ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದಲ್ಲಿ ಮನಕಲಕುವ ವಿಚಾರ ಬೆಳಕಿಗೆ. ಗರ್ಭಿಣಿ ಪತ್ನಿ, ಮಗು ಮತ್ತು ಹುಟ್ಟಲಿರುವ ಮಗುವನ್ನು ಒಂಟಿಯಾಗಿ ಬಿಟ್ಟು ಗುರುಪ್ರಸಾದ್ ಇಹಲೋಕ ತ್ಯಜಿಸಿದ್ದಾರೆ.
ಬೆಂಗಳೂರು (ನ.03): ಕನ್ನಡ ಚಿತ್ರರಂದಗ ಖ್ಯಾತ ನಿರ್ದೇಶಕ ಗುರುಪ್ರಸಾದ್ ಅವರು ನಮ್ಮನ್ನಗಲಿದ್ದಾರೆ ಎಂಬ ಬರಸಿಡಿಲಿನ ಬೆನ್ನಲ್ಲಿಯೇ ಮತ್ತೊಂದು ಮನಕಲಕುವ ವಿಚಾರ ಬೆಳಕಿಗೆ ಬಂದಿದೆ. ತಮ್ಮ 50ನೇ ವರ್ಷದಲ್ಲಿ ಮದುವೆ ಮಾಡಿಕೊಂಡ 2ನೇ ಹೆಂಡತಿಗೆ ಈಗಾಗಲೇ ಒಂದು ಹೆಣ್ಣು ಮಗುವಿದ್ದು, ಇದೀಗ ಪುನಃ ಗರ್ಭಿಣಿ ಆಗಿದ್ದರು. ಆದರೆ, ಹೆಂಡತಿ, ಹೆಣ್ಣು ಮಗು ಹಾಗೂ ಭೂಮಿಗೆ ಬರಲು ಅಮ್ಮನ ಹೊಟ್ಟೆಯಲ್ಲಿರುವ ಮಗುವಿನ ಬಗ್ಗೆ ಆಲೋಚನೆ ಮಾಡದೇ ಇಹಲೋಕ ತ್ಯಜಿಸಿದ್ದಾರೆ ಎಂಬುದು ಮನಕಲಕುವ ಘಟನೆಯಾಗಿದೆ.
ನಟ, ನಿರ್ದೇಶಕ ಗುರುಪ್ರಸಾದ್ ಅವರು ತಮ್ಮ ಮಾದನಾಯಕನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬೆನ್ನಲ್ಲಿಯೇ ಪೊಲೀಸರು, ಗುರುಪ್ರಸಾದ್ ಅವರ 2ನೇ ಪತ್ನಿ ಸುಮಿತ್ರಾ ಅವರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಸುಮಿತ್ರಾ ಅವರು ಗರ್ಭಿಣಿ ಆಗಿದ್ದು, ಮತ್ತಿಕೆರೆಯ ತವರುಮನೆಗೆ ತೆರಳಿದ್ದರು. ಹೀಗಾಗಿ ಕಳೆದ ಏಳೆಂಟು ದಿನಗಳಿಂದ ಗುರುಪ್ರಸಾದ್ ಒಬ್ಬರೇ ಮಾದನಾಯಕನಹಳ್ಳಿ ಫ್ಲಾಟ್‌ನಲ್ಲಿ ಇದ್ದರು. ಇದೀಗ ಗಂಡ ಆತ್ಮಹತ್ಯೆಗೆ ಮಾಡಿಕೊಂಡ ಬೆನ್ನಲ್ಲಿಯೇ ಸುಮಿತ್ರಾ ಅಪಾರ್ಟ್‌ಮೆಂಟ್ ಬಳಿ ಆಗಮಿಸಿದ್ದಾರೆ.
undefined
50ನೇ ವಯಸ್ಸಿನ ಆಸುಪಾಸಿನಲ್ಲಿ ಮದುವೆ: ಗುರುಪ್ರಸಾದ್ ಅವರು ಮೊದಲ ಹೆಂಡತಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದರು. ಮೊದಲ ಹೆಂಡತಿಗೆ ಒಂದು ಮಗು ಕೂಡ ಇತ್ತು. ಆದರೆ, ಹೆಂಡತಿಯೊಂದಿಗೆ ವೈಮನಸ್ಸು ಮೂಡಿದ್ದರಿಂದ ಅವರು ಗಂಡನನ್ನು ಬಿಟ್ಟು ಹೋಗಿದ್ದರು. ಇದಾದ ನಂತರ ಸಿನಿಮಾದಲ್ಲಿ ಸಣ್ಣ ಪಾತ್ರಗಳನ್ನು ಮಾಡಿದ್ದ ಸುಮಿತ್ರಾ ಅವರನ್ನು ಗುರುಪ್ರಸಾದ್ ಅವರು ತಮ್ಮ 48 49ನೇ ವಯಸ್ಸಿನಲ್ಲಿ ಮದುವೆ ಮಾಡಿಕೊಂಡಿದ್ದರು. ಅಂದರೆ ಸುಮಾರು 50ನೇ ವಯಸ್ಸಿನ ಆಸುಪಾಸಿನಲ್ಲಿ ಸುಮಿತ್ರಾ ಅವರನ್ನು ಮದುವೆ ಮಾಡಿಕೊಂಡಿದ್ದು, ಅವರಿಗೆ ಈಗಾಗಲೇ 3 ವರ್ಷದ ಒಂದು ಹೆಣ್ಣು ಮಗು ಕೂಡ ಇದೆ. ಇದಾದ ನಂತರ ಪುನಃ ಗರ್ಭಿಣಿ ಆಗಿದ್ದಾರೆ. ಗರ್ಭಿಣಿ ಆಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಆರೈಕೆ ಬೇಕಾಗಿರುವುದರಿಂದ ಗಂಡನನ್ನು ಒಬ್ಬರನ್ನೇ ಮನೆಯಲ್ಲಿ ಬಿಟ್ಟು ಅವರು ತವರು ಮನೆಗೆ ಹೋಗಿದ್ದರು. ಇದೀಗ ಗಂಡನೇ ಇಹಲೋಕ ತ್ಯಜಿಸಿ ಮೃತದೇಹವಾಗಿ ದರ್ಶನ ಕೊಡುತ್ತಿದ್ದಾರೆ.
ಇದನ್ನೂ ಓದಿ: ನಿರ್ದೇಶಕ ಗುರುಪ್ರಸಾದ್ ಸಾವಿನ ಬಗ್ಗೆ ನಟಿ ಶೃತಿಯಿಂದ ಆಘಾತಕಾರಿ ಹೇಳಿಕೆ: ದೊಡ್ಡ ನಗುವಿನ ಹಿಂದೆ...
ಒಂದು ವರ್ಷದಲ್ಲಿ 3 ಮನೆ ಚೇಂಜ್ ಮಾಡಿದ್ದ ಗುರುಪ್ರಸಾದ್:
ನಿರ್ದೇಶಕ ಗುರುಪ್ರಸಾದ್ ಅವರು ಯಾವುದು ತಮಗೆ ಹೊಂದಾಣಿಕೆ ಆಗುತ್ತಿರಲಿಲ್ಲವೇ ಅದನ್ನು ಕೂಡಲೇ ಬಿಟ್ಟು ಹೋಗುತ್ತಿದ್ದರು. ಮದುವೆ ವಿಚಾರದಲ್ಲಿ ಮೊದಲ ಹೆಂಡತಿ ಬಿಟ್ಟು 2ನೇ ಮದುವೆ ಮಾಡಿಕೊಂಡಿದ್ದರು.ಇನ್ನು ಮನೆ ವಿಚಾರದಲ್ಲಿಯೂ ಕೂಡ ಹೀಗೆಯೇ. ಕಳೆದೊಂದು ವರ್ಷದಲ್ಲಿ ಒಟ್ಟು ಮೂರು ಮನೆಗಳನ್ನು ಬದಲಾವಣೆ ಮಾಡಿದ್ದರು. ಆದರೆ, ಸಾಲಗಾರರ ಕಾಟಕ್ಕೆ ಪದೇ ಪದೇ ಮನೆ ಚೇಂಜ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಗುರುಪ್ರಸಾದ್ ವಿರುದ್ದ ಹಲವರು ಪೊಲೀಸರಿಗೂ ದೂರು ನೀಡಿದ್ದರು. ಹೀಗಾಗಿಯೇ ಸಾಲ ಕೊಟ್ಟವರು ಮನೆ ಬಳಿ ಬರ್ತಾರೆಂದು ಪದೇ ಪದೇ ಮನೆ ಖಾಲಿ ಮಾಡುತ್ತಿದ್ದರು.
ಇದನ್ನೂ ಓದಿ: ಬರ್ತಡೇಗೂ ಮುನ್ನವೇ ಡೆತ್ ಡೇ ಮಾಡಿಕೊಂಡ ನಿರ್ದೇಶಕ ಗುರುಪ್ರಸಾದ್!
ಒಂದು ವರ್ಷದ ಹಿಂದೆ ಬಸವೇಶ್ವರ ನಗರದ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಗುರುಪ್ರಸಾದ್, ನಂತರ ಜಯನಗರ ಕನಕನಪಾಳ್ಯದ ಅಶೋಕ್ ಪಿಲ್ಲರ್ ಬಳಿ ಮನೆ ಮಾಡಿದ್ದರು. ಇಲ್ಲಿ ಕೆಲ ದಿನಗಳ ಕಾಲ ಮನೆ ಬಿಟ್ಟು ಒಬ್ಬಂಟಿಯಾಗಿ ಹೋಟೆಲ್ ರೂಮಿನಲ್ಲಿದ್ದರು. ಇದಾದ ಕೆಲವು ತಿಂಗಳ ಹಿಂದಷ್ಟೇ ಮಾದನಾಯಕನಹಳ್ಳಿ ಬಳಿಯ ನ್ಯೂ ಹೆವೆನ್ ಅಪಾರ್ಟ್ಮೆಂಟ್‌ಗೆ ಬಂದು ವಾಸವಾಗಿದ್ದರು. ಈ ಮನೆಯ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಇರಲಿಲ್ಲ. ಹೆಂಡತಿ ಮತ್ತು ಕೆಲವು ಆಪ್ತರಿಗೆ ಮಾತ್ರ ಮಾದನಾಯಕಹಳ್ಳಿ ಮನೆಯಲ್ಲಿ ಇದ್ದಾರೆ ಎಂಬ ವಿಚಾರ ಗೊತ್ತಿತ್ತು.