ನಟ ರಾಕ್ಷಸ ಡಾಲಿ ಧನಂಜಯ್ ಈಗ ಜಿಂಗೋ ಆಗಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧರಿಸಿ, ‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾ ನಿರ್ದೇಶಿಸಿ ಯಶಸ್ವಿಯಾಗಿದ್ದ ಶಶಾಂಕ್ ಸೋಗಾಲ್ ‘ಜಿಂಗೋ’ ಎಂಬ ಹೊಸ ಮರ್ಡರ್ ಮಿಸ್ಟ್ರಿ ನಿರ್ದೇಶನಕ್ಕೆ ಮುಂದಾಗಿದ್ದಾರೆ.
ನಟ ರಾಕ್ಷಸ ಡಾಲಿ ಧನಂಜಯ್ ಈಗ ಜಿಂಗೋ ಆಗಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧರಿಸಿ, ‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾ ನಿರ್ದೇಶಿಸಿ ಯಶಸ್ವಿಯಾಗಿದ್ದ ಶಶಾಂಕ್ ಸೋಗಾಲ್ ‘ಜಿಂಗೋ’ ಎಂಬ ಹೊಸ ಮರ್ಡರ್ ಮಿಸ್ಟ್ರಿ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಡಾಲಿ ಧನಂಜಯ ಇದರ ಹೀರೋ ಕಂ ಆ್ಯಂಟಿ ಹೀರೋ. ಈ ಕುರಿತು ನಿರ್ದೇಶಕ ಶಶಾಂಕ್ ಸೋಗಾಲ್, ‘ಇದೊಂದು ಇನ್‌ವೆಸ್ಟಿಗೇಟಿವ್ ಡ್ರಾಮಾ. ಒಂದು ಕಾಲ್ಪನಿಕ ಹಳ್ಳಿಯ ಮುಖಂಡನೇ ಜಿಂಗೋ. ಆ ಹಳ್ಳಿಯಲ್ಲಿ ಒಂದು ಮರ್ಡರ್ ಆಗುತ್ತೆ. ಅದರ ಹಿನ್ನೆಲೆಯಲ್ಲಿ ಕಥೆ ಮುಂದೆ ಹೋಗತ್ತೆ. ಈ ಹಿಂದೆ ನನ್ನ ಜೊತೆಗೆ ಟಿವಿಯಲ್ಲಿ ಕೆಲಸ ಮಾಡುತ್ತಿದ್ದ ಕ್ರಿಯೇಟಿವ್ ಬರಹಗಾರ ಹ್ಯಾರಿಸ್ ಅಹ್ಮದ್ ಅವರ ಕಥೆ, ಚಿತ್ರಕಥೆ ಇದೆ.
ನನ್ನನ್ನು ಬಹಳ ಸೆಳೆದ ಈ ಕಥೆಯನ್ನು ಸಿನಿಮಾ ಮಾಡೋದು ಬಹಳ ಚಾಲೆಂಜಿಂಗ್ ಆಗಿದೆ. ಮುಖ್ಯ ಪಾತ್ರಕ್ಕೆ ಹಿಂಜರಿಕೆಯಲ್ಲೇ ಧನಂಜಯರನ್ನು ಕೇಳಿದೆವು, ಅದರಲ್ಲಿ ನೆಗೆಟಿವ್ ಶೇಡ್ ಇರುವುದು ನಮ್ಮ ಹಿಂಜರಿಕೆಗೆ ಕಾರಣವಾಗಿತ್ತು. ನಮ್ಮ ಅನುಮಾನವನ್ನು ನಿವಾರಿಸಿ ಡಾಲಿ ಫುಲ್ ಕಾನ್ಫಿಡೆನ್ಸ್‌ನಲ್ಲಿ ಎಸ್ ಅಂದರು. ಅದೇ ನಮಗೀಗ ಶಕ್ತಿಯಾಗಿದೆ’ ಎಂದಿದ್ದಾರೆ. ಡಾಲಿ ಧನಂಜಯ ಹಾಗೂ ಬಿ ನರೇಂದ್ರ ರೆಡ್ಡಿ ನಿರ್ಮಿಸುತ್ತಿದ್ದಾರೆ. ಸದ್ಯ ಸ್ಕ್ರಿಪ್ಟ್ ಕೆಲಸ ಮುಗಿದು, ಪಾತ್ರಗಳ ಆಯ್ಕೆ ನಡೆಯುತ್ತಿದ್ದು, ಅಕ್ಟೋಬರ್‌ನಿಂದ ಶೂಟಿಂಗ್ ಶುರುವಾಗಲಿದೆ.
ಹಲಗಲಿ ಚಿತ್ರಕ್ಕೆ ಧನಂಜಯ್ ಹೀರೋ: ಸುಕೇಶ್ ಡಿ ಕೆ ನಿರ್ದೇಶನದ ‘ಹಲಗಲಿ’ ಚಿತ್ರಕ್ಕೆ ಡಾಲಿ ಧನಂಜಯ್ ನಾಯಕನಾಗಿ ಎಂಟ್ರಿ ಆಗಿದ್ದಾರೆ. ಈ ಹಿಂದೆ ಡಾರ್ಲಿಂಗ್ ಕೃಷ್ಣ ಈ ಚಿತ್ರಕ್ಕೆ ನಾಯಕರಾಗಿದ್ದರು. ಡಾರ್ಲಿಂಗ್ ಕೃಷ್ಣ ಡೇಟ್ಸ್ ಸಮಸ್ಯೆಯಿಂದ ಈಗ ಧನಂಜಯ್ ಬಂದಿದ್ದಾರೆ. ಕನ್ನಡ ನಾಡಿನ ಸ್ವಾತಂತ್ರ್ಯ ಪೂರ್ವದ ವೀರರ ಕಥೆಯನ್ನು ಒಳಗೊಂಡಿದೆ. ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ಯುದ್ಧ ಮಾಡಿದ ಕನ್ನಡ ನೆಲದ ಹಲಗಲಿಯ ಊರಿನ ಬೇಡರ ಕುರಿತ ಸಿನಿಮಾ ಇದಾಗಿದ್ದು, ಡಾಲಿ ಧನಂಜಯ್ ಅವರು ಬೇಡನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಂಜು ವೆಡ್ಸ್ ಗೀತಾ 2 ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಈ ಪಾತ್ರದಲ್ಲಿ ನಟಿಸುತ್ತಿದ್ದಾರಾ!
‘ಹಲಗಲಿ’ ಊರಿನ ಸ್ವಾತಂತ್ರ್ಯ ಯೋಧರ ಆಚಾರ- ವಿಚಾರ ಹಾಗೂ ಅವರ ಹೋರಾಟದ ಹೆಜ್ಜೆ ಗುರುತುಗಳನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಳ್ಳಾರಿಯ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ಚಿತ್ರ ನಿರ್ಮಿಸುತ್ತಿದ್ದಾರೆ. ಸಿನಿಮಾ ಕುರಿತು ಕಲ್ಯಾಣ್, ‘ಐದು ಭಾಷೆಗಳಲ್ಲಿ ದೊಡ್ಡ ಮಟ್ಟದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದು’ ಎಂದು ಹೇಳಿದ್ದಾರೆ. ‘ಹಲಗಲಿ’ ಚಿತ್ರದ ಕತೆ ಇಷ್ಟವಾಯಿತು. ನಮ್ಮ ನಾಡಿಗಾಗಿ ಹೋರಾಡಿದವರ ಕತೆಯನ್ನು ಸಿನಿಮಾ ಮಾಡುತ್ತಿದ್ದು, ಆ ಚಿತ್ರದಲ್ಲಿ ನಾನು ಹೀರೋ ಆಗುತ್ತಿರುವುದು ಖುಷಿ ಕೊಟ್ಟಿದೆ ಎಂದು ಡಾಲಿ ಧನಂಜಯ್ ಹೇಳಿದರು.