ಕನ್ನಡ ಚಿತ್ರರಂಗದ ಅಪೂರ್ವ ಸಹೋದರರು ಮನು- ವಿಕ್ರಮ್‌ ರವಿಚಂದ್ರನ್‌

By Kannadaprabha News  |  First Published Oct 27, 2021, 11:14 AM IST
  • ಕನ್ನಡ ಚಿತ್ರರಂಗದ ಅಪೂರ್ವ ಸಹೋದರರು ಮನು- ವಿಕ್ರಮ್‌ ರವಿಚಂದ್ರನ್‌
  • ಮನು ರವಿಚಂದ್ರನ್‌ ಸಿನಿಮಾ ‘ಮುಗಿಲ್‌ಪೇಟೆ’ ನ.19ರಂದು ಬಿಡುಗಡೆ

ಮನು ರವಿಚಂದ್ರನ್‌ ತುಂಬಾ ನಿರೀಕ್ಷೆ ಇಟ್ಟುಕೊಂಡಿರುವ ‘ಮುಗಿಲ್‌ಪೇಟೆ’ (Mugilpete) ಸಿನಿಮಾ ನವೆಂಬರ್‌ 19ರಂದು ಬಿಡುಗಡೆಯಾಗುತ್ತಿದೆ. ವಿಶೇಷ ಎಂದರೆ ಈ ಚಿತ್ರ ಶುರುವಾಗಿ ಮುಗಿಯುವವರೆಗೆ ಇಡೀ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದು ಮನು ಸಹೋದರ ವಿಕ್ರಮ್‌ ರವಿಚಂದ್ರನ್‌. ಈ ಇಬ್ಬರು ಅಪೂರ್ವ ಸಹೋದರರ ಭ್ರಾತೃ ಪ್ರೇಮದ ಕುರಿತು ಇಡೀ ಚಿತ್ರತಂಡವೇ ಮೆಚ್ಚಿಕೊಂಡು ಮಾತನಾಡುತ್ತಿದೆ. ಈ ಸಹೋದರರ ಪ್ರೀತಿ ಹೀಗೇ ಇರಲಿ ಎಂದು ಇಡೀ ಚಿತ್ರರಂಗ ಹಾರೈಸುತ್ತದೆ.

ಭರತ್‌ ನಾವುಂದ ನಿರ್ದೇಶನದ ಈ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದು ಮೋತಿ ಹರೀಶ್‌ ಮತ್ತು ರಕ್ಷಾ ವಿಜಯ್‌ಕುಮಾರ್‌. ಇವರಿಬ್ಬರು ಕೂಡ ಮನು ಫ್ರೆಂಡ್ಸ್‌. ಹಾಗಾಗಿ ಇದೊಂದು ಗೆಳೆಯರೇ ಸೇರಿ ಮಾಡಿರುವ ಫ್ರೆಂಡ್ಲಿ ಸಿನಿಮಾ. ಅಲ್ಲದೇ ಈ ಚಿತ್ರದ ಗೆಲ್ಲಲೇಬೇಕು ಅಂತ ಚಿತ್ರತಂಡದ ಜೊತೆಗೆ ಮನು ಸಹೋದರಿ ಗೀತಾಂಜಲಿ ಕೂಡ ನಿಂತಿದ್ದಾರೆ.

Tap to resize

Latest Videos

undefined

ಹಾಡಲ್ಲೇ ಮೋಡಿ‌ ಮಾಡಿದ್ದ ‘ಟಾಮ್ ಅಂಡ್ ಜೆರ್ರಿ’ ನವೆಂಬರ್ 12ಕ್ಕೆ ರಿಲೀಸ್

ಈ ಎಲ್ಲಾ ವಿಚಾರಗಳನ್ನು ಮನು ರವಿಚಂದ್ರನ್‌ ಒಂದೇ ಮಾತಲ್ಲಿ ಹೇಳಿದರು. ‘ಈ ತಂಡ ನನ್ನ ಕುಟುಂಬ. ಎಲ್ಲರೂ ಈ ಚಿತ್ರಕ್ಕೆ ಒಳ್ಳೆಯದಾಗಬೇಕು ಎಂದು ಶ್ರಮಿಸಿದ್ದಾರೆ. ನನ್ನ ತಮ್ಮ ಮತ್ತು ತಂಗಿ ಇಬ್ಬರೂ ಅಣ್ಣ ಗೆಲ್ಲಬೇಕು ಅಂತ ದುಡಿಯುತ್ತಿದ್ದಾರೆ. ಅಪ್ಪ ಅಮ್ಮನ ಆಶೀರ್ವಾದ ಇದೆ. ನಾನು ತುಂಬಾ ಅದೃಷ್ಟವಂತ’ ಎಂದರು.

ನಿರ್ದೇಶಕ ಭರತ್‌ ನಾವುಂದ, ‘ಈ ಚಿತ್ರದಲ್ಲಿ ಪ್ರೇಮಲೋಕದ ಪ್ರೇಮವೂ ಇದೆ. ರಣಧೀರದ ಕಿಚ್ಚೂ ಇದೆ. ಪ್ರೀತಿಯಿಂದ ಸಿನಿಮಾ ಮಾಡಿದ್ದೇವೆ. ಎಲ್ಲರೂ ಹರಸಿ’ ಎಂದು ಕೇಳಿಕೊಂಡರು.

ಕಲಾವಿದರಾದ ರಂಗಾಯಣ ರಘು, ಸಾಧು ಕೋಕಿಲ, ಕಾವ್ಯಾ ಶಾ, ಕಾಕ್ರೋತ್‌ ಸುಧಿ, ಅಪ್ಪಣ್ಣ, ಮೇಘಶ್ರೀ, ಸಂಗೀತ ನಿರ್ದೇಶಕ ಶ್ರೀಧರ್‌ ಸಂಭ್ರಮ್‌, ಗಾಯಕಿ ಶ್ವೇತಾ ದೇವನಹಳ್ಳಿ, ಗಾಯಕ ವಿಹಾನ್‌ ಆರ್ಯ, ವೈಲಿನ್‌ ಸಂಗೀತಕಾರ ಜನಾರ್ದನ್‌, ತಂತ್ರಜ್ಞರಾದ ಆನಂದ್‌, ರಾಜನ್‌ ಈ ಸಿನಿಮಾದ ಮೇಲೆ ತುಂಬಾ ಭರವಸೆ ಇಟ್ಟುಕೊಂಡಿದ್ದಾರೆ. ಚಿತ್ರಕ್ಕೆ ಒಳ್ಳೆಯದಾಗಬೇಕು ಎಂದು ಮನಸಾರೆ ಹರಸಿದ್ದಾರೆ.

ಡಿವೋರ್ಸ್ ನಂತರ ಮತ್ತೆ ತಮ್ಮ ನಗು ಮುಖ ತೋರಿಸಿದ ಸಮಂತಾ

ತುಂಬಾ ಕಲರ್‌ಫುಲ್‌ ಆಗಿ ಸಿನಿಮಾ ಚಿತ್ರೀಕರಿಸಿದ್ದಾರೆ ಅನ್ನುವುದು ಈ ಚಿತ್ರದ ಹಾಡು ನೋಡಿದರೆ ತಿಳಿಯುತ್ತದೆ. ಲಹರಿ ಮ್ಯೂಸಿಕ್‌ ಯೂಟ್ಯೂಬ್‌ ಚಾನಲ್‌ನಲ್ಲಿ ‘ತಾರೀಫು ಮಾಡಲು’ ಹಾಡು ನೋಡಬಹುದು.

click me!