
ಪ್ಯಾನ್ ಇಂಡಿಯಾ ಖ್ಯಾತಿಯ ಕನ್ನಡದ ನಟ ಕಿಚ್ಚ ಸುದೀಪ್ (Kichcha Sudeep) ಅವರ ತಾಯಿ ಸರೋಜಾ ಅವರು ಇತ್ತೀಚೆಗಷ್ಟೇ ನಿಧನರಾಗಿರುವ ಸಂಗತಿ ಬಹುತೇಕರಿಗೆ ಗೊತ್ತಿದೆ. ಇಂದು ನಟ ಕಿಚ್ಚ ಸುದೀಪ್ ಅವರು, ತಮ್ಮ ಅಮ್ಮನ ಬಗ್ಗೆ ಸುದೀರ್ಘವಾದ ಭಾವುಕ ಪತ್ರವೊಂದನ್ನು ಬರೆದು ತಮ್ಮ ಸೋಷಿಯಲ್ ಮೀಡಿಯಾ 'ಎಕ್ಸ್ ( X)' ನಲ್ಲಿ ಶೇರ್ ಮಾಡಿದ್ದಾರೆ. ಅದಕ್ಕೆ, ಬಾಲಿವುಡ್ ನಟ ರಣಬೀರ್ ಕಪೂರ್ ಸೇಋರಿದಂತೆ ಹಲವು ಸಿನಿಮಾ ತಾರೆಯರು ಉತ್ತರ ಬರೆದಿದ್ದಾರೆ. ಆದರೆ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಇನ್ನೂ ಸಂತಾಪ ಸೂಚಿಸಿ ಉತ್ತರ ಬರೆದಿಲ್ಲ.
ಈ ಸಂಗತಿಯೀಗ ಬಹುತೇಕರಿಗೆ ಅಚ್ಚರಿ ಹುಟ್ಟಿಸಿದೆ. ಕಾರಣ, ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಕನ್ನಡ ನಟ ಕಿಚ್ಚ ಸುದೀಪ್ ಅವರಿಬ್ಬರೂ ತುಂಬಾ ಕ್ಲೋಸ್ ಫ್ರೆಂಡ್ಸ್..! ಸಲ್ಮಾನ್ ಖಾನ್ ನಟನೆಯ 'ಏಕ್ ಥಾ ಟೈಗರ್' ಚಿತ್ರದಲ್ಲಿ ಕನ್ನಡ ನಟ ಕಿಚ್ಚ ಸುದೀಪ್ ನಟಿಸಿದ್ದಾರೆ. ಅಷ್ಟೇ ಅಲ್ಲ, ಅವರಿಬ್ಬರೂ ತುಂಬಾ ಆತ್ಮೀಯ ಸ್ನೇಹಿತರು ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ಆದರೆ ಲಾರೆನ್ಸ್ ಬಿಷ್ಣೋಯಿಗೆ ಗೊತ್ತಿದೆಯೋ ಇಲ್ಲವೋ ಖಾತ್ರಿಯಿಲ್ಲ ಅಷ್ಟೇ..!
ಕಾಶೀನಾಥ್ ಮಗ ಅಭಿಮನ್ಯುಗೆ 'ಯಾವುದೋ ದಾರಿ' ತೋರಿಸಿದ ಸಂಸದ ಡಾ ಮಂಜುನಾಥ್!
ಸದ್ಯ ನಟ ಸಲ್ಮಾನ್ ಖಾನ್ ಅವರಿಗೆ ಬಿಷ್ಣೋಯಿ ಹಾಗೂ ಗ್ಯಾಂಗ್‌ನಿಂದ ಬೆದರಿಕೆ ಇದೆ. ಬಿಷ್ಣೋಯಿ ಗ್ಯಾಂಗ್ ಇತ್ತೀಚೆಗಷ್ಟೇ ಸಲ್ಲು ಅವರ ಆತ್ಮೀ ಸ್ನೇಹಿತ ಬಾಬಾ ಸಿದ್ಧಿಕ್ ಅವರ ಹತ್ಯೆಯನ್ನು ಸಹ ಮಾಡಿದೆ. ಸಲ್ಮಾನ್ ಖಾನ್ ಹತ್ಯೆಗೆ ಕೂಡ ಬಹಳಷ್ಟು ವರ್ಷಗಳಿಂದ ಸಂಚು ರೂಪಿಸುತ್ತಿದೆ. ಬಾಬಾ ಸಿದ್ಧಿಕಿ ಹತ್ಯೆ ಬಳಿಕ ನಟ ಸಲ್ಮಾನ್ ಖಾನ್ ಅವರಿಗೆ 'ವೈ ಪ್ಲಸ್' ಭದ್ರತೆ ಸಹ ನೀಡಲಾಗಿದೆ. ಈಗ ನಟ ಸಲ್ಮಾನ್ ಖಾನ್ ಅವರು ಜೀವಭಯದಿಂದ ತತ್ತರಿಸಿ ಹೋಗಿದ್ದಾರೆ, ಬುಲೆಟ್ ಪ್ರೂಫ್ ಹೊಸ ಕಾರನ್ನು ದಬೂನಿಂದ ತರಿಸಿಕೊಂಡು ಅದರಲ್ಲಿ ಓಡಾಡುತ್ತಿದ್ದಾರೆ.
ಸದ್ಯ ತಾವೇ ಜೀವಭಯದಿಂದ ನಡುಗುತ್ತಿರುವ ಕಾರಣಕ್ಕೋ ಎನೋ ಎಂಬಂತೆ, ನಟ ಸಲ್ಮಾನ್ ಖಾನ್ ಅವರು ಉಳಿದ ಹಲವರು ಸಂತಾಪ ಸೂಚಿಸಿ ಸುದೀಪ್ ಪತ್ರಕ್ಕೆ ಉತ್ತರಿಸಿದ್ದರೂ, ನಟ ಸಲ್ಲು ಮಾತ್ರ ಇನ್ನೂ ಆ ಸಾಹಸಕ್ಕೆ ಕೈ ಹಾಕಿಲ್ಲ. ಮುಂದೆ ಗೊತ್ತಿಲ್ಲ, ತಾಯಿಯನ್ನು ಕಳೆದುಕೊಂಡಿರುವ ಸುದೀಪ್ ಅವರ ಎಮೋಶನಲ್ ಪತ್ರಕ್ಕೆ ಸಲ್ಲೂ ಉತ್ತರ ಬಂದರೂ ಬರಬಹುದು!
ಕಾಂತಾರ 'ಫಾರೆಸ್ಟ್ ಗಾರ್ಡ್ ರವಿ'ಗೆ ವೆಲ್‌ಕಮ್ ಹೇಳ್ತೀರಾ? ಒಟಿಪಿ ಜೊತೆ ಕನ್ನಡಕ್ಕೆ ಬಂದ್ರು ಮತ್ತೊಬ್ಬರು ಶೆಟ್ರು!
ಕಿಚ್ಚ ಸುದೀಪ್ ಪೋಸ್ಟ್ ಮಾಡಿರುವ ಪತ್ರಕ್ಕೆ ಹಿಂದಿ ನಟ ರಣಬೀರ್ ಕಪೂರ್ 'ಮೈ ಡಿಯರ್ ಬ್ರದರ್ ಕಿಚ್ಚ ಸುದೀಪ್, ನಿನ್ನ ಪತ್ರ ನೋಡಿ ನನ್ನ ಹೃದಯ ಸಾವಿರ ಸಾರಿ ಒಡೆದಂತಾಯಿತು. ನಾನು ನಿನಗೆ ಸಕಲ್ ಪ್ರೀತಿಯನ್ನೂ ಧಾರೆ ಎರೆಯುತ್ತೇನೆ. ನಿನ್ನ ಅಮ್ಮನ ಆತ್ಮಕ್ಕೆ ಶಾಂತಿ ಸಿಗಲಿ.. ನಿನಗೆ ತುಂಬು ಹೃದಯದ ಹಗ್, ಈ ನೋವಿನ ಕ್ಷಣಗಳನ್ನು ಭರಿಸುವ ಶಕ್ತಿಯನ್ನು ಆ ದೇವರು ನನಗೆ ಕರುಣಿಸಲಿ..' ಎಂದು 'ಆನಿಮಲ್' ನಟ ರಣಬೀರ್ ಕಪೂರ್ ಬರೆದು ಪೋಸ್ಟ್ ಮಾಡಿದ್ದಾರೆ.
ಇನ್ನು, ಕಿಚ್ಚ ಸುದೀಪ್ ಅವರ ಮತ್ತೊಬ್ಬ ಆಪ್ತಮಿತ್ರರಾದ ರಿತೇಶ್ ದೇಖ್‌ಮುಖ್ ಸಹ ಸುದೀಪ್ ಲೆಟರ್ ನೋಡಿ ಉತ್ತರ ನೀಡಿದ್ದಾರೆ. ಬಹುತೇಕ ಎಲ್ಲರಿಗು ಗೊತ್ತಿರುವಂತೆ, ನಟ ರಿತೇಶ್ ದೇಶ್‌ಮುಖ್ ಹಾಗೂ ನಟಿ ಜೆನಿಲಿಯಾ ದಂಪತಿಗಳು ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರಿಗೆ ಅತ್ಯಂತ ಆತ್ಮೀಯರು. ಅವರ ನಡುವೆ ಆಗಾಗ ಭೇಟಿ, ಮಾತುಕತೆಗಳು ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಕಮ್ಯುನಿಕೇಶನ್‌ಗಳು ನಡೆಯುತ್ತಲೇ ಇರುತ್ತವೆ.
ಕಿಚ್ಚ ಸುದೀಪ್ ಭಾವುಕ ಪತ್ರಕ್ಕೆ ಬಂತು ಬಾಲಿವುಡ್ ನಟ ರಣಬೀರ್ ಕಪೂರ್ ಉತ್ತರ!
ಇನ್ನು ತೆಲುಗು ನಟ ನಾನಿ ಸೇರಿದಂತೆ, ಬಹಳಷ್ಟು ಪ್ಯಾನ್ ಇಂಡಿಯಾ ಖ್ಯಾತಿಯ ನಟನಟಿಯರು ಕನ್ನಡಿಗ ಕಿಚ್ಚ ಸುದೀಪ್ 'ಎಕ್ಸ್'ನಲ್ಲಿ ಅಗಲಿದ ತಮ್ಮ ಅಮ್ಮನ ಕುರಿತು ಬರೆದು ಪೋಸ್ಟ್ ಮಾಡಿರುವ ಭಾವುಕ ಪತ್ರಕ್ಕೆ ಉತ್ತರ ಕೊಟ್ಟಿದ್ದಾರೆ. ಸುದೀಪ್ ಅಮ್ಮನ ಆತ್ಮಕ್ಕೆ ಶಾಂತಿ ಕೋರಿರುವ ಅವರೆಲ್ಲರೂ, 'ನಟ ಸುದೀಪ್ ಅವರಿಗೆ ಅಮ್ಮನ ಅಗಲಿಕೆಯ ನೋವನ್ನು ಸಹಿಸಲು ಭಗವಂತ ಶಕ್ತಿ ನೀಡಲಿ' ಎಂದು ಪ್ರಾರ್ಥಿಸಿ ಪೋಸ್ಟ್ ಮಾಡಿದ್ದಾರೆ.
ಕನ್ನಡದ ಬಹಳಷ್ಟು ತಾರೆಗಳು, ಸುದೀಪ್ ನಿವಾಸಕ್ಕೆ ತೆರಳಿ ಸುದೀಪ್ ಅಮ್ಮ ಸರೋಜಾರ ಅಂತಿಮ ದರ್ಶನ್ ಪಡೆದಿದ್ದಾರೆ, ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ನಟ ಕಿಚ್ಚ ಸುದೀಪ್ ಅವರು ಸಿನಿಮಾ ಮಾತ್ರವಲ್ಲದೇ ಕ್ರಿಕೆಟ್ ಆಟಗಾಗರೂ ಆಗಿರುದರಿಂದ ಅವರಿಗೆ ಸಿನಿಮಾರಂಗ ಮೀರಿಯೂ ಬಹಳಷ್ಟು ಸ್ನೇಹಿತರು ಹಾಗೂ ಅಭಿಮಾನಿಗಳು ಇದ್ದಾರೆ. ತುಂಬಾ ವರ್ಷಗಳ ಹಿಂದೆಯೇ ನಟ ಕಿಚ್ಚ ಸುದೀಪ್ ಅವರು ಕನ್ನಡದ ಹೊರತಾಗಿಯೂ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳಲ್ಲೂ ನಟಿಸಿ ಅಲ್ಲಿಯೂ ಅಭಿಮಾನಗಳನ್ನು ಹೊಂದಿದ್ದಾರೆ.
ಹೊಸಬರ ಜೊತೆ ನಿವೇದಿತಾ ಗೌಡ ರೊಮ್ಯಾನ್ಸ್, ರಸಿಕರ ರಾಣಿಯಾಗಲು ಹೊರಟ 'ರೀಲ್ಸ್ ರಾಣಿ'!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.