
ಸಿನಿಮಾ ನಟರಿಗೆ ಅಭಿಮಾನಿಗಳ ಸಂಖ್ಯೆ ಎಷ್ಟಿರುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ. ತಮ್ಮ ನೆಚ್ಚಿನ ನಾಯಕನನ್ನು ಫಾಲೋ ಮಾಡುವ ಲಕ್ಷಾಂತರ ಮಂದಿ ಇದ್ದಾರೆ. ಅವರದ್ದೇ ಸ್ಟೈಲು, ಅವರದ್ದೇ ಧಾಟಿಯಲ್ಲಿ ಮಾತು, ಅವರದ್ದೇ ಅನುಕರಣೆ ಮಾಡುವ ದೊಡ್ಡ ವರ್ಗವೇ ಇದೆ. ಕೆಲವೊಮ್ಮೆ ಈ ಅಭಿಮಾನ ಎನ್ನುವುದು ಅತಿರೇಕಕ್ಕೂ ಹೋಗುವುದಿದೆ. ಕೆಲವರು ನಮ್ಮ ನೆಚ್ಚಿನ ನಟ-ನಟಿಯರನ್ನು ಖುದ್ದು ನೋಡುವುದಕ್ಕಾಗಿ ಪ್ರಾಣವನ್ನೂ ಬಿಟ್ಟಿರುವ ಘಟನೆಗಳು ನಡೆದಿವೆ. ಸಾಮಾಜಿಕ ಜಾಲತಾಣ ಸಕತ್ ಫೇಮಸ್ ಆಗಿರುವ ಈ ಹೊತ್ತಿನಲ್ಲಿ ನಟ-ನಟಿಯರನ್ನು ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬೆಂಬಲಿಸುವ ದೊಡ್ಡ ವರ್ಗವೇ ಅದೇ. ಅದೇ ರೀತಿ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ (Kiccha Sudeep) ಅವರಿಗೂ ಅಭಿಮಾನಿಗಳ ಸಂಖ್ಯೆ ಅತಿ ದೊಡ್ಡ ಮಟ್ಟದಲ್ಲಿ ಇದೆ. ಕನ್ನಡವಲ್ಲದೇ ತೆಲುಗು, ಹಿಂದಿ ಸೇರಿದಂತೆ ನಾನಾ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದು ಅಲ್ಲಿಯೂ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇವರ ಸಾಮಾಜಿಕ ಜಾಲತಾಣವನ್ನು ದೊಡ್ಡ ವರ್ಗದ ಜನ ಫಾಲೋ ಮಾಡುವುದು ಇದೆ.
ಈಗ ಇವರ ಮಹಿಳಾ ಅಭಿಮಾನಿಯೊಬ್ಬರ ಸುದ್ದಿ ಸಕತ್ ಸದ್ದು ಮಾಡುತ್ತಿದೆ. ಇದಾಗಲೇ ತಮ್ಮ ನೆಚ್ಚಿನ ನಟರ ಹಚ್ಚೆ ಹಾಕಿಸಿಕೊಂಡಿರುವ ಅಪಾರ ಅಭಿಮಾನಿಗಳಿದ್ದಾರೆ. ಇನ್ನು ಕೆಲವರು ರಕ್ತದಲ್ಲಿ ಪತ್ರ ಬರೆದಿರುವುದನ್ನು ನೋಡಿಯಾಗಿದೆ. ಆದರೆ ಸುದೀಪ್ ಅವರ ಮಹಿಳಾ ಅಭಿಮಾನಿಯೊಬ್ಬರು ತಮ್ಮ ರಕ್ತದಿಂದ ಸುದೀಪ್ ಅವರ ಚಿತ್ರ ಬಿಡಿಸಿಕೊಂಡಿದ್ದಾರೆ! ಹೌದು. ಶಿವಮೊಗ್ಗದ ವೈಷ್ಣವಿ ಎನ್ನುವವರು ತಮ್ಮ ರಕ್ತದಲ್ಲಿ ಸುದೀಪ್ ಅವರ ಫೋಟೋನ (Photo) ಬಿಡಿಸಿದ್ದಾರೆ. ಇದರ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಥಹರೇವಾರಿ ಕಮೆಂಟ್ಗಳು ಬರುತ್ತಿವೆ. ಇವರ ಅಭಿಮಾನವನ್ನು ಹಲವರು ಕೊಂಡಾಡಿದ್ದರೆ, ಇನ್ನು ಕೆಲವರು ಇಂಥ ಹುಚ್ಚಾಟ ಏಕೆ ಎಂದು ಪ್ರಶ್ನಿಸಿದ್ದಾರೆ. ಈ ಕುರಿತಾಗಿ ನಾನಾ ರೀತಿಯ ಪ್ರತಿಕ್ರಿಯೆಗಳನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ಕೈ ಮುಗಿಯುವ ಇಮೋಜಿಗಳನ್ನು ಬಳಸಿ ಕಾಮೆಂಟ್ ಮಾಡಿದ್ದರೆ, ಕೆಲವರು ಹಾಗೆಲ್ಲ ರಕ್ತವನ್ನು ವ್ಯರ್ಥ ಮಾಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೋರ್ಟ್ ಮೆಟ್ಟಿಲೇರಿದ ಸುದೀಪ್: ನಿರ್ಮಾಪಕ ಎಂ. ಎನ್ ಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು
ಚಿತ್ರದಲ್ಲಿ ವೈಷ್ಣವಿ (Vaishnavi) ಅವರ ರಕ್ತವನ್ನು ನರ್ಸ್ ಒಬ್ಬರು ತೆಗೆಯುವುದನ್ನು ನೋಡಬಹುದು.ನಂತರ ಅದರಿಂದ ಸುದೀಪ್ ಅವರ ಚಿತ್ರ ಬಿಡಿಸಲಾಗಿದೆ. ಇದು ವೈರಲ್ ಆಗುತ್ತಿದ್ದಂತೆಯೇ ಖುದ್ದು ಸುದೀಪ್ ಅವರು ಟ್ವೀಟ್ ಮಾಡಿದ್ದು, ಈಕೆಗೆ ದೊಡ್ಡ ನಮಸ್ಕಾರವನ್ನು ಹೇಳಿದ್ದಾರೆ. ನಮಸ್ಕಾರ ಹೇಳುವ ಇಮೋಜಿಯನ್ನು ಅವರು ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳಿಗೆ ಕೈಮುಗಿದಿದ್ದಾರೆ.
ಇನ್ನು ಸುದೀಪ್ ಅವರ ಚಿತ್ರದ ಕುರಿತು ಮಾತನಾಡುವುದಾದರೆ, ಶಾನ್ವಿ ಶ್ರೀವಾಸ್ತವ ಅಭಿನಯದ ಡಾರ್ಕ್ ಕಾಮಿಡಿ ಆಕ್ಷನ್ ಚಿತ್ರ ‘ಬ್ಯಾಂಗ್’ (Bang) ಬಿಡುಗಡೆಗೆ ಸಜ್ಜಾಗಿದ್ದು, ಇದಕ್ಕೆ ಕಿಚ್ಚ ಸುದೀಪ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ಈ ಸಿನಿಮಾ ಆಗಸ್ಟ್ 18 ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ 'ಬ್ಯಾಂಗ್' ಚಿತ್ರಕ್ಕೆ ಸ್ಟಾರ್ ಸ್ಪರ್ಶ ಕೂಡ ಸಿಕ್ಕಿದೆ. ಚಿತ್ರದ ಎರಡು ಹಾಡುಗಳು ಆನಂದ್ ಆಡಿಯೋ ಚಾನಲ್‌ನಲ್ಲಿ ಬಿಡುಗಡೆಯಾಗಿದ್ದು, ಎರಡೂ ಹಾಡುಗಳು ಜನಮೆಚ್ಚುಗೆಗೆ ಪಾತ್ರವಾಗಿವೆ. ‘ಬ್ಯಾಂಗ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಹುತೇಕ ಮುಗಿದಿದ್ದು, ನಾಳೆ ಜುಲೈ 29ರಂದು ಟ್ರೇಲರ್ ಬಿಡುಗಡೆಯಾಗಲಿದೆ. ಇದರ ನಡುವೆಯೇ, ಕಳೆದ ಎರಡು ವಾರಗಳಿಂದ ಕಿಚ್ಚ ಸುದೀಪ್ ಮತ್ತು ಎಂ. ಎನ್ ಕುಮಾರ್ ನಡುವಿನ ವಿವಾದ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. 9 ಕೋಟಿ ರೂಪಾಯಿ ವಂಚನೆ ಆರೋಪ ಪ್ರಕಣ ಸಂಬಂಧ ಸುದೀಪ್ ಕೋರ್ಟ್ ಮೆಟ್ಟಿಲೇರಿರುವ ವಿಷಯವೂ ಸಕತ್ ಸುದ್ದಿಯಲ್ಲಿದೆ. ನಿರ್ಮಾಪಕರಾದ ಎಂ.ಎನ್ ಕುಮಾರ್ ಹಾಗೂ ಎಂ.ಎನ್ ಸುರೇಶ್ ವಿರುದ್ಧ ನಟ ಸುದೀಪ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಕಳೆದ 15ರಂದು ಸುದೀಪ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.