ಕೆ ಆರ್‌ ಪೇಟೆಯಲ್ಲಿ ದರ್ಶನ್ ಸ್ಪರ್ಶಿಸಿದ್ದ ಬಸವ ಸಾವು!

By Suvarna NewsFirst Published Jun 5, 2020, 11:37 AM IST
Highlights

ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಬಸವ ಇಂದು ಕೊನೆ ಉಸಿರೆಳೆದಿದೆ...

ಕಳೆದ ಲೋಕಸಭಾ ಚುನಾವಣೆಯಲ್ಲಿ ದರ್ಶನ್ ಸ್ಪರ್ಶಕ್ಕಾಗಿ ಅಡ್ಡ ನಿಂತು ಕಾದಿದ್ದ ಬಸವ ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಹ ಲೋಕತ್ಯಜಿಸಿದೆ. ಗ್ರಾಮದೇವತೆ ಕಾಳಮ್ಮ ದೇವಾಲಯದ ಆವರಣದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಲ್ಲೇ ಕೊನೆಯುಸಿರೆಳೆದಿದೆ. 

"

ಬಸವನ ಹಿನ್ನೆಲೆ : 

2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ದರ್ಶನ್ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಪರ ಮಾಡಿದ ಪ್ರಚಾರ ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಸದ್ದು ಮಾಡಿತ್ತು. ಮೈಸೂರು ಜಿಲ್ಲೆ ಕೆ ಆರ್ ಪೇಟೆ ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ಪ್ರಚಾರ ಮಾಡುತ್ತಿದ್ದ ದರ್ಶನ್‌ ಗಾಡಿಯನ್ನು ದೊಡ್ಡ ಗಾತ್ರದ ಬಸವ ಅಡ್ಡ ಹಾಕಿತ್ತು. ಗ್ರಾಮಸ್ಥರು ಗದರಿದರೂ ಜಾಗ ಬಿಡದೆ ಹಾಗೆ ನಿಂತುಕೊಂಡಿತ್ತು. ಗಾಡಿಯಲ್ಲಿ ಚಲಿಸುತ್ತಿದ್ದ ದರ್ಶನ್‌ ಕೆಳಗೆ ಇಳಿದು ಬಂದ ಬಸವನನ್ನು ಮುಟ್ಟಿದ ನಂತರ ದಾರಿ ಮಾಡಿಕೊಟ್ಟು ಪಕ್ಕಕ್ಕೆ ಸರೆಯಿತು. 

ದರ್ಶನ್ ಸ್ಪರ್ಶಕ್ಕೆ ಕಾದಿದ್ದ ಬಸವ; ಚಿಕಿತ್ಸೆ ಕೊಡಿಸಿ ಮಾನವೀಯತೆ ತೋರಿದ ಡಿ-ಬಾಸ್!

ಈ ಘಟನೆ ನೋಡಿ ಗ್ರಾಮಸ್ಥರು ಆಶ್ಚರ್ಯಗೊಂಡು ಅಂದಿನಿಂದ ದರ್ಶನ್ ಬಸವ ಎಂದೇ ಕರೆಯುವುದಕ್ಕೆ ಆರಂಭಿಸಿದ್ದರು.

ದರ್ಶನ್ ನೆರವು:

ಮಹಾಮಾರಿ ಕೊರೋನಾ ವೈರಸ್‌ ಲಾಕ್‌ಡೌನ್‌ ವೇಳೆ ಬಸವ ಅನಾರೋಗ್ಯಕ್ಕೀಡಾಗಿತ್ತು. ಯಾರೇ ಆರೈಕೆ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಟ ದರ್ಶನ್‌ ಸಹಾಯ ಮಾಡುವಂತೆ  ಬಸವನ ಮಾಲೀಕರು ವಿಡಿಯೋ ಮಾಡಿ  ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು, ತಕ್ಷಣವೇ ವಿಡಿಯೋ  ನೋಡಿ ದರ್ಶನ್‌ ಸ್ಪಂದಿಸಿ  ತಮ್ಮ ತಂಡದವರನ್ನು ಕಳುಹಿಸಿ ಬಸವನಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ವಿಫಲವಾಗಿ ಇಂದು ಇಹಲೋಕತ್ಯಜಿಸಿದೆ.

click me!