James ಸಿನಿಮಾಗೆ ನಮ್ಮ ಮನಸ್ಸಲ್ಲಿ‌ ವಿಶೇಷ ಸ್ಥಾನ: ಮಲಯಾಳಂ ನಟ ಮೋಹನ್ ಲಾಲ್

By Girish Goudar  |  First Published Mar 17, 2022, 7:03 AM IST

*  ರಾಕ್‌ಲೈನ್‌ ಮಾಲ್‌ನಲ್ಲಿ ಬೆಳಿಗ್ಗೆ 4 ಗಂಟೆಗೆ ಜೇಮ್ಸ್ ಚಿತ್ರ ಪ್ರದರ್ಶನ 
*  ರಾಕ್‌ಲೈನ್‌ ಮಾಲ್ ಸಿಬ್ಬಂದಿ ವಿರುದ್ಧ ಫ್ಯಾನ್ಸ್ ಗರಂ
*  ಅಪ್ಪು ಅಭಿಮಾನಿಗಳಲ್ಲಿ ಸಂತಸ ಹೆಚ್ಚಿಸುವಂತೆ ಮಾಡಿದ ಜೇಮ್ಸ್‌ ಸಿನಿಮಾ 
 


ಬೆಂಗಳೂರು(ಮಾ.17):  ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅಭಿನಯದ ಜೇಮ್ಸ್‌(James) ಚಿತ್ರ ಇಂದು(ಗುರುವಾರ) ರಾಜ್ಯಾದ್ಯಂತ(Karnataka) ಬಿಡುಗಡೆಯಾಗಿದೆ. ಅಪ್ಪು ಹುಟ್ಟಹಬ್ಬದ ದಿನದಂದೇ ಜೇಮ್ಸ್‌ ಚಿತ್ರ ರಿಲೀಸ್‌ ಆಗಿದೆ. ಇನ್ನು ನಗರದ ರಾಕ್‌ಲೈನ್‌ ಮಾಲ್‌ನಲ್ಲಿ ಬೆಳಿಗ್ಗೆ 4 ಗಂಟೆಗೆ ಜೇಮ್ಸ್ ಚಿತ್ರ ಪ್ರದರ್ಶನ ಕಂಡಿದೆ. ರಾತ್ರಿ 1:30 ಕ್ಕೆ ಟಿಕೆಟ್ ಬುಕ್ ಮಾಡಲಾಗಿತ್ತು. ಶೋ ಕ್ಯಾನ್ಸಲ್ ಮಾಡಿದ್ದರಿಂದ ಮಾಲ್ ಸಿಬ್ಬಂದಿ ವಿರುದ್ಧ ಫ್ಯಾನ್ಸ್ ಗರಂ ಆಗಿದ್ದರು. ಸದ್ಯ ಬೆಳಿಗ್ಗೆ ನಾಲ್ಕು ಗಂಟೆಗೆ ಮೊದಲ ಶೋ ಆರಂಭವಾಗಿದ್ದು ಮಾತ್ರ ಅಪ್ಪು ಅಭಿಮಾನಿಗಳಲ್ಲಿ ಸಂತಸ ಹೆಚ್ಚಿಸುವಂತೆ ಮಾಡಿದೆ.  

ಈ ಸ್ಥಿತಿಯನ್ನ ಊಹೆ ಮಾಡಿಕೊಳ್ಳೋದು ಕಷ್ಟ

Latest Videos

undefined

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ ಜೇಮ್ಸ್ ಚಿತ್ರದ ನಿರ್ದೇಶಕ ಚೇತನ್(Chetan), ಈ ಸ್ಥಿತಿಯನ್ನ ಊಹೆ ಮಾಡಿಕೊಳ್ಳೋದು ಕಷ್ಟವಾಗಿದೆ. ನನ್ನ ಮೊದಲ ಸಿನಿಮಾಗೆ ಕ್ಲಾಪ್ ಮಾಡಿದ್ದೇ ಅಪ್ಪು ಸರ್. ಅಪ್ಪು ಸರ್ ಬರ್ತಡೇ ಗೆ ಏನಾದ್ರು ಒಂದು ಗಿಫ್ಟ್ ಇಡುತ್ತಿದ್ವಿ. ಅಪ್ಪು ಸರ್ ಬರ್ತಡೇ(Birthday) ನೋಡುವಾಗ ಇರ್ತಿದ್ರು. ಆದ್ರೆ ಈ ಸಾರಿ ಅದು ಆಗುತ್ತಿಲ್ಲ.  ಅಪ್ಪು ಸರ್ ವ್ಯಕ್ತಿತ್ವವನ್ನ ತುಂಬಾ ಮಿಸ್ ಮಾಡಿಕೊಳ್ಳತೇವೆ. ಪ್ರತಿ ದೀಪಾವಳಿಗೆ ಸರ್ ಒಂದು ಸರ್‌ಪ್ರೈಸ್ ಮತ್ತೆ ಗಿಫ್ಟ್ ಕಳಿಸ್ತಿದ್ರು. ಅಪ್ಪು ಸರ್ ಅನ್ನ ಮೈಸೂರಲ್ಲಿ ಮೊದಲು ನೋಡಿದ್ದು ಆಮೇಲೆ ಪೃತ್ವಿ ಸಿನಿಮಾ ಶೂಟಿಂಗ್ ಟೈಂ ನಲ್ಲಿ ನೋಡಿದ್ದೆ, ನಾನು ಅಪ್ಪು ಸರ್‌ಗೆ ನಿರ್ದೇಶನ ಮಾಡ್ತೀನಿ ಅಂತ ಅಂದುಕೊಂಡಿರಲಿಲ್ಲ. ಅವರ ಆಸೆಯಂತೆ ಸಿನಿಮಾ ರಿಲೀಸ್ ಮಾಡಿದ್ದೇವೆ. ದೇವರನ್ನ ಗರ್ಭಗುಡಿಯಲ್ಲಿ ತಂದು ಕೂರಿಸಿದ್ದೇವೆ. ಅಪ್ಪು ಸರ್ ಜೊತೆ ಕೆಲಸ ಮಾಡಿದ್ದು ನನ್ನ ದೊಡ್ಡ ಅದೃಷ್ಡ. ಲಕ್ಷ ನೆನಪುಗಳು ಇವೆ. ಅಪ್ಪು ಸರ್ ಜೇಮ್ಸ್ ಸಿನಿಮಾದ ವೀಡಿಯೋಗಳನ್ನ ನೋಡಿ ನನ್ನ ಕಣ್ಣೀರು ಬತ್ತಿ ಹೋಗಿದೆ. ನನ್ನ ಮದುವೆಗೆ ಅಪ್ಪು ಸರ್ ತನ್ನ ಪತ್ನಿ ಅಶ್ವಿನಿ ಮೇಡಂ ಜೊತೆ ಬಂದಿದ್ದರು. ಆ‌ ಕ್ಷಣವನ್ನ ಎಂದೂ ಮರೆಯೋಕೆ ಆಗಲ್ಲ. ಪಿಆರ್‌ಕೆ ಸ್ಟುಡಿಯೋದಲ್ಲಿ ಕೆಲಸ ಮಾಡುವಾಗ ಶಕೆ ಆಗ್ತಿತ್ತು. ಮಾರನೇ ದಿನ ಬಂದು ನೋಡಿದ್ರೆ ಎಸಿ ಫಿಕ್ಸ್ ಮಾಡಿಸಿದ್ರು. ಅಪ್ಪು ಸರ್ ಇಲ್ಲ ಅನ್ನೋ ನೋವು ಎಂದು ಮರೆಯಲು ಆಗಲ್ಲ.  ನೋವಿಗೆ ಡೆಡ್‌ಎಂಡ್ ಅಂದ್ರೆ ಅಪ್ಪು ಸರ್ ಇಲ್ಲ ಅನ್ನೋ ನೋವು. ಎಲ್ಲಾ ವಿಚಾರಗಳು ಆಘಾತ ಕೊಡುತ್ತವೆ. ಅಪ್ಪು ಸರ್ ಕೊನೆಯ ಸಿನಿಮಾ ನನ್ನದಾಯ್ತಲ್ಲ ಅನ್ನೋ ನೋವು ನಾನು ಸಾಯೋವರೆಗೂ ಇರುತ್ತದೆ. ದಿನ ಬೆಳಗ್ಗೆ ಅಪ್ಪು ಸರ್ ಜೊತೆ ಉಸಿರಾಡುತ್ತಿದ್ದೇವೆ. ಅವರ ಫೋಟೋವನ್ನ ನಾನು ಮನೆಯಲ್ಲಿ ಇಟ್ಡುಕೊಂಡಿದ್ದೇನೆ ಅಂತ ಪುನೀತ್‌ ರಾಜ್‌ಕುಮಾರ್‌ ಅವರ ಜತೆಗಿನಿ ನೆನಪುಗಳನ್ನ ಮೆಲುಕು ಹಾಕಿದ್ದಾರೆ ನಿರ್ದೇಶಕ ಚೇತನ್‌. 

Puneeth Rajkumar: ಸಾಬೂನಿನಲ್ಲಿ ಅರಳಿದ ಅಪ್ಪು... ಅದ್ಭುತ ಕಲಾಕೃತಿ

ರಾಕ್‌ಲೈನ್ ಮಾಲ್ ವಿರುದ್ಧ ಅಪ್ಪು ಫ್ಯಾನ್ಸ್ ಗರಂ

ಜೇಮ್ಸ್ ಸಿನಿಮಾ ಶೋ ಕ್ಯಾನ್ಸಲ್ ಆದ ಹಿನ್ನಲೆಯಲ್ಲಿ ರಾಕ್‌ಲೈನ್ ಮಾಲ್(Rockline Mall) ವಿರುದ್ಧ ಅಭಿಮಾನಿಗಳು)Fans) ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ. ಮಾಡಿದ್ದ ರಾಕ್‌ಲೈನ್‌ ಮಾಲ್ ಸಿಬ್ಬಂದಿ ರಾತ್ರಿ 1:30 ರ ಶೋ ಗೆ ಅನ್ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡಿದ್ದರು. ಸಿನಿಮಾ ವೀಕ್ಷಣೆಯ ಖುಷಿಯಿಂದ ಮಾಲ್ ಬಳಿ ಬಂದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಶೋ ಕ್ಯಾನ್ಸಲ್ ಆಗಿದೆ ವಾಪಸ್ ಹೋಗಿ ಅಂತ ಮಾಲ್ ಸಿಬ್ಬಂದಿ ಹೇಳಿದ್ದರು. ಹೀಗಾಗಿ ರಾಕ್‌ಲೈನ್ ಮಾಲ್ ವಿರುದ್ಧ ಅಪ್ಪು ಫ್ಯಾನ್ಸ್ ಗರಂ ಆಗಿದ್ದರು. ನಗರದ ಬೇರೆ ಭಾಗಗಳಿಂದ ಅಪ್ಪು ಅಭಿಮಾನಿಗಳು ಬಂದಿದ್ದರು. ರಾಕ್‌ಲೈನ್‌ ಮಾಲ್ ಬಳಿ ಬಂದಿದ್ದ ಅಭಿಮಾನಿಗಳನ್ನ ಪೊಲೀಸರು ಲಾಠಿ ಬೀಸಿ ಚದುರಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬಾಗಲುಗುಂಟೆ ಪೊಲೀಸರಿಂದ(Police) ರಾಕ್‌ಲೈನ್‌ ಮಾಲ್‌ಗೆ ಬಂದೋಬಸ್ತ್ ಕಲ್ಪಿಸಲಾಗಿದೆ. 

'ಜೇಮ್ಸ್' ಸಂಭ್ರಮಕ್ಕೆ ಬ್ರೇಕ್; ಪುನೀತ್ ಅಭಿಮಾನಿಗಳಿಗೆ ಭಾರಿ ನಿರಾಸೆ

ಅಪ್ಪು ಸಮಾಧಿಗೆ ಪುಷ್ಪಾಲಂಕಾರ

ಇಂದು ಅಪ್ಪು ಹುಟ್ಟಿದ ದಿನ ಹಿನ್ನೆಲೆಯಲ್ಲಿಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿಗೆ ವಿವಿಧ ಹೂಗಳಿಂದ ಪುಷ್ಪಾಲಂಕಾರ ಮಾಡಲಾಗಿದೆ. ಕುಟುಂಬಸ್ಥರ ದರ್ಶನದ ನಂತರ ಅಭಿಮಾನಿಗಳಿಗೆ ಅನುಮತಿ ನೀಡಲಾಗುತ್ತದೆ. ಬೆಳಿಗ್ಗೆ 9 ಗಂಟೆಯ ನಂತರ ಅಭಿಮಾನಿಗಳಿಗೆ ಅಪ್ಪು ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕಂಠೀರವ ಸ್ಟುಡಿಯೋ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ನಾಲ್ಕು ಕೆ.ಎಸ್.ಆರ್.ಪಿ ತುಕಡಿ ಜೊತೆ 200 ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 

ಜೇಮ್ಸ್ ಸಿನಿಮಾಗೆ ನಮ್ಮ ಮನಸ್ಸಲ್ಲಿ‌ ವಿಶೇಷ ಜಾಗ 

 

ಅಪ್ಪು ನಟನೆಯ ಜೇಮ್ಸ್ ಚಿತ್ರ ರಿಲೀಸ್ ಹಿನ್ನೆಲೆಯಲ್ಲಿ ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್(Mohanlal) ಅವರು,  ಅಪ್ಪು ನೆನೆದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಭಾವನಾತ್ಮಕ ಪೋಸ್ಟ್‌ವೊಂದನ್ನ ಹಾಕಿದ್ದಾರೆ. ಜೇಮ್ಸ್ ಸಿನಿಮಾ ಯಶಸ್ಸು ಕಾಣಲಿದೆ, ಇದಕ್ಕೆ ನಮ್ಮ ಮನಸ್ಸಲ್ಲಿ‌ ವಿಶೇಷ ಜಾಗವಿದೆ ಅಂತ ಪುನೀತ್ ಹಾಗೂ ಜೇಮ್ಸ್ ಬಗ್ಗೆ ಮೋಹನ್ ಲಾಲ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಮೋಹನ್ ಲಾಲ್ ಮೈತ್ರಿ ಸಿನಿಮಾದಲ್ಲಿ ಪುನೀತ್ ಜೊತೆ ನಟಿಸಿದ್ದರು. 
 

click me!