ನಮ್ಮ ಹತ್ರ ಫುಟ್ಬಾಲ್ ಇರ್ಬಹುದು, ಗೋಲ್ ಹೊಡ್ಯೋಕೆ ನಾವು ಹೀಗ್ ಹೋಗ್ತಾ ಇರ್ತೀವಿ. ಅದನ್ನು ತಡ್ಯೋಕೆ ತುಂಬಾ ಜನಾನೂ ಬರ್ತಾ ಇರ್ತಾರೆ. ಗೋಲ್ ಪೋಸ್ಟ್ ಹತ್ರನೂ ತಡ್ಯೋರೂ ಇರ್ತಾರೆ. ಅದನ್ನೆಲ್ಲ ದಾಟ್ಕೊಂಡು ಗೋಲ್ ಹೋಡದ್ರೆ..
ಕನ್ನಡದ ರಾಕಿಂಗ್ ಸ್ಟಾರ್ ಯಶ್ (Yash)ಸಂದರ್ಶನವೊಂದರಲ್ಲಿ ಜೀವನದ ಪಾಠವನ್ನು ತುಂಬಾ ಮಾರ್ಮಿಕವಾಗಿ ಹೇಳಿದ್ದಾರೆ. ಯಶ್ ಈಗ ಬಹಳಷ್ಟು ಸಾಧಿಸಿರುವ, ಯಂಗ್ ಏಜ್‌ನಲ್ಲೇ ಬಹಳಷ್ಟು ಪ್ರಸಿದ್ಧಿ ಗಳಿಸಿರುವ ನಟ ಹಾಗೂ ನಿರ್ಮಾಪಕರು. ಹೀಗಾಗಿ ಸಹಜ ಎನ್ನುವಂತೆ, ಯಶ್ ಮಾತುಗಳಲ್ಲಿ ಜನರಿಗೆ ಅರ್ಥ ಗೋಚರಿಸುತ್ತದೆ, ಅವರ ಮಾತನ್ನು ಜನರು ಆಲಿಸುತ್ತಾರೆ, ಅನುಸರಿಸುತ್ತಾರೆ. ಹಾಗಿದ್ರೆ, ನಟ ಯಶ್ ಇಲ್ಲಿ ಏನು ಹೇಳಿದ್ದಾರೆ ಗೊತ್ತಾ?
'ಎಲ್ರೂ ನಮ್ ಜೀವನಾನ ನಾವೇ ಬರೆದುಕೊಳ್ಳೋದು. ಇಂದು ನೀವು ಏನು ಆಗಿದೀರೋ ಅದಕ್ಕೆ ಹಿಂದೆ ನೀವು ಮಾಡಿರೋದೇ ಕಾರಣ. ಎವ್ರಿಥಿಂಗ್, ಇವತ್ತು ಏನಿದ್ಯೋ ಅದು ಎಲ್ಲಾ ನಿನ್ನೆದು. ಇವತ್ತು ಏನ್ ಮಾಡ್ತೀವೋ, ನಾಳೆ ಹಂಗೆ ಇರುತ್ತೆ. ಸೋ, ಇವತ್ತು ತುಂಬಾ ಇಂಪಾರ್ಟೆಂಟು. ಅದೇ ರೀತಿ, ಮುಂದೆ ಎಲ್ಲಿ ಹೋಗ್ಬೇಕು ಅನ್ನೋ ವಿಷನ್ ಇರೋವ್ರಿಗೆ ಇವತ್ತು ಎಲ್ಲಿ ಹೋಗ್ಬೇಕು ಅನ್ನೋ ಕ್ಲಾರಿಟಿ ಸಿಕ್ಬಿಡುತ್ತೆ.
ರಕ್ಷಿತಾ ಪ್ರೇಮ್: ನನ್ನಮ್ಮ ರೋಡ್ ಸೈಡ್ ಮಲಗಿದ್ರು, ಬಳೆ ಮಾರಿ ಮುಂಬೈಗೆ ಕರ್ಕೊಂಡು ಹೋಗಿದ್ರು
ಇವತ್ತು ಹೇಗಿರ್ಬೇಕು, ನಾಳೆ ಹೇಗಿರ್ಬೇಕು, ಅದು ಎಲ್ಲಿಗೆ ಅಂತ ಎಲ್ಲಾನೂ ಗೊತ್ತಾಗುತ್ತೆ. ಆದ್ರೆ ಹಾಗೇ ಮಾಡ್ಕೊಂಡು ಹೋದಾಗ್ಲೂ ಎಲ್ಲಾ ನಾವ್ ಅಂದ್ಕೊಂಡಂಗೆ ಆಗುತ್ತೆ ಅಂತೇನಿಲ್ಲ. ಯಾಕಂದ್ರೆ, ಅನಿರೀಕ್ಷಿತ ಟ್ವಿಸ್ಟ್‌ಗಳು, ಟರ್ನ್ಗಳು ಎಲ್ಲಾ ಇರ್ತಾವೆ. ಯಾಕಂದ್ರೆ, ನಾವು ಒಬ್ಬರೇ ಅಲ್ವಲ್ಲಾ, ಇಲ್ಲಿ ಆಟ ಆಡೋರು.. ಎದ್ರುಗಡೆನೂ ಇರ್ತಾರೆ.
ವಿಷ್ಣುವರ್ಧನ್ ಶಾಲೆ ತಪ್ಪಿಸಿ ಈ ಕೆಲಸ ಮಾಡಿ ಪೆಟ್ಟು ತಿಂದಿದ್ರಂತೆ!
ನಮ್ಮ ಹತ್ರ ಫುಟ್ಬಾಲ್ ಇರ್ಬಹುದು, ಗೋಲ್ ಹೊಡ್ಯೋಕೆ ನಾವು ಹೀಗ್ ಹೋಗ್ತಾ ಇರ್ತೀವಿ. ಅದನ್ನು ತಡ್ಯೋಕೆ ತುಂಬಾ ಜನಾನೂ ಬರ್ತಾ ಇರ್ತಾರೆ. ಗೋಲ್ ಪೋಸ್ಟ್ ಹತ್ರನೂ ತಡ್ಯೋರೂ ಇರ್ತಾರೆ. ಅದನ್ನೆಲ್ಲ ದಾಟ್ಕೊಂಡು ಗೋಲ್ ಹೋಡದ್ರೆ, ಆಗ ಜನ ಶಿಳ್ಳೆ-ಚಪ್ಪಾಳೆ ಹೊಡಿತಾರೆ, ಆಗ ಒಳ್ಳೇ ಪ್ಲೇಯರ್, ಎಂಥಾ ಪ್ಲೇಯರ್ ಅಂತಾರೆ. ಒಮ್ಮೆ ಎಲ್ಲೋ ಮಿಸ್ ಆಗಿ ಯಾರೋ ಬಾಲ್ ಎತ್ಕೊಂಡು ಹೋಗ್ಬಿಟ್ರೆ, ಅದನ್ನ..' ಅಂತ ಹೇಳುವಷ್ಟರಲ್ಲಿ ವೀಡಿಯೋ ಕಟ್ ಆಗಿದೆ. ಆದರೆ, ಯಶ್ ಏನು ಹೇಳಿದ್ದಾರೆ, ಮಾತಿನ ಎಂಡ್‌ನಲ್ಲಿರುವ ಮೆಸೇಜ್ ಏನು ಎಂಬುದು ಎಲ್ಲರಿಗೂ ಅರ್ಥವಾಗುವಂತಿದೆ.
ದೊಡ್ಡಮಾಮನ ಮನೇಲಿ ರಜನಿ ಸರ್ ಮೀಟ್ ಆಗಿದ್ದೆ, ಮುರಳಿ ಸಿಕ್ಕಾಪಟ್ಟೆ ಬೈದ; ವಿಜಯ್ ರಾಘವೇಂದ್ರ
ಅಂದಹಾಗೆ, ನಟ ಯಶ್ ಸದ್ಯ ಎರಡು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು, ಬಾಲಿವುಡ್ ನಿರ್ಮಾಣದ ರಾಮಾಯಣ (Ramayana).ಇನ್ನೊಂದು ಗೀತೂ ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಎಂಬ ಪ್ಯಾನ್ ಇಂಡಿಯಾ ಸಿನಿಮಾ. ಹಿಂದಿಯ ರಾಮಾಯಣಕ್ಕೆ ಯಶ್ ನಿರ್ಮಾಪಕರು ಕೂಡ ಆಗಿದ್ದಾರೆ. ಇಷ್ಟು ದಿನ ಸ್ಟಾರ್ ನಟರಾಗಿದ್ದ ಯಶ್ ಅವರನ್ನು ಈಗ ನಿರ್ಮಾಪಕರು ಎಂದು ಕೂಡ ಹೇಳಬೇಕು. ಒಟ್ಟಿನಲ್ಲಿ, ಕೆಜಿಎಫ್ ಸಿನಿಮಾ ಬಳಿಕ ಕನ್ನಡದ ನಟ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಖ್ಯಾತರಾಗಿದ್ದಾರೆ.
ಮತ್ತೆ ಬರಲಿರುವ 'ಗಾಂಧಿ ನಗರ'ಕ್ಕೂ ಡಾ ರಾಜ್‌ಕುಮಾರ್ ಸಿನಿಮಾಕ್ಕೂ ಏನಾದ್ರೂ ಲಿಂಕ್ ಇದ್ಯಾ?