ನಿಜಕ್ಕೂ ಎಲ್‌ಎನ್ ಶಾಸ್ತ್ರಿ ಅಗಲುವುದಕ್ಕೆ ಏನು ಕಾರಣ? ಮಳೆ ನೀರು ಬಿದ್ದ ಹಣ್ಣು ತಿನ್ನಬಾರದಾ? ಸುಮಾ ಮಾತುಗಳು....
ಕನ್ನಡ ಚಿತ್ರರಂಗದ ಹೆಮ್ಮೆಯ ಗಾಯಕ ಹಾಗೂ ಸಂಗೀತ ನಿರ್ದೇಶಕ ಎಲ್‌ಎನ್ ಶಾಸ್ತ್ರಿ ಕ್ಯಾನ್ಸರ್‌ನಿಂದ 2017ರಲ್ಲಿ ಅಗಲಿದರು. ಇದ್ದಕ್ಕಿದ್ದಂತೆ ನಾಲ್ಕನೇ ಹಂತದ ಕ್ಯಾನ್ಸರ್ ಎದುರಿಸಲು ಕಾರಣವೇನು? ಶಾಸ್ತ್ರಿ ಆರೋಗ್ಯದಲ್ಲಿ ಏರು ಪೇರು ಆಗಲು ಕಾರಣವೇನು ಎಂದು ಹಂಚಿಕೊಂಡ ಸುಮಾ ಶಾಸ್ತ್ರಿ.
'ಜೂನ್ ತಿಂಗಳಿನಲ್ಲಿ ಬರ್ತಡೇ ಫಂಕ್ಷನ್ ಇದೆ ಎಂದು ಶಿವಮೊಗ್ಗಕ್ಕೆ ಶಾಸ್ತ್ರಿಗಳು ಪ್ರಯಾಣ ಮಾಡಿದ್ದರು. ಸಾಮಾನ್ಯವಾಗಿ ಮಳೆ ನೀರು ಬಿದ್ದ ಹಲಸಿನ ಹಣ್ಣನನ್ನು ತಿನ್ನಬಾರದು ಅದರಿಂದ ಆರೋಗ್ಯ ಹಾಳಾಗುತ್ತದೆ ಎನ್ನುತ್ತಾರೆ. ಯಾವತ್ತೇ ಇದ್ದರೂ ಮಳೆ ಬರುವ ಮುನ್ನ ಮಾತ್ರ ಹಲಸಿನ ಹಣ್ಣು ತಿನ್ನಬೇಕು. ಒಟ್ಟಿನಲ್ಲಿ ಮಳೆ ನೀರು ಅಥವಾ ನೀರು ಎಳೆದಿರುವ ಹಲಸಿನ ಹಣ್ಣನ್ನು ತಿನ್ನಬಾರದು. ದಾರಿಯಲ್ಲಿ ಎಲೋ ಹಲಸಿನ ಹಣ್ಣು ತಿಂದಿದ್ದಾರೆ, ಅವರೊಟ್ಟಿಗೆ ಮಗಳು ಇದ್ದಳು ಆಕೆ ನನಗೆ ಹೇಳಿದ್ದಳು. ನೀರು ಎಳೆದಿರುವ ಹಲಸಿನ ಹಣ್ಣು ತಿಂದಿರುವುದರಿಂದ ನೇರವಾಗಿ ಲಿವರ್ ಮೇಲೆ ಪರಿಣಾಮ ಬೀರಿದೆ. ಮಳೆ ನೀರಿನ ಬಿದ್ದಿರುವ ಹಲಸಿನ ಹಣ್ಣು ತಿಂದರೆ ಲಿವರ್‌ಗೆ ಪೆಟ್ಟು ಬೀಳುತ್ತದೆ ಎಂದು ಆಯುರ್ವೇದದಲ್ಲಿ ಸಾಭೀತಾಗಿದೆ' ಎಂದು ರಘು ರಾಮ್ ಯೂಟ್ಯೂಬ್ ಚಾನೆಲ್‌ನಲ್ಲಿ ಸುಮಾ ಶಾಸ್ತ್ರಿ ಮಾತನಾಡಿದ್ದಾರೆ.
ವಿವಾದಗಳ ಬೆನ್ನಲೆ ನಟಿ ಸಪ್ತಮಿ ಗೌಡ ಮದುವೆ ಲುಕ್ ಫೋಟೋ ವೈರಲ್!
'ಒಂದು ವೇಳೆ ಲಿವರ್ ಗಟ್ಟಿಯಾಗಿದ್ದರೆ ಸುಧಾರಿಸಿಕೊಳ್ಳಬಹುದು ಆದರೆ ಲಿವರ್ ವೀಕ್ ಆಗಿದ್ದರೆ ಅಲಿಗೆ ಮುಗಿಯುತ್ತದೆ. ಹಲಸಿನ ಹಣ್ಣು ತಿಂದು ಬಂದವರಿಗೆ ಮಾರನೇ ದಿನ ಹುಷಾರು ತಪ್ಪಿ ಅಲ್ಲಿಂದ ಜ್ವರ ಬಂತು ಆಮೇಲೆ ಹೊಟ್ಟೆ ನೋವು ಶುರುವಾಗಿತ್ತು. ಇಂಗ್ಲಿಷ್ ಡಾಕ್ಟರ್‌ಗೆ ಚೆಕ್ ಮಾಡಿಸಿದ್ದಕ್ಕೆ ಏನೂ ಸಮಸ್ಯೆ ಇಲ್ಲ ರಕ್ತ ಅಂತ ಹೇಳಿಬಿಟ್ಟರು ಆಮೇಲೆ ಆಯುರ್ವೇದ ಡಾಕ್ಟರ್‌ಗೆ ತೋರಿಸಿದ್ದಕ್ಕೆ ಸ್ಕ್ಯಾನ್ ಮಾಡಿಸಿ ಅಂದರು ಅಲ್ಲಿ ತಿಳಿಯಿತ್ತು ಲಿವರ್ ಮೇಲೆ ಪರಿಣಾಮ ಬೀರಿದೆ ಎಂದು. ತಕ್ಷಣವೇ ಚಿಕಿತ್ಸೆ ಕೊಡಿಸಬೇಕು ಅಂದ್ರು ಚಿಕಿತ್ಸೆ ಶುರು ಮಾಡುವಷ್ಟರಲ್ಲಿ ನಾಲ್ಕನೇ ಸ್ಟೇಜ್ ಮುಟ್ಟಿತ್ತು' ಎಂದು ಸುಮಾ ಶಾಸ್ತ್ರಿ ಹೇಳಿದ್ದಾರೆ.
ಯುವ ರಾಜ್‌ಕುಮಾರ್ ಅಸ್ತಿ ಹಣ ಏನೂ ಬೇಡ, ನಟಿಯ ಜೊತೆ ಸಿಕ್ಕಿಬಿದ್ದ ಸಾಕ್ಷಿ ಇದೆ: ಶ್ರೀದೇವಿ ಲಾಯರ್
'ಲಿವರ್ ಕ್ಯಾನ್ಸರ್ ಆರಂಭದಲ್ಲಿ ಗೊತ್ತಾಗುವುದಿಲ್ಲ. ಬಿಳಿ ಜಾಂಡೀಸ್‌ಗೆ ಅವರ ಶಿಷ್ಯನೇ ಔಷಧಿ ಕೊಟ್ಟರು ಆದರೆ ಅದರ ಮೇಲೆ ನಂಬಿಕೆ ಬರುವುದಿಲ್ಲ. ಅಲ್ಲದೆ ನಾಲ್ಕನೇ ಸ್ಟೇಜ್‌ನಲ್ಲಿ ಇದ್ದ ಕಾರಣ ಕಿಮೋ ಮಾಡಲು ಆಗುವುದಿಲ್ಲ ಎಂದು ಶಾಸ್ತ್ರಿಗಳ ಎದುರು ಡಾಕ್ಟರ್ ನೇರವಾಗಿ ಹೇಳಿಬಿಟ್ಟರು, ಅದರಿಂದ ಮತ್ತೆ ವೀಕ್ ಆಗಿಬಿಟ್ಟರು. ವಿಷಯ ತಿಳಿಯುತ್ತಿದ್ದಂತೆ ಮತ್ತು ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿಬಿಟ್ಟರು, ಆಗ ಇಡೀ ಆಸ್ಪತ್ರೆ ಕೇಳಿಸುವಂತೆ ಕಿರುಚಾಡಿದ್ದೀನಿ ಒಂದು ಕಾಲ್ ಕೋಟಿ ಸಾಲ ಇದೆ ಹೇಗೆ ನಾನು ವಯಸ್ಸಿಗೆ ಬಂದ ಮಗಳನ್ನು ಇಟ್ಟುಕೊಂಡು ಜೀವನ ಮಾಡಲಿ? ಎನು ಮಾಡಲಿ ಎಂದು' ಎಂದಿದ್ದಾರೆ ಸುಮಾ ಶಾಸ್ತ್ರಿ.