
ಪ್ರಸಿದ್ಧ ಗಾಯಕ ಸಿದ್ ಶ್ರೀರಾಮ್ ಈ ಚಿತ್ರದ ಒಂದು ಹಾಡಿಗೆ ಧ್ವನಿಯಾಗುವ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಸಂಗೀತ ನಿರ್ದೇಶಕ ಮ್ಯಾಥ್ಯೂಸ್ ಮನು ಈ ಚಿತ್ರದ ಮೂಲಕ ಸಿದ್ ಶ್ರೀರಾಮ್ ಅವರನ್ನು ಕನ್ನಡಕ್ಕೆ ಕರೆತಂದಿದ್ದಾರೆ. ‘ಹಾಯಾಗಿದೆ ಎದೆಯೊಳಗೆ’ ಎಂಬ ಹಾಡನ್ನು ಸಿದ್ ಶ್ರೀರಾಮ್ ಹಾಡಿದ್ದು, ಕೇಳುಗರಿಗೆ ಕಿಕ್ ಕೊಡುತ್ತದೆ ಎಂಬುದು ಸಂಗೀತ ನಿರ್ದೇಶಕನ ಭರವಸೆ.
ಜೀ ವಾಹಿನಿಯಲ್ಲಿ ಸತ್ಯ ಧಾರಾವಾಹಿ; ತಪ್ಪದೆ ವೀಕ್ಷಿಸಿ!
ಕೇವಲ ಮನರಂಜನೆಯನ್ನೇ ಪ್ರಧಾನವಾಗಿಟ್ಟುಕೊಂಡು ಮೂಡಿ ಬರುತ್ತಿರುವ ಈ ಚಿತ್ರವನ್ನು ಉದ್ಯಮಿ ರಾಜು ಶೇರಿಗಾರ್ ನಿರ್ಮಿಸಿದ್ದಾರೆ. ಜೀವನದ ಏರಿಳಿತಗಳ ನಡುವೆ ಸಾಗುವ ಮಧ್ಯಮ ವರ್ಗದ ಜನರ ಬದುಕಿನ ಕತೆ ಈ ಚಿತ್ರದಲ್ಲಿದೆ. ‘ಹಿನ್ನೆಲೆ ಗಾಯಕರಾಗಿ ಸಿದ್ ಶ್ರೀರಾಮ್ ಅವರದು ದೊಡ್ಡ ಹೆಸರು. ಕನ್ನಡದಿಂದ ಅವರಿಗೆ ಸಾಕಷ್ಟುಬಾರಿ ಹಾಡಲು ಕೋರಿಕೆ ಬಂದರೂ ಅವರು ಹಾಡಿಲ್ಲ.
ಇದು ನಮ್ಮೆಲ್ಲರ ಬದುಕಿನ್ನು ತೋರಿಸುವ ಕತೆ: ಗಿರೀಶ್ ಕಾಸರವಳ್ಳಿ
ನಮ್ಮ ಚಿತ್ರದ ಹಾಡು ಮತ್ತು ಸಂಗೀತ ಕೇಳಿ ಹಾಡಲು ಒಪ್ಪಿದ್ದಾರೆ. ಹೀಗಾಗಿ ಚಿತ್ರದ ಹಾಡುಗಳು ಕೇಳುಗರಿಗೆ ಬಹುಬೇಗ ತಲುಪುತ್ತವೆ ಎಂಬುದು ನನ್ನ ನಂಬಿಕೆ. ಮೆಲೋಡಿ ಹಾಡು ಇದಾಗಿದೆ’ ಎನ್ನುತ್ತಾರೆ ಮ್ಯಾಥ್ಯೂ ಮನು. ಸಂಕೇತ್ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ನಿಶ್ಚಿತ್ ಕರೋಡಿ ಹಾಗೂ ಚೈತ್ರಾ ರಾವ್ ಚಿತ್ರದ ಜೋಡಿ. ಜೈ ಜಗದೀಶ್, ತಾರಾ, ರಾಕ್‌ಲೈನ್ ಸುಧಾಕರ್, ಪದ್ಮಜಾ ರಾವ್, ಕಡ್ಡಿಪುಡಿ ಚಂದ್ರು, ಸಂಪತ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.