'ರಂಗನಾಯಕ'ನ ಕಾಂಟ್ರೋವರ್ಸಿ ಶುರು; ಗಾಳಿ ತಂಗಾಳಿ ಅಂತ 'ಬಿರುಗಾಳಿ' ಎಬ್ಬಿಸಲು ಹೊರಟ್ರಾ ಗುರೂ..!?

Published : Feb 12, 2024, 01:08 PM ISTUpdated : Feb 12, 2024, 03:51 PM IST
'ರಂಗನಾಯಕ'ನ ಕಾಂಟ್ರೋವರ್ಸಿ ಶುರು; ಗಾಳಿ ತಂಗಾಳಿ ಅಂತ 'ಬಿರುಗಾಳಿ' ಎಬ್ಬಿಸಲು ಹೊರಟ್ರಾ ಗುರೂ..!?

ಸಾರಾಂಶ

ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಅವರು ನವರಸನಾಯಕ ಜಗ್ಗೇಶ್ ಅಭಿನಯದ 'ರಂಗನಾಯಕ' ಚಿತ್ರದ ಹಾಡಲ್ಲಿ ನಟಿಯರನ್ನು ಕಾಲೆಳೆದಿದ್ದಾರೆ ಎಂಬ ವಿವಾದ ಈಗ ಭುಗಿಲೆದ್ದಿದೆ. ಜಗ್ಗೇಶ್ ಬಾಯಲ್ಲಿ ಬಿಗ್ ಬಾಸ್ ಶ್ರುತಿ ಹಾಗೂ Metoo ಶ್ರುತಿ (ಶ್ರುತಿ ಹರಿಹರನ್) ಹೆಸರು ಬಂದಿದೆ. 

ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಹಾಗು ಜಗ್ಗೇಶ್ ಜೋಡಿಯ ಮುಂಬರುವ ಚಿತ್ರ 'ರಂಗನಾಯಕ' ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಅಲೆಯನ್ನೇ ಎಬ್ಬಿಸುತ್ತಿದೆ. ಅಂದು 10 ಫೆಬ್ರವರಿ 2006 ರಂದು ಬಿಡುಗಡೆಯಾಗಿ ಹೊಸ ಅಲೆಯನ್ನೇ ಎಬ್ಬಿಸಿ ಸೂಪರ್ ಹಿಟ್ ದಾಖಲಿಸಿದ್ದ ಮಠ ಚಿತ್ರವು ಗುರುಪ್ರಸಾದ್ ಹಾಗೂ ನಟ ಜಗ್ಗೇಶ್ ಹೆಸರು ಕರ್ನಾಟಕದ ತುಂಬಾ ಪಸರಿಸುವಂತೆ ಮಾಡಿತ್ತು. ಈಗ ಅದೇ ಗುರುಪ್ರಸಾದ್ ಮತ್ತು ಜಗ್ಗೇಶ್ ಜೋಡಿ 'ರಂಗನಾಯಕ' ಚಿತ್ರದ ಮೂಲಕ ಮ್ಯಾಜಿಕ್ ಮಾಡಲು ಸದ್ಯದಲ್ಲೇ ತೆರೆಗೆ ಬರುತ್ತಿದ್ದಾರೆ. 

ಈಗಾಗಲೇ ಬಿಡುಗಡೆಯಾಗಿರುವ 'ರಂಗನಾಯಕ' ಚಿತ್ರದ ಗಾಳಿ ತಂಗಾಳಿ ಹಾಡು ಹೊಸ ಅಲೆಯನ್ನೇ ಎಬ್ಬಿಸುತ್ತಿದೆ. ಜೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡು ಬಿಡುಗಡೆಯಾಗಿ 9 ದಿನವಷ್ಟೇ ಆಗಿದ್ದು ಈಗಾಗಲೇ 540k ವ್ಯೂಸ್ ದಾಖಲಿಸಿ ನಾಗಾಲೋಟ ಮುಂದುವರೆಸಿದೆ. ಅದಿರಲಿ, ಈ ಹಾಡಿನ ಬಿಡುಗಡೆ ವೇಳೆ ಗುರುಪ್ರಸಾದ್ ನಟಿ ಶ್ರುತಿ ಹರಿಹರನ್ ಹಾಗೂ ಬಿಗ್ ಬಾಸ್ ವಿನ್ನರ್ ಶ್ರುತಿ ಬಗ್ಗೆ ಹೋಲಿಕೆ ಮಾಡಿ ಆಡಿರುವ ಮಾತುಗಳು ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸುತ್ತಿವೆ. 

ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಅವರು ನವರಸನಾಯಕ ಜಗ್ಗೇಶ್ ಅಭಿನಯದ 'ರಂಗನಾಯಕ' ಚಿತ್ರದ ಹಾಡಲ್ಲಿ ನಟಿಯರನ್ನು ಕಾಲೆಳೆದಿದ್ದಾರೆ ಎಂಬ ವಿವಾದ ಈಗ ಭುಗಿಲೆದ್ದಿದೆ. ಜಗ್ಗೇಶ್ ಬಾಯಲ್ಲಿ ಬಿಗ್ ಬಾಸ್ ಶ್ರುತಿ ಹಾಗೂ Metoo ಶ್ರುತಿ (ಶ್ರುತಿ ಹರಿಹರನ್) ಹೆಸರು ಬಂದಿದೆ. ಅದಕ್ಕೆ ಕಾರಣ ಮಠ ಗುರುಪ್ರಸಾದ್ ಎನ್ನಲಾಗುತ್ತಿದೆ.  ನಟಿ ಶ್ರುತಿ ಹರಿಹರನ್ ಎಲ್ಲಿಂದಲೋ ಇಲ್ಲಿ ಬಂದು ಸುಮ್ಮನೇ ಈ ಉದ್ಯಮವನ್ನು ಗಬ್ಬೆಬ್ಬಿಸಿದ್ದಾರೆ ಎಂದು ಕೆಂಡ್ ಕಾರಿದ್ದಾರೆ ಮಠ ಗುರುಪ್ರಸಾದ್.

ರಾಕ್‌ಲೈನ್ ವೆಂಕಟೇಶ್ ನನ್ನ ಹಿಂದಿರುವ ನಿಜವಾದ ದೊಡ್ಡ ಶಕ್ತಿ; ಸುಮಲತಾ ಅಂಬರೀಷ್

ಜಗ್ಗೇಶ್ ಹಾಗು ಗುರುಪ್ರಸಾದ್ ಜೋಡಿಯ ಮುಂಬರುವ ಚಿತ್ರ ರಂಗನಾಯಕದ ಪ್ರಮೋಶನ್ ಕಾರ್ಯ ನಡೆಯುತ್ತಿದೆ. ಈಗ ನಿರ್ದೇಶಕ ಗುರುಪ್ರಸಾದ್ ಮಾಧ್ಯಮಗಳ ಜತೆ ಮಾತುಕತೆ ನಡೆಸುತ್ತಿದ್ದಾರೆ. ಈ ವೇಳೆ 'ಶೃತಿ ಅನ್ನೋದು ಸಂಗೀತ ಭಾಷೆ ಅದ್ರು ನಾನು ಬೇಕಂತಲೇ ಆ ಸಾಹಿತ್ಯ ಬರೆದಿದ್ದೀನಿ' ಎಂದು ನಟಿ ಶೃತಿ ಹರಿಹರನ್ ವಿರುದ್ದ ಗುಡುಗಿದ್ದಾರೆ. 'ನಟಿ ಶೃತಿ ಹರಿಹರನ್ ಕನ್ನಡದವರಲ್ಲ. ಎಲ್ಲಿಂದಲೋ ಬಂದು ಇಲ್ಲಿ ಗಬ್ಬೆಬ್ಬಿಸಿದ್ರು. ನಾನು ಪತೀವ್ರತೆ ಅಂತ ಫ್ರೂ ಮಾಡೊಕೆ ಆಯಮ್ಮ ಹೊರಟಿದ್ರು. 

ಸಾಯುವುದಕ್ಕೆ ಎರಡು ದಶಕಗಳ ಮೊದಲೇ ಸಾವಿನ ಬಾಗಿಲು ತಟ್ಟಿ ಬಂದಿದ್ದರು ನಟ ವಿಷ್ಣುವರ್ಧನ್!

ಮೀಟೂನೂ ಇಲ್ಲ ಯಾವುದೂ ಇಲ್ಲ ಸ್ವಾಮಿ ಕಿರುಕುಳ ಆದಾಗ ದೂರು ನೀಡಬೇಕಿತ್ತು. ಆರು ವರ್ಷಗಳ ನಂತ್ರ ಬಂದು ದೂರು ನೀಡಿದ್ರೆ ಏನ್ ಪ್ರಯೋಜನ?' ಎಂದು ಗುರುಪ್ರಸಾದ್ ಕೇಳಿದ್ದಾರೆ. ಕೈಚೀಲ ಕಳ್ಕೊಂಡಾಗ ಕಂಪ್ಲೈಟ್  ಕೊಡದ ತಡವಾಗಿ ಕೊಟ್ರೆ ಏನ್ ಯೂಸ್? ಇದು ಚೀಲದ ವಿಚಾರ ಅಲ್ಲಾ ಶೀಲದ ವಿಚಾರ' ಅಂತ ಶೃತಿ ಹರಿಹರನ್ ವಿರುದ್ದ ಗುಡುಗಿದ ಗುರುಪ್ರಸಾದ್ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಇದೀಗ ಸಿನಿಮಾ ಹಾಡಿನ ಮೂಲಕವೇ ಮೀಟೂ ನಟಿ ಶ್ರುತಿ ಹರಿಹರನ್ ವಿರುದ್ಧ ಗುಡುಗಿರುವ ಗುರುಪ್ರಸಾದ್ ತಮ್ಮ ಸಿನಿಮಾದಲ್ಲಿ ಏನೆಲ್ಲಾ ಹೇಳಿರಬಹುದು ಎಂಬ ಬಗ್ಗೆ ಚರ್ಚೆ ನಡೆಯತೊಡಗಿದೆ. 

ಡಾ ರಾಜ್‌ ಮಗನಾಗಿ ನೀವ್ಯಾಕೆ 'ಸ್ಮೋಕಿಂಗ್-ಡ್ರಿಂಕಿಂಗ್' ದೃಶ್ಯಗಳಲ್ಲಿ ನಟಿಸ್ತೀರಾ; ಸ್ಪಷ್ಟ ಉತ್ತರ ಕೊಟ್ರು ನಟ ಶಿವಣ್ಣ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Radhika Pandit: ಯಶ್ ಪತ್ನಿ ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ ಬಗ್ಗೆ ನಿಮಗೆ ಈ ಆಸಕ್ತಿಕರ ಸಂಗತಿಗಳು ಗೊತ್ತಾ?
K Bhagyaraj Kannada remakes list: ಕೆ. ಭಾಗ್ಯರಾಜ್ ಸಿನಿಮಾಗಳನ್ನು ರೀಮೇಕ್ ಮಾಡಿ ಗೆದ್ದಿರುವ ಕನ್ನಡದ ಹೀರೋಗಳು ಇವರೇ ನೋಡಿ; ಇದು ಆ ಚಿತ್ರಗಳ ಲಿಸ್ಟ್!‌