
ಶ್ರೀ ರಾಜ್ ನಿರ್ದೇಶನದ ‘ಲಾಂಗ್ ಡ್ರೈವ್’ ಚಿತ್ರದ ಟ್ರೇಲರ್ ಅನ್ನು ವಸಿಷ್ಠ ಸಿಂಹ ಬಿಡುಗಡೆ ಮಾಡಿದ್ದಾರೆ. ಈ ಟ್ರೇಲರ್‌ನಲ್ಲಿ ವಸಿಷ್ಠ ನಿರೂಪಣೆ ಇದೆ. ಈ ವೇಳೆ ಮಾತನಾಡಿದ ವಸಿಷ್ಠ ಸಿಂಹ, ‘ಲಾಂಗ್ ರೈಡ್ ಅನ್ನೋದು ಜಾಲಿ ರೈಡ್ ಅಲ್ಲ. ಅದು ನೈಜ ಘಟನೆಗಳ ಗಟ್ಟಿಕಥೆಯುಳ್ಳ ಚಿತ್ರ’ ಎಂದರು. ನಿರ್ದೇಶಕ ಶ್ರೀ ರಾಜ್ ಮಾತನಾಡಿ, ‘ಲಾಂಗ್ ಡ್ರೈವ್‌ಗೆ ಆಸೆ ಪಡುವ ಹುಡುಗಿಯೊಬ್ಬಳ ಹಿನ್ನೆಲೆಯಲ್ಲಿ ಕತೆ ತೆರೆದುಕೊಳ್ಳುತ್ತದೆ. ಹಾಗೆ ಹೊರಟ ಹುಡುಗಿಯ ಬದುಕಲ್ಲಿ ಏನಾಯ್ತು, ಆಕೆ ವಾಪಾಸ್ ಬಂದಳಾ ಅನ್ನೋದು ಸಿನಿಮಾದ ಒನ್‌ಲೈನ್. ಚಿತ್ರದಲ್ಲಿರುವುದು ನಿತ್ಯ ನಡೆಯುವ ಘಟನೆಗಳು. ಪ್ರತಿಯೊಬ್ಬರಿಗೂ ಚಿತ್ರ ಕನೆಕ್ಟ್ ಆಗುತ್ತೆ’ ಎಂದರು.
ನಾಯಕ ಅರ್ಜುನ್ ಯೋಗಿ ಮಾತನಾಡಿ, ‘ಈ ಹಿಂದೆ ಅವಕಾಶಕ್ಕಾಗಿ ನಿರ್ದೇಶಕ ಶ್ರೀರಾಜ್ ಅವರಿಗೆ ಸೋಷಿಯಲ್ ಮೀಡಿಯಾ ಮೂಲಕ ಮೆಸೇಜ್ ಮಾಡಿದ್ದೆ. ಅದೂ ವರ್ಕೌಟ್ ಆಗುತ್ತೆ ಅಂತ ಈ ಚಿತ್ರದಲ್ಲಿ ಅವಕಾಶ ಸಿಕ್ಕಾಗ ಗೊತ್ತಾಯ್ತು. 2 ಶೇಡ್ ಇರುವ ಪಾತ್ರ ನನ್ನದು’ ಎಂದರು. ನಿರ್ದೇಶಕ ರವಿ ಶ್ರೀವತ್ಸ ತನ್ನ ಶಿಷ್ಯ ಶ್ರೀರಾಜ್ ಹೊಸ ಸಾಹಸವನ್ನು ಮೆಚ್ಚಿಕೊಂಡರು. ಸೆಲೆಬ್ರಿಟಿ ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿತಂಡಕ್ಕೆ ಶುಭ ಹಾರೈಸಿದರು. ಈ ಚಿತ್ರಕ್ಕೆ ವಿಕಾಸ್ ವಸಿಷ್ಠ ಅವರ ಸಂಗೀತವಿದೆ. ಮಂಜುನಾಥ್ ಗೌಡ ಚಿತ್ರ ನಿರ್ಮಿಸಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.
ವಸಿಷ್ಠ ಸಿಂಹ ನಟನೆಯ ಲವ್‌ಲಿ ಚಿತ್ರಕ್ಕೆ ಸಮೀಕ್ಷ ನಾಯಕಿ
ವಸಿಷ್ಠ ಸಿಂಹ ಮುಂದೆ ಲವ್‌ಲೀ ಸಿನಿಮಾ: ಕಂಚಿನ ಕಂಠದ ನಟ ವಸಿಷ್ಠ ಸಿಂಹ ಮತ್ತೊಂದು ಚಿತ್ರಕ್ಕೆ ಹೀರೋ ಆಗಿದ್ದಾರೆ. ಅವರು ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರದ ಹೆಸರು ‘ಲವ್ ಲಿ’ ಎಂಬುದು. ಈಗಷ್ಟೆಚಿತ್ರಕ್ಕೆ ಮುಹೂರ್ತ ಆಗಿದೆ. ಕನ್ನಡ, ತೆಲುಗು ಎರಡೂ ಭಾಷೆಗಳಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿರುವ ವಸಿಷ್ಠ ಸಿಂಹ ಅವರ ಈ ಹೊಸ ಚಿತ್ರವನ್ನು ಚೇತನ್ ಕೇಶವ್ ನಿರ್ದೇಶನ ಮಾಡುತ್ತಿದ್ದಾರೆ.
‘ಮಫ್ತಿ’ ನರ್ತನ್ ಜತೆಗೆ ಕೆಲಸ ಮಾಡಿರುವ ಅನುಭವ ಇರುವ ಚೇತನ್ ಕೇಶವ್ ಈಗ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಮಾಡಲು ಹೊರಟಿದ್ದಾರೆ. ರವೀಂದ್ರ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಹರೀಶ್‌ಕೊಂಬೆ ಕ್ಯಾಮೆರಾ, ಅನೂಪ್ ಸಿಳೀನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ರೌಡಿಸಂ ಕತೆಯಾಗಿದ್ದು, ಕತ್ತಲ ಜಗತ್ತಿನ ಹೊಸ ಲೋಕವನ್ನು ಈ ಚಿತ್ರದಲ್ಲಿ ಹೇಳುತ್ತಿದ್ದೇವೆ. ಆ್ಯಕ್ಷನ್ ಜತೆಗೆ ರೋಮ್ಯಾಂಟಿಕ್ ಪ್ರೇಮ ಕತೆಯೂ ಇದೆ. ಈ ಕಾರಣಕ್ಕೆ ಚಿತ್ರಕ್ಕೆ ‘ಲವ್ ಲಿ’ ಎನ್ನುವ ಹೆಸರಿದೆ ಎಂಬುದು ವಸಿಷ್ಠ ಸಿಂಹ ಅವರ ಮಾತುಗಳು.
ಆಡಿಯೋ ಸಂಸ್ಥೆ ಸ್ಥಾಪಿಸಿದ ನಟ ವಸಿಷ್ಠ ಸಿಂಹಗೆ ಗೆಳೆಯ ಧನಂಜಯ್ ಸಾಥ್
ಒಂದು ಕಡೆ ಖಳನಾಯಕನಾಯಕನಾಗಿ, ಮತ್ತೊಂದು ಕಡೆ ನಾಯಕನಾಗಿ ಮಿಂಚುತ್ತಿರುವ ವಸಿಷ್ಠ ಅವರ ಕೈಯಲ್ಲಿ ಹೆಡ್ ಬುಷ್, ಸಿಂಬಾ, ತಲ್ವಾರ್ ಪೇಟೆ, ಚಿಟ್ಟೆ, ಕಾಲಚಕ್ರ ಮುಂತಾದ ಚಿತ್ರಗಳ ಜತೆಗೆ ಈಗ ‘ಲವ್ ಲಿ’ ಕೂಡ ಸೇರಿಕೊಂಡಿದೆ. ಮೇ 4 ರಿಂದ ಬೆಂಗಳೂರು ಸುತ್ತಮುತ್ತ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಸದ್ಯದಲ್ಲಿ ಉಳಿದ ತಾರಾಬಳಗವನ್ನು ಚಿತ್ರತಂಡ ಪರಿಚಯಿಸಲಿದೆ. ಮುಹೂರ್ತದ ಅಂಗವಾಗಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.