
'ಚಾರ್ಮಿನಾರ್' ಚೆಲುವೆ ಮೇಘನಾ ಗಾಂವ್ಕರ್‌ಗೆ ಟ್ರ್ಯಾವಲ್ ಅಂದ್ರೆ ತುಂಬಾನೇ ಇಷ್ಟ. ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿದ್ದು ಪುಸ್ತಕ ಓದುತ್ತಾ, ಸಿನಿಮಾ ನೋಡುತ್ತಿದ್ದರು. ಸೋಂಕಿನ ಸಂಖ್ಯೆ ಕಡೆಮೆಯಾಗುತ್ತಿದ್ದಂತೆ, ಅಮೆರಿಕ ಕಡೆಗೆ ಪ್ರಯಾಣ ಶುರು ಮಾಡಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು.
ಅಮೆರಿಕಾದಲ್ಲಿ ನಟಿ ಮೇಘನಾ ಗಾಂವ್ಕರ್ ಜಾಲಿಟ್ರಿಪ್!
ಭಾರತಕ್ಕೆ ಹಿಂದಿರುಗಿದ ಮೇಘನಾ:
ಸುಮಾರು ಒಂದೂವರೆ-ಎರಡು ತಿಂಗಳ ಕಾಲ ಅಮೆರಿಕ ಪ್ರವಾಸದಲ್ಲಿದ್ದ ಮೇಘನಾ ಈಗ ಭಾರತಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಹಿಂದಿರುಗಿದ್ದಾರೆ. ಆದರೆ ಪ್ರಯಾಣಿಸುವಾಗ ಸಿಬ್ಬಂದಿ ನಡೆದುಕೊಂಡ ರೀತಿಗೆ ಬೇಸರ ವ್ಯಕ್ತ ಪಡಿಸಿದ್ದಾರೆ.
'ಯಾವುದೇ ತೊಂದರೆ ಇಲ್ಲದೆ ಸ್ವದೇಶಕ್ಕೆ ಬರುವುದಕ್ಕಿಂತ ಸುಸೂತ್ರವಾಗಿ ವಿದೇಶಕ್ಕೆ ಪ್ರವೇಶಿಸುವುದು ತುಂಬಾನೇ ಸುರಕ್ಷಿತ. ಏರ್ ಇಂಡಿಯಾ ಸಿಬ್ಬಂದಿ ಕಿರುಕುಳ ನೀಡಿದರು. (Harrased), ಅವರು ದಿಲ್ಲಿಯಲ್ಲಿ ನೀಡುತ್ತಿರುವ ಸೇವೆ ನೋಡಿ ತುಂಬಾನೇ ಬೇಸರವಾಯ್ತು. ಇನ್ನು ಮುಂದೆ ಎಂದಿಗೂ ನಾನು ಏರ್ ಇಂಡಿಯಾ ಆಯ್ಕೆ ಮಾಡಿಕೊಳ್ಳುವುದಿಲ್ಲ,' ಎಂದು ಮೇಘನಾ ಟ್ಟೀಟ್ ಮಾಡಿದ್ದಾರೆ.
ಕೋವಿಡ್ ಟೈಮ್‌ನಲ್ಲಿ ಮೇಘನಾ ಗಾಂವ್ಕರ್ ಅಮೆರಿಕಾದಲ್ಲಿ!
'ತಮ್ಮ ಭಾರತದ ಕ್ಯಾಪಿಟಲ್ ದಿಲ್ಲಿ, ನೀವು ನಿಮ್ಮೆಲ್ಲಾ ಸಿಬ್ಬಂದಿಗೆ ಹೆಣ್ಣುಮಕ್ಕಳ ಜೊತೆ ವಿನಯತೆ ಹಾಗೂ ಗೌರವದಿಂದ ನಡೆದುಕೊಳ್ಳುವ ಗುಣವನ್ನು ಹೇಳಿಕೊಡಬೇಕು. ಪ್ರತೀ ಸಲವೂ ನಿಮ್ಮ ವಿಮಾನದಲ್ಲಿ ಪ್ರಯಾಣಿಸುವಾಗ ಬೇಸರವಾಗುತ್ತದೆ. Unprofessional ಜನರು. ಇವರಿಂದ ನಮ್ಮ ಹಣ, ಸಮಯ ಹಾಗೂ ಎನರ್ಜಿ ಎಲ್ಲವೂ ವೇಸ್ಟ್. ತುಂಬಾನೇ ಕೆಟ್ಟ ಸರ್ವೀಸ್,' ಎಂದು ಮೇಘನಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.