Puneeth Rajkumar: 'ಹಾಸ್ಟೆಲ್‌ ಹುಡುಗ್ರು ಬೇಕಾಗಿದ್ದಾರೆ' ಟೀಮ್‌ನಿಂದ ಅಪ್ಪುಗೆ ಟ್ರಿಬ್ಯೂಟ್‌

By Suvarna News  |  First Published Mar 16, 2022, 1:27 PM IST

ವಿಭಿನ್ನ ಪ್ರಚಾರ ತಂತ್ರಗಳಿಂದ ಗಮನ ಸೆಳೆದಿದ್ದ ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ತಂಡ ಅಪ್ಪು ಅವರಿಗೆ ತಮ್ಮದೇ ಶೈಲಿಯಲ್ಲಿ ನಮನ ಸಲ್ಲಿಸಿದ್ದಾರೆ. ಈ ಪ್ರಯತ್ನವನ್ನು ನಟಿ ರಮ್ಯಾ ಸೇರಿದಂತೆ ಸ್ಯಾಂಡಲ್‌ವುಡ್‌ನ ಪ್ರಮುಖರು ಮೆಚ್ಚಿಕೊಂಡಿದ್ದಾರೆ.


ವಿಭಿನ್ನ ಪ್ರಚಾರ ತಂತ್ರಗಳಿಂದ ಗಮನ ಸೆಳೆದಿದ್ದ ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagidare) ತಂಡ ಅಪ್ಪು (Puneeth Rajkumar) ಅವರಿಗೆ ತಮ್ಮದೇ ಶೈಲಿಯಲ್ಲಿ ನಮನ ಸಲ್ಲಿಸಿದ್ದಾರೆ. ಈ ಪ್ರಯತ್ನವನ್ನು ನಟಿ ರಮ್ಯಾ (Ramya) ಸೇರಿದಂತೆ ಸ್ಯಾಂಡಲ್‌ವುಡ್‌ನ ಪ್ರಮುಖರು ಮೆಚ್ಚಿಕೊಂಡಿದ್ದಾರೆ. ನಾಲ್ಕು ನಿಮಿಷಗಳ ಈ ವೀಡಿಯೋದಲ್ಲಿ ಪ್ರವಾಸಕ್ಕೆ ಹೊರಟ ಹಾಸ್ಟೆಲ್‌ ಹುಡುಗರು ಅಪ್ಪು ಅವರ ನಟನೆಯ ಹಾಡುಗಳ ಅಂತ್ಯಾಕ್ಷರಿ ಆಡುತ್ತಾ ಗಮನ ಸೆಳೆಯುತ್ತಾರೆ. ‘ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ’, ‘ಕಾಣದಂತೆ ಮಾಯವಾದನು’, ‘ಪಂಕಜಾ..’ ಮೊದಲಾದ ಹಾಡುಗಳನ್ನು ಕಲಾವಿದರು ಕೊನೆಯಲ್ಲಿ ‘ಅಪ್ಪೂ ಅಪ್ಪೂ ವಿ ಲವ್‌ ಯೂ’ ಎಂದು ಹಾಡಿನ ನಮನ ಸಲ್ಲಿಸುತ್ತಾರೆ.

ಪೋಸ್ಟರ್​​ ನೋಡಿ ಇದು ವರ್ಸ್ಟ್‌ ಸಿನಿಮಾ ಅಂತಾ ಕಾಣುತ್ತೆ ಅಂದಿದ್ರು ಪುನೀತ್​​: 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ'‌ ಸಿನಿಮಾದ ಪೋಸ್ಟರನ್ನು ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರಿಲೀಸ್ ಮಾಡಿದ್ದರು. ಅಚ್ಚರಿ ಏನಂದ್ರೆ, ಪೋಸ್ಟರ್‌ ರಿಲೀಸ್‌ (Poster Release) ಮಾಡಿದ ಬಳಿಕ ಪುನೀತ್​​ 'ಇದನ್ನು ಬಿಡುಗಡೆ ಮಾಡೋಕೆ ಇಷ್ಟೆಲ್ಲ ಬಿಲ್ಡಪ್‌ ಬೇಕಾಗಿತ್ತಾ' ಎಂದು ವ್ಯಂಗ್ಯ ಮಾಡಿದ್ದರು. ಈ ಟೈಟಲ್ ತಕ್ಕಂತೆಯೇ, ಮೊಮೊರಿ ಕಾರ್ಡ್‌ ಮಾದರಿಯಲ್ಲಿ ಪೋಸ್ಟರ್ ಡಿಸೈನ್ ಮಾಡಲಾಗಿತ್ತು. ಇದನ್ನ ನೋಡಿ ಪುನೀತ್‌ ಖುಷಿಪಟ್ಟಿದ್ದರು.. ಇದೇನಿದು ಮೊಮೊರಿ ಕಾರ್ಡ್‌ ಇದ್ದಂಗೆ ಇದೆ. ಇದನ್ನು ಬಿಡುಗಡೆ ಮಾಡೋಕೆ ಇಷ್ಟೆಲ್ಲ ಬಿಲ್ಡಪ್‌ ಬೇಕಾಗಿತ್ತಾ ಅಂತಾ ಪುನೀತ್​ ಕೇಳಿದ್ದರು. 

Tap to resize

Latest Videos

undefined

Puneeth Rajkumar ಹುಟ್ಟುಹಬ್ಬಕ್ಕೆ ಕ್ಷಣಗಣನೆ: 4000 ಚಿತ್ರಮಂದಿರಗಳಲ್ಲಿ 'ಜೇಮ್ಸ್‌' ಬಿಡುಗಡೆ

ಅಲ್ಲದೆ ಪ್ರಾಯಶಃ ಇದು ವರ್ಸ್ಟ್‌ ಸಿನಿಮಾ ಅಂತಾ ಕಾಣುತ್ತೆ ಎಂದಿದ್ದರು. ಪುನೀತ್​​ ಸೀರಿಯಸ್​ ಆಗಿ ಈ ರೀತಿ ಹೇಳಿದ್ದಾರಾ? ಎಂದು ಕನ್ಫ್ಯೂಸ್​​ ಆಗ್ಬೇಡಿ. ಯಾಕಂದ್ರೆ, ಚಿತ್ರತಂಡವೇ ಈ ರೀತಿ ಒಂದು ವಿಶೇಷ ಪ್ಲಾನ್​ ಮಾಡಿ ಚಿತ್ರದ ಪೋಸ್ಟರ್​​ ರಿಲೀಸ್​​ ಮಾಡಿಸಿತ್ತು. ಸಿನಿಮಾಗೆ ಮನರಂಜನಾ ವಾಹಿನಿಯೊಂದರಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ನಿರ್ದೇಶಕ ನಿತಿನ್‌ ಕೃಷ್ಣಮೂರ್ತಿ (Nithin Krishnamurthy) ಆ್ಯಕ್ಷನ್​​​-ಕಟ್​​​ ಹೇಳುತ್ತಿದ್ದಾರೆ. ಅಜನೀಶ್ ಲೋಕನಾಥ್ (Ajaneesh Loknath) ಸಂಗೀತ ಸಂಯೋಜಿಸುತ್ತಿದ್ದಾರೆ. ಅರವಿಂದ್‌ ಕಶ್ಯಪ್‌ (Arvind Kashyap) ಛಾಯಾಗ್ರಹಣ ಮಾಡುತ್ತಿದ್ದಾರೆ. ಗುಲ್‌ಮೊಹರ್‌ ಫಿಲ್ಮ್ಸ್‌ ಮತ್ತು ವರುಣ್‌ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.

ಇನ್ನು ಚಿತ್ರತಂಡದ ವಿಚಾರಕ್ಕೆ ಬರುವುದಾದರೆ ಹೆಚ್ಚು ವಿಭಿನ್ನ ಆಲೋಚನೆಗಳನ್ನು ತಂಡ ಹೊಂದಿದೆ. ಮೊದಲಿನಿಂದಲೂ ಪ್ರತಿಯೊಂದು ಹಂತದಲ್ಲೂ ಬಹಳ ವಿಭಿನ್ನವಾಗಿ ಪ್ರಚಾರ ಮಾಡುತ್ತಿರುವ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದ ಟೀಸರ್ ಈಗಾಗಲೇ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು, ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಇದಕ್ಕೂ ಮುಂಚೆ ಕಿಚ್ಚ ಸುದೀಪ್ (Kichcha Sudeep) ಅವರು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದ ಪ್ರಚಾರದ ವಿಧಾನವನ್ನು ಹೊಗಳಿದ್ದರು. ಮಾತ್ರವಲ್ಲದೇ ಈ ತಂಡ  ಬುರ್ಜ್ ಖಲೀಫಾ ಕಟ್ಟಡದ ಮೇಲಿಂದ ಟೀಸರ್ ಲಾಂಚ್ ಮಾಡ್ತೇವೆ ಎಂದು ಹೇಳಿ ಈ ಮೊದಲು ಸುದ್ದಿ ಮಾಡಿದ್ದರು.

ಹಾಡುಗಳ ಅರ್ಪಣೆ: ಪುನೀತ್‌ ರಾಜ್‌ಕುಮಾರ್‌ ಅವರಿಗಾಗಿಯೇ ವಿಶೇಷವಾದ ಹಾಡುಗಳು ಮೂಡಿ ಬಂದಿವೆ. ನಿರ್ದೇಶಕ ಪವನ್‌ ಒಡೆಯರ್‌ (Pawan Wadeyar) ರಚನೆಯ ‘ಪವರಿಸಂ’ ಹಾಡು ಎಂಆರ್‌ಟಿ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಆಗಿದೆ. ರಾಕ್‌ಲೈನ್‌ ವೆಂಕಟೇಶ್‌ (Rockline Venkatesh) ಈ ಹಾಡನ್ನು ನಿರ್ಮಿಸಿದ್ದು, ಶ್ರೀಹರ್ಷ (Sriharsha) ಹಾಡಿದ್ದಾರೆ. ಡಿ ಇಮಾನ್‌ (D.Imman) ಸಂಗೀತ ಸಂಯೋಜನೆ ಮಾಡಿದ್ದಾರೆ.

James 2022: ಪುನೀತ್ ರಾಜ್‍ಕುಮಾರ್ ಪವರ್‌ಪ್ಯಾಕ್ಡ್ ಚಿತ್ರಕ್ಕೆ ಸೆನ್ಸಾರ್‌ನಿಂದ ಯು/ಎ ಸರ್ಟಿಫಿಕೇಟ್

ಮತ್ತೊಬ್ಬ ನಿರ್ದೇಶಕ ಕಾಂತ ಕನ್ನಲ್ಲಿ (Kantha Kannalli) ‘ಮಹಾನುಭಾವ’ (Mahanubhava) ಹೆಸರಿನಲ್ಲಿ ಹಾಡು ರೂಪಿಸಿದ್ದಾರೆ. ಶ್ರೀಧರ್‌ ವಿ ಸಂಭ್ರಮ (Sridhar V Sambhram) ಸಂಗೀತದಲ್ಲಿ ಈ ಹಾಡು ಮೂಡಿ ಬಂದಿದ್ದು, ಗಾಯಕರಾದ ವಿಜಯ್‌ ಪ್ರಕಾಶ್‌, ಶಂಕರ್‌ ಮಹಾದೇವನ್‌, ಸೋನು ನಿಗಮ್‌, ಕೈಲಾಶ್‌ ಖೇರ್‌ ‘ಮಹಾನುಭಾವ’ ಹಾಡಿಗೆ ಧ್ವನಿಯಾಗಿರುವುದು ವಿಶೇಷ. ಸುನೀಲ್‌ ಬಿ ಎನ್‌ ಈ ಹಾಡನ್ನು ನಿರ್ಮಿಸಿದ್ದಾರೆ. ಸಂಭ್ರಮ ಸ್ಟುಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿ ಈ ಹಾಡನ್ನು ನೋಡಬಹುದು.
 

click me!