ಪೈರಸಿ ಕಾಟ: ಕೋಟಿಗೊಬ್ಬ 3 ತಂಡದ ದೂರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಿಷ್ಟು!

By Suvarna NewsFirst Published Sep 29, 2021, 7:13 PM IST
Highlights

* ಕೋಟಿಗೊಬ್ಬ-3 ಚಿತ್ರಕ್ಕೆ ಪೈರಸಿ ಆತಂಕ
* ಗೃಹ ಸಚಿವ ಆರಗ ಜ್ಞಾನೇಂದ್ರ ಮೊರೆ ಹೋದ ಚಿತ್ರ ತಂಡ
* ಚಿತ್ರತಂಡಕ್ಕೆ ಅಭಯ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು, (ಸೆ.29):  ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ-3 (kotigobba 3) ರಿಲೀಸ್‌ಗೂ ಮುನ್ನ ಸಿನಿಮಾಕ್ಕೆ ಪೈರಸಿ ಆತಂಕ ಶುರುವಾಗಿದ್ದು, ಈ ಬಗ್ಗೆ ಚಿತ್ರತಂಡ ಇಂದು (ಶೆ.29) ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನ ಭೇಟಿ ಮಾಡಿ ದೂರು ನೀಡಿದೆ.

"

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ  ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಕಷ್ಟಪಟ್ಟು ಕೋಟ್ಯಾಂತರ ಹಣ ಹಾಕಿ ನಿರ್ಮಿಸುವ ಸಿನಿಮಾವನ್ನು ಪೈರಸಿ ಮಾಡುವುದರಿಂದ ಚಿತ್ರರಂಗಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ಪೈರಸಿ (Piracy) ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

"

ಬಿಡುಗಡೆಗೆ ಮುನ್ನವೇ ಕೋಟಿಗೊಬ್ಬ 3 ಪೈರಸಿ? ಗೃಹ ಸಚಿವರಿಗೆ ದೂರಿತ್ತ ನಿರ್ಮಾಪಕ

ಕೋಟಿಗೊಬ್ಬ 3 ಸಿನಿಮಾ ನಿರ್ಮಾಪಕರು ಮಧ್ಯಾಹ್ನ ಪೈರಸಿ ಕೃತ್ಯದ ಬಗ್ಗೆ ತಿಳಿಸಿ ಪೈರಸಿಯನ್ನು ನಿಲ್ಲಿಸುವಂತೆ ಮನವಿ ಕೊಟ್ಟಿದ್ದಾರೆ. ಇದೊಂದು ರೀತಿಯಲ್ಲಿ ಉದ್ದೇಶಿತ ಅಪರಾಧದಂತೆ ಭಾಸವಾಗುತ್ತದೆ. ಚಲನಚಿತ್ರರಂಗಕ್ಕೆ ಹೊಡೆತ ಕೊಡುವ ಪೈರಸಿಯನ್ನು ತಡೆಗಟ್ಟಲು ಎಲ್ಲ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

 ನಿರ್ಮಾಪಕರಾಗಿರುವ ಸೂರಪ್ಪ ಬಾಬು ಅವರೇ ಇದೀಗ ಗೃಹ ಸಚಿವರಿಗೇ ದೂರು ನೀಡಿದ್ದಾರೆ. ಕೋಟಿಗೊಬ್ಬ-3 ಸಿನಿಮಾ ಬಿಡುಗಡೆ ಮಾಡುವುದಕ್ಕೂ ಮುನ್ನವೇ, ಪೈರಸಿ ಮಾಡ್ತೀವಿ ಅಂತಾ ಕಿಡಿಗೇಡಿಗಳು ಅವರಿಗೆ ಬೆದರಿಕೆ ಹಾಕಿದ್ದಾರೆ ಅಂತೆ. ಟೆಲಿಗ್ರಾಂ ಆಯಪ್​ನಲ್ಲಿ ಸೂರಪ್ಪ ಬಾಬುಗೆ ಬೆದರಿಕೆ ಬಂದಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರಗೆ ಪತ್ರ ಬರೆದಿರುವ ಸೂರಪ್ಪ ಬಾಬು, ಭದ್ರತೆ ನೀಡುವಂತೆ ಕೋರಿದ್ದಾರೆ.
 

click me!