ಹಾಡಲ್ಲೇ ಮೋಡಿ‌ ಮಾಡಿದ್ದ ‘ಟಾಮ್ ಅಂಡ್ ಜೆರ್ರಿ’ ನವೆಂಬರ್ 12ಕ್ಕೆ ರಿಲೀಸ್

Suvarna News   | Asianet News
Published : Oct 27, 2021, 10:45 AM ISTUpdated : Oct 27, 2021, 03:33 PM IST
ಹಾಡಲ್ಲೇ ಮೋಡಿ‌ ಮಾಡಿದ್ದ ‘ಟಾಮ್ ಅಂಡ್ ಜೆರ್ರಿ’ ನವೆಂಬರ್ 12ಕ್ಕೆ  ರಿಲೀಸ್

ಸಾರಾಂಶ

ಬೆಳ್ಳಿ ಪರದೆಯ ಮೇಲೆ ಮನರಂಜನೆ ನೀಡಲು ರೆಡಿಯಾಗಿದೆ ಟಾಮ್ ಅಂಡ್ ಜೆರ್ರಿ(Tom and Jerry) ನವೆಂಬರ್ 12ಕ್ಕೆ ಎಲ್ಲರ ಮುಂದೆ ಬರುತ್ತಿದೆ ಸಿನಿಮಾ

ಟಾಮ್ ಅಂಡ್ ಜೆರ್ರಿ(Tom and Jerry) ಸಿನಿಮಾ ಈಗಾಗಲೇ ನಿಮ್ಮ ಗಮನವನ್ನ ತನ್ನತ್ತ ಕೇಂದ್ರಿಕರಿಸಿದೆ. ಯಾಕಂದ್ರೆ ಆ ಸಿನಿಮಾದ ಹಾಡೊಂದು((Song) ಕಿವಿಯಲ್ಲಿ ಈಗಲೂ ಗುಯ್ ಅನ್ನುತ್ತಾ ಇದೆ. ಅಷ್ಟು ಟ್ರೆಂಡಿಂಗ್ ನಲ್ಲಿದೆ ಆ ಸಾಂಗ್. ಇದೀಗ ಚಿತ್ರೀಕರಣ ಮುಗಿಸಿ, ಹಾಡಿನಲ್ಲೇ ಮೋಡಿ ಮಾಡಿದ್ದ ಸಿನಿಮಾ ಬೆಳ್ಳಿ ಪರದೆಯ ಮೇಲೆ ಮನರಂಜನೆ ನೀಡಲು ರೆಡಿಯಾಗಿದೆ. ನವೆಂಬರ್ 12ಕ್ಕೆ ಸಿನಿಮಾ ತೆರೆಗೆ ಬರೋದಕ್ಕೆ ಡೇಟ್ ಫಿಕ್ಸ್ ಆಗಿದೆ. 

"

ಸಿನಿಮಾ (Cinema) ಸೆಟ್ಟೇರಿದಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ಕುತೂಹಲವನ್ನ ಹುಟ್ಟುಹಾಕಿತ್ತು. ಅದರಲ್ಲೂ ಟಾಮ್ ಅಂಡ್ ಜೆರ್ರಿ ಟೈಟಲ್ ಸಖತ್ ಕ್ಯಾಚಿಯಾಗಿತ್ತು.  ಎಲ್ಲರೂ ಒಂದಲ್ಲ ಒಂದ್ಸಲ್ಲ ಟಾಮ್ ಅಂಡ್ ಜೆರ್ರಿ ನೋಡಿ ನಕ್ಕಿರ್ತಿರಾ. ಬೇಜಾರಾದಾಗ ವಯಸ್ಸಿನ ಅಂತರವಿಲ್ಲದೆ ನೋಡಿ ಮನಸ್ಸನ್ನ ಹಗುರ ಮಾಡಿಕೊಂಡಿರ್ತಿರಾ.

ಕಿತ್ತಾಟ, ಪ್ರೀತಿ ಇದೆಲ್ಲವೂ ಟಾಮ್ ಅಂಡ್ ಜೆರ್ರಿಯಲ್ಲಿ ಇಷ್ಟವಾಗೋ ಸಬ್ಜೆಕ್ಟ್. ಈ ಸಿನಿಮಾದಲ್ಲೂ ಆ ವಿಚಾರದ ಮೇಲೆಯೇ ಕಥೆ ಹೆಣೆಯಲಾಗಿದೆ. ಯುವ ಪೀಳಿಗೆಯನ್ನ ಸೆಳೆಯುವ ಇಬ್ಬರು ಸ್ನೇಹಿತರ ಕಥೆ. ಮುನಿಸು, ಕೋಪ, ಪ್ರೀತಿ, ಕಾಳಜಿ ಎಲ್ಲವೂ ತುಂಬಿರುವ ಕಥೆಯನ್ನ ಈಗಿನ ಪೀಳಿಗೆಗೆ ಇಷ್ಟವಾಗುವಂತೆ ರೆಡಿ ಮಾಡಿದ್ದಾರೆ ನಿರ್ದೇಶಕರು.

ಸ್ಯಾಂಡಲ್‌ವುಡ್‌ನ ಲೇಟೆಸ್ಟ್ ಅಪ್ಡೇಟ್‌ಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆಜಿಎಫ್(KGF) ಸಿನಿಮಾದಲ್ಲಿ ಡೈಲಾಗ್ ಮೂಲಕವೆ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದ್ದ ರೈಟರ್ ರಾಘವ್ ವಿನಯ್ ಶಿವಗಂಗೆ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್ ನಡಿ ರಾಜು ಶೇರಿಗಾರ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಕಾರ್ಯಕಾರಿ ನಿರ್ಮಾಪಕರಾಗಿ ವಿನಯ್ ಚಂದ್ರ ಸಾಥ್ ನೀಡಿದ್ದಾರೆ. ಈಗಾಗ್ಲೇ ಸಿನಿಮಾಗೆ U/A ಸರ್ಟಿಫಿಕೇಟ್ ಸಿಕ್ಕಿದ್ದು, ಇಡೀ ಚಿತ್ರತಂಡಕ್ಕೆ ಸಂತಸ ತಂದಿದೆ. ಹೀಗಾಗಿ ನವೆಂಬರ್ 12ಕ್ಕೆ ಎಲ್ಲರ ಮುಂದೆ ಬರೋದಕ್ಕೆ ಸಿದ್ದವಾಗಿದೆ ಚಿತ್ರತಂಡ. 

ಗಂಟು ಮೂಟೆ ಸಿನಿಮಾದಲ್ಲಿ ನಟನೆಯಿಂದಲೇ ಎಲ್ಲರನ್ನು ಸೆಳೆದಿದ್ದ ನಿಶ್ಚಿತ್ ಕೊರೋಡಿ ನಾಯಕನಾಗಿ ನಟಿಸಿದ್ದಾರೆ. ಜೋಡಿಹಕ್ಕಿ ಧಾರಾವಾಹಿ ಖ್ಯಾತಿಯ ಚೈತ್ರಾ ರಾವ್ ನಿಶ್ಚಿತ್ ಗೆ ಜೋಡಿಯಾಗಿದ್ದಾರೆ. ಸೂರ್ಯ ಶೇಖರ್ ವಿಲನ್ ಆಗಿ ಅಬ್ಬರಿಸಿದ್ದು ಉಳಿದಂತೆ, ತಾರ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು, ರಾಕ್ಲೈನ್ ಸುಧಾಕರ್, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಒಳಗೊಂಡ ದೊಡ್ಡವರ ದಂಡೇ ಚಿತ್ರದಲ್ಲಿದೆ.

ಸಖತ್ ಹಿಟ್ ಕೊಟ್ಟಿರುವ ಹಾಡುಗಳಿಗೆ ಮ್ಯಾಥ್ಯೂಸ್ ಮನು ಸಂಗೀತದ ಕೈಚಳಕ ತೋರಿಸಿದ್ದಾರೆ. ಸಂಕೇತ್ ಎಂವೈಎಸ್ ಕ್ಯಾಮೆರಾ ನಿರ್ದೇಶನ, ಸೂರಜ್ ಅಂಕೊಲೇಕರ್ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?