ಪ್ರತಿಯೊಂದು ಹೆಣ್ಣೂ ಕೂಡ ಸ್ವಾವಲಂಬಿಯಾಗಿ ಬದುಕಬೇಕು. ಏಕೆಂದರೆ, ಜೀವನದಲ್ಲಿ ಯಾವ ಟೈಂಗೆ ಯಾವ ಪರಿಸ್ಥಿತಿ ಬರುತ್ತೆ ಅಂತ ಹೇಳೋಕೆ ಆಗಲ್ಲ. ಹಾಗಾಗಿ ನಾನು ಚಿಕ್ಕವಳು..
ನಟಿ ರಕ್ಷಿತಾ ಪ್ರೇಮ್ ಸಂದರ್ಶನವೊಂದರಲ್ಲಿ ಮಾತನಾಡುತ್ತ ಮಹಿಳೆ ಆರ್ಥಿಕವಾಗಿ ಸದೃಢವಾಗಿರುವುದು ತುಂಬಾ ಮುಖ್ಯ ಎಂದಿದ್ದಾರೆ. ಅದಕ್ಕೆ ಅವರು ತಮ್ಮದೇ ಜೀವನದಲ್ಲಿ ನಡೆದ ಘಟನೆಯೊಂದನ್ನು ಉದಾಹರಣೆಯಾಗಿ ನೀಡಿದ್ದಾರೆ. ರಕ್ಷಿತಾ ಅಮ್ಮ ಹೇಗೆ ತಮ್ಮ ಕಷ್ಟದ ದಿನಗಳಲ್ಲಿ ಮಗಳನ್ನು ಬೆಳೆಸಿದ್ದಾರೆ, ಓದಿಸಿದ್ದಾರೆ ಎಂಬುದನ್ನು ತಿಳಿದರೆ ಕಣ್ಣಂಚಲ್ಲಿ ನೀರು ಬರುತ್ತದೆ. ಈ ಬಗ್ಗೆ ನಟಿ ರಕ್ಷಿತಾ ಮಾತನಾಡಿ ಹೇಳಿಕೊಂಡಿದ್ದಾರೆ. ನಟಿ ರಕ್ಷಿತಾ ತಾಯಿ ಕೂಡ ಸಿನಿಮಾ ನಟಿಯಾಗಿದ್ದವರು ಎಂಬುದು ಗಮನಿಸಬೇಕಾದ ಸಂಗತಿ.
ಹಾಗಿದ್ದರೆ ನಟಿ ರಕ್ಷಿತಾ ಪ್ರೇಮ್ ಹೇಳಿದ್ದೇನು? 'ನನ್ನ ಬಾಲ್ಯದ ದಿನಗಳಲ್ಲಿ, ನಾನು ಮತ್ತು ನನ್ನಮ್ಮ ಒಮ್ಮೆ ಹೋಗುತ್ತಿರುವಾಗ ನಾನು ಮಲಗಿದ್ದೆ. ಅಮ್ಮ ಅಂದು ರೋಡ್ ಸೈಡ್ ಇಡೀ ರಾತ್ರಿ ಕಳೆದಿದ್ದರು. ಅವರ ಬಳೆಗಳನ್ನು ಮಾರಿಬಿಟ್ಟು ನನ್ನಮ್ಮ ನನ್ನನ್ನು ಮುಂಬೈಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗಿ ಬಿಟ್ಟರು. ನಾನು ಮೊದಲಿನ ಸ್ವಲ್ಪ ವರುಷಗಳ ಕಾಲ ಮುಂಬೈನಲ್ಲೇ ವಿದ್ಯಾಭ್ಯಾಸ ಮಾಡಿದ್ದು. ಆವಾಗಿಂದ ನನಗೆ ದುಡ್ಡಿನ ಬೆಲೆ ಗೊತ್ತಾಗಿದೆ, ಜೊತೆಗೆ ಒಂದು ಹೆಣ್ಣು ಸ್ವತಃ ಹಣ ಗಳಿಕೆ ಮಾಡುವುದು ಮುಖ್ಯವಾಗಿದೆ.
ನನ್ನ ಪ್ರಕಾರ, ಪ್ರತಿಯೊಂದು ಹೆಣ್ಣೂ ಕೂಡ ಸ್ವಾವಲಂಬಿಯಾಗಿ ಬದುಕಬೇಕು. ಏಕೆಂದರೆ, ಜೀವನದಲ್ಲಿ ಯಾವ ಟೈಂಗೆ ಯಾವ ಪರಿಸ್ಥಿತಿ ಬರುತ್ತೆ ಅಂತ ಹೇಳೋಕೆ ಆಗಲ್ಲ. ಹಾಗಾಗಿ ನಾನು ಚಿಕ್ಕವಳು ಇದ್ದಾಗಿನಿಂದ ಹೀಗೇ ಯೋಚಿಸ್ತಾ ಇದೀನಿ. ಹಣ ಗಳಿಕೆ ಮಾಡದ ಹೆಣ್ಣು, ಗಂಡನ ದುಡಿಮೆ ನಂಬಿ ಬದುಕುವ ಹೆಣ್ಣಿನದು ಸರಿಯಾದ ಜೀವನವಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ, ಪ್ರತಿಯೊಬ್ಬರೂ, ಅದರಲ್ಲೂ ಮಹಿಳೆ ಸ್ವಾವಲಂಬಿಯಾಗಿ ಬದುಕುವುದು ಒಳ್ಳೆಯದು ಎಂದಷ್ಟೇ ಹೇಳುತ್ತೇನೆ' ಎಂದಿದ್ದಾರೆ ನಟಿ ರಕ್ಷಿತಾ ಪ್ರೇಮ್.
ವಿಷ್ಣುವರ್ಧನ್ ಶಾಲೆ ತಪ್ಪಿಸಿ ಈ ಕೆಲಸ ಮಾಡಿ ಪೆಟ್ಟು ತಿಂದಿದ್ರಂತೆ!
ಅಂದಹಾಗೆ, ನಟಿ ರಕ್ಷಿತಾ ಪ್ರೇಮ್ ಅವರು ಕನ್ನಡದ 'ಅಪ್ಪು' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಚಿತ್ರರಂಗಕ್ಕೆ ಬಂದವರು. ಬಳಿಕ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿ ಪಟ್ಟಕ್ಕೇರಿದ್ದರು, ತಮಿಳು ಹಾಗು ತೆಲುಗು ಸಿನಿಮಾಗಳಲ್ಲೂ ನಟಿಸಿ ಜನಪ್ರಿಯತೆ ಗಳಿಸಿರುವ ರಕ್ಷಿತಾ ಕನ್ನಡದ ನಿರ್ದೇಶಕರಾದ ಪ್ರೇಮ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ರಕ್ಷಿತಾ-ಪ್ರೇಮ್ ಜೋಡಿಗೆ ಒಬ್ಬ ಮಗನಿದ್ದಾನೆ. ಸದ್ಯ ರಕ್ಷಿತಾ ಪ್ರೇಮ್ ಅವರು ಕನ್ನಡದ ರಿಯಾಲಿಟಿ ಶೋ ಜಡ್ಜ್ ಆಗಿ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.
ದೊಡ್ಡಮಾಮನ ಮನೇಲಿ ರಜನಿ ಸರ್ ಮೀಟ್ ಆಗಿದ್ದೆ, ಮುರಳಿ ಸಿಕ್ಕಾಪಟ್ಟೆ ಬೈದ; ವಿಜಯ್ ರಾಘವೇಂದ್ರ