ಅಮೃತಾ ಅಯ್ಯಂಗಾರ್ ನಗುವಿನ ಫೋಟೊ ಶೇರ್ ಮಾಡಿದ್ರೆ… ಜನ ಹಾರ್ಟ್ ಬ್ರೋಕ್ ಆಗಿದ್ಯಾ ಕೇಳ್ತಿದ್ದಾರಲ್ಲ?!

Published : Feb 18, 2025, 05:32 PM ISTUpdated : Feb 19, 2025, 08:15 AM IST
ಅಮೃತಾ ಅಯ್ಯಂಗಾರ್ ನಗುವಿನ ಫೋಟೊ ಶೇರ್ ಮಾಡಿದ್ರೆ… ಜನ ಹಾರ್ಟ್ ಬ್ರೋಕ್ ಆಗಿದ್ಯಾ ಕೇಳ್ತಿದ್ದಾರಲ್ಲ?!

ಸಾರಾಂಶ

ಡಾಲಿ ಧನಂಜಯ್ ಜೊತೆ ನಾಲ್ಕು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ನಟಿ ಅಮೃತಾ ಅಯ್ಯಂಗಾರ್, ಧನಂಜಯ್ ಮದುವೆಯಲ್ಲಿ ಭಾಗವಹಿಸದೆ ಟ್ರೋಲ್‌ಗೆ ಗುರಿಯಾಗಿದ್ದಾರೆ. ಧನಂಜಯ್, ಧನ್ಯತಾ ಜೊತೆ ವಿವಾಹವಾದ ಬಳಿಕ ಅಮೃತಾ ಅವರ ಮೌನ, ಅಭಿಮಾನಿಗಳಲ್ಲಿ ಅನುಕಂಪ ಮೂಡಿಸಿದೆ. ಆದರೆ, ಧನಂಜಯ್ ತಮ್ಮ ಉತ್ತಮ ಗೆಳೆಯ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಯಾಂಡಲ್ ವುಡ್ ನ ಜನಪ್ರಿಯ ನಟಿಯರಲ್ಲಿ ಒಬ್ಬರು ಅಮೃತಾ ಅಯ್ಯಂಗಾರ್ (Amritha Iyengar). ಅಮೃತಾ ಹಾಗೂ ಡಾಲಿ ಧನಂಜರ್ ತೆರೆ ಮೇಲೆ ನಾಲ್ಕು ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದರು. ಇವರಿಬ್ಬರ ಜೋಡಿಯನ್ನು ಜನ ಸಿಕ್ಕಾಪಟ್ಟೆ ಇಷ್ಟಕೂಡ ಪಟ್ಟಿದ್ದರು. ಅಷ್ಟೇ ಯಾಕೆ ಇಬ್ಬರು ಜೋಡಿಯಾದ್ರೆ ತುಂಬಾನೆ ಚೆನ್ನಾಗಿತ್ತು ಎಂದು ಸಹ ಹೇಳಿದ್ದರು. ಆದರೆ ಇದೀಗ ಧನಂಜಯ್ ಮದುವೆ ವೈದ್ಯೆಯಾಗಿರುವ ಧನ್ಯತಾ ಜೊತೆ ನಡೆದಿದ್ದು, ಧನಂಜಯ್ ಮದುವೆಯಲ್ಲಿ ಅಮೃತಾ ಕಾಣಿಸಿಕೊಳ್ಳಲೂ ಇಲ್ಲ, ಡಾಲಿ ಧನಂಜಯ್ ಅವರಿಗೆ ಮದುವೆಯ ಶುಭಾಶಯವನ್ನೂ ಸಹ ತಿಳಿಸಿರಲಿಲ್ಲ. ಹಾಗಾಗಿ ಸದ್ಯ ಎಲ್ಲೆಡೆ ಅಮೃತಾ ಅಯ್ಯಂಗಾರ್ ಟ್ರೋಲ್ ಗಳಿಗೆ ಆಹಾರವಾಗ್ತಿದ್ದಾರೆ. ಅಭಿಮಾನಿಗಳಂತೂ ಅಮೃತಾ ಅಯ್ಯಂಗಾರ್ ಕುರಿತು ಅನುಕಂಪದ ಮಾತುಗಳನ್ನು ಆಡುತ್ತಿದ್ದಾರೆ. 

ಡಾಲಿ ಮದುವೆ ನಡೀತಿದ್ರೆ ಅಮೃತಾ ಅಯ್ಯಂಗಾರ್ ಎಲ್ಹೋಗಿದ್ದಾರೆ ನೋಡಿ!

ಅಮೃತಾ ಅಯ್ಯಂಗಾರ್ ಹಾಗೂ ಡಾಲಿ ಧನಂಜಯ್ ಜೋಡಿ : 
ಅಮೃತಾ ಅಯ್ಯಂಗಾರ್ ಮತ್ತು ಡಾಲಿ ಧನಂಜಯ್ (Dali Dhananjay) ಹಲವು ವರ್ಷಗಳಿಂದ ಸ್ನೇಹಿತರು. ಇಬ್ಬರೂ ಕುಡ ಮೈಸೂರಿನವರೇ ಆಗಿದ್ದಾರೆ. ಈ ಜೋಡಿ ಪಾಪ್ ಕಾರ್ನ್ ಮಂಕಿ ಟೈಗರ್, ಹೊಯ್ಸಳ, ಬಡವ ರಾಸ್ಕಲ್, ಝೀಬ್ರಾ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಡಾಲಿ ಹಾಗೂ ಅಮೃತಾ ಜೋಡಿಯನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಅಷ್ಟೇ ಯಾಕೆ ಇವರಿಬ್ಬರು ಹಲವು ಕಾರ್ಯಕ್ರಮಗಳಲ್ಲೂ ಸಹ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇವರ ಫ್ರೆಂಡ್ಸ್ ಸರ್ಕಲ್ ನ ಎಲ್ಲಾ ಮದುವೆ ಸಮಾರಂಭಗಳಲ್ಲೂ ಕಾಣಿಸಿಕೊಂಡಿದ್ದರು. ಕಾರ್ಯಕ್ರಮವೊಂದರಲ್ಲಿ ತಮಾಷೆಗಾಗಿ ಡಾಲಿ ಧನಂಜಯ್ ಅವರು ಅಮೃತಾ ಅವರಿಗೆ ಮುದ್ದಾಗಿ ಪ್ರಪೋಸ್ ಮಾಡಿದ ವಿಡೀಯೋ (propose video) ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದಾದ ಬಳಿಕ ಇಬ್ಬರು ಮದುವೆಯಾಗೋದು ಕನ್ ಫರ್ಮ್. ಇವರಿಬ್ಬರು ಲವ್ ಮಾಡ್ತಿದ್ದಾರೆ ಅನ್ನೋದನ್ನು ಜನರೇ ತೀರ್ಮಾನಿಸಿದ್ದರು. ಆದರೆ ದಿಢೀರ್ ಆಗಿ ಧನಂಜಯ್ ಅವರು ಧನ್ಯತಾ ಅವರ ಜೊತೆ ಮೈಸೂರಿನಲ್ಲಿ ಅದ್ಧೂರಿ ಸಮಾರಂಭದಲ್ಲಿ ಮದುವೆಯಾಗಿದ್ದಾರೆ. ಮದುವೆಗೆ ಕನ್ನಡ ಚಿತ್ರರಂಗದ ಗಣ್ಯ ವ್ಯಕ್ತಿಗಳೇಲ್ಲಾ ಆಗಮಿಸಿ ಶುಭಕೋರಿದ್ದರು. ಆದರೆ ಅಭಿಮಾನಿಗಳು ಕಾಯುತ್ತಿದ್ದ ಅಮೃತಾ ಅಯ್ಯಂಗಾರ್ ಮಾತ್ರ ಬಂದೇ ಇರಲಿಲ್ಲ. 

ಆ ಕಾಲದಲ್ಲಿ ಡಿವೋರ್ಸ್‌ ಪಡೆದು ಒಂಟಿಯಾಗಿ ಮನೆ ನಡೆಸೋದು ಸುಲಭವಲ್ಲ; ತಾಯಿ ಬಗ್ಗೆ ಅಮೃತಾ ಅಯ್ಯಂಗಾರ್ ಮಾತು

ನಿಮ್ಮ ನಗುವಿನಲ್ಲೂ ನೋವು ಕಾಣಿಸುತ್ತಿದೆ ಎಂದ ಫ್ಯಾನ್ಸ್ 
ಧನಂಜಯ್ ಮದುವೆಯ ಬಳಿಕ ಅಮೃತಾ ಒಂಟಿಯಾಗಿದ್ದಾರೆ, ಅವರ ಹಾರ್ಟ್ ಬ್ರೋಕ್ (heart broken) ಆಗಿದೆ, ಅಮೃತಾ ಅವರಿಗೆ ಈ ರೀತಿಯೆಲ್ಲಾ ಆಗಬಾರದಿತ್ತು ಎಂದೆಲ್ಲಾ ಜನ ಆಡಿಕೊಳ್ಳುತ್ತಿದ್ದಾರೆ. ಮೀಮ್ಸ್ ಗಳಂತೂ ಸಖತ್ ಸೌಂಡ್ ಮಾಡುತ್ತಿವೆ. ಎಲ್ಲದಕ್ಕೂ ಅಮೃತಾ ನಗುತ್ತಲೇ ಉತ್ತರಿಸುತ್ತಿದ್ದಾರೆ. ನಟಿ ಸೋಶಿಯಲ್ ಮೀಡೀಯಾದಲ್ಲಿ ನಗು ನಗುತ್ತಾ ಪೋಸ್ಟ್ ಮಾಡಿದ್ದರು ಸಹ, ಜನ ಹಾರ್ಟ್ ಬ್ರೋಕ್ ಆಗಿದ್ಯಾ? ಅಯ್ಯೋ ಪಾಪ ಎನ್ನುತ್ತಿದ್ದಾರೆ. ನಿಮ್ಮ ನಗುವಿನಲ್ಲಿ ನೋವು ಕಾಣಿಸುತ್ತಿದೆ, ನಿಮಗೆ ಜೀವನದಲ್ಲಿ ಇನ್ನಷ್ಟು ಬೆಸ್ಟ್ ಆಗಿರೋದು ಸಿಗುತ್ತೆ ಎನ್ನುತ್ತಿದ್ದಾರೆ. ಇನ್ನು ಅಮೃತಾ ಮಾತ್ರ ಧನಂಜಯ್ ನನಗೆ ಒಳ್ಳೆಯ ಫ್ರೆಂಡ್ ಮಾತ್ರ, ಇಲ್ಲಿ ಹುಡುಗ ಹುಡುಗಿ ಫ್ರೆಂಡ್ಸ್ ಆಗಿದ್ರೆ ಅದಕ್ಕೆ ಬೇರೆಯದೇ ಅರ್ಥ ಕೊಡುತ್ತಾರೆ ಎಂದಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಚಳಿಗಾಲದ ಟೈಮಲ್ಲೇ ಹಾಟ್‌ಬ್ಯೂಟಿ ಆದ ರಾಧಾಮಿಸ್‌!
ಈ ವರ್ಷ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡ ಸೀರಿಯಲ್‌ ತಾರೆಯರು!