ಮನುಷ್ಯನ ಮೋಜಿಗೆ ಆನೆ ಬಲಿ;ದರ್ಶನ್‌ ಪತ್ನಿ ವಿಜಯಲಕ್ಷ್ಮಿ ನೋವಿನ ನುಡಿಗಳಿವು!

Suvarna News   | Asianet News
Published : Jun 04, 2020, 11:53 AM ISTUpdated : Jun 04, 2020, 11:57 AM IST
ಮನುಷ್ಯನ ಮೋಜಿಗೆ ಆನೆ ಬಲಿ;ದರ್ಶನ್‌ ಪತ್ನಿ ವಿಜಯಲಕ್ಷ್ಮಿ ನೋವಿನ ನುಡಿಗಳಿವು!

ಸಾರಾಂಶ

ಗರ್ಭಿಣಿ ಆನೆಗೆ ಅನಾನಸ್‌ನಲ್ಲಿ ಸ್ಫೋಟಕವಿಟ್ಟು ಪ್ರಾಣಬಿಡುವಂತೆ ಮಾಡಿದ ದುರಂತದ ಬಗ್ಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಟ್ಟೀಟ್ ಮಾಡಿದ್ದಾರೆ...

ಕೇರಳದಲ್ಲಿ ನಡೆದ ಘಟನೆ ಇಡೀ ಭಾರತೀಯರನ್ನೇ ಬೆಚ್ಚಿ ಬಿಳಿಸಿದೆ. ಈ ಮನಕಲುಕುವಂತ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟ-ನಟಿಯರು ಧ್ವನಿ ಎತ್ತಿದ್ದಾರೆ ಹಾಗೂ ಪಿಟಿಷನ್‌ ಸೈನ್‌ ಮಾಡಲು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. 

ಏನಿದು ಘಟನೆ:

ಕೇರಳದ ಮಲಪ್ಪರುಂ ಜಿಲ್ಲೆಯ ಉತ್ತರ ಭಾಗದಲ್ಲಿರುವ ಗರ್ಭಿಣಿ ಆನೆಗೆ ಅನಾನಸ್ ಹಣ್ಣಿನಲ್ಲಿ ಸ್ಫೋಟಕವಿಟ್ಟಿದ್ದಾರೆ. ಹಣ್ಣು ಸೇವಿಸಿದ ಆನೆ ದವಡೆಯಲ್ಲೇ ಅನಾನಸ್‌ ಸ್ಪೋಟವಾಗಿ ದವಡೆ ಹಾಗೂ ಬಾಯಿ ಸಂಪೂರ್ಣವಾಗಿ ಪುಡಿಯಾಗಿದೆ. ಈ ನೋವಿನಲ್ಲಿ ನರಳಿದ ಆನೆ ಇಡೀ  ಗ್ರಾಮದಲ್ಲಿ ಅಲೆದಾಡಿದೆ ಆದರೆ ಯಾರಿಗೂ ಸಿಟ್ಟಿನಿಂದ ದಾಳಿ ಮಾಡಿಲ್ಲ.

ಗರ್ಭಿಣಿ ಆನೆಗೆ ಸ್ಫೋಟಕವಿಟ್ಟು ಹಣ್ಣು ನೀಡಿದ ದುರುಳರು, ನರಕವೇದನೆಯಿಂದ ಪ್ರಾಣಬಿಟ್ಟ ಗಜ!

ಈ ಗರ್ಭಿಣಿ ಆನೆಯಿಂದ ಯಾರಿಗೂ ಹಾನಿಯಾಗಿಲ್ಲ. ಒಂದು ದಿನವೂ ಒಬ್ಬರನ್ನು ಗದರಿಸಿಲ್ಲ, ತೋಟಗಳಿಗೆ ದಾಳಿ ಮಾಡಿಲ್ಲ.

 

ಚಿತ್ರರಂಗದ ಧ್ವನಿ:

ಯಾರಿಗೂ ತೊಂದರೆ ನೀಡದ ಗರ್ಭಿಣಿ  ಹೆಣ್ಣು ಆನೆ ಮೇಲೆ ಇಂತಹ ಕುಚೇಷ್ಟೆ ಮಾಡಿರುವ ದುರುಳರನ್ನು ಶಿಕ್ಷಿಸಬೇಕು ಹಾಗೂ ಈ ರೀತಿ ಇನ್ಯಾವ ಆನೆಗಳಿಗೂ ಆಗಬಾರದು ಎಂದು ಚಿತ್ರರಂಗದ ನಟ- ನಟಿಯರು ಧ್ವನಿ ಎತ್ತಿದ್ದಾರೆ ಹಾಗೂ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ತೋರಿ, ಕೇರಳ ಸರ್ಕಾರದ ವಿರುದ್ಧ ಆಕ್ರೋಶ  ವ್ಯಕ್ತಪಡಿಸಿದ್ದಾರೆ.


 
ಪ್ರಾಣಿಗಳ ಮೇಲೆ ಪ್ರಾಣವನ್ನೇ ಇಟ್ಟಿರುವ  ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನಕಲುಕುವಂತ ಆನೆ ಫೋಟೋವನ್ನು ಟ್ಟೀಟ್‌ ಮಾಡಿದ್ದಾರೆ. 'ಕೊನೆಗೂ ಮನುಷ್ಯತ್ವ ಸತ್ತಿದೆ. ಅದು ಗರ್ಭಿಣಿ ಆನೆ, ನಮ್ಮನ್ನು ನಂಬಿದಳು ಆದರೆ ನಾವು ಆಕೆಗೆ ಮೋಸ ಮಾಡಿದೆವು. ನನ್ನ ಪ್ರಕಾರ ಮೋಸಕ್ಕೆ ಇನ್ನೊಂದು ಹೆಸರೇ ಮನುಷ್ಯರು' ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಒಂದೊಳ್ಳೆ ಕೆಲಸಕ್ಕೆ ಅಭಿಮಾನಿಗಳಲ್ಲಿ ರಮ್ಯಾ ಮನವಿ

ಚಿತ್ರರಂಗ ಹಾಗೂ ಸೋಷಿಯಲ್‌ ಮೀಡಿಯಾದಿಂದ ದೂರವಾದ ಮೋಹಕ ತಾರೆ ರಮ್ಯಾ ಹಲವು ತಿಂಗಳುಗಳ ನಂತರ ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷವಾಗಿ ಆನೆಯ ಸಾವಿಗೆ ಕಾರಣವಾದರ ಮೇಲೆ ಕ್ರಿಮಿನಲ್ ಕೇಸ್‌ ದಾಖಲಾಗಬೇಕು ಹಾಗೂ ಅವರಿಗೆ ಶಿಕ್ಷೆಯಾಗಬೇಕೆಂದರೆ ಪಿಟಿಷನ್‌ ಸೈನ್‌ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?