ಸಂಗತಿಗಳು ಅರ್ಥವಾಗುತ್ತವೆ. ಜಗತ್ತು ಎತ್ತ ಸಾಗುತ್ತಿದೆ? ಪ್ರಶ್ನೆ ಕೇಳುವವರಿಗೆ ಎಷ್ಟು ಜ್ಞಾನವಿದೆ? ಉತ್ತರ ಹೇಳಿದವರಿಗೆ ಎಷ್ಟು ಜ್ಞಾನವಿದೆ? ಈ ಪ್ರಶ್ನೆ ಬೇಕಿತ್ತಾ? ಆ ಪ್ರಶ್ನೆಗೆ ಆ ಉತ್ತರ ಬಿಟ್ಟರೆ ಅದಕ್ಕಿಂತ ಸರಿಯಾದ ಉತ್ತರ, ಸಮಯಪ್ರಜ್ಞೆಗೆ ಸಾಕ್ಷಿ ಬೇಕಾ? ಈ ಎಲ್ಲ ಸಂಗತಿಗಳು ಈ ವಿಡಿಯೋ ನೋಡಿದ ಪ್ರತಿಯೊಬ್ಬರ ಮನಸ್ಸಿನಲ್ಲಿ ಓಡುವುದು ಖಂಡಿತ.
ನಟ ಕಿಚ್ಚ ಸುದೀಪ್ ಅವರು ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ. ಜೀವನ ಹಾಗೂ ವೃತ್ತಿ ಜೀವನದಲ್ಲಿ ಬಹಳಷ್ಟು ಏಳು-ಬೀಳುಗಳನ್ನು ಕಂಡಿರುವ ನಟ. ಚಿಕ್ಕಪುಟ್ಟ ಪಾತ್ರಗಳ ಮೂಲಕ ಸಾಗಿಬಂದು ಬಳಿಕ ನಾಯಕನಟ ಎನ್ನಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ. ಅಂಥವರಿಗೆ ಇಂಥ ಪ್ರಶ್ನೆ ಕೇಳಿದಾಗ ಇನ್ನೆಂಥ ಉತ್ತರ ಬರಲು ಸಾಧ್ಯ? ನಟರಾಗಿ ಸ್ವತಂತ್ರ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭದ ಮಾತೇ?
ಉಪೇಂದ್ರ 'UI' ಸಿನಿಮಾ ಬ್ಯಾನ್ ಆಗ್ಬೇಕು, ಈ ಕೂಗಾಟ ಶುರುವಾಗಿದ್ದು ಯಾಕೆ, ಯಾರ ಕುಮ್ಮಕ್ಕು?
ಈ ಎಲ್ಲ ಪ್ರಶ್ನೆ-ಉತ್ತರಗಳು ಕಾಲಗರ್ಭದಲ್ಲಿ ಮುಳುಗಿ ಹೋಗುತ್ತವೆ. ಇಂಥ ಆಗುಹೋಗುಗಳನ್ನು ಸುದ್ದಿ ಮಾಡಬಹುದೇ ಹೊರತೂ ಆ ಬಗ್ಗೆ ಚರ್ಚೆ, ವಾದ-ವಿವಾದಗಳ ಅನಗತ್ಯ. ಆದರೆ, ಕಿಚ್ಚ ಸುದೀಪ್ ಅವರು ಸದ್ಯ ತಮ್ಮ 'ಮ್ಯಾಕ್ಸ್' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ಇದ್ದಾರೆ. ಇದೇ ತಿಂಗಳು 25ರಂದು (25 December 2024) ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರವು ಮೂರು ಭಾಷೆಗಳಲ್ಲಿ (ಕನ್ನಡ-ತಮಿಳು-ತೆಲುಗು) ಬಿಡುಗಡೆ ಆಗಲಿದೆ. ಸದ್ಯಕ್ಕೆ ಸುದೀಪ್ ಸೇರಿದಂತೆ ಮ್ಯಾಕ್ಸ್ ಚಿತ್ರತಂಡವು ತಮ್ಮ ಚಿತ್ರದ ಪ್ರಚಾರಕಾರ್ಯದಲ್ಲಿ ನಿರತವಾಗಿದೆ. ಇನ್ನೇನಿದ್ದರೂ ಬಿಡುಗಡೆ, ಬಳಿಕ ರಿಸಲ್ಟ್. ಆ ಬಳಿಕ ಜೀವನ ಮುಂದುವರಿಯಲೇಬೇಕು ಅಷ್ಟೇ.