ಆಗ ಒಂದು ಮನೆ ಮಾರಿದ್ದೆ, ಈಗ 10 ಮನೆ ಮಾಡಿದ್ದೀನಿ; ಕಷ್ಟದಲ್ಲಿ ಪ್ರಶಾಂತ್‌ ನೀಲ್ ಕೈ ಹಿಡಿದ ದರ್ಶನ್

By Vaishnavi Chandrashekar  |  First Published Dec 22, 2023, 11:40 AM IST

ಉಗ್ರಂ ಸಿನಿಮಾ ಮಾಡುವಾಗ ಇದ್ದ ಪ್ಯಾಶನ್ ಈಗ ಇಲ್ಲ...ಹಲವು ವರ್ಷಗಳ ಹಿಂದೆಯೇ ಪ್ಯಾಷನ್ ಸತ್ತು ಹೋಗಿದೆ ಈಗ ಸಂಪೂರ್ಣ ಬ್ಯುಸಿನೆಸ್ ಆಗಿದೆ..... 


ಕನ್ನಡ ಚಿತ್ರರಂಗಕ್ಕೆ ಸೂಪರ್ ಹಿಟ್ ಉಗ್ರಂ ಸಿನಿಮಾ ನೀಡಿದ ಪ್ರಶಾಂತ್ ನೀಲ್ ದೊಡ್ಡ ಸಾಹಸಕ್ಕೆ ಕೈ ಹಾಕಿ ವಿಶ್ವಾದ್ಯಂತ ಕೆಜಿಎಫ್ ಸಿನಿಮಾ ರಿಲೀಸ್ ಮಾಡುತ್ತಾರೆ. ಹೊಂಬಾಳೆ ಫಿಲ್ಮಂ ಜೊತೆ ಕೈ ಜೋಡಿಸಿ ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ನೀಡುತ್ತಾರೆ. ಇದಾದ ಮೇಲೆ ಪ್ರಭಾಸ್ ಜೊತೆ ಕೈ ಜೋಡಿಸಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಾರೆ...ಅದೇ ಸಲಾರ್. ಇಂದು ವಿಶ್ವಾದ್ಯಂತ ಸಲಾರ್ ಸಿನಿಮಾ ರಿಲೀಸ್ ಆಗುತ್ತಿದೆ. ಪ್ರಚಾರದಲ್ಲಿ ಸಖತ್ ಬ್ಯುಸಿಯಾಗಿರುವ ನೀಲ್ ತಮ್ಮ ಕಷ್ಟ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಸಿಕ್ಕಾಪಟ್ಟೆ ಸಿನಿಮಾ ಪ್ಯಾಷನ್ ಹೊಂದಿರುವ ನೀಲ್..ಉಗ್ರಂ ಸಿನಿಮಾ ಮಾಡುವಾಗ ಎಷ್ಟು ಕಷ್ಟಗಳನ್ನು ಎದುರಿಸಿದರು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ತಮ್ಮ ಮೊದಲ ಸಿನಿಮಾ ವಿತರಣೆ ಮಾಡಲು ಸಾಥ್ ಕೊಟ್ಟಿದ್ದು ದರ್ಶನ್ ಮತ್ತು ದಿನಕರ್ ಎಂದು ಪ್ರತಿಯೊಂದು ಸಂದರ್ಶನದಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. 

Tap to resize

Latest Videos

 ವರ್ಷದ ಹಿಂದೆ ಕೆಜಿಎಫ್....ಇಂದು ವಿಶ್ವಾದ್ಯಂತ ಸಲಾರ್ ರಿಲೀಸ್

'ಉಗ್ರಂ ಸಿನಿಮಾ ಮಾಡಿದ್ದು ಎರಡು ಕಾರಣಕ್ಕೆ. ಮೊದಲ ಕಾರಣ ಮುರಳಿ ಅವರಿಗೆ ಸಿನಿಮಾ ಮಾಡಬೇಕಿತ್ತು. ಹಾಲಿವುಡ್‌ ಸಿನಿಮಾ ನೋಡಿ ಬಂಡ್ ಧೈರ್ಯ ಬಂದಿತ್ತು. ಆ ಸಮಯದಲ್ಲಿ ಸಿನಿಮಾ ಬಗ್ಗೆ ತುಂಬಾ ಪ್ಯಾಶನ್ ಇತ್ತು..ತೆಲುಗು ತಮಿಳು ಸಿನಿಮಾಗಳನ್ನು ಅಷ್ಟು ಸೂಪರ್ ಆಗಿ ಮಾಡುತ್ತಾರೆ ನಾವು ಯಾಕೆ ಮಾಡಬಾರದು ಅನ್ನೋ ಯೋಚನೆ ಬಂತು. ಆ ಸಮಯದಲ್ಲಿ ಒಳ್ಳೆ ಸಿನಿಮಾಟೋಘ್ರಾಫರ್, ಆರ್ಟ್‌ ಡೈರೆಕ್ಟರ್‌ನ ಹುಡುಕಿದೆ...ಚೆನ್ನೈಗೆ ಹೋಗಿ ಒಳ್ಳೆ ಸಂಗೀತ ನಿರ್ದೇಶಕರನ್ನು ಹಿಡಿದೆ. ತುಂಬಾ ಒಳ್ಳೆ ಸಿನಿಮಾ ಮಾಡಬೇಕು ಅನ್ನೋದಷ್ಟೇ ನನ್ನ ತಲೆಯಲ್ಲಿತ್ತು. ಆ ಸಮಯದಲ್ಲಿ ಮುರುಳಿ ಮಾರ್ಕೆಟ್ ಏನಿತ್ತು ಗೊತ್ತಿಲ್ಲ ಸಿನಿಮಾ ಹೇಗೆ ನಡೆಯುತ್ತಿತ್ತು ಗೊತ್ತಿಲ್ಲ....ನಾನು ಕಷ್ಟ ಪಟ್ಟು ಇಷ್ಟ ಪಟ್ಟು ಸಿನಿಮಾ ಮಾಡಿದೆ' ಎಂದು ಖಾಸಗಿ ಸಂದರ್ಶನಲ್ಲಿ ಪ್ರಶಾಂತ್ ನೀಲ್ ಮಾತನಾಡಿದ್ದಾರೆ.

ಪ್ರಭಾಸ್‌ ಜೊತೆ ಕೆಲಸ ಮಾಡೋ ಪ್ರತಿಯೊಬ್ಬರೂ ಈ ಘಟನೆ ಎದುರಿಸಲೇ ಬೇಕು; ರಾಜಮೌಳಿ ಎದುರು ಸತ್ಯ ಬಿಚ್ಚಿಟ್ಟ ಪೃಥ್ವಿರಾಜ್

'ಈ ಸಮಯದಲ್ಲಿ ಒಂದು ಮನೆ ಮಾರಾಟ ಮಾಡಿದೆ. ನಾಲ್ಕು ವರ್ಷ ಸಿನಿಮಾ ಚಿತ್ರೀಕರಣ ಮಾಡಿದೆ. ತುಂಬಾ ಕಷ್ಟ ಆಯ್ತು ರೀ-ಶೂಟ್ ಮಾಡಿದೆ. ಸಿನಿಮಾ ಆದ್ಮೇಲೆ ವಿತರಣೆ ಮಾಡಲು ಯಾರೂ ಇರಲಿಲ್ಲ. ಕನ್ನಡ ಸಿನಿಮಾಗೆ ಪ್ರೋತ್ಸಾಹ ನೀಡಲು ಯಾರೂ ಇರಲಿಲ್ಲ. ಆ ಸಮಯದಲ್ಲಿ ದರ್ಶನ್ ಸರ್ ದಿನಕರ್ ಸರ್ ಬಂದಿದಕ್ಕೆ ಸಿನಿಮಾ ರಿಲೀಸ್ ಆಯ್ತು.  ಕೇವಲ 20 ದಿನಗಳಲ್ಲಿ ಸಿನಿಮಾ ಪ್ರೈರಸಿ ಆಯ್ತು. 50% ಜನ ಸಿನಿಮಾವನ್ನು ಮೊಬೈಲ್ ಮತ್ತು ಯುಟ್ಯೂಬ್‌ನಲ್ಲಿ ನೋಡಿದ್ದಾರೆ. ನನ್ನ ಮೊದಲ ಸಿನಿಮಾ ಎಕ್ಸಪೀರಿಯನ್ಸ್‌ ಸಿನಿಮಾ ಮಾತ್ರವಲ್ಲ ಜೀವನದ ಬಗ್ಗೆನೂ ಪಾಠ ಹೇಳಿಕೊಟ್ಟಿದೆ. ಮೊದಲು ನನ್ನ ಫ್ಯಾಮಿಲಿ ಖುಷಿಯಾಗಿರಲು ಏನು ಮಾಡಬೇಕು ಅದನ್ನು ಮಾಡಿದೆ. ಆಗ ಒಂದು ಮನೆ ಮಾರಿದೆ ಈಗ 10 ಮನೆ ಮಾಡಿದ್ದೀನಿ. ಆದರೆ ಆ ಜರ್ನಿಯಲ್ಲಿ ಪಟ್ಟ ಕಷ್ಟ ಎಂದೂ ಮರೆಯುವುದಿಲ್ಲ. ಬ್ಯುಸಿನೆಸ್ ಹೆಚ್ಚಾಗಿದೆ ಸಿನಿಮಾ ಪ್ಯಾಶನ್ ಎಲ್ಲಿ ಹೋಗುತ್ತಿದೆ? ಈಗ ನಾನು ಏನು ಆಗಿರುವೆ ಅದು ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ. ನನ್ನ ಪ್ಯಾಶನ್ ವರ್ಷಗಳ ಹಿಂದೆ ಸತ್ತು ಹೋಗಿದೆ' ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ. 

click me!