ಥಿಯೇಟರ್‌ಗಳಲ್ಲಿ ಸೀಟ್‌ ಖಾಲಿ ಇದ್ರೆ ಕಾಲು ಹಾಕೋದು, ಉಗಿಯೋದು ಎಷ್ಟು ಸರಿ?; ಮಾಸ್ಟರ್ ಆನಂದ್ ಗರಂ

Published : Feb 19, 2025, 09:17 AM ISTUpdated : Feb 19, 2025, 09:57 AM IST
ಥಿಯೇಟರ್‌ಗಳಲ್ಲಿ ಸೀಟ್‌ ಖಾಲಿ ಇದ್ರೆ ಕಾಲು ಹಾಕೋದು, ಉಗಿಯೋದು ಎಷ್ಟು ಸರಿ?; ಮಾಸ್ಟರ್ ಆನಂದ್ ಗರಂ

ಸಾರಾಂಶ

ಚಿತ್ರರಂಗದ ಗೌರವಕ್ಕೆ ಚ್ಯುತಿ ತರುವಂತೆ ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ವರ್ತಿಸುತ್ತಿರುವುದಕ್ಕೆ ಮಾಸ್ಟರ್ ಆನಂದ್ ಬೇಸರ ವ್ಯಕ್ತಪಡಿಸಿದ್ದಾರೆ. ಪರದೆಗೆ ಕಾಲು ತೋರಿಸುವುದು, ಚಿತ್ರೀಕರಣ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು, ಮೊಬೈಲ್ ಬಳಕೆ ಮುಂತಾದವುಗಳಿಂದ ಸಿನಿಮಾ ವೀಕ್ಷಣೆಗೆ ಅಡ್ಡಿಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಚಿತ್ರಮಂದಿರವನ್ನು ದೇವಸ್ಥಾನದಂತೆ ಪರಿಗಣಿಸಬೇಕೆಂದು ಕರೆ ನೀಡಿದ್ದಾರೆ.

ಕನ್ನಡ ಚಿತ್ರರಂಗದ ಅದ್ಭುತ ನಟ ಹಾಗೂ ನಿರ್ದೇಶಕ ಮಾಸ್ಟರ್ ಅನಂದ್ ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ. ಸಿನಿಮಾ ನೋಡಲು ಥಿಯೇಟರ್‌ಗೆ ಹೋದರೆ ಜನರು ಎಷ್ಟು ತಪ್ಪು ಮಾಡುತ್ತಾರೆ. ಫೋನ್‌ನಲ್ಲಿ ರಿಕಾರ್ಡ್ ಮಾಡಬಾರದು, ಸ್ಕ್ರೀನ್‌ಗೆ ಕಾಲು ತೋರಿಸಬಾರದು....ಹೀಗೆ ಸಾಲು ಸಾಲು ವಿಚಾರಗಳ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಮಾಸ್ಟರ್ ಆನಂದ್.

'ನಾನು ಚಿಕ್ಕವಯಸ್ಸಿನಿಂದ ಸಿನಿಮಾ ಮಾಡಿಕೊಂಡು ಬಂದವನು. ಸೆಟ್‌ನಲ್ಲಿ ಕ್ಯಾಮೆರಾಗೆ ನಮಸ್ಕಾರ ಮಾಡಿ ಅದನ್ನು ದೇವರ ತರ ನೋಡುವಂತಹದ್ದು. ಅಲ್ಲಿ ಹಾಕುವ ಮೇಕಪ್ಗೆ ಹಾಗೂ ಕೊಡುವ ಊಟಕ್ಕೆ ನಮಸ್ಕಾರ ಮಾಡುತ್ತೀವಿ. ಹೀಗೆ ಸಿನಿಮಾಗೆ ಸಂಬಂಧಿಸಿದ್ದ ಏನನ್ನೇ ನೋಡಿದರೂ ಅದನ್ನು ದೇವರನ್ನು ನೋಡುವಂತಹ ಫೀಲ್‌ ನಮಗೆ ಇರುತ್ತದೆ. ನಮಗೆ ಥಿಯೇಟರ್‌ ಅಂದ್ರೆ ದೇವಸ್ಥಾನ ಎಂಬ ಭಾವನೆ' ಎಂದು ಮಾತನಾಡಿದ ಮಾಸ್ಟರ್ ಆನಂದ್. 

U ಟರ್ನ್‌ ನೋಡುದ್ರೆ ನೀವೇ ನೆನಪಾಗೋದು; ಶ್ರದ್ಧಾ ಶ್ರೀನಾಥ್‌ ಹೊಸ ಲುಕ್ ವೈರಲ್

ಥಿಯೇಟರ್‌ನಲ್ಲಿ ಮುಂದಿನ ಸೀಟ್ ಖಾಲಿ ಇದ್ದರೆ ಅದರ ಮೇಲೆ ಕಾಲು ಹಾಕೋದು ಅಲ್ಲೇ ಉಗಿಯೋದು  ಮಾಡುತ್ತಾರೆ. ಇವನ್ನೆಲ್ಲಾ ನೋಡಿದಾಗ ಬೇಜಾರು ಆಗುತ್ತೆ. ನಾನು ಟಿನೇಜ್‌ ಅಲ್ಲಿ ಓಡಾಡಿದ್ದೇವೆ ಪಾಪ್‌ಕಾರ್ನ್ ಎಲ್ಲಾ ಚೆಲ್ಲಿದ್ದೇವೆ ಈ ಥರದ್ದೆಲ್ಲಾ ಚೇಷ್ಠೆ ಮಾಡಿದ್ದೀವಿ ಆದರೆ ಯಾವುದೇ ಕಾರಣಕ್ಕೂ ಸ್ಕ್ರೀನ್‌ಗೆ ಕಾಲು ತೋರಿಸಿಕೊಂಡು ಸಿನಿಮಾ ನೋಡಿಲ್ಲ. ನಮಗೆ ಊಟ, ಹೆಸರು ಕೊಟ್ಟಂತಹ ಸ್ಕ್ರೀನ್ ಮೇಲೆ ನಮಗೆ ಅಷ್ಟು ಗೌರವ ಇದೆ. ಈಗ ಹಣೆ ಬರಹ ಏನೆಂದರೆ ಸಿನಿಮಾದ ಮುಖ್ಯವಾದ ಸೀನ್‌ ಬರುವಾಗ ಫೋನ್‌ನಲ್ಲಿ ಅದನ್ನು ರೆಕಾರ್ಡ್‌ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವುದು. ಇದು ಪೈರಸಿ ಆದರೆ ಅದನ್ನು ಯಾಕೆ ಯಾರೂ ತಡೆಯುತ್ತಿಲ್ಲ? ಯಾಕೆ ಇದರ ವಿರುದ್ಧ ಧ್ವನಿ ಎತ್ತುತ್ತಿಲ್ಲ ಅನ್ನೋ ನನಗೆ ಗೊತ್ತಾಗುತ್ತಿಲ್ಲ. ಒಂದು ಸಿನಿಮಾದ ಮಹತ್ವದ ಸೀನ್‌ಗಳನ್ನು ಹೀಗೆ ರೆಕಾರ್ಡ್ ಮಾಡಿ ಶೇರ್ ಮಾಡುವುದು? ಇಂಥದ್ದೆನ್ನೆಲ್ಲಾ ನೋಡೋಕೆ ನನಗೆ ಹಿಂಸೆ ಆಗುತ್ತದೆ' ಎಂದು ಹೇಳಿದ ಮಾಸ್ಟರ್ ಆನಂದ್. 

ನಮ್ಗೆ 22 ವರ್ಷ ಅಲ್ಲ....ಆಂಟಿಗಳೇ women's dayಗೆ ದಯವಿಟ್ಟು ಕಾಯಬೇಕು; ಚಿರಂಜೀವಿ ಸೊಸೆ

'ಸಿನಿಮಾದಲ್ಲಿ ಒಂದು ಹಾಡು ಬಂದರೆ ಸಾಕು ಮೊಬೈಲ್‌ ತೆಗೆದು ನೋಡೋಕೆ ಶುರು ಮಾಡುತ್ತಾರೆ. ಇದರಿಂದ ಹಿಂದೆ ನಿಮ್ಮ ಮೇಲೆ ಕುಳಿತವರಿಗೆ ತುಂಬಾ ಕಿರಿಕಿರಿ ಆಗುತ್ತದೆ. ಒಂದೆರಡು ಗಂಟೆ ಕಾಲ ಸಿನಿಮಾ ನೋಡೋಕೆ ಬಂದವರಿಗೆ ಅಷ್ಟು ಸಮಯ ಕೂಡ ಮೊಬೈಲ್‌ ಬಿಟ್ಟಿರಲು ಅಗೋದಿಲ್ಲ ಅಂದ್ರೆ ಏನರ್ಥ? ಇದು ಎಲ್ಲಾ ಕಡೆ ಆಗುತ್ತಿರುವುದು ಬಹಳ ಬೇಜಾರು. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ' ಎಂದಿದ್ದಾರೆ ಮಾಸ್ಟರ್ ಆನಂದ್. 

ಬೇಸರದಲ್ಲಿದ್ದ ಸೆಲೆಬ್ರಿಟಿಗಳಿಗೆ ಪತ್ರ ಬರೆದ ದರ್ಶನ್; ಏನೇ ಇರ್ಲಿ ಅರೋಗ್ಯ ನೋಡ್ಕೊಳ್ಳಿ ಎಂದ ಫ್ಯಾನ್ಸ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ