10 ಕೋಟಿಯಿಂದ 150 ಕೋಟಿವರೆಗೆ; ಕನ್ನಡ ಹಿಟ್ ನಟರ ಸಂಭಾವನೆ ಎಷ್ಟು?

By Suvarna News  |  First Published Feb 12, 2024, 1:53 PM IST

ಕನ್ನಡದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಸ್ಟಾರ್ ಆಗುವ ಮೊದಲು ತೆರೆಮರೆಯ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ ಯಶ್ ಪಡೆದ ಮೊದಲ ಸಂಬಳ 50 ರೂಪಾಯಿಗಳು. ಈಗ ಯಶ್ ಯಶಸ್ಸು ಕೇವಲ ಕನ್ನಡಕ್ಕಲ್ಲ, ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಮಾತಾಗಿದೆ.


ರಿಷಬ್ ಶೆಟ್ಟಿ ಅಭಿನಯದ ಕಾಂತಾರ, ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ, ಯಶ್ ಅಭಿನಯದ ಕೆಜಿಎಫ್ ಇತ್ಯಾದಿ ಕನ್ನಡ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಚಿನ್ನ ಗೆದ್ದಿವೆ. ಅಷ್ಟೇ ಅಲ್ಲ, ಈ ಚಿತ್ರಗಳ ಯಶಸ್ಸು ಕನ್ನಡ ಚಿತ್ರನಟರ ಸಂಭಾವನೆಯ ಮೊತ್ತವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ದಿದೆ. ಜೊತೆಗೆ, ಈ ನಟರ ಹೆಸರು ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಂತಾಗಿದೆ.

ಕನ್ನಡದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಈಗ ಭಾರತದ ಹಲವಾರು ಎ-ಲಿಸ್ಟರ್‌ಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದ್ದಾರೆ. ಈ ಯಶಸ್ಸಿನ ಕತೆ ನಟ ಯಶ್‌ದು. ರಾಕಿಂಗ್ ಸ್ಟಾರ್ ಪಡೆದ ಮೊದಲ ಸಂಬಳ 50 ರೂ. ಆಗಿತ್ತು ಎಂಬುದು ನಿಮಗೆ ಗೊತ್ತೇ?

Latest Videos

undefined

ಹೌದು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕನ ಮಗ ಯಶ್ 16ನೇ ವಯಸ್ಸಿನಲ್ಲಿ ಚಿತ್ರಗಳ ತೆರೆಮರೆಯಲ್ಲಿ ಕೆಲಸ ಮಾಡಿ ಪಡೆದ ಮೊದಲ ಸಂಬಳ 50 ರುಪಾಯಿಗಳು.  ಚಿಕ್ಕ ವಯಸ್ಸಿನಿಂದಲೂ ನಟರಾಗಲು ಬಯಸಿದ್ದ ಯಶ್ ಇದಕ್ಕಾಗಿ ಶಾಲೆ ತೊರೆಯಲು ನಿರ್ಧರಿಸಿದ್ದರು. ಆದರೆ, ಪೋಷಕರು ಓದು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು. ಕಡೆಗೆ 2003ರಲ್ಲಿ, 16ನೇ ವಯಸ್ಸಿನಲ್ಲಿ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಲು ಬೆಂಗಳೂರಿಗೆ ಹೋಗಲು ಯಶ್ ಪೋಷಕರು ಅವಕಾಶ ನೀಡಿದ್ದು ಮಗನ ಹಠಕ್ಕೆ ಮಣಿದು. ಆದರೆ, ಯಶ್ ಕೆಲಸ ಮಾಡುತ್ತಿದ್ದ ಯೋಜನೆಯು ಕೇವಲ ಎರಡು ದಿನಗಳ ಚಿತ್ರೀಕರಣದ ನಂತರ ರದ್ದುಗೊಂಡಿತು. ಹೀಗಾಗಿ, ತೆರೆಮರೆಯಲ್ಲಿ ಕೆಲಸ ಮಾಡಿ ಮೊದಲ ವೇತನವಾಗಿ ಯಶ್ ಪಡೆದದ್ದು 50 ರೂ.ಗಳನ್ನು. 

ಅಭಿಮಾನಿಗೆ ಮೈಕ್‌ನಲ್ಲಿ ಹೊಡೆದು, ಫೋನ್ ಎಸೆದ ಗಾಯಕ ಆದಿತ್ಯ ನಾರಾಯಣ್; ದುರಹಂಕಾರ ಅಂತಿದಾರೆ ಜನ
 

ಈಗ ಸೂಪರ್ ಸ್ಟಾರ್ ಆಗಿರುವ ಯಶ್ ಚಿತ್ರವೊಂದಕ್ಕೆ 50ರಿಂದ 100 ಕೋಟಿ ರೂ.ಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ! ಅದರಲ್ಲೂ ಮುಂಬರುವ ಚಿತ್ರ ನಿತೇಶ್ ತಿವಾರಿ ಅವರ ರಾಮಾಯಣಕ್ಕಾಗಿ 150 ಕೋಟಿ ರೂಪಾಯಿಗಳನ್ನು ವಿಧಿಸಿದ್ದಾರೆ ಈ ಸೆಲ್ಫ್ ಮೇಡ್ ಸರದಾರ. 

ಕನ್ನಡ ನಟರ ಸಂಭಾವನೆ
ಯಶ್ ನಂತರ ದರ್ಶನ್ ತೂಗುದೀಪ ಅವರು ಪ್ರತಿ ಬಿಗ್ ಸ್ಕ್ರೀನ್ ಔಟಿಂಗ್‌ಗೆ ಸುಮಾರು 20 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ ಎಂದು ವರದಿಯಾಗಿದೆ. ಈ ಪಟ್ಟಿಯಲ್ಲಿ ಮುಂದಿನ ಸ್ಥಾನದಲ್ಲಿರುವ ಕಿಚ್ಚ ಸುದೀಪ್ ಅವರು ಹಲವಾರು ಬಾಲಿವುಡ್ ಚಿತ್ರಗಳಾದ ಫೂಂಕ್, ರಾನ್ ಮತ್ತು ದಬಾಂಗ್ 3 ನಲ್ಲಿ ನಟಿಸಿದ್ದಾರೆ ಮತ್ತು ಅವರ ಪಾತ್ರವನ್ನು ಅವಲಂಬಿಸಿ ಪ್ರತಿ ಯೋಜನೆಗೆ ಸುಮಾರು 10ರಿಂದ 25 ಕೋಟಿ ರೂಪಾಯಿಗಳವರೆಗೆ ಸಂಭಾವನೆ ಪಡೆಯುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಇತರ ನಟರೆಂದರೆ ಉಪೇಂದ್ರ ಮತ್ತು ರಿಷಬ್ ಶೆಟ್ಟಿ. ಅವರು ಪ್ರತಿ ಚಿತ್ರಕ್ಕೆ ಸುಮಾರು 10ರಿಂದ 15 ಕೋಟಿ ರೂ. ವಿಧಿಸುತ್ತಾರೆ. ಶಿವರಾಜ್‌ ಕುಮಾರ್ ಚಿತ್ರವೊಂದಕ್ಕೆ ಸುಮಾರು 8 ಕೋಟಿ ರೂ. ಸಂಭಾವನೆ ಪಡೆದರೆ, ಧ್ರುವ ಸರ್ಜಾ 10 ಕೋಟಿ ರೂ. ವಿಧಿಸುತ್ತಾರೆ ಎಂದು ಐಎಂಡಿಬಿ ತಿಳಿಸಿದೆ.

click me!