
'ಸುತ್ತಮುತ್ತಲು ಸಂಜೆಗತ್ತಲು, ಮೆತ್ತ ಮೆತ್ತಗೆ ಮೈಯ ಮುಟ್ಟಲು ಇಲ್ಲೇ ಬಂತು ಸ್ವರ್ಗ.. ಎಲ್ಲ ಓಲಾಡುವ..'
ಅದು 1982ನೇ ಇಸವಿ. ಸಿದ್ಧಲಿಂಗಯ್ಯ ನಿರ್ದೇಶನದಲ್ಲಿ ಪರಾಜಿತ ಅನ್ನೋ ಸಿನಿಮಾ ಬಂತು. ಶ್ರೀನಿವಾಸ ಮೂರ್ತಿ, ಆರತಿ, ಜೈ ಜಗದೀಶ್ ಮೊದಲಾದವರು ನಟಿಸಿದ್ದ ಈ ಸಿನಿಮಾ ಒಂದಿಷ್ಟು ಹೆಸರು ಮಾಡಿದರೂ ಆ ಹೆಸರನ್ನೂ ಮೀರಿ ಜನಪ್ರಿಯತೆ ಪಡೆದದ್ದು ಒಂದು ಕ್ಯಾಬರೆ ಹಾಡು. 'ಸುತ್ತಮುತ್ತಲು ಸಂಜೆಗತ್ತಲು, ಮೆತ್ತ ಮೆತ್ತಗೆ ಮೈಯ ಮುಟ್ಟಲು ಇಲ್ಲೇ ಬಂತು ಸ್ವರ್ಗ.. ಎಲ್ಲ ಓಲಾಡುವ..' ಅನ್ನೋ ಈ ಹಾಡು ಯಾವ ಲೆವೆಲ್‌ಗೆ ಫೇಮಸ್ ಆಯ್ತು ಅಂದರೆ, ಇವತ್ತಿಗೂ ಕನ್ನಡಿಗರು ಅಂತ್ಯಾಕ್ಷರಿ ಆಡುವಾಗ ಈ ಹಾಡು ಬಂದೇ ಬರುತ್ತದೆ. ಶ್ಯಾಮ ಸುಂದರ ಕುಲಕರ್ಣಿ ಅನ್ನೋರು ಈ ಹಾಡನ್ನು ಬರೆದವರು. ಎಸ್ ಪಿ ಶೈಲಜಾ ಮಾದಕವಾಗಿ ಈ ಹಾಡಿಗೆ ದನಿಯಾಗಿದ್ದಾರೆ. ಆ ಕಾಲದ ಫೇಮಸ್ ನಿರ್ದೇಶಕರಲ್ಲೊಬ್ಬರಾದ ಸಿದ್ಧಲಿಂಗಯ್ಯ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದರು. ಬಾರ್ ಹಿನ್ನೆಲೆಯ ಈ ಹಾಡು ಕನ್ನಡ ಐಟಂ ಸಾಂಗ್‌ಗಳ ಇತಿಹಾಸದಲ್ಲಿ ಮಾಡಿರೋ ದಾಖಲೆ ಸಣ್ಣದಲ್ಲ.
ಈ ಹಾಡು ಯಾವ ಲೆವೆಲ್‌ಗೆ ಫೇಮಸ್ ಆಯ್ತೋ, ಈ ಹಾಡಿಗೆ ಸ್ಟೆಪ್ ಹಾಕಿದ ಮಾದಕ ಬೆಡಗಿ ಜಯಮಾಲಿನಿ ಅವ್ರೂ ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಫೇಮಸ್ ಆದ್ರು. ಇವರಿಂದ ಐಟಂ ಡ್ಯಾನ್ಸ್ ಮಾಡಿಸಲು ಪ್ರೊಡ್ಯೂಸರ್ಸ್ ಇವರ ಮನೆ ಮುಂದೆ ಸೂಟ್‌ಕೇಸ್ ಹಿಡಿದು ನಿಲ್ತಿದ್ದರು ಅಂತ ಸಿನಿಮಾ ರಂಗದ ಹಳಬರು ಕಥೆ ಹೇಳ್ತಾರೆ. ಇಂಥಾ ನಟಿ ಈಗ ಎಲ್ಲಿದ್ದಾರೆ, ಏನ್ ಮಾಡ್ತಿದ್ದಾರೆ, ಐಟಂ ಸಾಂಗ್‌ಗಳಲ್ಲಿ ಕುಣಿದ ನಂತರ ಅವರ ಲೈಫು ಹೇಗಿತ್ತು ಅಂತೆಲ್ಲ ಪ್ರಶ್ನೆ ಮೇಲೆ ಪ್ರಶ್ನೆ ಬರಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಕ್ಯಾಬರೆ ಹಾಡಿಗೆ ಸುಮನ್ ರಂಗನಾಥ್ ಸಖತ್ ಸ್ಟೆಪ್! ಅಭಿಮಾನಿಗಳು ಫುಲ್ ಫಿದಾ!
ಒಂದು ಕಾಲದಲ್ಲಿ ಹುಡುಗರ ಎದೆ ಬಡಿತ ಹೆಚ್ಚಿಸಿದ್ದ ಈ ನಟಿ ಈಗ ಆರಾಮವಾಗಿ ತಮ್ಮ ಲೈಫನ್ನ ಗಂಡ, ಮಕ್ಕಳ ಜೊತೆಗೆ ಎಂಜಾಯ್ ಮಾಡ್ತಿದ್ದಾರೆ. ಆದರೆ ಅವರು ಸಿನಿಮಾಗಳಲ್ಲಿ ಸಖತ್ ಬ್ಯುಸಿ ಇದ್ದ ಟೈಮಲ್ಲಿ ಅವರಿಗೆ ರಾಶಿ ರಾಶಿ ಲವ್ ಲೆಟರ್‌ಗಳು ಬರುತ್ತಿದ್ದವಂತೆ. ಅದನ್ನು ನಟಿ ಈಗ ಇಂಟರ್‌ವ್ಯೂ ಒಂದರಲ್ಲಿ ಹೇಳಿಕೊಂಡಿದ್ದಾರೆ. ಹೀಗೆ ಪತ್ರ ಬರೆಯುತ್ತಿದ್ದವರಲ್ಲಿ ಮದುವೆ ಆಗುವುದಾಗಿ ಹೇಳಿದವರೂ ಇದ್ದಾರಂತೆ. ರಕ್ತದಲ್ಲಿ ಪ್ರೇಮಪತ್ರ ಬರೆದವರೂ ಇದ್ದರಂತೆ. ಅಷ್ಟೇ ಯಾಕೆ, ಆರ್ಮಿಯಲ್ಲಿ ದೊಡ್ಡ ಪೋಸ್ಟ್‌ನಲ್ಲಿದ್ದ ಅಧಿಕಾರಿಯೊಬ್ಬರು ಈ ಕ್ಯಾಬರೆ ಡ್ಯಾನ್ಸರ್‌ಗೆ ಪ್ರೇಮ ನಿವೇದನೆ ಮಾಡಿ ಲೆಟರ್ ಬರೆದಿದ್ದರಂತೆ. ಅದಕ್ಕೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ ನಟಿ, ನನ್ನ ಅಮ್ಮ ಅಪ್ಪನ ಬಳಿ ಮದುವೆ ವಿಷಯ ಮಾತಾಡಿ ಅಂತ ಮಾರುತ್ತರ ನೀಡಿ, ಅವರ ವಿಳಾಸ ನೀಡಿದ್ದರಂತೆ. ಆದರೆ ಅಧಿಕಾರಿಯೂ ಸೇರಿದಂತೆ ಯಾರೂ ಈ ಸಾಹಸಕ್ಕೆ ಕೈ ಹಾಕಲಿಲ್ಲ. ಪ್ರೇಮ ಪತ್ರಗಳು ಮಾತ್ರ ಬರುತ್ತಲೇ ಇದ್ದವು. ಅದನ್ನು ನೋಡಲಿಕ್ಕೆ ಟೈಮ್ ಸಾಕಾಗದೇ ಈಕೆ ಅಸಿಸ್ಟೆಂಟ್ ಒಬ್ಬರನ್ನು ಲವ್ ಲೆಟರ್ ಓದಲಿಕ್ಕೆ ಅಂತಲೇ ನೇಮಕ ಮಾಡಿದ್ರಂತೆ.
ಹಾಗಿದ್ದರೆ ಈ ನಟಿಗೆ ಯಾರ ಮೇಲೂ ಪ್ರೇಮಾಂಕುರ ಆಗಿಲ್ವಾ? ಅಂತ ಕೇಳಿದ್ರೆ ಯಾಕಾಗಿಲ್ಲ ಅಂತ ಮರು ಪ್ರಶ್ನೆ ಮಾಡ್ತಾರೆ ಜಯ ಮಾಲಿನಿ. ಯೆಸ್ ಜಯಮಾಲಿನಿ ಒಬ್ಬ ನಟನನ್ನು ಮನಸಾರೆ ಪ್ರೇಮಿಸುತ್ತಿದ್ದರು. ಆತ ಆ ಕಾಲದ ಸ್ಟಾರ್ ನಟ. ಆತನ ಹೆಸರು ಬಹಿರಂಗ ಪಡಿಸಲು ಜಯಮಾಲಿನಿ ಅವರಿಗೆ ಇಷ್ಟವಿಲ್ಲ. ಇವರು ಆ ನಟನಿಗೆ ಮನಸೋತರು, ಆತ ಸ್ಟಾರ್ ನಟ, ಈಕೆಯ ಬಗ್ಗೆ ಅಂಥಾ ಒಲವು ಇದ್ದಿರಲಿಕ್ಕಿಲ್ಲ ಅಂದುಕೊಂಡರೆ ಅದು ತಪ್ಪು, ಆತನೂ ಈಕೆಯನ್ನು ಮನಸಾರೆ ಇಷ್ಟಪಡುತ್ತಿದ್ದ. ಆದರೆ ಆಗಿನ ಕಾಲ ಹೇಗಿತ್ತು ಅಂದರೆ ಇಂಥಾ ವಿಚಾರಗಳನ್ನು ಬಾಯಿ ಬಿಟ್ಟು ಹೇಳಲು ಧೈರ್ಯ ಸಾಕಾಗುತ್ತಿರಲಿಲ್ಲ. ಜನ ಕುಟುಂಬಕ್ಕೆ, ಸಂಬಂಧಿಕರಿಗೆ ಹೆದರುತ್ತಿದ್ದರು. ಆ ನಟನೂ ಈ ಸಂಗತಿಯನ್ನು ಮನೆಯಲ್ಲಿ ಹೇಳಲು ಹೆದರಿ ಈ ಪ್ರೇಮಕಥೆ ಮುಕ್ತಾಯವಾಗಬೇಕಾಯ್ತು. ಈಗ ಜಯಮಾಲಿನಿಯೂ ಮದುವೆ ಆಗಿದ್ದಾರೆ. ಆ ನಟನಿಗೂ ಮದುವೆ ಆಗಿ ಮಕ್ಕಳಿವೆ.
ಚೈಯ್ಯಾ ಚೈಯ್ಯಾಯಿಂದ ಅಪ್ ಜೈಸಾ ಕೋಯಿ: ಯುವಕರ ನಿದ್ರೆಗೆಡಿಸಿದ ಮಲೈಕಾ ಐಟಂ ನಂಬರರ್ಸ್
ನಮ್ಮಲ್ಲಿ ಎಂತೆಂಥಾ ನಟಿಯರು ಆಗಿ ಹೋಗಿದ್ದಾರೆ. ಆದರೆ ತನಗೆ ಬರೋ ಲವ್ ಲೆಟರ್ ಓದಲಿಕ್ಕೆ ಅಂತಲೇ ಒಬ್ಬ ಅಸಿಸ್ಟೆಂಟ್‌ನ ನೇಮಿಸುವಂಥಾ ನಟಿಯರು ಇರಲಿಲ್ಲ ಅನ್ನಬಹುದು. ಆದರೆ ಜಯಮಾಲಿನಿ ಅವರ ಈ ಮಾತೇ ಅವರು ಆ ಕಾಲದಲ್ಲಿ ಎಷ್ಟು ಫೇಮಸ್ ಆಗಿದ್ದರು ಅನ್ನೋದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.