ಡೈರೆಕ್ಟರ್ ಗುರುಪ್ರಸಾದ್ ಸೂಸೈಡ್ ಕೇಸಲ್ಲಿ ಭಯಾನಕ ಟ್ವಿಸ್ಟ್; ರಕ್ತ ವಾಂತಿ ಆಗಿರುವುದು ಪತ್ತೆ!

By Sathish Kumar KH  |  First Published Nov 3, 2024, 3:23 PM IST

ನಿರ್ದೇಶಕ ಗುರುಪ್ರಸಾದ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸಾವಿನ ಮುನ್ನ ರಕ್ತವಾಂತಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಸಾವಿನ ಸ್ಥಳದಲ್ಲಿ ರಕ್ತವಾಂತಿಯನ್ನು ಪತ್ತೆ ಹಚ್ಚಿದ್ದಾರೆ.


ಬೆಂಗಳೂರು (ನ.03): ಕನ್ನಡ ಚಿತ್ರರಂಗದ ಸ್ಪೆಷಲ್ ಡೈರೆಕ್ಟರ್ ಗುರುಪ್ರಸಾದ್ ಅವರು ಮಾದನಾಯಕನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದರೆ, ಇದೀಗ ಆತ್ಮಹತ್ಯೆಗೂ ಮುನ್ನ ಅವರು ರಕ್ತವಾಂತಿ ಮಾಡಿಕೊಂಡಿದ್ದಾರೆ ಎಂಬುದು ಪತ್ತೆಯಾಗಿದ್ದು, ಸಾವಿಗೆ ಮುಂಚೆ ನಡೆದಿರುವ ಘಟನೆಯು ಕೇಸಿಗೆ ಭರ್ಜರಿ ಟ್ವಿಸ್ಟ್ ಸಿಕ್ಕಿದೆ.

ನಟ, ನಿರ್ದೇಶಕ ಗುರುಪ್ರಸಾದ್ ನಿಧನದಿಂದಾಗಿ ಕನ್ನಡ ಚಿತ್ರರಂಗವು ಒಬ್ಬ ಅತ್ಯಮೂಲ್ಯ ನಿರ್ದೇಶಕನನ್ನು ಕಳೆದುಕೊಂಡಿದೆ ಎಂದು ಬಹುತೇಕ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ನೋವನ್ನು ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಸಾವಿನ ಸ್ಥಳದಲ್ಲಿ ಒಂದು ವಿಚಿತ್ರವೂ ಕಂಡುಬಂದಿದೆ. ಗುರುಪ್ರಸಾದ್ ಅವರು ಈಗಾಗಲೇ ಕಳೆದ ಮೂರ್ನಾಲ್ಕು ದಿನಗಳ ಹಿಂದೆಯೇ ಆತ್ಮಹತ್ಯೆಗೆ ಶರಣಾಗಿದ್ದು, ಅವರ ಮೃತದೇಹ ಕೊಳೆತು ದುರ್ವಾಸಬೆ ಬೀರುವ ಹಂತಕ್ಕೆ ತಲುಪಿದೆ. ಹೀಗಿರುವಾಗ, ಅವರ ಪತ್ನಿ ಸುಮಿತ್ರಾ ಅವರಿಗಾಗಿ ಕಾಯುತ್ತಿದ್ದ ಪೊಲೀಸರು, ಹೆಂಡತಿ ಸುಮಿತ್ರಾ ಅವರ ಹಾಜರಿಯಲ್ಲಿಯೇ ಅಪಾರ್ಟ್‌ಮೆಂಟ್ ಮನೆಯ ಬಾಗಿಲು ಒಡೆದು ಮೃತದೇಹವನ್ನು ಪರಿಶೀಲನೆ ಮಾಡಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: 

ಪೊಲೀಸರು ಗುರುಪ್ರಸಾದ್ ಅವರ ಮೃತದೇಹ ಪರಿಶೀಲನೆ ಮಾಡಿದ ಸ್ಥಳದಲ್ಲಿ ರಕ್ತವಾಂತಿ ಆಗಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸಾವಿನ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಗುರುಪ್ರಸಾದ್ ಅವರು ನೇಣಿಗೆ ಶರಣಾಗುವ ಮುನ್ನ ಮದ್ಯದಲ್ಲಿ ವಿಷ ಬೆರೆಸಿಕೊಂಡು ಕುಡಿದಿರುವ ಸಾಧ್ಯತೆಯಿದೆ. ಇನ್ನು ವಿಷ ದೇಹದಲ್ಲಿ ಕೆಲಸ ಮಾಡುತ್ತಿದ್ದಂತೆಯೇ ಸಂಕಟದಿಂದ ಒದ್ದಾಗಿ ರಕ್ತವಾಂತಿಯನ್ನು ಮಾಡಿಕೊಂಡಿರಬಹುದು. ನಂತರ ಸಂಕಟ ತಾಳಲಾರದೇ ನೇಣಿಗೆ ಶರಣಾಗಿರಬಹುದು ಎಂದು ಶಕ್ತೆ ವ್ಯಕ್ತಪಡಿಸಿದ್ದಾರೆ.

ಅಪಾರ್ಟ್‌ಮೆಂಟ್ ಮನೆ ಸೀಜ್: ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾವಿನ ಹಿನ್ನೆಲೆಯಲ್ಲಿ ಹುಡುಕುವ ನಿಟ್ಟಿನಲ್ಲಿ ಪ್ರಾಥಮಿಕ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದಾರೆ. ಹೀಗಾಗಿ, ಸದ್ಯಕ್ಕೆ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿರುವ ಅಪಾರ್ಟ್ಮೆಂಟ್‌ನ ಫ್ಲಾಟ್ ಅನ್ನು ಸೀಜ್ ಮಾಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರಿಂದ ನ್ಯೂ ಹೆವೆನ್ ಅಪಾರ್ಟ್ಮೆಂಟ್ ಫ್ಲಾಟ್ ಸೀಜ್ ಮಾಡಲಾಗಿದೆ. ಕುಟುಂಬಸ್ಥರು ಮೃತದೇಹ ಗುರುತಿಸುತ್ತಿದ್ದಂತೆ ಫ್ಲ್ಯಾಟ್ ಸೀಜ್ ಮಾಡಿ ಯಾರನ್ನೂ ಒಳಗೆ ಬಿಟ್ಟುಕೊಳ್ಳದೇ ಸಾಕ್ಷಿಗಳಿಗಾಗಿ ಶೋಧನೆ ಮಾಡುತ್ತಿದ್ದಾರೆ. ಇನ್ನು ರಕ್ತವಾಂತಿ ಆಗಿರುವುದಕ್ಕೆ ಕಾರಣವೇನೆಂದು ಹುಡುಕುತ್ತಿದ್ದಾರೆ.

ಇದನ್ನೂ ಓದಿ: ನಿರ್ದೇಶಕ ಗುರುಪ್ರಸಾದ್ ಸಾವಿನ ಬಗ್ಗೆ ನಟಿ ಶೃತಿಯಿಂದ ಆಘಾತಕಾರಿ ಹೇಳಿಕೆ: ದೊಡ್ಡ ನಗುವಿನ ಹಿಂದೆ...

ಡಿ-ಕಂಪೋಸ್‌ ಆಗುವ ಮುನ್ನ ಬಿತ್ತಾ ರಕ್ತ:  ಇನ್ನು ನೇಣು ಬಿಗಿದ ಸ್ಥಿತಿಯಲ್ಲಿ ಗುರುಪ್ರಸಾದ್ ಅವರ ದೇಹ ಮೂರ್ನಾಲ್ಕು ದಿನಗಳು ಕಳೆದಿರುವ ಹಿನ್ನೆಲೆಯಲ್ಲಿ ಮೃತದೇಹ ಕೊಳೆಯಲು ಆರಂಭಿಸಿದೆ. ಇದರಿಂದಾಗ ಹಗ್ಗದಲ್ಲಿ ನೇತಾಡುತ್ತಿರುವ ದೇಹದಲ್ಲಿ ಗಾಳಿ ತುಂಬಿಕೊಂಡು ಭಾರವಾಗಿ ಕೊಳೆಯಲು ಆರಂಭವಾಗಿದ್ದರಿಂದ ದೇಹದಿಂದ ದ್ರವ ಸೋರಿರಬಹುದು ಎಂದೂ ಹೇಳಲಾಗುತ್ತಿದೆ. ಆದ್ದರಿಂದ ಇದು ಆತ್ಮಹತ್ಯೆ ಎಂಬುದು ಮೇಲ್ನೋಟಕ್ಕೆ ಖಚಿತವಾಗಿದ್ದರೂ ವಿಷ ಸೇವನೆ ಮಾಡಿದ್ದರೇ ಇಲ್ಲವೇ ಎಂಬುದು ಮರಣೋತ್ತರ ಪರೀಕ್ಷೆ ಬಳಿಕ ತಿಳಿದುಬರಲಿದೆ.

click me!