ಗುರುಪ್ರಸಾದ್ ಮೀ ಟೂ ಹೇಳಿಕೆ ಬಗ್ಗೆ ತಿರುಗೇಟು ನೀಡಿದ್ದರು ಹಲವರು; ಏನೆಲ್ಲಾ ಆಗಿತ್ತು ಆಗ?

Published : Nov 03, 2024, 03:57 PM ISTUpdated : Nov 03, 2024, 03:59 PM IST
ಗುರುಪ್ರಸಾದ್ ಮೀ ಟೂ ಹೇಳಿಕೆ ಬಗ್ಗೆ ತಿರುಗೇಟು ನೀಡಿದ್ದರು ಹಲವರು; ಏನೆಲ್ಲಾ ಆಗಿತ್ತು ಆಗ?

ಸಾರಾಂಶ

ಗುರುಪ್ರಸಾದ್‌ ಅವರ ವರ್ತನೆಯನ್ನು ನಾನು ಖಂಡಿಸುತ್ತೇನೆ. ಬೇರೊಬ್ಬರ ಖಾಸಗಿ ಜೀವನದ ಬಗ್ಗೆ ಮಾತನಾಡುವ ಮೊದಲು ತಾವು ಏನು ಅಂತ ನೋಡಿಕೊಳ್ಳಬೇಕು. ತಮ್ಮ ಜೀವನವನ್ನು ಮೊದಲು ಸರಿ ಮಾಡಿಕೊಳ್ಳಬೇಕು. ಹೆಣ್ಣುಮಕ್ಕಳ ಬಗ್ಗೆ ಹೀಗೆಲ್ಲ ..

'ಮಠ ಹಾಗೂ 'ಎದ್ದೇಳು ಮಂಜುನಾಥ' ಸಿನಿಮಾ ಕನ್ನಡದ ಖ್ಯಾತ ನಿರ್ದೇಶಕ ಗುರುಪ್ರಸಾದ್ (Guruprasad) ಸಾವಿಗೆ ಶರಣಾಗಿದ್ದಾರೆ. 'ಮಠ' ಕನ್ನಡ ಸಿನಿಮಾ ಮೂಲಕ ಕರುನಾಡಿನಲ್ಲಿ ಖ್ಯಾತಿ ಹೊಂದಿದ್ದ ಗುರುಪ್ರಸಾದ್, ಸಾವಿಗೆ ಶರಣಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಎನ್ನಲಾಗುತ್ತಿದೆ. ಇತ್ತೀಚಿಗೆ ಅವರ 'ರಂಗನಾಯಕ' ಸಿನಿಮಾ ಬಿಡುಗಡೆಗೊಂಡು ಸೋಲು ಅನುಭವಿಸಿತ್ತು. ಬಳಿಕ ಅವರಿಗೆ ಸಿನಿಮಾ ಆಫರ್ ಇರಲಿಲ್ಲ ಎನ್ನಲಾಗಿದೆ.

ಮೀ ಟೂ ಅಭಿಯಾನಕ್ಕೆ ಸಂಬಂಧಪಟ್ಟು ಗುರುಪ್ರಸಾದ್ ಅವರು ಭಾರೀ ಸುದ್ದಿಯಾಗಿದ್ದರು. 'ಬೇರೊಬ್ಬರ ಮೇಲೆ ಮೀ ಟೂ ಆರೋಪ ಮಾಡುವ ಮೂಲಕ ನಟಿಯರು ತಾವು ಪತಿವ್ರತೆಯರೆಂದು ಸಾಬೀತು ಮಾಡಿ ಕೊಳ್ಳುವುದಕ್ಕೆ ಹೊರಟಿದ್ದಾರೆ' ಎಂದಿದ್ದರು ನಿರ್ದೇಶಕ ಗುರುಪ್ರಸಾದ್, ಅವರ ಈ ಮಾತನ್ನು ನಟಿ ಸಂಗೀತಾ ಭಟ್‌ ಪತಿ ಸುದರ್ಶನ್‌ ಹಾಗೂ ಗುರುಪ್ರಸಾದ್‌ ಅವರ ಮಾಜಿ ಪತ್ನಿ ಆರತಿ ಖಂಡಿಸಿದ್ದರು.

ಜಗ್ಗೇಶ್ 'ರಂಗನಾಯಕ' ರಿಲೀಸ್ ವೇಳೆ ಆಡಿದ್ದ ಗುರುಪ್ರಸಾದ್ ಮಾತು ನಿಜವಾಗಿದ್ದು ದುರಾದೃಷ್ಟ!

ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ್ದ ಆರತಿ, 'ನಾನು ಗುರುಪ್ರಸಾದ್‌ ಪತ್ನಿ ಅಲ್ಲ. ಮೂರು ವರ್ಷಗಳ ಹಿಂದೆಯೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಆದರೆ, ನಾನು ಗುರುಪ್ರಸಾದ್‌ ಅವರ ಹಲವು ಸಿನಿಮಾಗಳಿಗೆ ಅಸೋಸಿಯೇಟ್‌ ಆಗಿ ಕೆಲಸ ಮಾಡಿದ್ದೇನೆ. ಈಗ ಮೀ ಟೂ ಮೂಲಕ ತಮಗಾದ ನೋವನ್ನು ಹೇಳಿಕೊಳ್ಳುತ್ತಿರುವ ನಟಿಯರ ಧೈರ್ಯ ಮೆಚ್ಚಬೇಕು. 

ಇವರೆಲ್ಲ ಪತಿವ್ರತೆಯರೆಂದು ತೋರಿಸಿಕೊಳ್ಳುವುದಕ್ಕೆ ಹೊರಟಿದ್ದಾರೆ ಎಂದಿರುವ ಗುರುಪ್ರಸಾದ್‌ ಅವರ ವರ್ತನೆಯನ್ನು ನಾನು ಖಂಡಿಸುತ್ತೇನೆ. ಬೇರೊಬ್ಬರ ಖಾಸಗಿ ಜೀವನದ ಬಗ್ಗೆ ಮಾತನಾಡುವ ಮೊದಲು ತಾವು ಏನು ಅಂತ ನೋಡಿಕೊಳ್ಳಬೇಕು. ತಮ್ಮ ಜೀವನವನ್ನು ಮೊದಲು ಸರಿ ಮಾಡಿಕೊಳ್ಳಬೇಕು. ಹೆಣ್ಣುಮಕ್ಕಳ ಬಗ್ಗೆ ಹೀಗೆಲ್ಲ ಮಾತನಾಡುವುದು ಒಳ್ಳೆಯದಲ್ಲ' ಎಂದು ಕಿಡಿ ಕಾರಿದ್ದರು.

ನಿರ್ದೇಶಕ ಗುರುಪ್ರಸಾದ್‌ಗೆ ಏನಾಗಿತ್ತು? ಹಣದ ವ್ಯವಹಾರವೇ ಮುಳುವಾಯ್ತಾ?

ನಟಿ ಸಂಗೀತಾ ಭಟ್‌ ಪತಿ ಸುದರ್ಶನ್‌ ಮಾತನಾಡಿ, 'ಹೆಣ್ಣುಮಕ್ಕಳು ತಮಗೆ ಆದ ಅನ್ಯಾಯ ಹೇಳಿಕೊಳ್ಳಬೇಕೆಂಬುದು ಮೀ ಟೂ ಉದ್ದೇಶ. ಆ ಕಾರಣಕ್ಕೆ ಸಂಗೀತಾ ಭಟ್‌ ಕೂಡ ಚಿತ್ರರಂಗದಲ್ಲಿ ತಮಗೆ ಆದ ಕೆಟ್ಟಅನುಭವ ಹೇಳಿಕೊಂಡಿದ್ದಾರೆ. ಯಾರ ಹೆಸರನ್ನೂ ಹೇಳಿಲ್ಲ. ಇವರಿಗೆ ಕ್ಯಾರೆಕ್ಟರ್‌ ಸರ್ಟಿಫಿಕೆಟ್‌ ಕೊಡುವುದಕ್ಕೆ ಗುರುಪ್ರಸಾದ್‌ ಯಾರು' ಎಂದು ಪ್ರಶ್ನಿಸಿದ್ದರು. 

ಜೊತೆಗೆ, 'ಸಂಗೀತಾ ತಮಗಾದ ಕೆಟ್ಟಅನುಭವ ಹೇಳಿಕೊಳ್ಳುವುದಕ್ಕೆ ನನ್ನ ಜತೆ ಮೂರು ದಿನ ಚರ್ಚೆ ಮಾಡಿದ್ದಾರೆ. ಹೇಳಿಕೊಂಡ ಮೇಲೆ ಬರುವ ಸಮಸ್ಯೆಗಳ ಬಗ್ಗೆಯೂ ಮಾತನಾಡಿದ್ದೇವೆ. ಆದರೂ ನಟಿಯರ ಬಗ್ಗೆ ಗುರುಪ್ರಸಾದ್‌ ಇಷ್ಟುಕೀಳಾಗಿ ಮಾತನಾಡಬಾರದಿತ್ತು. ಯಾರೂ ಏನೇ ಮಾತನಾಡಿದರೂ ನಾನು ನನ್ನ ಪತ್ನಿ ಸಂಗೀತಾ ಜತೆ ನಿಲ್ಲುತ್ತೇನೆ' ಎಂದು ಸುದರ್ಶನ್‌ ತಿಳಿದ್ದರು.

ಬಿಗ್ ಬಾಸ್ ಮನೇಲಿರೋ ಧರ್ಮ ಭೂಮಿ ತೂಕದವ್ರಂತೆ! ಅಷ್ಟೊಂದು ಸಾಚಾ ಅಂತಿರೋದ್ಯಾಕೆ?

ಹಾಗಿದ್ದರೆ 'ಮಠ' ಗುರುಪ್ರಸಾದ್‌ ಏನು ಹೇಳಿದ್ದರು ಗೊತ್ತಾ? 'ಮೀ ಟೂ ವೇದಿಕೆ ದುರ್ಬಳಕೆ ಆಗುತ್ತಿದೆ. ನಟಿಯರು ಹೀಗೆ ಬೇರೊಬ್ಬರ ಮೇಲೆ ಆರೋಪ ಮಾಡುವ ಮೂಲಕ ತಾವು ಪತಿವ್ರತೆಯರೆಂದು ತೋರಿಸಿಕೊಳ್ಳುವುದಕ್ಕೆ ಹೊರಟಿದ್ದಾರೆ..' ಎಂದಿದ್ದರು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?