
ಕನ್ನಡ ಸಿನಿ ರಸಿಕರು ಅಮೃತಾ ಅಯ್ಯಂಗರ್‌ನ ಸ್ಮೈಲಿಂಗ್ ಕ್ವೀನ್ ಎಂದು ಕರೆಯುತ್ತಾರೆ. ಲವ್ ಮಾಕ್ಟೇಲ್, ಪಾಪ್ ಕಾರ್ನ್ ಮಂಕಿ ಟೈಗರ್, ಬಡವಾ ರಾಸ್ಕಲ್ ಮತ್ತು ಹೊಯ್ಸಳ ಸಿನಿಮಾದಲ್ಲಿ ನಟಿಸಿದ್ದಾರೆ. 'ಕನ್ನಡ ಚಿತ್ರರಂಗದಲ್ಲಿರುವ ಇನ್ನಿತ್ತರ ನಟಿಯರ ರೀತಿ ನಾನು ಕೂಡ ವಿಭಿನ್ನ ಪಾತ್ರಗಳನ್ನು ಹುಡುಕುತ್ತಿರುವೆ. ಮೂರು ವರ್ಷಗಳು ಕಳೆದರೂ ಲವ್ ಮಾಕ್ಟೇಲ್ ಪಾತ್ರವನ್ನು ಮೆಚ್ಚಿಕೊಳ್ಳುತ್ತಾರೆ. ನನ್ನ ಮುಂದಿನ ಸಿನಿಮಾ ನಟ ಶರಣ್ ಜೊತೆ, ಸೇಮ್ ಲವ್ ಮಾಕ್ಟೇಲ್ ಸಿನಿಮಾ ಫೀಲ್ ಕೊಡುತ್ತಿದೆ. ವಿಭಿನ್ನ ಪಾತ್ರಗಳು ನನಗೆ ಇಷ್ಟವಾಗುತ್ತದೆ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ನಮ್ಮಿಬ್ಬರ ಮಧ್ಯೆ ಏನೋ ಇದೆ ಅಂದುಕೊಳ್ತಾರೆ ಆದರೆ ನಾವು ಸ್ನೇಹಿತರಷ್ಟೆ; ಧನಂಜಯ್ ಬಗ್ಗೆ ಅಮೃತಾ ಸ್ಪಷ್ಟನೆ!
ಕಳೆದ ಭಾನುವಾರ ಮೈಸೂರಿನಲ್ಲಿ ಅಮೃತಾ ತಾಯಿ ಭಾರ್ಗವಿ ರಂಗಾಯಣದಲ್ಲಿ ಮೊದಲ ನಾಟಕ ಮಾಡಿದ್ದಾರೆ. 'ನನ್ನ ತಾಯಿ ಮೇಕಪ್ ಮತ್ತು ಕಾಸ್ಟ್ಯೂಮ್ ಹಚ್ಚಿಕೊಂಡಿರುವುದನ್ನು ನೋಡಿ ಖುಷಿ ಆಯ್ತು. ಆಕೆ ಕನಸು ನನಸು ಆಗುತ್ತಿರುವುದು ನೋಡಿ ಖುಷಿ ಆಯ್ತು. ನನ್ನ ತಾಯಿ ಟೀಚರ್, ಕಳೆದ ವರ್ಷ ನಿವೃತ್ತರಾದರು. ಇಡೀ ವೃತ್ತಿ ಜೀವನ ಮಕ್ಕಳ ಜೊತೆ ಮಾತನಾಡಿದ್ದಾರೆ ಅವರ ಆನಿಮೇಟ್ ಮುಖ ಎಕ್ಸಪ್ರೆಶನ್ ಎಲ್ಲರು ಇಷ್ಟ ಪಡುತ್ತಿದ್ದರು. ಹೀಗಾಗಿ ನನಗೆ ನಟನೆ ಬಂದಿರುವುದು ಅವಳಿನಿಂದ. ಕೆಲವೊಮ್ಮೆ ನನ್ನ ಡೈಲಾಗ್‌ಗಳನ್ನು ತಾಯಿ ಜೊತೆ ಅಭ್ಯಾಸ ಮಾಡಿಕೊಳ್ಳುವೆ' ಎಂದು ಅಮೃತಾ ಹೇಳಿದ್ದಾರೆ.
'ಸುಮಾರು 5 ವರ್ಷಗಳಿಂದ ಹಿಟ್ ಸಿನಿಮಾ ಮಾಡುತ್ತಿದ್ದರೂ ಸಿನಿಮಾ ನಿರ್ದೇಶಕರಿಗೆ ಹಾಗೂ ವೀಕ್ಷಕರಿಗೆ ನಾವು ಹೀರೋಯಿನ್‌ಗಳಲ್ಲ. ಫಿಲ್ಮ್ ಮೇಕರ್‌ಗಳ ಪ್ರಕಾರ ಸಿನಿಮಾ ಬಜೆಟ್‌ಗಳು ನಾಯಕಿಯರ ಆಯ್ಕೆಯನ್ನು ನಿರ್ಧರಿಸುತ್ತದೆ. ಕೆಲವೊಮ್ಮೆ ಆಫರ್ ಬಂದಾಗ ಟಾಪಿಕ್ ಸಂಭಾವನೆ ಮಾತ್ರವಾಗಿರುತ್ತದೆ. ಕಥೆ ಹೇಳುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಏಕೆಂದರೆ ಹಲವು ಸಿನಿಮಾಗಳು ಪುರುಷ ಪ್ರಧಾನ ಕಥೆಯಾಗಿರುತ್ತದೆ. ಅಲ್ಲಿ ಇಲ್ಲಿ ನಾಯಕಿ ಎಂಟ್ರಿ ಕಥೆ ಇರುತ್ತದೆ ಅಷ್ಟೆ' ಎಂದಿದ್ದಾರೆ ಅಮೃತಾ.
ಇಬ್ರು ಸ್ಟಾರ್ ನಟಿಯರ ನಡುವೆ ಜಗಳನೇ ಜಾಸ್ತಿ?; ರಮ್ಯಾ ಬಗ್ಗೆ ಮೌನ ಮುರಿದ ಅಮೃತಾ ಅಯ್ಯಂಗಾರ್
'ನಿರ್ದೇಶಕರು ಒಮ್ಮೆ ನಮ್ಮನ್ನು ಸಂಪರ್ಕಿಸಿದಾಗ 10 ದಿನ ನಿಮ್ಮ ಡೇಟ್ ಬೇಕು ನಮ್ಮ ಬಜೆಟ್ ಇಷ್ಟು ನಿಮಗೆ ಓಕೆ ಅಂದ್ರೆ ಕಥೆ ಹೇಳುತ್ತೀವಿ ಎನ್ನುತ್ತಾರೆ. ತುಂಬಾ ತುಂಬಾ ಕೆಟ್ಟ ರೀತಿಯಲ್ಲಿ ಸಂಪರ್ಕಿಸುತ್ತಾರೆ. ನನಗೆ ಕಥೆ ಇಷ್ಟ ಆದ್ರೆ ಸಿನಿಮಾ ಮಾಡುವೆ ಆದರೆ ಸಂಭಾವನೆ ಕಡಿಮೆಯಾಗಿರುತ್ತದೆ' ಎಂದು ಅಮೃತಾ ಹೇಳಿದ್ದಾರೆ.
'ಧನಂಜಯ್ ಮತ್ತು ನನ್ನ ಜೋಡಿಯನ್ನು ಆನ್ ಸ್ಕ್ರೀನ್ ಜೋಡಿಯಾಗಿ ನೋಡಲು ಅಭಿಮಾನಿಗಳು ಇಷ್ಟ ಪಡುತ್ತಾರೆ. ನಾವು ಮಾಡಿರುವುದು ಕೇವಲ ಮೂರು ಸಿನಿಮಾ ಅಷ್ಟೆ ಅದರೂ ನಾವು ಡೇಟಿಂಗ್ ಮಾಡುತ್ತಿದ್ದೀವಿ ಅಂದುಕೊಳ್ಳುತ್ತಾರೆ. ಧನಂಜಯ್‌ಗೆ ಒಳ್ಳೆ ಬಾಂಡ್ ಹೊಂದಿದ್ದೀವಿ ಸುಲಭವಾಗಿ ಚಿತ್ರೀಕರಣ ಮಾಡುತ್ತೀವಿ. ನಿಜ ಹೇಳಬೇಕು ಅಂದ್ರೆ ನಾನು ಪಕ್ಕಾ ಸಿಂಗಲ್' ಎಂದು ಕ್ಲಾರಿಟಿ ಕೊಡುವ ಮೂಲಕ ಗಾಸಿಪ್‌ಗೆ ಬ್ರೇಕ್ ಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.