Shiva Rajkumar: 'ಬೈರಾಗಿ' ಟೀಸರ್‌ನಲ್ಲಿ ಹುಲಿಯಾಗಿ ಘರ್ಜಿಸಿದ ಕರುನಾಡ ಚಕ್ರವರ್ತಿ ಶಿವಣ್ಣ

By Suvarna News  |  First Published Mar 16, 2022, 7:04 PM IST

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಅವರ ಅಭಿನಯದ 123ನೇ ಚಿತ್ರ 'ಬೈರಾಗಿ' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.


ಸ್ಯಾಂಡಲ್‌ವುಡ್‌ನ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ (Shivarajkumar) ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಅವರ ಅಭಿನಯದ 123ನೇ ಚಿತ್ರ 'ಬೈರಾಗಿ' (Bairagee) ಸಿನಿಮಾದ ಟೀಸರ್ (Teaser) ಬಿಡುಗಡೆಯಾಗಿದೆ. ವಿಶೇಷವಾಗಿ 'ಟಗರು' (Tagaru) ಸಿನಿಮಾದ ನಂತರ ಮತ್ತೆ ಶಿವರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ್ (Dhananjay) ಎದುರಾಗಿದ್ದಾರೆ. ವಿಜಯ್ ಮಿಲ್ಟನ್ (Vijay Milton) ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಬೈರಾಗಿ' ಸಿನಿಮಾದಲ್ಲಿ ಸೆಂಚ್ಯುರಿ ಸ್ಟಾರ್ ಮತ್ತು ಡಾಲಿ ಅಬ್ಬರಿಸಲಿದ್ದಾರೆ. ಪ್ರಮುಖವಾಗಿ 'ದಿಯಾ' ಖ್ಯಾತಿಯ ನಟ ಪೃಥ್ವಿ ಅಂಬರ್ (Prithvi Ambaar)​ ಅವರು ಸಹ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಡುಗಡೆಯಾದ 'ಬೈರಾಗಿ' ಚಿತ್ರದ ಸಣ್ಣ ಟೀಸರ್‌ನಲ್ಲಿ ಶಿವಣ್ಣ ಹುಲಿ ವೇಷದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಬ್ಬರಿಸಿದ್ದಾರೆ. ಜೊತೆಗೆ ಅದ್ದೂರಿ ಆ್ಯಕ್ಷನ್​ ದೃಶ್ಯಗಳು ಈ ಸಿನಿಮಾದಲ್ಲಿ ಇರಲಿವೆ ಎಂಬುದಕ್ಕೆ ಟೀಸರ್​ ಮೂಲಕ ಕಾಣಬಹುದಾಗಿದೆ. 'ಬೈರಾಗಿ' ಟೀಸರ್​ ನೋಡಿ ಅಭಿಮಾನಿಗಳು (Fans) ಸಖತ್ ಖುಷಿ ಆಗಿದ್ದು, ನಾಳೆಯಿಂದ (ಮಾ.17) ಚಿತ್ರಮಂದಿರಗಳಲ್ಲೂ ಸಹ ಈ ಟೀಸರ್​ ಬಿಡುಗಡೆಯಾಗಲಿದೆ. ಮಾತ್ರವಲ್ಲದೇ ದೊಡ್ಡ ಪರದೆಯಲ್ಲಿ ನೋಡಿ ಎಂಜಾಯ್​ ಮಾಡಲು 'ಸೆಂಚುರಿ ಸ್ಟಾರ್‌' ಶಿವರಾಜ್​ಕುಮಾರ್​ ಅಭಿಮಾನಿಗಳು​ ಸಜ್ಜಾಗಿದ್ದಾರೆ. ಜೆಪಿ ಮ್ಯೂಸಿಕ್ (JP Music) ಯೂಟ್ಯೂಬ್‌ ಚಾನೆಲ್‌ನಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಿದೆ.

Tap to resize

Latest Videos

Shiva Rajkumar: ಸಂಕ್ರಾಂತಿ ಹಬ್ಬಕ್ಕೆ 'ಬೈರಾಗಿ' ಚಿತ್ರದ ಪೋಸ್ಟರ್ ರಿಲೀಸ್

'ಬೈರಾಗಿ' ಚಿತ್ರದ ಟೀಸರ್​ನಲ್ಲಿ ಡೈಲಾಗ್​ಗಳು ಗಮನ ಸೆಳೆಯುತ್ತಿದ್ದು, 'ವೇಷ ಹಾಕ್ದಾಗ ಮಾತ್ರ ಅಲ್ಲ, ನಾವು ಯಾವಾಗಲೂ ಹುಲಿನೇ ಅಂತ ಹೇಳಿ ದೊಡ್ಡೋರು ಬೆಳೆಸಿದ್ರು. ನಾನು ಬೆಳೀತಾ ಬೆಳೀತಾ ಆ ಹುಲಿನೂ ನನ್​ ಜೊತೆ ಬೆಳೆದುಬಿಡ್ತು' ಎಂಬ ಖಡಕ್​ ಡೈಲಾಗ್​ ಮೂಲಕ ಟೀಸರ್​ ಆರಂಭ ಆಗುತ್ತದೆ. 'ಹುಲಿ ಎಂದರೆ ಯಾವಾಗಲೂ ಕೋಪದಲ್ಲೇ ಇರಬೇಕಾ? ಕಾಯೋದು ಮಲಗೋದು ಕೂಡ ಅದರ ಗುಣ ತಾನೇ? ಮಲಗಿರಲಿ. ಒಂದು ಕಣ್ಣು ತೆಗೆದುಕೊಂಡು ಮಲಗಿರಲಿ. ಯಾವಾಗ ಬೇಕೋ ಆಗ ಎದ್ದೇಳಲಿ' ಎಂಬ ಕೌಂಟರ್​ ಸಹ ಗಮನ ಸೆಳೆಯುತ್ತಿದೆ. ಈ ಚಿತ್ರಕ್ಕೆ ಗುರು ಕಶ್ಯಪ್ (Guru Kashyap)​ ಸಂಭಾಷಣೆ ಬರೆದಿದ್ದಾರೆ.



ಈ ಚಿತ್ರದಲ್ಲಿ ಡಾಲಿ ಧನಂಜಯ್ ಪಾತ್ರದ ಬಗ್ಗೆ ಸದ್ಯಕ್ಕೆ ಏನೂ ಹೇಳದೇ ಇದ್ದರೂ, ಅದೊಂದು ಖಳನಾಯಕನ ಕ್ಯಾರೆಕ್ಟರ್ ಎನ್ನಲಾಗುತ್ತಿದೆ. 'ಬೈರಾಗಿ'ಯ ಮತ್ತೊಂದು ವಿಶೇಷ ಅಂದರೆ, ನಾಲ್ವರು ನಾಯಕರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಶಿವರಾಜ್‌ಕುಮಾರ್ ಜತೆ ಹಿರಿಯ ನಟ ಶಶಿಕುಮಾರ್ (Shashikumar), ದಿಯಾ ಸಿನಿಮಾದ ಪೃಥ್ವಿ ಅಂಬರ್ ಮತ್ತು ಡಾಲಿ ಧನಂಜಯ್. ಪೃಥ್ವಿ ಅಂಬರ್ ಮತ್ತು ಧನಂಜಯ್ ನೆಗೆಟಿವ್ ರೀತಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಶಶಿಕುಮಾರ್ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಇದೊಂದು ಮಾಸ್ ಸಿನಿಮಾವಾಗಿದ್ದರಿಂದ ಪಾತ್ರಗಳು ಕೂಡ ಅಷ್ಟೇ ಪವರ್ ಫುಲ್ ಆಗಿರುತ್ತವೆ. 

Shiva Rajkumar: ಸಂದೇಶ್‌ ನಾಗರಾಜ್‌ ನಿರ್ಮಾಣದಲ್ಲಿ ಕರುನಾಡ ಚಕ್ರವರ್ತಿ ಸಿನಿಮಾ

ಇನ್ನು ಈ ಚಿತ್ರಕ್ಕೆ ಕೃಷ್ಣ ಸಾರ್ಥಕ್ (Krishna Sarthak)​ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅನೂಪ್​ ಸೀಳಿನ್​ ಸಂಗೀತ ನಿರ್ದೇಶನ, ದೀಪು ಎಸ್​. ಕುಮಾರ್​ ಸಂಕಲನದಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಶಿವರಾಜ್‌ಕುಮಾರ್‌ಗೆ ತಮಿಳಿನ ಅಂಜಲಿ (Anjali) ನಾಯಕಿಯಾದರೆ, ಧನಂಜಯ ಅವರಿಗೆ ಯಶಾ ಶಿವಕುಮಾರ್‌ (Yasha Shivakumar) ಜೋಡಿಯಾಗಿದ್ದಾರೆ. ಗುರುವಾರ (ಮಾ.17) ಪುನೀತ್​ ರಾಜ್‌ಕುಮಾರ್ (Puneeth Rajkumar)​ ಹುಟ್ಟುಹಬ್ಬ. ಆ ಪ್ರಯುಕ್ತ ಅದ್ದೂರಿಯಾಗಿ 'ಜೇಮ್ಸ್' (James) ಸಿನಿಮಾ ಬಿಡುಗಡೆಯಾಗುತ್ತಿದೆ. ಇದೇ ಸಂದರ್ಭದಲ್ಲಿ 'ಜೇಮ್ಸ್​' ಜೊತೆ ಚಿತ್ರಮಂದಿರದಲ್ಲಿ 'ಬೈರಾಗಿ' ಟೀಸರ್​ ಅಬ್ಬರಿಸಲಿರುವುದು ವಿಶೇಷ.
 

click me!