
'ಸೈಕೋ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಅನಿತಾ ಭಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಅದರಲ್ಲೂ ಟ್ಟಿಟರ್ ಖಾತೆಯಲ್ಲಿ ರಾಜಕೀಯ ಹಾಗೂ ಧರ್ಮಗಳ ಬಗ್ಗೆ ಟ್ಟೀಟ್ ಮಾಡುತ್ತಿರುತ್ತಾರೆ ಹಾಗೂ ಇದರ ಬಗ್ಗೆ ಫಾಲೋಯರ್ಸ್ ಜೊತೆ ಚರ್ಚೆ ಮಾಡುತ್ತಿರುತ್ತಾರೆ. ಆದರೆ ಕೆಲವು ದಿನಗಳ ಹಿಂದೆ ಮಾಡಿದ ಒಂದು ಟ್ಟೀಟ್‌ನಿಂದ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಹಿಂದೂ ಧರ್ಮ, ಬ್ರಾಹ್ಮಣ್ಯ ಇನ್ನಿತರೆ ವಿಷಯಗಳ ಬಗ್ಗೆ ಅನಿತಾ ಮಾಡಿರುವ ಟ್ಟೀಟ್‌ಗಳು ವೈರಲ್ ಆಗಿವೆ. ಈ ಟ್ಟೀಟ್‌ಗಳಿಗೆ ಬಂದಿರುವ ಕಾಮೆಂಟ್‌ಗಳು ವೈಯಕ್ತಿಕವಾಗಿವೆ ಹಾಗೂ ಕೆಲವೊಂದು ವಿಚಾರಗಳು ಅತಿರೇಕಕ್ಕೆ ಹೋಗಿವೆ. ಇದರಿಂದ ಬೇಸರಗೊಂಡ ಅನಿತಾ ಭಟ್ ನಿಂದಿಸಿದ, ಅಪಮಾನಕರ ರೀತಿಯಲ್ಲಿ ಟ್ಟೀಟ್ ಮಾಡಿದವರ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರಿಗೆ ನೀಡಿರುವ ಪತ್ರದ ಫೋಟೋ ಟ್ಟಿಟರ್‌ನಲ್ಲಿ ಹಂಚಿ ಕೊಂಡಿದ್ದಾರೆ.
'ನಾನು ಕಂಪ್ಲೇಂಟ್ ಕೊಟ್ಟಿದ್ದು ಕೇವಲ ನನಗಾಗಿ ಮಾತ್ರವಲ್ಲ. ಬೇರೆ ಹೆಣ್ಣು ಮಕ್ಕಳಿಗೂ ತೊಂದರೆ ಆದಾಗ ಧ್ವನಿ ಎತ್ತಲಿ. ನಮಗೆ ತೊಂದರೆ ಆದಾಗ ಅದನ್ನು ವಿರೋಧಿಸುವ ಹಕ್ಕು ನಮಗಿದೆ. ಮಿಕ್ಕಿದ್ದು ನಮ್ಮ ನ್ಯಾಯಾಂಗ ವ್ಯವಸ್ಥೆ ನೋಡಿಕೊಳ್ಳತ್ತದೆ. ಇನ್ನಾದರೂ ಸಾಮಾಜಿಕ ಜಾಲತಾಣಗಳಲ್ಲಿ ಆಗುವ ಅತ್ಯಾಚಾರ ವಿರೋಧಿಸಿ. ಹೆದರಬೇಡಿ,' ಎಂದು ಅನಿತಾ ಟ್ಟೀಟ್ ಮಾಡಿದ್ದಾರೆ. 'ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿ ಕೊಳ್ಳಬಹುದು. ವೈಯಕ್ತಿಕ ನಿಂದನೆ, ದಾಳಿ ಮಾಡುವ ವೇದಿಕೆ ಅದಲ್ಲ. ನಮ್ಮ ಜೀವನಕ್ಕೆ ನಾವೇ ಜವಾಬ್ದಾರರಾದಾಗ ಬೇರೆಯವರಿಗೆ ಮಾತನಾಡುವ ಹಕ್ಕಿಲ್ಲ. ಒಂದು ಕೆಂಪು ಮಾರ್ಕ್ ನಿಮ್ಮ ಪ್ರೊಫೈಲ್ ಮೇಲೆ ಬಿದ್ದರೆ ಜೀವನವೇ ಹಾಳಾಗುತ್ತದೆ,' ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.