ಪ್ರೆಗ್ನೆಂಟ್ ಎಂದು ತಿಳಿಯುತ್ತಿದ್ದಂತೆ ಪತಿಯಿಂದ ಸಿನಿಮಾ ಗಿಫ್ಟ್‌ ಕೇಳಿದ ನಟಿ ಮಮತಾ; 35 ಪ್ರಶಸ್ತಿಗಳನ್ನು ಬಾಚಿಕೊಂಡ ತಾರಿಣಿ!

By Vaishnavi Chandrashekar  |  First Published Oct 22, 2024, 12:21 PM IST

ಗರ್ಭಿಣಿ ಪತ್ನಿ ಕೇಳಿದ ಗಿಫ್ಟ್‌ಗೆ ನೋ ಹೇಳದೆ ಸಿನಿಮಾ ನಿರ್ಮಾಣ ಮಾಡಲು ಮುಂದಾದ ಸಿದ್ಧು. ಡಿಕೆಡಿ ವೇದಿಕೆಯಲ್ಲಿ ಸೆಲೆಬ್ರಿಟಿ ಕಪಲ್‌ಗೆ ಚಪ್ಪಾಳೆ.


ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ನಲ್ಲಿ ಸೋಷಿಯಲ್ ಮೀಡಿಯಾ ಸ್ಟಾರ್‌ಗಳು ಹಾಗೂ ಅದ್ಭುತ ಕಲಾವಿದರನ್ನು ಒಟ್ಟಾಗಿಸಿ ಸ್ಕಿಟ್‌ ಮಾಡಿಸಲಾಗಿತ್ತು. ಈ ಎಪಿಸೋಡ್‌ನಲ್ಲಿ ನಟಿ ಮಮತಾ ರಾಹುತ್ ಕೂಡ ಭಾಗಿಯಾಗಿದ್ದರು. ಈ ವೇಳೆ ಗಂಡ ಹೆಂಡತಿ ಸೇರಿಕೊಂಡು ನಿರ್ಮಾಣ ಮಾಡಿರುವ ತಾರಿಣಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. 

ಹೆಣ್ಣು ಭ್ರೂಣ ಹತ್ಯೆ ಮಾಡಬಾರದು ಎಂದು ಒಳ್ಳೆ ಸಂದೇಶ ನೀಡಲು ಮಾಡಿರುವ ಈ ಚಿತ್ರದಲ್ಲಿ ಮಮತಾ ರಾಹುತ್ ಅಭಿನಯಿಸಿದ್ದಾರೆ ಹಾಗೂ ಪತಿ ಸಿದ್ಧು ಪೂರ್ಣಚಂದ್ರ ನಿರ್ಮಾಣ ಮಾಡಿದ್ದಾರೆ. ತಾರಿಣಿ ಸಿನಿಮಾ ಶುರುವಾಗಿದ್ದೇ ಬೇರೆ ರೀತಿಯಲ್ಲಿ, ಪ್ರೆಗ್ನೆಂಟ್  ಆಗಿದ್ದಾಗ ಸಿನಿಮಾವನ್ನು ಚಿತ್ರೀಕರಣ ಮಾಡಿದ್ದು ಹಾಗೂ ನನ್ನ ಮಗುವನ್ನೇ ತೋರಿಸಿರುವುದು. ನಾನು ಪ್ರೆಗ್ನೆಂಟ್ ಎಂದು ಗೊತ್ತಾದ ಕ್ಷಣ ನಿನಗೆ ಏನು ಗಿಫ್ಟ್ ಬೇಕು ಎಂದು ನನ್ನ ಪತಿ ಕೇಳಿದ್ದರು....ಸಾಮಾನ್ಯವಾಗಿ ಎಲ್ಲರೂ ಅದು ಬೇಕು ಇದು ಬೇಕು ಎಂದು ಕೇಳುತ್ತಾರೆ ಆದರೆ ನನ್ನ ಪ್ರೆಗ್ನೆನ್ಸಿ ಮೋರೆ ಮೆಮೋರಬಲ್ ಆಗಿರಬೇಕು ಎಂದು ಸಿನಿಮಾ ಪ್ಲ್ಯಾನ್ ಮಾಡೋಣ್ವಾ ಎಂದು ಕೇಳಿದೆ. ನೀನು ಓಕೆ ಅಂದ್ರೆ ನಾನು ರೆಡಿ ಪ್ರಡ್ಯೂಸ್ ಮಾಡುವುದಕ್ಕೆ ಎಂದು ಪತಿ ಹಿಂದೆ ಹೆಜ್ಜೆ ಹಾಕಲಿಲ್ಲ' ಎಂದು ಮಮತಾ ಮಾತನಾಡಿದ್ದಾರೆ.

Tap to resize

Latest Videos

undefined

ಬಾತ್‌ರೂಮ್‌ ತೊಳೆದು 6 ತಿಂಗಳಾಗಿತ್ತು, ಕಸಗಡ್ಡಿ ಜಾಸ್ತಿ ಇತ್ತು; ವಿಜಯ್ ರಾಘವೇಂದ್ರ ಪರಿಸ್ಥಿತಿ ಕಂಡು ಕಣ್ಣೀರಿಟ್ಟ ಮುರಳಿ!

'ಭ್ರೂಣ ಹತ್ಯೆ ಮಹಾ ಪಾಪ ಎನ್ನುವ ಸುದ್ದಿಯನ್ನು ಜನರಿಗೆ ತಿಳಿಸಬೇಕು ಹಾಗೂ ಹೆಲ್ತ್‌ ಡಿಪಾರ್ಟ್ಮೆಂಟ್ ಮೂಲಕ ಈ ವಿಚಾರದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು 3 ತಿಂಗಳಲ್ಲಿ ಸ್ಕ್ರಿಪ್ಟ್ ಶುರು ಮಾಡಿದೆ ಹಾಗೂ 7ನೇ ತಿಂಗಳಿನಲ್ಲಿ ಚಿತ್ರೀಕರಣ ಶುರು ಮಾಡಿ 9 ತಿಂಗಳವರೆಗೂ ಶೂಟಿಂಗ್ ಮಾಡಿದ್ದೀನಿ. ಹಿಂದಿನ ದಿನದವರೆಗೂ ಚಿತ್ರೀಕರಣ ಮುಗಿಸಿ ಮಾರನೆ ದಿನ ಡೆಲಿವರಿ ಮಾಡಿಸಿಕೊಳ್ಳಲು ಹೋಗಿದ್ದೆ...ಅದರಲ್ಲೂ ನಾರ್ಮಲ್ ಡೆಲಿವರಿ ಆಗಿತ್ತು. ತಾರಿಣಿ ಚಿತ್ರಕ್ಕೆ ನ್ಯಾಷನಲ್ ಮತ್ತು ಇಂಟರ್‌ನ್ಯಾಷನಲ್‌ ಲೆವಲ್‌ನಲ್ಲಿ ಸುಮಾರು 35 ಅವಾರ್ಡ್‌ಗಳು ಬಂದಿದೆ' ಎಂದು ಮಮತಾ ಹೇಳಿದ್ದಾರೆ. 

'ಪ್ರೆಗ್ನೆನ್ಸಿ ಸಮಯದಲ್ಲಿ ಚಿತ್ರೀಕರಣ ಮಾಡೋಣ ಎಂದು ಹೇಳಿದಾಗ ನನಗೆ ತುಂಬಾ ಶಾಕ್ ಆಯ್ತು. ಪ್ರಡ್ಯೂಸ್ ಆಗುವುದು ಬೇರೆ ಅದಕ್ಕೂ ಮೊದಲು ನಾನು ತಂದೆ ಮತ್ತು ಗಂಡ. ನಮ್ಮದೇ ಮಗುವನ್ನು ನಮ್ಮದೇ ಹೆಂಡತಿಯನ್ನು ಸೆಟ್‌ನಲ್ಲಿ ಮ್ಯಾನೇಜ್ ಮಾಡುವುದು ತುಂಬಾನೇ ಕಷ್ಟ.ಸೀಮಂತದ ಸಮಯದಲ್ಲಿ ನಮ್ಮ ಕಡೆ ತಾಯಿ ಆಗುವವರಿಗೆ ಗಿಫ್ಟ್ ಕೇಳುತ್ತಾರೆ ಆ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ಆಗಿತ್ತು ...ಹೀಗಾಗಿ ನೀನು ಮಾಡಲು ರೆಡಿಯಾಗಿರುವೆ ಅಂದ್ರೆ ನಾನು ಸಿದ್ಧ ಎಂದು ಕೆಲಸ ಶುರು ಮಾಡಿದೆವು. 

ಸಾವಿನ ಭಯದಿಂದ ನಡುಗುತ್ತಿರೋ ಸಲ್ಲು, ಅಮ್ಮನ ಕಳ್ಕೊಂಡ ಆತ್ಮೀಯ ಕಿಚ್ಚನಿಗೂ ಹೇಳಲಿಲ್ಲ ಸಂತಾಪ!

'ಅನುಶ್ರೀ ಅಪ್ಪು ಸರ್ ಫ್ಯಾನ್ ಅಂತೀರಾ...ಕೀರ್ತಿ ಅಪ್ಪು ಸರ್ ಫ್ಯಾನ್ ಎನ್ನುತ್ತಾಳೆ ಆದರೆ ಚಿಕ್ಕ ವಯಸ್ಸಿಗೆ ಅಪ್ಪು ಸರ್ ಫ್ಯಾನ್ ಆಗಿರುವುದು ನಮ್ಮ ಚಿತಿನ್. ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿತ್ತು....ಅಳುತ್ತಿರುವ ಮಗುವಿಗೆ ಅಪ್ಪು ಸರ್ ಚಿತ್ರದ ಹಾಡುಗಳನ್ನು ಪ್ಲೇ ಮಾಡಿದ ತಕ್ಷಣ ನಗುತ್ತಿರುವುದು...ಅದು ಮಗು ಬೇರೆ ಯಾರು ಅಲ್ಲ ಅದು ಜಿತಿನ್' ಎಂದು ಮಾಸ್ಟರ್ ಆನಂತ್ ಮಮತಾ ಪುತ್ರ ಜಿತಿನ್ ಬಗ್ಗೆ ಹೇಳಿದ್ದಾರೆ. 

 

click me!