ಕೇವಲ 21 ವರ್ಷಕ್ಕೇ ಅಸು ನೀಗಿರುವ ಮೊನಿಷಾ, ಮೂಲತಃ ಮಲಯಾಳಿ. ಅಂದರೆ ಕೇರಳ ರಾಜ್ಯದ ಈ ನಟಿ ಸಾಕಷ್ಟು ಪ್ರತಿಭಾವಂತೆ. ಡಾನ್ಸರ್ ಕೂಡ ಆಗಿದ್ದ ಮೊನಿಷಾ ಬಹಳಷ್ಟು ಡಾನ್ಸ್ ಶೋಗಳನ್ನು ನೀಡಿದ್ದಾರೆ. ಕನ್ನಡವೂ ಸೇರಿದಂತೆ ಸಾಕಷ್ಟು..
ಕನ್ನಡ ಸಿನಿಮಾದಲ್ಲೂ ನಟಿಸಿದ್ದ ಮಲಯಾಳಂ ನಟಿಯೊಬ್ಬರು ಕೇವಲ 21ನೇ ವಯಸ್ಸಿಗೆ ನಿಧನ ಹೊಂದಿದ್ದಾರೆ. ಇನ್ನೂ ಬಾಳಿ ಬದುಕಬೇಕಾಗಿದ್ದ, ಚಿಕ್ಕ ಹರೆಯದ ಈ ನಟಿ ಅತ್ಯುತ್ತಮ ಡಾನ್ಸರ್ ಕೂಡ ಆಗಿದ್ದರು. ಡಾ ರಾಜ್‌ಕುಮಾರ್ ಕುಟುಂಬದ ಕುಡಿ ರಾಘವೇಂದ್ರ ರಾಜ್‌ಕುಮಾರ್ ನಟನೆಯ 'ಚಿರಂಜೀವಿ ಸುಧಾಕರ್' ಚಿತ್ರದ ಮೂಲಕ ಕನ್ನಡಕ್ಕೂ ಕಾಲಿಟ್ಟಿದ್ದರು ಈ ಮಲಯಾಳಂ ನಟಿ. ಹಾಗಿದ್ದರೆ, ಅಷ್ಟು ಚಿಕ್ಕ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಆ ನಟಿ ಯಾರು ಗೊತ್ತಾ? ಅವರೇ ಮೊನಿಷಾ. ಅವರನ್ನು ಮಲಯಾಳಿಗರು ಮೊನಿಷಾ ಉನ್ನಿ ಎಂದು ಕರೆಯುತ್ತಾರೆ. ಆದರೆ, ಆಕೆ ಬೆಳೆದಿದ್ದು, ಓದಿದ್ದು ಎಲ್ಲವೂ ಬೆಂಗಳೂರಿನಲ್ಲಿ ಎಂಬುದು ಗಮನಿಸಬೇಕಾದ ಸಂಗತಿ.
ಹೌದು, ಕೇವಲ 21 ವರ್ಷಕ್ಕೇ ಅಸು ನೀಗಿರುವ ಮೊನಿಷಾ (Monisha Unni), ಮೂಲತಃ ಮಲಯಾಳಿ. ಅಂದರೆ ಕೇರಳ ರಾಜ್ಯದ ಈ ನಟಿ ಸಾಕಷ್ಟು ಪ್ರತಿಭಾವಂತೆ. ಡಾನ್ಸರ್ ಕೂಡ ಆಗಿದ್ದ ಮೊನಿಷಾ ಬಹಳಷ್ಟು ಡಾನ್ಸ್ ಶೋಗಳನ್ನು ನೀಡಿದ್ದಾರೆ. ಕನ್ನಡವೂ ಸೇರಿದಂತೆ ಸಾಕಷ್ಟು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು, ತೆಲುಗು ಸಿನಿಮಾರಂಗಗಳಲ್ಲೂ ಮಿಂಚಿದ್ದರು ಮೊನಿಷಾ. ಮಲಯಾಳಂ ಮೊಟ್ಟಮೊದಲ ಸಿನಿಮಾ 'ಪ್ರಥಮಂ' ಅಮೋಘ ಅಭಿನಯಕ್ಕಾಗಿ ಬೆಸ್ಟ್ ಆಕ್ಟರ್ ನ್ಯಾಷನಲ್ ಅವಾರ್ಡ್ ಕೂಡ ಪಡೆದಿದ್ದಾರೆ ನಟಿ ಮೊನಿಷಾ. ಆಗ ಅವರಿಗೆ ಕೇವಲ 16 ವರ್ಷ.
ಅಪಘಾತದಲ್ಲಿ ಸಾವಿಗೀಡಾದ ಕನ್ನಡದ ಕಿರುತೆರೆ ಜನಪ್ರಿಯ ನಟಿ ಪವಿತ್ರ ಜಯರಾಂ!
ತೆಲುಗು, ತಮಿಳು, ಮಲಯಾಳಂ ಸಿನಿಮಾ ಅವಕಾಶಗಳಲ್ಲಿ ಮಿಂಚುತ್ತಿದ್ದ ನಟಿ ಕನ್ನಡದ 'ಚಿರಂಜೀವಿ ಸುಧಾಕರ್' ಚಿತ್ರಕ್ಕೆ ನಟ ರಾಘವೇಂದ್ರ ರಾಜ್‌ಕುಮಾರ್ ಜೋಡಿಯಾಗಿ ತೆರೆ ಹಂಚಿಕೊಂಡಿದ್ದರು. ಮುಗ್ಧ ಮುಖ, ಆಕರ್ಷಕ ಕಣ್ಣುಗಳ ಈ ಒಡತಿಯ ಅಮೋಘ ಅಭಿನಯ ನೋಡಿ ಕನ್ನಡ ಸಿನಿಪ್ರೇಮಿಗಳು ಕೂಡ ಈ ಮಲಯಾಳಿ ಕುಟ್ಟಿಗೆ ಫಿದಾ ಆಗಿಬಿಟ್ಟಿದ್ದರು. ಆದರೆ, ಅವರು ಮತ್ತೊಂದು ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಅವರ ಪಾಲಿಗೆ ದುರಂತ ಸಾವು ಬಂದೆರಗಿತ್ತು. ಕೇವಲ 22 ವರ್ಷಕ್ಕೇ ಮೊನಿಷಾ ಕಾಲನ ಕರೆಗೆ ಓ ಗೊಟ್ಟು ಹೊರಟುಹೋದರು.
ರಕ್ಷಿತಾ ಪ್ರೇಮ್: ನನ್ನಮ್ಮ ರೋಡ್ ಸೈಡ್ ಮಲಗಿದ್ರು, ಬಳೆ ಮಾರಿ ಮುಂಬೈಗೆ ಕರ್ಕೊಂಡು ಹೋಗಿದ್ರು
1992ರಲ್ಲಿ ಈ ನಟಿ ಕಾರು ಅಪಘಾತದಲ್ಲಿ ತೀರಿಕೊಂಡರು. ದೊಡ್ಡ ವೇದಿಕೆಯಲ್ಲಿ ಡಾನ್ಸ್ ಶೋ ನೀಡಬೇಕಾಗಿದ್ದ ನಟಿ ಮೊನಿಷಾ ಅದಕ್ಕೂ ಎರಡು ವಾರಗಳ ಮೊದಲೇ ಅಪಘಾತದಲ್ಲಿ ಅಸುನೀಗಿದರು. ಇನ್ನೇನು ಸ್ಟಾರ್ ನಟಿಯಾಗಿ ಬೆಳೆಯುತ್ತಿದ್ದಾರೆ ಎನ್ನವ ಸಮಯದಲ್ಲೇ ಅವರ ಪಾಲಿಗೆ ಅನಿರೀಕ್ಷಿತ ಸಾವು ಬಂದು ಬಾಗಿಲು ತಟ್ಟಿಬಿಟ್ಟಿತ್ತು. ನಟಿ ಮೊನಿಷಾ ಕೇರಳದ ಗುರುವಾಯೂರಿನಲ್ಲಿ ಕಾರು ಅಪಘಾತದಲ್ಲಿ ಸ್ಥಳದಲ್ಲೆ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದರು. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ತಮ್ಮ 22 ವರ್ಷಕ್ಕೂ ಮೊದಲೇ ನಟಿಸಿದ್ದ ಮೊನಿಷಾರನ್ನು ಯಾರೂ ಮರೆಯಲು ಸಾಧ್ಯವಿಲ್ಲ.
ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಮಿತ್ರ, ಕನ್ನಡಿಗರ ಮನಸಿನ ಹತ್ರ 'ಪಂಚರಂಗಿ' ಶಿನು ಜಾರ್ಜ್!