
ಶ್ರೀನಿವಾಸ್ ಶಿಡ್ಲಘಟ್ಟನಿರ್ದೇಶನದ ‘ಮನಸಾಗಿದೆ’ ಚಿತ್ರಕ್ಕೆ ಶೂಟಿಂಗ್ ಮುಕ್ತಾಯ ಆಗಿದೆ. ಎಸ್. ಚಂದ್ರಶೇಖರ್ ಈ ಚಿತ್ರದ ನಿರ್ಮಾಪಕರು. ಇವರ ಮಗ ಅಭಯ್ ಚಿತ್ರದ ನಾಯಕ. ಅಥಿರ ಹಾಗೂ ಮೇಘ ಶ್ರೀ ಚಿತ್ರದ ನಾಯಕಿಯರು. ಸುರೇಶ್ ರೈ, ಭವ್ಯಶ್ರೀ ರೈ, ಸೂರಜ್, ತೇಜಸ್, ಅನೀಶ್, ಚಿದು ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಶ್ರೀನಿವಾಸ್ ಶಿಡ್ಲಘಟ್ಟ, ‘ಚಿತ್ರೀಕರಣಕ್ಕೆ ಪ್ರಕೃತಿ ಕೂಡ ನಮಗೆ ಸಹಕಾರ ನೀಡಿತು. ಯಾಕೆಂದರೆ ಮಳೆಯಲ್ಲಿ ಹಾಡು ಹಾಗೂ ಫೈಟ್ ದೃಶ್ಯಗಳನ್ನು ಚಿತ್ರೀಕರಣ ಮಾಡುವ ಪ್ಲಾನ್ ಇರಲಿಲ್ಲ. ಆದರೆ, ನಾವು ಚಿತ್ರೀಕರಣಕ್ಕೆ ಹೋದ ಮೇಲೆ ಮಳೆ ಬಂತು. ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಮಳೆಯಲ್ಲೇ ಸಾಹಸ ದೃಶ್ಯಗಳು ಹಾಗೂ ಹಾಡು ಶೂಟಿಂಗ್ ಮಾಡಿದ್ದು ರೋಚಕ ಅನುಭವ. ಥ್ರಿಲ್ಲರ್ ಮಂಜು ಫೈಟ್ ಕಂಪೋಸ್ ಮಾಡಿದ್ದಾರೆ’ ಎನ್ನುತ್ತಾರೆ.
‘ಮಕ್ಕಳ ಭವಿಷ್ಯದ ಬಗ್ಗೆ ಸಾಕಷ್ಟುಕನಸುಗಳನ್ನು ಇಟ್ಟುಕೊಂಡು ಈ ಚಿತ್ರವನ್ನು ನಿರ್ಮಿಸಿದ್ದು, ಎಲ್ಲರಿಗೂ ಈ ಸಿನಿಮಾ ಇಷ್ಟವಾಗತ್ತದೆ ಎನ್ನುವ ನಂಬಿಕೆ’ ಎಂದಿದ್ದು ನಿರ್ಮಾಪಕ ಎಸ್ ಚಂದ್ರಶೇಖರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.