ಹೊಸ ಚಿತ್ರಕ್ಕೆ 10 ಕೆಜಿ ತೂಕ ಏರಿಸಿಕೊಂಡಿದ್ದೇನೆ: ಪ್ರಿಯಾಂಕಾ ತಿಮ್ಮೇಶ್‌

By Suvarna News  |  First Published Sep 30, 2021, 10:55 AM IST

ಪ್ರೀತಂ ತಗ್ಗಿನಮನೆ ನಿರ್ದೇಶನದ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಿಯಾಂಕ ನಟಿಸುತ್ತಿದ್ದಾರೆ. ಪಾತ್ರಕ್ಕಾಗಿ ಬರೋಬ್ಬರಿ 10 ಕೆಜಿ ಏರಿಸಿಕೊಂಡಿದ್ದಾರೆ. 


ಸಿನಿಮಾಟೋಗ್ರಾಫರ್‌ ಆಗಿದ್ದ ಪ್ರೀತಂ ತಗ್ಗಿನಮನೆ (Preetham Thegginamane) ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಪ್ರಿಯಾಂಕಾ ತಿಮ್ಮೇಶ್‌ (Priyanka Thimmesh) ನಟಿಸಿದ್ದಾರೆ. ನಾಗಭೂಷಣ್‌ (NagaBushan) ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಪ್ರಿಯಾಂಕ ತಿಮ್ಮೇಶ್‌ 10 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದರು.

‘ಹೊಸ ಚಿತ್ರಕ್ಕಾಗಿ ಸುಮಾರು 10 ಕೆಜಿ ತೂಕ ಏರಿಸಿಕೊಂಡಿದ್ದೆ. ಡೈರೆಕ್ಟರ್‌ ಪ್ರೀತಮ್‌ ನನ್ನ ಹಳೇ ಫ್ರೆಂಡ್‌. ಅವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನಾನು ದಪ್ಪ ಆಗಲೇ ಬೇಕಿತ್ತು. ಡಬಲ್‌ ಚಿನ್‌ ಕಾಣಬೇಕಿತ್ತು. ಮೂರು ಹೊತ್ತೂ ಅನ್ನ (Rice) ತಿನ್ನುತ್ತಿದ್ದೆ ಮತ್ತು ಅದನ್ನು ಎಂಜಾಯ್‌ ಮಾಡುತ್ತಿದ್ದೆ. ಶೂಟಿಂಗ್‌ ಎಲ್ಲ ಮುಗಿದ ಮೇಲೆ ತೂಕ ಇಳಿಸೋ ಕಸರತ್ತು ಶುರುವಾಗಿದೆ,’ ಎನ್ನುತ್ತಾರೆ ಪ್ರಿಯಾಂಕಾ.

Tap to resize

Latest Videos

undefined

ಪಾತ್ರದ ಬಗ್ಗೆ ಹೆಚ್ಚಿನ ವಿವರ ನೀಡದ ಅವರು, ‘ಈ ಪಾತ್ರ ಬಹಳ ಇಷ್ಟ ಆಯ್ತು. ಈವರೆಗಿನ ಆರೇಳು ಚಿತ್ರಗಳಲ್ಲಿ ಇಂಥದ್ದೊಂದು ಪಾತ್ರ ಸಿಕ್ಕಿರಲಿಲ್ಲ. ನನ್ನ ಪಾತ್ರದ ಬಗ್ಗೆ ವಿವರಿಸಿದಾಗ ನಿಜಕ್ಕೂ ಎಕ್ಸೈಟ್‌ (Excite) ಆಗಿದ್ದೆ. ಇನ್ನೇನು ಕೆಲವೇ ದಿನದಲ್ಲಿ ಚಿತ್ರದ ಅಧಿಕೃತ ಘೋಷಣೆಯಾಗುತ್ತದೆ (Announcement),’ ಎನ್ನುತ್ತಾರೆ.

ಬಿಗ್‌ಬಾಸ್‌ನಿಂದ ಹೊರ ಬಂದ ಮೇಲೆ 3 ಕೆಜಿ ತೂಕ ಇಳಿಸಿದೆ: ಪ್ರಿಯಾಂಕಾ ತಿಮ್ಮೇಶ್

ಬಿಬಿ (Bigg boss) ಮನೆಯಿಂದ ಹೊರ ಬಂದ ನಂತರ ಪ್ರಿಯಾಂಕಾ ಅವರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ. ಕೆಲವರು ಪತ್ರ (Letter) ಬರೆದು, ತಮ್ಮ ಪ್ರೀತಿ-ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಅದರಲ್ಲಿ ಒಬ್ಬರ ಪತ್ರವನ್ನು ಪ್ರಿಯಾಂಕಾ ಹಂಚಿಕೊಂಡು, ಧನ್ಯವಾದಗಳನ್ನೂ ಹೇಳಿದ್ದರು. 'ಪ್ರಿಯಾಂಕಾ ಪಿಂಕಿ ಅಕ್ಕ ನೀವು ತುಂಬಾ ಕೈಂಡ್ ಹಾರ್ಟ್ (Kind heart) ವ್ಯಕ್ತಿ. ನೀನು ನನ್ನ ಜೀವನದಲ್ಲಿ ಎಷ್ಟು ಮುಖ್ಯವಾದ ವ್ಯಕ್ತಿ ಅಂದರೆ ವರ್ಣಿಸಲು ಪದಗಳು ಸಿಗುತ್ತಿಲ್ಲ. ನಿಮ್ಮಷ್ಟು ಸುದರವಾಗಿ (Beautiful), ಹಂಬರ್ (Humble) ಹಾಗೂ ಸ್ವೀಟ್ (Sweet) ವ್ಯಕ್ತಿಯನ್ನು ನಾನು ಎಂದೂ ನೋಡಿಲ್ಲ. ನಾನು ನಿಮ್ಮೊಂದಿಗೆ ಮೆಸೇಜ್ ಮಾಡಿ ಮಾತನಾಡಿಸುವಾಗ ನೀವು ಸೆಲೆಬ್ರಿಟಿ ಅನ್ನೋದೇ ನನಗೆ ಗೊತ್ತಾಗದ ಹಾಗೆ ಇದ್ರಿ. ಎಲ್ಲೋ ನಾನು ನನ್ನ ಬೆಸ್ಟ್‌ ಫ್ರೆಂಡ್ (Best Friend) ಜೊತೆ ಮಾತನಾಡುತ್ತಿದ್ದೀನಿ ಅನಿಸುತ್ತಿತ್ತು,' ಎಂದು ಪತ್ರದಲ್ಲಿ ಬರೆದಿದ್ದರು. 

ವೈಲ್ಡ್ ಕಾರ್ಡ್ (Wildcard) ಸ್ಪರ್ಧಿಯಾಗಿ ಸೀಸನ್ 8ಕ್ಕೆ ಎಂಟ್ರಿ ಕೊಟ್ಟ ಪ್ರಿಯಾಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರು. ತಮ್ಮ ಮನೆಯ ಹುಡುಗಿ ಅನ್ನೋ ಭಾವನೆ ನೀಡಿದ್ದರು. ಕೆಲವು ತಿಂಗಳುಗಳ ಕಾಲ ಬಿಬಿ ಹ್ಯಾಂಗೋವರ್‌ನಿಂದ (Hangover) ಹೊರ ಬಂದಿಲ್ಲ ಎಂದು ಹೇಳಿಕೊಂಡಿದ್ದರು.  ಹೊರ ಬಂದರ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡ ಪ್ರಿಯಾಂಕಾ ಆಗಲೇ 3 ಕೆಜಿ ತೂಕ ಇಳಿಸಿಕೊಂಡಿದ್ದರು (Weight Loss). ಅನ್ನ ತಿನ್ನಲ್ಲ, ತರಕಾರಿ, ಮೊಟ್ಟೆ (Egg), ಕೊಬ್ಬಿನಂಶ (Fiber) ಕಡಿಮೆ ಇರುವ ಆಹಾರ ತಿನ್ನುತ್ತೀನಿ. ಜೊತೆಗೆ ಲಿಕ್ವಿಡ್ ಡಯಟ್ (Liquid Diet) ಮಾಡ್ತೀನಿ. ಚೀಟ್ ಅಂತೂ ಮಾಡೋದೇ ಇಲ್ಲ ಫ್ರೆಂಡ್ಸ್‌ ಮನೆಗೆ ಹೋದಾಗ ಮಾತ್ರ ಮಧ್ಯಾಹ್ನದ ಹೊತ್ತು ಊಟ (Lunch) ಮಾಡ್ತೀನಿ ಎಂದು ತಮ್ಮ ಫುಡ್‌ ಸ್ಟೈಲ್ (Food Style) ಬಗ್ಗೆ ಹೇಳಿದ್ದರು. 

ಪ್ರೇಮ ಕತೆಯಲ್ಲಿ ನಾನು ಟೀಚರ್‌: ಪ್ರಿಯಾಂಕ ತಿಮ್ಮೇಶ್

'ವರ್ಕೌಟ್ (Workout) ವಿಚಾರಕ್ಕೆ ಬಂದರೆ ನಾನು ಮೊದಲಿನಿಂದಲೂ ಮನೆಯಲ್ಲಿಯೇ ವರ್ಕೌಟ್ ಮಾಡೋದು. ಜಿಮ್‌ಗೆ (Gym) ಹೋಗಲ್ಲ. ದಿನಾ ಜಿಮ್ (Gym) ಮಾಡ್ತಿದ್ದು ಮಧ್ಯೆ ಕೆಲನು ದಿನ ಬಿಟ್ರೆ ಮತ್ತೆ ದಪ್ಪ ಆಗಿಬಿಡ್ತೀವಿ.  ಮತ್ತೆ ಅದನ್ನು ಕರಗಿಸುವುದು ಕಷ್ಟ. ಮನೆಯಲ್ಲಿಯೇ ಡಂಬಲ್ಸ್‌ ಇದೆ. ವರ್ಕೌಟ್ ಬೇಕಾದ ಮೆಟೀರಿಯಲ್‌ಗಳಿವೆ. ಜೊತೆಗೆ ದಿನವೂ ಮಿಸ್ ಮಾಡದೆ ಯೋಗ (Yoga) ಮಾಡ್ತೀನಿ,'  ಎಂದು ವರ್ಕೌಟ್ ಬಗ್ಗೆ ಹಂಚಿಕೊಂಡಿದ್ದಾರೆ.

click me!