
ಸತ್ಯಪ್ರಕಾಶ್ (Sathya Prakash) ನಿರ್ದೇಶನದ ‘ಮ್ಯಾನ್ ಆಫ್ ದಿ ಮ್ಯಾಚ್’ (Man Of The Match) ಚಿತ್ರ ಅಕ್ಟೋಬರ್ (October) ಕೊನೆಯ ವಾರ ಅಮೆಜಾನ್ ಪ್ರೈಮ್‌ನಲ್ಲಿ (Amazon Prime) ರಿಲೀಸ್ ಆಗಲಿದೆ. ಈ ಕುರಿತು ನಿರ್ದೇಶಕ ಸತ್ಯ ಪ್ರಕಾಶ್, ‘ಚಿತ್ರಕ್ಕೆ ಸೆನ್ಸಾರ್ (Sensor) ಮುಗಿದಿದ್ದು, ಯು (U) ಸರ್ಟಿಫಿಕೇಟ್ ಸಿಕ್ಕಿದೆ. ಈ ತಿಂಗಳ ಕೊನೆಗೆ ಬಿಡುಗಡೆ ದಿನಾಂಕ ಘೋಷಿಸುತ್ತೇವೆ,’ ಎಂದು ತಿಳಿಸಿದ್ದಾರೆ.
‘ಒಂದು ಕಡೆ ಥಿಯೇಟರ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ, ಇನ್ನೊಂದೆಡೆ ಜನರಿಗೆ ಥಿಯೇಟರ್‌ಗೆ ಬರೋದಿಕ್ಕೆ ಪೂರ್ತಿ ಧೈರ್ಯ ಬಂದಿಲ್ಲ. ಹೀಗಾಗಿ ನಮ್ಮ ಚಿತ್ರವನ್ನು ಓಟಿಟಿಯಲ್ಲಿ (OTT) ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ. ಪುನೀತ್ ರಾಜ್‌ಕುಮಾರ್ (Puneeth Rajkumar) ಬ್ಯಾನರ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಖಾಸಗಿತನ ಅನ್ನೋದೇ ಇಲ್ಲದ ಈ ಕಾಲದ ಕತೆಯನ್ನು ಸಿನಿಮಾ ಆಡಿಶನ್ ಹಿನ್ನೆಲೆಯಲ್ಲಿ ಹೇಳಲಿದ್ದೇವೆ. ಇಡೀ ಸಿನಿಮಾ ಸಹಜವಾಗಿಯೇ ಇರುತ್ತದೆ. ಅತ್ಯಾಧುನಿಕ ತಂತ್ರಜ್ಞಾನ (Modern Technology) ಬಳಕೆ ಮಾಡಿದ್ದೇವೆ. ಇಡೀ ಸಿನಿಮಾದ ಚಿತ್ರೀಕರಣ ಒಂದೇ ಲೊಕೇಶನ್‌ನಲ್ಲಿ ಆಗಿದೆ. ಸ್ಕ್ರಿಪ್ಟ್ ವರ್ಕ್ನಿಂದ (Script Work)ನಿಂದ ಹಿಡಿದು ಶೂಟಿಂಗ್ (Shooting) ಮುಗಿಸೋವರೆಗೆ ದೊಡ್ಡ ಚಾಲೆಂಜ್ ಇತ್ತು. ನಮ್ಮ ನಿರೀಕ್ಷೆಗೂ ಮೀರಿ ಚಿತ್ರ ಚೆನ್ನಾಗಿ ಬಂದಿದೆ. ಪುನೀತ್ ಅವರು ಮುಂದಿನ ವಾರ ಸಿನಿಮಾ ನೋಡಲಿದ್ದಾರೆ. ಅವರ ಪ್ರತಿಕ್ರಿಯೆ (Response) ಬಗ್ಗೆ ಕುತೂಹಲವಿದೆ,’ ಎಂದರು.
ಧರ್ಮಣ್ಣ, ನಟರಾಜ್, ವಾಸುಕಿ ವೈಭವ್ (Vasuki Vaibhav) ಹಾಗೂ ಹೊಸಬರು ಚಿತ್ರದಲ್ಲಿ ನಟಿಸಿದ್ದಾರೆ. ಯೋಗರಾಜ ಭಟ್ಟರ (Yogaraj Bhat) ಗೀತೆಗಳಿಗೆ ವಾಸುಕಿ ಸಂಗೀತ ಸಂಯೋಜನೆ ಇದೆ. ಪಿಆರ್‌ಕೆ (PRK) ಸ್ಟುಡಿಯೋ ಜೊತೆಗೆ ಸತ್ಯ ಮತ್ತು ಮಯೂರ ಪಿಕ್ಚರ್ಸ್ ನಿರ್ಮಾಣದ ಸಿನಿಮಾ ಇದು.
ಸತ್ಯ ಪ್ರಕಾಶ್ ನಿರ್ದೇಶನ ಮಾಡಿರುವ ಮೂರನೇ ಚಿತ್ರ ಇದಾಗಿದ್ದು, ಬೆಂಗಳೂರಿನ ಬನಶಂಕರಿ ದೇಗುಲದಲ್ಲಿ (Bengaluru Banashankari Temple) ವರ ಸಿದ್ಧಿ ವಿನಾಯಕನ ಗುಡಿಯಲ್ಲಿ ಪೂಜೆ ಸಲ್ಲಿಸಿದ್ದಾರೆ. 'ಪ್ರತಿ ದಿನ ಪ್ರತಿಯೊಬ್ಬನಿಗೂ ಮ್ಯಾಚ್ ನಡೀತಿರುತ್ತದೆ. ಸಂಜೆ ವಾಪಾಸ್ ಮನೆಗೆ ಬರುವಾಗ ಆತ ಗೆದ್ದಿರಬೇಕು ಅಥವಾ ಸೋತಿರಬೇಕು. ಸಂಜೆ ಅವನು ಗೆಲ್ತಾನಾ? ಅವನು ಆದರ್ಶ ಗೆಲುತ್ತಾ? ಅಥವಾ ಯೋಚನೆ ಗೆಲ್ಲುತ್ತಾ? ಎಂಬ ಐಡಿಯಾದಡಿ ಇಡೀ ಸಿನಿಮಾವನ್ನು ಹೆಣೆಯಲಾಗಿದೆ. ಒಂದೇ ದಿನ ಒಂದೇ ಜಾಗದಲ್ಲಿ ನಡೆಯುವ ಕಥೆ ಇದು,' ಎಂದು ನಿರ್ದೇಶಕರು ಹೇಳಿದ್ದಾರೆ.
ಈ ಚಿತ್ರಕ್ಕೆ ಹಂಸಲೇಖ (Hamsalekha) ಕ್ಲಾಪ್ ಮಾಡಿದ್ದಾರೆ, ಡಾಲಿ ಧನಂಜಯ್ (Dolly Dhananjay) ಕ್ಯಾಮೆರಾ ಸ್ವಿಚ್ ಅನ್ ಮಾಡಿದ್ದಾರೆ. 'ಈ ಹಿಂದಿನ ಚಿತ್ರಗಳಲ್ಲಾದರೆ ಜರ್ನಿ ಕಥೆ ಇತ್ತು. ಹಾಗಾಗಿ ಅಂಥಾ ಚಾಲೆಂಜಿಂಗ್ ಅನಿಸಲಿಲ್ಲ. ಅದರೆ ಈ ಸಿನಿಮಾ ಸಂಪೂರ್ಣ ಹೊಸತನದಿಂದ ಕೂಡಿದ್ದು ಹೆಜ್ಜೆ ಹೆಜ್ಜೆಗೂ ಸವಾಲಿವೆ. ಇದು ನಾರ್ಮಲ್ ಚಿತ್ರದ ವಿನ್ಯಾಸದಲ್ಲಿಲ್ಲ. ನಟ ಎಂಬವರು ನಿರ್ದೇಶಕನಾಗಿ, ಧರ್ಮಣ ಪ್ರೊಡ್ಯೂಸರ್ ಪಾತ್ರ ಮಾಡಲಿದ್ದಾರೆ. 50 ಜನರ ಹೊಸ ನಟ, ನಟಿಯರಿರುತ್ತಾರೆ. ಉಳಿದಂತೆ ರಿಯಲ್ ಟೆಕ್ನಿಷಿಯನ್ಸ್ ಸಿನಿಮಾದಲ್ಲೂ ಬರುತ್ತಾರೆ,' ಎಂದಿದ್ದಾರೆ ಸತ್ಯ ಪ್ರಕಾಶ್.
ವಿಭಿನ್ನ ಕಥೆಯುಳ್ಳ ರಾಮ ರಾಮಾ ರೇ ಚಿತ್ರ ಎಲ್ಲ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಹಾಡು, ಕಥೆ ಎಲ್ಲವೂ ಚಿತ್ರದಲ್ಲಿ ವಿಭಿನ್ನವಾಗಿ ಮೂಡಿ ಬಂದಿದ್ದು, ಕನ್ನಡದಲ್ಲಿ ಹೊಸ ರೀತಿಯಲ್ಲಿ ತಯಾರಾದ ಚಿತ್ರಗಳಲ್ಲಿ ಒಂದೆಂಬ ಕೀರ್ತಿಗೆ ಪಾತ್ರವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.