ತಂಗಾಳಿ ತಡ್ಕೊಂಡು, ಬೆಳದಿಂಗಳಲ್ ಮಲಕೊಂಡು, ಹಾಡು ಕೇಳಿಯೇ ಸುಖದಿಂದ ನರಳುವಂತೆ ಮಾಡಿದ ನಾದಬ್ರಹ್ಮ

Published : Mar 10, 2025, 09:32 PM ISTUpdated : Mar 11, 2025, 11:40 AM IST
ತಂಗಾಳಿ ತಡ್ಕೊಂಡು, ಬೆಳದಿಂಗಳಲ್ ಮಲಕೊಂಡು, ಹಾಡು ಕೇಳಿಯೇ ಸುಖದಿಂದ ನರಳುವಂತೆ ಮಾಡಿದ ನಾದಬ್ರಹ್ಮ

ಸಾರಾಂಶ

ತಂಗಾಳಿ ತಡ್ಕೊಂಡು, ಬೆಳದಿಂಗಳಲ್ ಮಲಕೊಂಡು, ಉತ್ತೋ ಬಿತ್ತೋ ಆಡೋಣ..! ನಾದ ಬ್ರಹ್ಮ ಹಂಸಲೇಖ ಬರೆದ ಈ ಹಾಡು ಕೇಳಿದರೆ ಸುಖದಿಂದ ನರಳುವಂತೆ ಮಾಡುತ್ತೆ. ಅಷ್ಟಕ್ಕೂ ಈ ಹಾಡು ನಿಮನ್ನು ಯಾವ ಮೂಡ್‌ಗೆ ಕರೆದೊಯ್ತುತ್ತೆ, ಒಂದು ಸಲ ಕೇಳಿ ನೋಡಿ.

ಕಚ್ಚಿ ಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ.. ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ..ಹಂಸಲೇಖ ರಸಿಕತೆಗೆ, ಶೃಂಗಾರಕ್ಕೆ ಕನ್ನಡಿ ಹಿಡಿದ ಮತ್ತೊಂದು ಹಾಡು.. ದೇವರಾಜ್​- ನಿರೋಷಾ ಅಭಿನಯದ ‘ಲಾಕಪ್​ಡೆತ್​’ ಫಿಲ್ಮ್​ ಹಾಡು ಕೇಳದವರೇ ಇಲ್ಲ. ಆದ್ರೆ, ಇದೊಂದು ಹಾಡು ಈಗ ಮತ್ತೆ ರಸಿಕರ ಹೃದಯಕ್ಕೆ ಕಚಗುಳಿ ಇಡ್ತಿದೆ. ಇದರ ಸಾಹಿತ್ಯ ಹಲವರ ನಿದ್ದೆಗೆಡಿಸಿದೆ. ಎಂದಿನಂತೆ ಹಂಸಲೇಖ ಪದ ಒಡೆದು, ಕಡೆದು ಬರೆದ ಹಾಡು ಪಡ್ಡೆ ಹುಡುಗರಿಗೆ ಥ್ರಿಲ್ ಕೊಟ್ಟಿದೆ..

ಕಚ್ಚಿಕೊಂಡು, ಮುಚ್ಚಿಕೊಂಡು ಓಡಾಡೋಣ ಬಾರೋ ಎಂದು ಮಾದಕವಾಗಿ ಕರೆಯುವ ನಾಯಕಿ, ಹಾಡಿನಲ್ಲೇ ರೊಮ್ಯಾನ್ಸ್​ ಮಾಡುವುದನ್ನು ಹೇಳಿಕೊಡುವ ರೀತಿ ಅಬ್ಬಬ್ಬಾ..!

ಕಿಚ್ಚೆಬ್ಬಿಸಿದ ನಮ್ಮೂರ ಹಮ್ಮೀರ ಚಿತ್ರದ ಪೋಲಿ ಹಾಡು, ಅಶ್ಲೀಲದ ಸೋಂಕಿಲ್ಲ, ಶೃಂಗಾರಕ್ಕೆ ಕೊರತೆ ಇಲ್ಲ!

ಸಿಹಿಯೆಲ್ಲಾ ಇಟ್ಟುಕೊಂಡು.. 
ಹುಳಿಯೆಲ್ಲ ಬಿಟ್ಟುಕೊಂಡು...
ಮಾವಿನ ತೋಪಿನ ತುಂಬಾ ಉರುಳು ಉರುಳಾಡೋಣ.. 
ಎದುರು- ಬದುರು ಗಲ್ಲ, ನಡುವೆ ಗಾಳಿ ಇಲ್ಲ..
ಆಲೆಮನೆಯ ಬೆಲ್ಲ, ತುಟಿಯ ಮೇಲೆ ನಲ್ಲ..
ಘಮ ಘಮ ಗಂಧ ಚಿಲಿಪಿಲಿ ರಾಗ ಕಚ್ಚಿಕೊಂಡಿರುವಾಗ.. 
ಥಕ ಥಕ ಆಸೆ, ಮಿಕ ಮಿಕ ಕಣ್ಣು ಬಿಚ್ಚಿಕೊಂಡಿರುವಾಗ...

ಸಿಹಿ ಇಟ್ಕೊಂಡಿದ್ದೀನಿ, ಹುಳಿಯನ್ನೂ ಬಿಟ್ಕೊಂಡಿದ್ದೀನಿ, ಮಾವಿನ ತೋಪಿನಲ್ಲಿ ಉರುಳಾಡೋಣ ಎಂದು ಕಣ್ಣಲ್ಲೇ ಕರೆಯುವ ನಾಯಕಿ, ಅವಳನ್ನೇ ಆಸೆಗಣ್ಣಿನಿಂದ ನೋಡುವ ಹೀರೋ.. ಹಾಡು ಕೇಳುತ್ತಿರುವವರ ಪಾಡೋ ಹೇಳತೀರದು. ಹಾಡು ಕೇಳುತ್ತಲೇ ಮೈಯಲ್ಲಿ ಕಿಚ್ಚು ಹಚ್ಚಿ ಬಿಡುತ್ತಾರೆ ಹಂಸಲೇಖ.

ತಂಗಾಳಿ ತಡ್ಕೊಂಡು.. 
ಬೆಳದಿಂಗಳಲ್ ಮಲಕೊಂಡು... 
ಅರೆ ಬಟ್ಟೆ ಉಟ್ಟು, ಉತ್ತೋ ಬಿತ್ತೋ ಆಡೋಣ...
ನಾನು ಸೋತ್ರೆ ನೀನು, ನೀನು ಸೋತ್ರೆ ನಾನು.. .
ಆಟ ನಡೆಯಬೇಕು ಯಾರು ಗೆದ್ದರೇನು...
ಮನಸಿಗೆ ಮನಸು ಮಾತಿಗೆ ಮಾತು ನೆಚ್ಚಿಕೊಂಡಿರುವಾಗ ..
ಉಸಿರಿಗೆ ಉಸಿರು ಹೆಸರಿಗೆ ಹೆಸರು ಹಚ್ಚಿಕೊಂಡಿರುವಾಗ..

ಸಿಹಿ ಇದೆ, ಹುಳಿ ಇದೆ, ಮಾವಿನ ತೋಪಿಗೆ ಬಾ ಎಂದು ಆಸೆ ಹುಟ್ಟಿಸಿದ ನಾಯಕಿ, ಮುಂದಿನ ಚರಣದಲ್ಲಿ ತಂಗಾಳಿಯಲ್ಲಿ ತಡ್ಕೊಂಡು, ಬೆಳದಿಂಗಳಲ್ಲಿ ಮಲ್ಕೊಂಡು, ಅರೆಬಟ್ಟೆ ತೊಟ್ಟು, ಉತ್ತೋ, ಬಿತ್ತೋ ಆಡೋಣ.. ಅಂತ ಹಾಡುತ್ತಾ, ಹಾಸಿಗೆಗೆ ಕರೆಯುತ್ತಾರೆ. ನಾನು ಸೋತರೆ ನೀನು, ನೀನು ಸೋತರೆ ನಾನು, ಯಾರೇ ಗೆದ್ದರೂ ಆಟ ನಡೆಯಬೇಕು ಅನ್ನೋ ಮೂಲಕ, ಸುಖದ ಉತ್ತುಂಗಕ್ಕೆ ಕರೆದೊಯ್ಯುತ್ತಾರೆ. ಹಾಡು ಕೇಳುತ್ತಿದ್ದವರನ್ನು  ರೊಚ್ಚಿಗೇಳಿಸುತ್ತಾರೆ ಹಂಸಲೇಖ..

ಮನಸಿಗೆ ಮನಸು ಮಾತಿಗೆ ಮಾತು ನೆಚ್ಚಿಕೊಂಡಿರುವಾಗ.. ಉಸಿರಿಗೆ ಉಸಿರು ಹೆಸರಿಗೆ ಹೆಸರು ಹಚ್ಚಿಕೊಂಡಿರುವಾಗ.. ಸೋಲು- ಗೆಲುವು ಇಲ್ಲ ಅನ್ನೋದೇ ಪ್ರೇಮ ಕಾಮದ ಚರಮಗೀತೆ ಅನ್ನೋ ಸಂದೇಶ ಹೇಳಿಬಿಡುತ್ತಾರೆ. 

ಈ ಹಾಡಿನಲ್ಲಿ ಡಬ್ಬಲ್ ಮೀನಿಂಗ್ ಇದೆ ಅಂದ್ಕೊಂಡ್ರೆ, ಹೌದು ಡಬ್ಬಲ್​ ಮೀನಿಂಗ್ ಇದೆ. ಇಬ್ಬರು ಪ್ರೇಮಿಗಳು ಸುಖಕ್ಕೆ ಹಾತೊರೆಯುತ್ತಿರುವ ಅಪ್ಪಟ ರೊಮ್ಯಾಂಟಿಕ್ ಗೀತೆ ಅಂದುಕೊಂಡ್ರೆ, ಶೃಂಗಾರ ಗೀತೆ. ಪ್ರೇಮಿಗಳ ನಡುವಿನ ಹಸಿಹಸಿ ಮಾತು ಹಾಡಾಗಿ ಹರಿಯುತ್ತದೆ. ಇಂಥ ಹಾಡುಗಳನ್ನು ಕೇಳಿಯೇ ಸುಖದಿಂದ ನರಳುವಂತೆ ಮಾಡಿದ ಪ್ರತಿಭಾವಂತ ಹಂಸಲೇಖ.. ಇದನ್ನು ಓದಿದ ಮೇಲೆ, ಕಿವಿಗೆ ಇಯರ್​ ಫೋನ್ ಹಾಕ್ಕೊಂಡು ಈ ಹಾಡು ಕೇಳಿ, ಸುಖದಿಂದ ನೀವು ನರಳದಿದ್ರೆ ಕೇಳಿ..!!

ತಂಗಾಳಿ ತಡ್ಕೊಂಡು, ಬೆಳದಿಂಗಳಲ್ ಮಲಕೊಂಡು, ಹಾಡು ಕೇಳಿಯೇ ಸುಖದಿಂದ ನರಳುವಂತೆ ಮಾಡಿದ ನಾದಬ್ರಹ್ಮ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

SM
About the Author

Shobha MC

ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಎಂಎ ಮುಗಿಸಿ, ಸೇರಿದ್ದು ವಿಜಯ ಕರ್ನಾಟಕ ಪತ್ರಿಕೆಗೆ. ಸೂರ್ಯೋದಯ ಸೇರಿ ಪತ್ರಿಕೆಗಳಲ್ಲಿ 7 ವರ್ಷಗಳ ಅನುಭವ. ನ್ಯೂಸ್ ಚಾನೆಲ್ಗಳಿನ್ನೂ ಸರಿಯಾಗಿ ಕಣ್ಬಿಡದ ಕಾಲದಲ್ಲೇ ದೃಶ್ಯ ಮಾಧ್ಯಮಕ್ಕೆ ಕಾಲಿಟ್ಟಿದ್ದು, ಟೆಲಿವಿಷನ್ ಪಟ್ಟುಗಳೆಲ್ಲ ಕರತಲಾಮಲಕ. ಉದಯ ಟಿವಿಯಲ್ಲಿ 2 ವರ್ಷ ಸೇವೆ. ಕಳೆದ 17 ವರ್ಷದಿಂದಲೂ ಸುವರ್ಣ ನ್ಯೂಸ್ ಇನ್ಪುಟ್, ಔಟ್ಪುಟ್ ಹೆಡ್ ಆಗಿ ಕಾರ್ಯ ನಿರ್ವಹಣೆ. ಪತ್ರಿಕೆ- ಟಿವಿ ಎರಡರ ಅಗಾಧ ಅನುಭವ ಇರುವ ಏಕೈಕ ಪತ್ರಕರ್ತೆ. ಪ್ರತಿಷ್ಠಿತ ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಪತ್ರಕರ್ತರ ಸಂಘ, ಕೆಂಪೇಗೌಡ ಪ್ರಶಸ್ತಿ, ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇಂಡಿಯಾ, ಪ್ರೆಸ್ಕ್ಲಬ್ ವಾರ್ಷಿಕ ಪ್ರಶಸ್ತಿಗಳು ಮುಡಿಗೇರಿವೆ. ಸದ್ಯ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯೆ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಸಿಲಬಸ್ ಕಮಿಟಿ ಸದಸ್ಯೆಯಾಗಿಯೂ ನೇಮಕ.Read More...
Read more Articles on
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!