ಡಾ ರಾಜ್‌ಕುಮಾರ್ ಬಗೆಗಿನ ಎಲ್ಲಾ ವದಂತಿ-ವಿವಾದಗಳಿಗೆ ಅಂದೇ ತೆರೆ ಎಳೆದಿದ್ದಾರೆ ಪಾರ್ವತಮ್ಮ.. ಇಲ್ನೋಡಿ!

Published : Mar 10, 2025, 09:16 PM ISTUpdated : Mar 10, 2025, 09:39 PM IST
ಡಾ ರಾಜ್‌ಕುಮಾರ್ ಬಗೆಗಿನ ಎಲ್ಲಾ ವದಂತಿ-ವಿವಾದಗಳಿಗೆ ಅಂದೇ ತೆರೆ ಎಳೆದಿದ್ದಾರೆ ಪಾರ್ವತಮ್ಮ.. ಇಲ್ನೋಡಿ!

ಸಾರಾಂಶ

ಅವೆಲ್ಲಾ ಮಾತುಗಳಿಗೆ ಫೈನಲ್ ಆಗಿ ಯಾವತ್ತೋ ತೆರೆ ಎಳೆದಿದ್ದಾರೆ ಪಾರ್ವತಮ್ಮ ರಾಜ್‌ಕುಮಾರ್. ಅವರು ಬದುಕಿದ್ದಾಗ ಹೇಳಿದ್ದ ಆ ಕೆಲವು ಮಾತುಗಳು ಈಗ ಯೂಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ಬಹಳಷ್ಟು ವೈರಲ್ ಅಗುತ್ತಿವೆ. ಡಾ ರಾಜ್‌ಕುಮಾರ್..

ಒಂದು ಕಡೆ, ಡಾ ರಾಜ್‌ಕುಮಾರ್ (Dr Rajkumar) ಹಾಗೂ ಪಾರ್ವತಮ್ಮ (Parvathamma) ಜೋಡಿ ಅಂದ್ರೆ ಹಲವರಿಗೆ ಹೊಟ್ಟೆಕಿಚ್ಚು ಹುಟ್ಟಿಕೊಳ್ಳುವಷ್ಟು ಆದರ್ಶವಾಗಿತ್ತು ಎಂಬ ಹೇಳಿಕೆಯಿದೆ. ಆದರೂ ಕೂಡ ಅದಕ್ಕೆ ವ್ಯತಿರಿಕ್ತವಾದ ಮಾತುಗಳೂ ಕೇಳಿ ಬರುತ್ತಿದ್ದರು. 'ಡಾ ರಾಜ್‌ಕುಮಾರ್ ಅವರ ಮೇಲೆ ಪಾರ್ವತಮ್ಮನವರಿಗೆ ಸ್ವಲ್ಪಪೂ ನಂಬಿಕೆಯಿಲ್ಲ. ಅಣ್ಣಾವ್ರಿಗೆ ಯಾವುದೇ ನಟಿ ಆಪ್ತರಾಗಲು ಪಾರ್ವತಮ್ಮನವರು ಬಿಡುವುದಿಲ್ಲ. ಅದರಲ್ಲೂ ಕೆಲವು ನಟಿಯರ ವಿಷಯದಲ್ಲಿ ಪಾರ್ವತಮ್ಮನವರು ಹದ್ದಿನ ಕಣ್ಣು ಇಟ್ಟಿದ್ದರು. ಪಾರ್ವತಮ್ಮನವರು ಡಾ ರಾಜ್‌ ಅವರನ್ನು ಕಾವಲು ಕಾದಂತೆ ಕಣ್ಣಿಲ್ಲಿ ಕಣ್ಣಿಟ್ಟು ಕಾಯುತ್ತಾರೆ' ಎಂಬ ಮಾತು ಚಾಲ್ತಿಯಲ್ಲಿ ಇತ್ತು, ಈಗಲೂ ಇದೆ. 

ಆದರೆ, ಅವೆಲ್ಲಾ ಮಾತುಗಳಿಗೆ ಫೈನಲ್ ಆಗಿ ಯಾವತ್ತೋ ತೆರೆ ಎಳೆದಿದ್ದಾರೆ ಪಾರ್ವತಮ್ಮ ರಾಜ್‌ಕುಮಾರ್. ಅವರು ಬದುಕಿದ್ದಾಗ ಹೇಳಿದ್ದ ಆ ಕೆಲವು ಮಾತುಗಳು ಈಗ ಯೂಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ಬಹಳಷ್ಟು ವೈರಲ್ ಅಗುತ್ತಿವೆ. ಡಾ ರಾಜ್‌ಕುಮಾರ್ ಹಾಗೂ ಪಾರ್ವತಮ್ಮನವರ ಆದರ್ಶ ವ್ಯಕ್ತಿತ್ವ ಹಾಗೂ ಸಂಸಾರದ ಬಗ್ಗೆ ಮಸಿ ಬಳಿಯುವ ಎಲ್ಲಾ ಪ್ರಯತ್ನಗಳಿಗೆ ಸ್ವತಃ ಪಾರ್ವತಮ್ಮನವರು ತೆರೆ ಎಳೆದು ಮಾತನ್ನಾಡಿದ್ದರು. 'ನಮ್ಮಿಬ್ಬರಲ್ಲಿ ಪರಸ್ಪರ ನಂಬಿಕೆ ಗಟ್ಟಿಯಾಗಿದೆ' ಎಂಬ ಮಾತನ್ನು ಅವರು ಜಗತ್ತಿಗೇ ಸಾರಿ ಹೇಳಿದ್ದಾರೆ. 

ಧರ್ಮಪತ್ನಿ ಪಾರ್ವತಮ್ಮ ಬಗ್ಗೆ ಅಣ್ಣಾವ್ರು ಹೀಗೆಲ್ಲಾ ಹೇಳ್ಬಿಟ್ರು, ತಮಾಷೆಗೆ ಇರ್ಬಹುದಾ ಅಂತ...?

ಹಾಗಿದ್ದರೆ ಪಾರ್ವತಮ್ಮನವರು ಈ ಬಗ್ಗೆ ಅದೇನು ಹೇಳಿದ್ದಾರೆ ನೋಡಿ.. 'ನನ್ನ ಮದುವೆಯಾಗಿ ಬಂದಾಗಿನಿಂದ ಅವರಲ್ಲಿ ನಾನು ಯಾವುದೇ ವಿಧವಾದ ಬದಲಾವಣೆಯನ್ನೂ ಕಾಣಲಿಲ್ಲ. ನನ್ನ ಮೇಲೆ ಅವರಿಗೆ ಅಗಾಧವಾದ ಪ್ರೇಮ. ನನಗೂ ಅವರ ಮೇಲೆ ಅಗಾಧವಾದ ಪ್ರೇಮ ಇತ್ತು ಅಷ್ಟೇ. ಐವತ್ಮೂರು ವರ್ಷ ನಾನು ಹಾಗೇ ಇದ್ಬಿಟ್ಟೆ.. ಅದು ನನ್ನದು, ನನ್ನ ವಸ್ತು, ಅದನ್ನು ಯಾರೂ ಕಿತ್ಕೊಳ್ಳೋಕೆ ಆಗಲ್ಲ ಅನ್ನೋ ದೃಢವಾದ ನಂಬಿಕೆ ನನ್ನಲ್ಲಿತ್ತು. ಕೊನೆಗಾಲದ ವರೆಗೂ ನನ್ನದು ನನ್ನದಾಗೇ ಉಳಿದುಕೊಂಡಿತ್ತು..' ಎಂದಿದ್ದಾರೆ ಪಾರ್ವತಮ್ಮನವರು. 

ಸಿನಿಮಾ ನಟನಟಿಯ ಬದುಕಿನಲ್ಲಿ ಕೆಲವು ಅಫೇರ್‌ಗಳು, ಆ ಸಂಬಂಧ ಕೆಲವು ವದಂತಿಗಳು ಎಲ್ಲವೂ ಕಾಮನ್ ಎಂಬ ಮಾತು ಇದೆ. ಜೊತೆಗೆ, ಸಿನಿಮಾ ತಾರೆಗಳ ಜೀವನದಲ್ಲಿ ಅವೆಲ್ಲವೂ ಮಾಮೂಲು ಎಂಬ ಹೇಳಿಕೆ ಅಂದೂ ಇಂದೂ ಚಾಲ್ತಿಯಲ್ಲಿರುವುದು ಬಹುತೇಕರಿಗೆ ಗೊತ್ತು. ಆದರೆ, ಅದನ್ನು ಹೌದೆಂದಾದರೆ ಒಪ್ಪಿಕೊಳ್ಳುವುದು ಅಥವಾ ಸೈಲೆಂಟ್ ಆಗಿರುವುದು ಕೆಲವರ ಅಭ್ಯಾಸ. ಆದರೆ, ಇನ್ನೂ ಕೆಲವರು ಆ ಬಗ್ಗೆ ಸೂಕ್ತ ಸಮಯದಲ್ಲಿ ಸರಿಯಾದ ಕ್ಲಾರಿಟಿ ಕೊಟ್ಟುಬಿಡುತ್ತಾರೆ. ಪಾರ್ವತಮ್ಮನವರು ಅದನ್ನೇ ಮಾಡಿದ್ದಾರೆ. 

ಅಪ್ಪು ಸಿನಿಮಾ ಸೀಕ್ರೆಟ್ ಹೇಳಿದ ಪುರಿ ಜಗನ್ನಾಥ್.. ಪುನೀತ್ ಸಿನಿಮಾ ಮಧ್ಯೆ ಶಿವಣ್ಣ ಬಂದಿದ್ದು ಹೇಗೆ?

ಪಾರ್ವತಮ್ಮ ರಾಜ್‌ಕುಮಾರ್ ಅವರು ಕೇವಲ ಡಾ ರಾಜ್‌ಕುಮಾರ್ ಅವರ ಪತ್ನಿ ಅಲ್ಲ, ಅವರು ಕನ್ನಡದ ಖ್ಯಾತ ನಿರ್ಮಾಪಕಿಯೂ ಹೌದು. ಅವರಿಗೆ ಯಾವಾಗ ಏನು ಮಾಡಬೇಕು, ಯಾವಾಗ ಏನು ಮಾತಾಡಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಕೆಲವು ವದಂತಿಗಳಿಗೆ ಅವರು ಅದೆಷ್ಟೋ ಬಾರಿ ಜಾಣ ಮೌನ ವಹಿಸಿದ್ದೂ ಇದೆ. ಆದರೆ, ತಮ್ಮ ಪತಿ, ಕನ್ನಡ ನಾಡಿನ ಮೇರು ನಟ ಅಣ್ಣಾವ್ರ ವಿಷಯದಲ್ಲಿ ಅವರು ಬದುಕಿದ್ದಾಲೇ ಒಂದು ಕ್ಲಾರಿಟಿ ಕೊಟ್ಟು ಹೋಗಿದ್ದಾರೆ, ಅದೀಗ ವೈರಲ್ ಆಗ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?