ಕಾಟೇರ ಸಕ್ಸಸ್ ಮೀಟ್ ವೇದಿಕೆಯಲ್ಲಿ ಮಾತನಾಡುತ್ತ ಸುಮಲತಾ ಅಂಬರೀಷ್ ಅವರು 'ನಾನು ದರ್ಶನ್‌ಗೆ ಡೈರೆಕ್ಟ್ ಆಗಿ ಥ್ಯಾಂಕ್ಸ್ ಹೇಳಲ್ಲ. ಕಾರಣ, ದರ್ಶನ್ ಬೈತಾರೆ- ನನ್ ತಾಯಿ ನಂಗೆ ಥ್ಯಾಂಕ್ಸ್ ಹೇಳ್ಬಾರ್ದು ಅಂತ...
ಕಾಟೇರ ಚಿತ್ರದ ಸಕ್ಸಸ್ ಈವೆಂಟ್‌ನಲ್ಲಿ ನಟಿ ಹಾಗೂ ರಾಜಕಾರಣಿ ಸುಮಲತಾ ಅಂಬರೀಷ್ (Sumalatha Ambareesh) ಮಾತನಾಡುತ್ತಿದ್ದರು. ಸೂಪರ್ ಹಿಟ್ ದಾಖಲಿಸಿ ಇನ್ನೂ ಥಿಯೇಟರ್‌ಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ನಟ ದರ್ಶನ್ (Challenging Star Darshan) ನಾಯಕತ್ವದ 'ಕಾಟೇರ (Kaatera) ಈವೆಂಟ್ ಅದಾಗಿತ್ತು. ಈ ವೇಳೆ ಸುಮಲತಾ ಅಂಬರೀಷ್ ಅವರು ತಮ್ಮ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ, ದರ್ಶನ್ ಹಾಗು ರಾಕ್‌ಲೈನ್ ವೆಂಕಟೇಶ್ (Rockline Venkatesh) ಬಗ್ಗೆ ಮಾತನಾಡಿದ್ದಾರೆ.
ಕಾಟೇರ ಸಕ್ಸಸ್ ಮೀಟ್ ವೇದಿಕೆಯಲ್ಲಿ ಮಾತನಾಡುತ್ತ ಸುಮಲತಾ ಅಂಬರೀಷ್ ಅವರು 'ನಾನು ದರ್ಶನ್‌ಗೆ ಡೈರೆಕ್ಟ್ ಆಗಿ ಥ್ಯಾಂಕ್ಸ್ ಹೇಳಲ್ಲ. ಕಾರಣ, ದರ್ಶನ್ ಬೈತಾರೆ- ನನ್ ತಾಯಿ ನಂಗೆ ಥ್ಯಾಂಕ್ಸ್ ಹೇಳ್ಬಾರ್ದು ಅಂತ. ಆದ್ರೆ ನಾನು ದರ್ಶನ್‌ಗೆ ಧನ್ಯವಾದ ಹೇಳೋ ರೀತಿ.., ನಾನು ಮಂಡ್ಯಕ್ಕೆ ಮಾಡೋ ಅಭಿವೃದ್ಧಿ ಕೆಲಸ ಹಾಗೂ ಸೇವೆಯ ಮೂಲಕವೇ. ಯಾಕೆ ಅಂದ್ರೆ, ದರ್ಶನ್ ಯಾವಾಗ್ಲೂ ಕೇಳ್ತಾರೆ, ಮಂಡ್ಯದಲ್ಲಿ ಏನು ಕೆಲ್ಸ ಆಯ್ತು ಅಂತ..
ಸಾಯುವುದಕ್ಕೆ ಎರಡು ದಶಕಗಳ ಮೊದಲೇ ಸಾವಿನ ಬಾಗಿಲು ತಟ್ಟಿ ಬಂದಿದ್ದರು ನಟ ವಿಷ್ಣುವರ್ಧನ್!
ಇವತ್ತಿನ ದಿನ ಇದು ಮನೆಯ ಒಂದು ಹಬ್ಬದ ತರ ಇದೆ. ಈ ಚಿತ್ರದ ನಿರ್ಮಾಪಕರು ರಾಕ್‌ಲೈನ್ ವೆಂಕಟೇಶ್, ಅವ್ರು ನಂಗೆ ಒಂದು ದೊಡ್ಡ ಶಕ್ತಿಯಾಗಿ ನಿಂತವ್ರೇ. ಇದೊಂದು ಅದ್ಭುತವಾದ , ಅದ್ದೂರಿಯಾದ ಚಿತ್ರ ಮಾಡುವಲ್ಲಿ ಅಷ್ಟೇ ಒಂದು ಯಶಸ್ವಿಯಾಗಿ ಮಾಡ್ಕೊಂಡು ಬಂದಿದಾರೆ. ಚಿತ್ರದ ನಿರ್ದೇಶಕರಾದ ತರುಣ್ ಸುಧೀರ್ ಅವರ ಹೆಸರನ್ನು ಕೂಡ ಹೇಳಿ ಸುಮಲತಾ ಅಂಬರೀಷ್ ಅವರು ಕಾಟೇರ ಚಿತ್ರದ ಯಶಸ್ಸನ್ನು ಕೊಂಡಾಡಿದ್ದಾರೆ. ಸುಮಲತಾ ಅಂಬರೀಷ್ ತಮ್ಮ ಹೃದಯಾಂತರಾಳದಿಂದ ಕಾಟೇರ ತಂಡಕ್ಕೆ ಶುಭ ಹಾರೈಸಿದ್ದಾರೆ.
ಅಂದಹಾಗೆ, ಸುಮಲತಾ ಅಂಬರೀಷ್ ಅವರು ಮಂಡ್ಯದಲ್ಲಿ ಚುನಾವಣೆಗೆ ನಿಂತಾಗ, ನಟ ದರ್ಶನ್ ಹಾಗೂ ಯಶ್ ಅವರಿಬ್ಬರೂ ಸುಮಲತಾ ಪರವಾಗಿ ಪ್ರಚಾರ ಮಾಡಿದ್ದರು. ಬಳಿಕ ಚುನಾವಣೆಯಲ್ಲಿ ಗೆದ್ದ ಸುಮಲತಾ ಅವರು 'ಎಂಪಿ'ಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಗೊತ್ತೇ ಇದೆ. ಅದೇ ವೇಳೆ, ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರ್ಮಾಪಕ ಹಾಗು ಅಂಬರೀಷ್ ಕುಟುಂಬದ ಹಿತೈಷಿ ರಾಕ್‌ಲೈನ್ ವೆಂಕಟೇಶ್ ಅವರು ಕೂಡ ಸುಮಲತಾ ಪರವಾಗಿ ಗಟ್ಟಿಯಾಗಿ ನಿಂತಿದ್ದರು. ಅಂದಿನಿಂದ ಇಂದಿನವರೆಗೂ ರಾಕ್‌ಲೈನ್ ವೆಂಕಟೇಶ್, ದರ್ಶನ್ ಹಾಗು ಯಶ್ (Rocking Star Yash) ಅವರೆಲ್ಲರೂ ಸುಮಲತಾರ ಹಿತೈಷಿಗಳಾಗಿ, ಬೆಂಬಲ ನೀಡುವ ವ್ಯಕ್ತಿಗಳಾಗಿ, ಶಕ್ತಿಗಳಾಗಿ ನಿಂತಿದ್ದಾರೆ.
ಪುನೀತ್-ಶಿವಣ್ಣ ಜತೆಗಿನ 'ಲಾಸ್ಟ್ ಈವೆಂಟ್' ಪ್ರಶ್ನೆಗೆ ರಾಕಿಂಗ್ ಸ್ಟಾರ್ ಯಶ್ ಎಂಥಾ ಉತ್ತರ ಕೊಟ್ರು ನೋಡಿ!