
‘ನನ್ನ ಕೆರಿಯರ್‌ನಲ್ಲಿ ರಿಲೀಸ್ ವೇಳೆಗೇ ದುಡ್ಡು ಮಾಡಿರುವ ಮೊದಲ ಸಿನಿಮಾ ಇದು. ಈ ಚಿತ್ರ ಸಿಗುವ ಮೊದಲು ಹೊಸ ಕತೆ, ಹೊಸ ಪಾತ್ರ ಕೊಡ್ರಪ್ಪಾ ನಂಗೆ ಅಂತ ಕೂಗಿ ಹೇಳ್ಬೇಕು ಅನಿಸ್ತಿತ್ತು’.
- ಯಶಸ್ವೀ 25 ದಿನಗಳ ಪ್ರದರ್ಶನ ಕಂಡಿರುವ ‘ಸೀತಾರಾಮ್ ಬಿನೋಯ್’ ಚಿತ್ರದ ನಾಯಕ ವಿಜಯ ರಾಘವೇಂದ್ರ ಮಾತುಗಳಿವು. ಚಿತ್ರತಂಡ ಯಾವ ನಿರೀಕ್ಷೆಯೂ ಇಲ್ಲದೇ ಮಾಡಿದ ಸಿನಿಮಾ ಟಿವಿಯಲ್ಲಿ ಮೊದಲು ಬಿಡುಗಡೆಯಾಗಿ, ಬಳಿಕ ಥಿಯೇಟರ್‌ಗೆ ರಿಲೀಸ್ ಆಗಿ, ಮುಂದಿನ ತಿಂಗಳು ಅಮೆಜಾನ್ ಪ್ರೈಮ್‌ನಲ್ಲೂ ಬಿಡುಗಡೆಯಾಗಲಿದೆ.ಈ ಹಿನ್ನೆಲೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ವಿಜಯ ರಾಘವೇಂದ್ರ ಸಿನಿಮಾ ಬಿಡುಗಡೆಯ ಹಿಂದಿದ್ದ ಆತಂಕವನ್ನೂ ಬಿಚ್ಚಿಟ್ಟರು.
‘ಚಿತ್ರ ಏನಾಗುತ್ತೋ ಎಂಬ ಆತಂಕದಿಂದಲೇ ಇದು ನನ್ನ 50ನೇ ಚಿತ್ರವಾದರೂ ಪ್ರಚಾರಕ್ಕೆ ಮುಂದಾಗಲಿಲ್ಲ. ಇದೀಗ ಚಿತ್ರ ಯಶಸ್ವಿಯಾಗಿ ಆತ್ಮವಿಶ್ವಾಸ ಹೆಚ್ಚಿಸಿದೆ’ ಎಂದರು. ನಿರ್ದೇಶಕ ಹಾಗೂ ನಿರ್ಮಾಪಕ ದೇವಿಪ್ರಸಾದ್ ಶೆಟ್ಟಿ, ‘ಇದು ನನ್ನ ಮೊದಲ ಚಿತ್ರ. ಹೊಸ ಬಗೆಯಲ್ಲಿ ಕತೆ ಹೇಳಿದ್ದೇನೆ’ ಎಂದರು. ಹಿರಿಯ ನಿರ್ಮಾಪಕ ಚಿನ್ನೇಗೌಡ ಹಾಗೂ ಚಿತ್ರತಂಡದವರು ಸುದ್ದಿಗೋಷ್ಠಿಯಲ್ಲಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.