2025ನೇ ವರ್ಷದಲ್ಲಿ ಚಿತ್ರರಂಗವು ಯಶಸ್ವಿಯಾಗಿ 12 ವಾರಗಳನ್ನು (ಮಾರ್ಚ್ 21) ಪೂರೈಸಿರುವುದು ಗೊತ್ತಿರುವ ಸಂಗತಿ. ಇಷ್ಟೂ ವಾರಗಳಲ್ಲಿ ಇಲ್ಲಿವರೆಗೂ ಬಿಡುಗಡೆ ಆಗಿರುವ ಒಟ್ಟು ಚಿತ್ರಗಳು 66.
ವಾರದ ಏಳು ದಿನಗಳ ಪೈಕಿ ಒಂದು ದಿನ ಹೊರತು ಪಡಿಸಿದರೆ ಪ್ರತಿ ದಿನ ಜನ ಚಿತ್ರಮಂದಿರಗಳಿಗೆ ಬರಬೇಕಿತ್ತು! ಈ ಮೂರು ತಿಂಗಳಲ್ಲಿ ಚಿತ್ರರಂಗವು ಪ್ರೇಕ್ಷಕನಿಗೆ ಕೊಟ್ಟಿರುವ ಬಂಪರ್ ಟಾಸ್ಕ್ ಇದು. ಆದರೆ, ಸ್ಯಾಂಡಲ್‌ವುಡ್ ಕೊಟ್ಟ ಈ ಟಾಸ್ಕ್ ಅನ್ನು ಪ್ರೇಕ್ಷಕ ಪೂರೈಸಿದ್ದಾನೆಯೇ ಎಂದು ಆಯಾ ಚಿತ್ರಗಳ ಗಲ್ಲಾಪಟ್ಟಿಗೆ ತೆರೆದರೆ ಅಸಲಿ ಸತ್ಯ ಬಯಲಾಗುತ್ತದೆ. ಇಷ್ಟಕ್ಕೂ ವಾರ ಪೂರ್ತಿ ಪ್ರೇಕ್ಷಕ ಚಿತ್ರಮಂದಿರಗಳಿಗೆ ಬರುವಂತಹ ಸವಾಲನ್ನು ಚಿತ್ರರಂಗ ಯಾವಾಗ ಕೊಟ್ಟಿತ್ತು ಎನ್ನುವ ಕುತೂಹಲ ಹುಟ್ಟಿಕೊಂಡರೆ ಇಲ್ಲಿವರೆಗೂ ಬಿಡುಗಡೆಯಾದ ಸಿನಿಮಾಗಳ ಪಟ್ಟಿಯನ್ನೊಮ್ಮೆ ನೋಡಿ.
2025ನೇ ವರ್ಷದಲ್ಲಿ ಚಿತ್ರರಂಗವು ಯಶಸ್ವಿಯಾಗಿ 12 ವಾರಗಳನ್ನು (ಮಾರ್ಚ್ 21) ಪೂರೈಸಿರುವುದು ಗೊತ್ತಿರುವ ಸಂಗತಿ. ಇಷ್ಟೂ ವಾರಗಳಲ್ಲಿ ಇಲ್ಲಿವರೆಗೂ ಬಿಡುಗಡೆ ಆಗಿರುವ ಒಟ್ಟು ಚಿತ್ರಗಳು 66. ಬಿಡುಗಡೆ ಆದ ಅಷ್ಟೂ ಚಿತ್ರಗಳನ್ನು 12 ವಾರಗಳಿಗೆ ಹಂಚಿಕೆ ಮಾಡಿದರೆ ವಾರಕ್ಕೆ ಸರಾರಿ 6 ಚಿತ್ರಗಳ ಲೆಕ್ಕ ಸಿಗುತ್ತದೆ. ಅಂದರೆ 7 ದಿನಗಳಲ್ಲಿ 6 ದಿನಗಳ ಕಾಲ ದಿನಕ್ಕೊಂದರಂತೆ ಸಿನಿಮಾಗಳು ತೆರೆಕಂಡಿವೆ. ಹೀಗೆ ಪ್ರತಿ ವಾರ ಬಿಡುಗಡೆ ಆಗುತ್ತಿದ್ದ 6 ಚಿತ್ರಗಳನ್ನು ನೋಡಲು ವಾರದ ಏಳು ದಿನಗಳ ಪೈಕಿ ಆರು ದಿನಗಳು ಮೀಸಲಿಡಬೇಕಿತ್ತು. ಪ್ರತಿ ದಿನ ಸಿನಿಮಾ ನೋಡಲು ಪ್ರೇಕ್ಷಕ ಚಿತ್ರಮಂದಿರಗಳಿಗೆ ಬರಬೇಕಿತ್ತು. ಅಂದಹಾಗೆ ಭಾನುವಾರ ರಜೆ!
ಚಿತ್ರರಂಗಕ್ಕೆ ಬರುವ ಮೊದಲು ನನ್ನ ಕ್ರಶ್ ನಟ ಯಶ್: ಮನದ ಕಡಲು ನಟಿ ಅಂಜಲಿ ಅನೀಶ್
ಈಗ ಹೇಳಿ, ಪ್ರತಿ ದಿನ ಸಿನಿಮಾ ನೋಡುವ ಟಾಸ್ಕ್ ಕನ್ನಡ ಚಿತ್ರರಂಗ ಪ್ರೇಕ್ಷಕನಿಗೆ ಕೊಟ್ಟಿಲ್ಲವೇ? ಪ್ರತಿ ದಿನ ಸಿನಿಮಾ ನೋಡುವಷ್ಟು ಪುರುಸೊತ್ತು ಜನರಿಗೆ ಇದಿಯೇ? ವಾರ ವಾರ ಚಿತ್ರಮಂದಿರಗಳಿಗೆ ಲಗ್ಗೆ ಹಾಕುತ್ತಿರುವ ಚಿತ್ರಗಳನ್ನು ನೋಡುತ್ತಾ ಕೂರುವುದೇ ಜನರಿಗೆ ಇರುವ ಏಕೈಕಾ ಕೆಲಸನಾ? ಹಾಗೆ ನೋಡಿದರೆ ಕೆಲವೊಂದು ವಾರಗಳಲ್ಲಿ ಏಳು, ಎಂಟು, ಒಂಭತ್ತು ಚಿತ್ರಗಳು ಕೂಡ ಬಿಡುಗಡೆ ಆಗಿವೆ. ಈ ಲೆಕ್ಕದಲ್ಲಿ ದಿನಕ್ಕೊಂದು ಸಿನಿಮಾ ನೋಡಿದರೂ ಆಯಾ ವಾರದ ಚಿತ್ರಗಳನ್ನು ನೋಡುವ ಕಾಯಕ ಮುಗಿಯಲ್ಲ. ಹಾಗಂತ ಹೆಚ್ಚುವರಿ ದಿನಗಳನ್ನು ಉಗಾಂಡ ದೇಶದಿಂದ ಸಾಲ ತೆಗೆದುಕೊಳ್ಳವುದಕ್ಕೂ ಆಗಲ್ಲ.
ಸಿನಿಮಾ ಬಿಡುಗಡೆಯ ಈ ಅತಿವೃಷ್ಟಿಯಿಂದ ಏನಾಯಿತು ನೋಡಿ; ವಾರದಲ್ಲಿ ಬರುತ್ತಿರುವ ಆರೇಳು ಚಿತ್ರಗಳ ನಡುವೆ ಒಂದೆರಡು ಒಳ್ಳೆಯ ಚಿತ್ರಗಳಿಗೂ ಸೂಕ್ತ ಚಿತ್ರಮಂದಿರಗಳು ಸಿಗದೆ ಹೋಗುತ್ತಿದ್ದವು. ‘ಅಯ್ಯೋ ಬರೋ ಚಿತ್ರಗಳೆಲ್ಲ ಅಂಥವುಗಳೇ’ ಎನ್ನುವ ಪ್ರೇಕ್ಷಕನ ನಿರ್ಲಕ್ಷೆಗೆ ಬೇಗ ತುತ್ತಾಗಿ ‘ಒಳ್ಳೆಯ ಚಿತ್ರಗಳಿಗೆ ಇದು ಕಾಲವಲ್ಲ’ ಎನ್ನುವ ವಾತಾವರಣವನ್ನು ಚಿತ್ರರಂಗವೇ ನಿರ್ಮಿಸಿಕೊಂಡಿತು. ಈ ನಡುವೆ ‘ನಾವು ಯಾಕೆ ಕನ್ನಡ ಸಿನಿಮಾ ಮಾಡಬೇಕು, ಇದೇ ನನ್ನ ಕೊನೆಯ ಸಿನಿಮಾ, ಕನ್ನಡದವರಿಗೆ ಕನ್ನಡ ಸಿನಿಮಾಗಳನ್ನು ನೋಡಕ್ಕೆ ಬರಲ್ಲ, ಪರಭಾಷೆ ಚಿತ್ರಗಳಿಗೆ ಹೆಚ್ಚು ಪ್ರೋತ್ಸಾಹಿಸುತ್ತಾರೆ’ ಎಂದು ಸಿಟ್ಟು ತೋಡಿಕೊಳ್ಳುವ ಮೂಲಕ ಒಂದಿಷ್ಟು ನಿರ್ದೇಶಕ-ನಿರ್ಮಾಪಕ, ಚಿತ್ರತಂಡದವರು ಪ್ರೇಕ್ಷಕರ ಮೇಲೆಯೂ ಗೂಬೆ ಕೂರಿಸುವ ಕೆಲಸ ಮಾಡಿದರು.
ಆದರೆ, 66 ಚಿತ್ರಗಳಲ್ಲಿ ಈ ಬೆರಳೆಣಿಕೆಯ ಚಿತ್ರಗಳು ಪ್ರೇಕ್ಷನ ಕಣ್ಣಿಗೆ ಕಾಣದೆ ಹೋಗಿದ್ದು ಮನಸೋ ಇಚ್ಚೆ ಬಿಡುಗಡೆ ಮಾಡಿದ್ದರಿಂದಲೇ ಎನ್ನುವ ಸತ್ಯವನ್ನು ಮರೆಮಾಚಿದರು. ಬಿಡುಗಡೆಯ ಹಪಾಹಪಿ ಹಾಗೂ ಸೋಲುತ್ತೇವೆ ಎಂದು ಗೊತ್ತಿದ್ದೂ ತೆರೆಗೆ ಬರುವ ಆತುರದಿಂದ ಕೂಡಿರುವ ಚಿತ್ರರಂಗದ ಮನಸ್ಥಿತಿಗೆ ಏನು ಹೇಳಬೇಕು? ಹೀಗಾಗಿ ಅತಿವೃಷ್ಟಿಯೇ ಕನ್ನಡ ಚಿತ್ರರಂಗದ ಬಹುದೊಡ್ಡ ಶತ್ರು ಎಂಬುದನ್ನು ಈ ಮೂರು ತಿಂಗಳಲ್ಲಿ ತೆರೆಕಂಡ ಚಿತ್ರಗಳೇ ತೋರಿಸಿಕೊಟ್ಟಿವೆ. ಸೋಲೋ- ಗೆಲುವೋ, ಪ್ರೇಕ್ಷಕ ಬರುತ್ತಾನೋ-ಇಲ್ಲವೋ ತಾವು ಮಾತ್ರ ಚಿತ್ರಮಂದಿರಗಳಿಗೆ ಬಂದುಬಿಡಬೇಕೆಂಬ ಚಿತ್ರರಂಗದ ದಾವಂತವೇ ಮೂರು ತಿಂಗಳನ್ನು ಯಶಸ್ವಿಯಾಗಿ ಮುಗಿಸಿದೆ.
ಬಂದಷ್ಟೇ ವೇಗವಾಗಿ ಸೋಲಿನ ಸುಳಿಗೆ ಬಲಿಯಾಗುತ್ತಿರುವ ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಗೆ ಚಿತ್ರರಂಗವೇ ಉತ್ತರ ಕಂಡುಕೊಳ್ಳಬೇಕಿದೆ. ಆ ಮೂಲಕ ಸರ್ಕಾರ ಚಿತ್ರರಂಗದ ನಟ್ಟು, ಬೋಲ್ಟು ಟೈಟ್ ಮಾಡುವ ಮುನ್ನ, ಚಿತ್ರರಂಗವೇ ತನ್ನನ್ನು ತಾನು ಸರಿದಾರಿಗೆ ತಂದುಕೊಳ್ಳುವ ಅಗತ್ಯವಿದೆ. ಇಲ್ಲದೆ ಹೋದರೆ ಸರ್ಕಾರ ನಟ್ಟು, ಬೋಲ್ಟು ಟೈಟ್ ಮಾಡುವ ಹೊತ್ತಿಗೆ ಚಿತ್ರರಂಗದ ಈ ಸ್ವಂತ ಫಾಲ್ಟಿನಿಂದ ಚಿತ್ರರಂಗ ಎಂಬ ರೈಲು ಬಂಡಿ ತನ್ನ ಇಂಜನ್ ಅನ್ನೇ ಕಳೆದುಕೊಳ್ಳುವ ಅಪಾಯವಿದೆ. ಮೇನ್ ಪಾರ್ಟು ಕಳೆದೋದ ಮೇಲೆ ಯಾರು ಬಂದು ಏನೇ ಟೈಟು ಮಾಡಿದರೂ ಪ್ರಯೋಜನ ಆಗಲ್ಲ.
ಮೆಚ್ಚಿಕೊಂಡ ಚಿತ್ರಗಳು: ಮೂರು ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ಒಂದಿಷ್ಟು ಚಿತ್ರಗಳ ಬಗ್ಗೆ ನೋಡಿದವರಿಂದ ಒಳ್ಳೆಯ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದು ಸುಳ್ಳಲ್ಲ. ಹಾಗೆ ಜನ ಮಚ್ಚಿಕೊಂಡ ಚಿತ್ರಗಳೆಂದರೆ...
ನೋಡಿದವರು ಏನೆಂತಾರೆ
ಮಿಥ್ಯ
ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು
ಅನಾಮಧೇಯ ಅಶೋಕ್ ಕುಮಾರ್
ಭಾವತೀರ ಯಾನ
ಎಲ್ಲೋ ಜೋಗಪ್ಪ ನಿನ್ನಾರಮನೆ
ಅಪಾಯವಿದೆ ಎಚ್ಚರಿಕೆ
ಕಪಟಿ
ವಿಷ್ಣುಪ್ರಿಯ
ನಿರಾಸೆ ಮಾಡದ ಪುನೀತ್, ದರ್ಶನ್: ಈ ನಡುವೆ ಒಂದಿಷ್ಟು ಚಿತ್ರಗಳು ಮರು ಬಿಡುಗಡೆ ಆಗಿವೆ. ಈ ಚಿತ್ರಗಳು ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಕರೆತರುವ ಮೂಲಕ ನಟರಾದ ಪುನೀತ್ ಹಾಗೂ ದರ್ಶನ್ ಅವರ ಚಿತ್ರಗಳು ಸದ್ದು ಮಾಡಿದವು. ಅದರಲ್ಲೂ ಪುನೀತ್ ರಾಜ್‌ಕುಮಾರ್ ಅವರ 50ನೇ ಹುಟ್ಟುಹಬ್ಬಕ್ಕೆ ಬಂದ ‘ಅಪ್ಪು’ ಚಿತ್ರ ಬಾಕ್ಸ್ ಅಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿತು. ಹೀಗೆ ಮರು ಬಿಡುಗಡೆಯಾದರೂ ನಿರಾಸೆ ಮೂಡಿಸದ ಚಿತ್ರಗಳೆಂದರೆ...
ಚಿಂಗಾರಿ
ನಮ್ಮ ಪ್ರೀತಿಯ ರಾಮು
ಅಪ್ಪು
ಡಬ್ಬಿಂಗ್ ಚಿತ್ರಗಳಿಗೆ ಕಿಮ್ಮತ್ತಿಲ್ಲ: ಈ ಮೂರು ತಿಂಗಳಲ್ಲಿ ಬೇರೆ ಭಾಷೆಗಳಿಂದ ಕನ್ನಡಕ್ಕೆ ಒಂದಿಷ್ಟು ಚಿತ್ರಗಳು ಡಬ್ ಆಗಿ ಬಂದಿವೆ. ಆದರೆ, ಡಬ್ಬಿಂಗ್ ಚಿತ್ರಗಳಿಗೂ ಯಾಕೋ ಪ್ರೇಕ್ಷಕ ಕ್ಯಾರೆ ಅನ್ನಲಿಲ್ಲ. ಹೀಗಾಗಿ ಡಬ್ಬಿಂಗ್ ಚಿತ್ರಗಳು ಕೂಡ ‘ಬಂದ ಪುಟ್ಟ ಹೋದ ಪುಟ್ಟ’ ಎನ್ನುವಂತಾಗಿದೆ.
ಶಬ್ಧ
ಗೇಮ್ ಚೇಂಜರ್
ಕಿಸ್ ಕಿಸ್ ಕಿಸ್ಕಕ್
ಮಂಡ್ಯ
100 ಕೋಟಿ ಹೂಡಿಕೆ: ತೆರೆ ಕಂಡ ಚಿತ್ರಗಳು 1.5 ಕೋಟಿಯಿಂದ ಶುರುವಾಗಿ 10 ಕೋಟಿಯಲ್ಲಿ ನಿರ್ಮಾಣಗೊಂಡಿವೆ. ಈ ಲೆಕ್ಕದಲ್ಲಿ 66 ಚಿತ್ರಗಳಿಂದ ಅಂದಾಜು 100 ಕೋಟಿ ಹೂಡಿಗೆ ಆಗಿದೆ. ಕೇವಲ ಮೂರು ತಿಂಗಳಲ್ಲಿ ನೂರು ಕೋಟಿ ಬಂಡವಾಳ ಸೆಳೆದ ಕ್ಷೇತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಅಷ್ಟೆ.
ಚಿರು, ಅಮಿತಾಬ್, ರಜನಿ ಯಾರನ್ನೂ ಬಿಡಲಿಲ್ಲ.. ಸೌಂದರ್ಯ ಸಾಯ್ತಾರೆ ಅಂತ 10 ವರ್ಷ ಮುಂಚೆ ಹೇಗೆ ಗೊತ್ತು!
ಸೋಲಿಗೆ ಇಲ್ಲಿದೆ ಸಕಾರಣಗಳು
1. ಸೂಕ್ತವಾದ ಬಿಡುಗಡೆ ಪ್ಲಾನ್ ಇಲ್ಲದೆ, ವಾರಕ್ಕೆ ಏಳೆಂಟು ಚಿತ್ರಗಳನ್ನು ಚಿತ್ರಮಂದಿರಗಳಿಗೆ ತುಂಬಿಸಿದ್ದು.
2. ಮಾರಾಟ, ಹೂಡಿಕೆ, ಲಾಭ ಎಂದ ಮೇಲೆ ಮಾರ್ಕೆಂಟಿಂಗ್ ಬಹು ಮುಖ್ಯ ಪಾತ್ರ ವಹಿಸುತ್ತದೆ. ಆದರೆ, ಮಾರ್ಕೆಂಟಿಂಗ್ ಯೋಜನೆಗಳು ಇಲ್ಲದೆ ಹೋಗಿದ್ದು.
3. ಯಾವ ಜಾನರ್ ಚಿತ್ರವನ್ನು ಯಾವ ಪ್ರದೇಶ, ಯಾವ ಭಾಗದಲ್ಲಿ, ಎಷ್ಟು ಸ್ಕ್ರೀನ್‌ನಲ್ಲಿ ಬಿಡುಗಡೆ ಮಾಡಬೇಕೆಂಬ ಯೋಜನೆ ಇಲ್ಲ.
4. ಅದೇ ರೆಗ್ಯೂಲರ್ ಕತೆಯ ಚಿತ್ರಗಳು. ಈ ಸಿನಿಮಾ ನೋಡಲೇಬೇಕೆಂಬ ಆಸೆ ಹುಟ್ಟಿಸುವಂತಹ ಸಪ್ರೈಸ್ ಅಂಶಗಳು ಚಿತ್ರದಲ್ಲಿ ಇಲ್ಲದೆ ಹೋಗಿದ್ದು.
5. ಒಳ್ಳೆಯ ಕಂಟೆಂಟ್ ಚಿತ್ರಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದು.